
ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು 1944 ರಲ್ಲಿ ʼಬ್ಯಾಕ್ ಟು ಗಾಡ್ ಹೆಡ್ ʼ ಪತ್ರಿಕೆಯನ್ನು ಪ್ರಾರಂಭಿಸಿದರು. ಜನರು ದೇವರನ್ನು ಮರೆತು ಈ ಭೌತಿಕ ಲೋಕದಲ್ಲಿ ಹೆಣಗುತ್ತಿರುವುದರಿಂದ ಅವರಿಗೆ ಕೃಷ್ಣ ಪ್ರಜ್ಞೆ ನೀಡಿ ಉದ್ಧರಿಸುವುದೇ ಪತ್ರಿಕೆಯ ಧ್ಯೇಯವಾಗಿತ್ತು. ಶ್ರೀಲ ಪ್ರಭುಪಾದರ ಹೆಜ್ಜೆ ಗುರುತುಗಳನ್ನೇ ಅನುಸರಿಸಿ, 2003 ರಲ್ಲಿ ನಾವು, ಇಸ್ಕಾನ್ ಬೆಂಗಳೂರಿನ ಭಕ್ತರು ʼಭಕ್ತಿವೇದಾಂತ ದರ್ಶನʼ ಕನ್ನಡ ಮಾಸ ಪತ್ರಿಕೆಯನ್ನು ಪ್ರಾರಂಭಿಸಿದೆವು. ಓದುಗರ ಮನದಲ್ಲಿ ಶ್ರೀ ಕೃಷ್ಣನು ಮನೆಮಾಡಿ, ಭಕ್ತಿ-ಸೇವೆಯನ್ನು ನೀಡಲಿ, ಇಡೀ ವಿಶ್ವಕ್ಕೆ ಸುಖ ಶಾಂತಿ ನೆಮ್ಮದಿಗಳನ್ನು ದಯಪಾಲಿಸಲಿ ಎಂಬುದೇ ನಮ್ಮ ಆಶಯ. ಹರೇ ಕೃಷ್ಣ.
ಸಲಹೆ ಮತ್ತು ಮಾರ್ಗದರ್ಶನ : ಪರಮಪೂಜ್ಯ ಸ್ತೋಕ ಕೃಷ್ಣ ಸ್ವಾಮಿ ; ಸಂಪಾದಕ : ಶ್ರೀ ಭರತರ್ಷಭ ದಾಸ ; ಸಹ ಸಂಪಾದಕ : ಪತಿತಪಾವನ ದಾಸ

ಗುರು-ಮುಖ-ಪದ್ಮ-ವಾಕ್ಯ
”ಭರತ ವಂಶಜನಾದ ಅರ್ಜುನನೇ, ಈ ದೇಹದಲ್ಲಿ ವಾಸಿಸುವವನನ್ನು ಎಂದೂ ಕೊಲ್ಲಲು ಸಾಧ್ಯವಿಲ್ಲ. ಆದುದರಿಂದ ನೀನು ಯಾವ ಜೀವಿಗಾಗಿಯೂ ದುಃಖಿಸುವ ಕಾರಣವಿಲ್ಲ.” (ಭಗವದ್ಗೀತಾ – 2.30) ಇಲ್ಲಿ ಕೃಷ್ಣನು ಹೇಳುತ್ತಿದ್ದಾನೆ, ದೇಹೀ ನಿತ್ಯಮ್ ಅವಧ್ಯೋಽಯಮ್ ದೇಹೇ ಸರ್ವಸ್ಯ ಭಾರತ ”ಎಲ್ಲ ದೇಹಗಳಲ್ಲಿಯೂ ವಾಸಿಸುವಂಥಹ ಆತ್ಮವನ್ನು ಯಾರೂ ಕೊಲ್ಲಲಾಗುವುದಿಲ್ಲ. ಇದು ಅತಿ ಮುಖ್ಯವಾದದ್ದು. ಆತ್ಮವು ಕೇವಲ ಮಾನವ ದೇಹದಲ್ಲಿದೆ. ಆದರೆ ಬೇರೆ ದೇಹಗಳಲ್ಲಿ ಇಲ್ಲ ಎಂಬುದು ಮೂಢತನದ ಸಿದ್ಧಾಂತ. ಭಗವದ್ಗೀತೆಯ ಈ ಭಾಗದಲ್ಲಿ ಕೃಷ್ಣನು ಅನೇಕ ರೀತಿಯಲ್ಲಿ ದೇಹದಲ್ಲಿರುವ ಆತ್ಮವು…
ಲೇಖನಗಳು

– ಆಂಗ್ಲಮೂಲ: ಕೃಪಾಕರ ದಾಸ, ಅನುವಾದ: ಗಾಯತ್ರಿ ಶ್ರೀ ಚೈತನ್ಯ ಮಹಾಪ್ರಭುಗಳಿಂದ ಬೋಧಿಸಲ್ಪಟ್ಟ ಯೋಗವು ಹಾಡುವ, ವರ್ತಿಸುವ, ರುಚಿಯಾದ ಆಹಾರಗಳನ್ನು ಸೇವಿಸುವ ಪ್ರಕ್ರಿಯೆಯಷ್ಟೆ ಸುಲಭವಾದುದಾಗಿದೆ. ಇತ್ತೀಚಿನ ದಿನಗಳಲ್ಲಿ ಜನರು ಯೋಗದ ಬಗ್ಗೆ ಯೋಚಿಸುವಾಗಲೆಲ್ಲ ಸಾಮಾನ್ಯವಾಗಿ ಉದ್ದ ಕೂದಲಿನ ಅರೆನಗ್ನ ಯೋಗಿಗಳು ಹಿಮಾಲಯ ಶ್ರೇಣಿಗಳಲ್ಲಿ ಪದ್ಮಾಸನದಲ್ಲಿ ಕುಳಿತಿರುವುದನ್ನು ಮನಸ್ಸಿಗೆ ತಂದುಕೊಳ್ಳುತ್ತಾರೆ. ಅಥವಾ ತಮಗೆ ಚಿರಪರಿಚಿತವಿರುವ ವಿವಿಧ ಭಾವಭಂಗಿಗಳ ಮೂಲಕ ದೇಹದ ಮೇಲೆ ನಿಯಂತ್ರಣ ಸಾಧಿಸುತ್ತಿರುವ ವ್ಯಕ್ತಿಗಳ ಹಠಯೋಗ ಚಿತ್ರ ಶಾಲೆಯಲ್ಲಿ ಇರಬಹುದಾದ೦ದ ಚಿತ್ರಗಳನ್ನು ಕಲ್ಪಿಸಿಕೊಳ್ಳುತ್ತಾರೆ. ಈ ಜನಪ್ರಿಯ ಚಿತ್ರಣಗಳು…

ಪಾಂಡವರಲ್ಲಿ ಒಬ್ಬನಾದ ಅರ್ಜುನನು ಶ್ರೀಕೃಷ್ಣನ ಪರಮಭಕ್ತನೂ, ಆಪ್ತಸಖನೂ ಆಗಿದ್ದನು. ಕುರುಕ್ಷೇತ್ರ ಯುದ್ಧದಲ್ಲಿ ಸ್ವತಃ ಶ್ರೀಕೃಷ್ಣನು ಅರ್ಜುನನ ಸಾರಥಿಯಾಗಿ ವಿಜಯ ದೊರಕಿಸಿಕೊಟ್ಟನು. ರಣರಂಗದಲ್ಲಿ ಯುದ್ಧ ಒಲ್ಲೆನೆಂದ ಅರ್ಜುನನಿಗೆ ಗೀತಾಬೋಧನೆ ಮಾಡಿ ಜ್ಞಾನ ಚಕ್ಷುವನ್ನು ತೆರೆಸಿದನು. ಭಗವದ್ಗೀತೆಯಲ್ಲಿ ಕೃಷ್ಣನು ಅರ್ಜುನನನ್ನು ವಿವಿಧ ಹೆಸರುಗಳಿಂದ ಕರೆದಿರುವನು. ಈ ಹೆಸರುಗಳನ್ನು ಅವು ಸೂಚಿಸುವ ಅರ್ಥಗಳೊಂದಿಗೆ ಇಲ್ಲಿ ನೀಡಲಾಗಿದೆ. 1. ಅನಘ – ಪಾಪರಹಿತ 2. ಅರ್ಜುನ – ಬೆಳ್ಳಿಯ ಬಿಳುಪಿನವನು 3. ಭಾರತ – ಭರತ ಚಕ್ರವರ್ತಿಯ ವಂಶಜ 4. ಭರತರ್ಷಭ –…

ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಸಂಸ್ಥಾಪನಾಚಾರ್ಯರು, ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘ – ಸಂಗ್ರಹಾನುವಾದ: ಡಾ.ಕೆ. ವೈ. ಬಾಲರಾಜ್, ಆಧಾರ : ಶ್ರೀ ಈಶೋಪನಿಷದ್ (ಮಂತ್ರ 14) ಈ ಐಹಿಕ ಪ್ರಕೃತಿಯಲ್ಲಿನ ಸಮಸ್ತ ಚಟುವಟಿಕೆಗಳು ಭೌತದ್ರವ್ಯಗಳ ಕಠೋರ ನಿಯಮಗಳಿಗೆ ಒಳಪಟ್ಟಿವೆ. ಅವು ಹುಟ್ಟು, ಬೆಳವಣಿಗೆ, ಸ್ಥಿತಿ, ಬದಲಾವಣೆ, ಅವನತಿ ಮತ್ತು ಸಾವು ಎಂಬ ಆರು ಬಗೆಯ ಬದಲಾವಣೆಗಳಿಗೆ ಒಳಗಾಗಿವೆ. ಐಹಿಕ ಸಂಪರ್ಕಕ್ಕೆ ಒಳಗಾದ ಯಾವುದೇ ವಸ್ತು ವಿಷಯಗಳು ಈ ಪರಿವರ್ತನ ನಿಯಮಗಳನ್ನು ಮೀರುವಂತಿಲ್ಲ. ಈ ಅರ್ಥದಲ್ಲಿ…

ಭೌತಿಕ ಲೋಕವು ನಮ್ಮ ನಿಜವಾದ ಮನೆಯಲ್ಲ… ಎಷ್ಟೇ ಪ್ರಮಾಣದ ಲೌಕಿಕ ಸುಖವು ನಮಗೆ ತೃಪ್ತಿಯನ್ನು ನೀಡುವುದಿಲ್ಲ… ಪುರಾತನ ಭಾರತದ ಋಷಿಗಳ ಪ್ರಕಾರ, ನಾವೆಲ್ಲರೂ ನೆಲೆ ತಪ್ಪಿದ್ದೇವೆ. ಮೂಲತಃ ನಾವೆಲ್ಲರೂ ದೇವೋತ್ತಮ ಪರಮ ಪುರುಷ ಶ್ರೀ ಕೃಷ್ಣನಿಗೆ ಪ್ರೀತಿಯ ಸೇವೆ ಸಲ್ಲಿಸುತ್ತ ಆಧ್ಯಾತ್ಮಿಕ ಲೋಕದಲ್ಲಿ ಆನಂದದಿಂದ ಇದ್ದೆವು. ಈ ಭೌತಿಕ ಲೋಕವು ನಮ್ಮ ನಿಜವಾದ ಮನೆಯಲ್ಲವಾದುದರಿಂದ ಎಷ್ಟೇ ಪ್ರಮಾಣದ ಲೌಕಿಕ ಸುಖವು ನಮಗೆ ತೃಪ್ತಿಯನ್ನು ನೀಡುವುದಿಲ್ಲ. ಜನರು ಯಾವಾಗಲೂ ಕೇಳುತ್ತಾರೆ, ನಾವು ಅಷ್ಟು ಆನಂದವಾಗಿದ್ದರೆ ಆಧ್ಯಾತ್ಮಿಕ ಲೋಕವನ್ನು ತ್ಯಜಿಸಿದ್ದೇಕೆ?…
ಮಕ್ಕಳ ಕಥೆ

ತ್ರಿಕೂಟ ಪರ್ವತ ಬಳಿ ಒಂದು ದಟ್ಟವಾದ ಕಾಡಿತ್ತು. ಅದರಲ್ಲಿ ಆನೆಗಳ ಒಂದು ದೊಡ್ಡ ಹಿಂಡು ವಾಸವಾಗಿತ್ತು. ಅವುಗಳಲ್ಲೊಂದು ಬಲಿಷ್ಠ ಸಲಗವೂ ಇತ್ತು…

ಕೈಕೇಯಿಯ ಕಾರಣದಿಂದ ರಾಮಚಂದ್ರ ಹದಿನಾಲ್ಕು ವರ್ಷ ಕಾಡಿಗೆ ಹೋದ ಕಥೆ ಗೊತ್ತಲ್ವ? ಹಾಗೆ ಹೊರಟ ರಾಮನ ಜೊತೆ ಅವನ ಹೆಂಡತಿ ಸೀತೆ, ತಮ್ಮ ಲಕ್ಷ್ಮಣರು…

ಮಥುರೆಯಲ್ಲಿ ಪ್ರತಿವರ್ಷ ಬಿಲ್ಲು ಹಬ್ಬದ ಅಂಗವಾಗಿ ಕೆಲವು ಜನರಂಜನೆಯ ಕಾರ್ಯಕ್ರಮಗಳನ್ನು ವ್ಯವಸ್ಥೆ ಮಾಡುತ್ತಿದ್ದರು…

ಆಸ್ತಿ ಮತ್ತು ಪ್ರಾಪ್ತಿ ಎಂಬುವರು ಕಂಸನ ರಾಣಿಯರು. ಇವರು ಮಗಧ ದೇಶದ ರಾಜನಾದ ಜರಾಸಂಧನ ಮಕ್ಕಳು. ಕಂಸನು ಶ್ರೀಕೃಷ್ಣನಿಂದ ಹತನಾದ…
ಪಾಕಶಾಲೆ
ವನಿತಾ: ಕೃಷ್ಣ ಪಾಕಶಾಲೆ
ಬಗೆಬಗೆಯ ತಿಂಡಿಗಳು…
ಪುಣ್ಯ ಕ್ಷೇತ್ರ

– ಆಂಗ್ಲಮೂಲ: ಸಂಪತ್ ಕುಮಾರ ರಾಮಾನುಜ ದಾಸನ್ (ಅಶ್ವಿನ್ ಎಸ್) ತಮಿಳುನಾಡಿನ ಮೈಲಾದಿತುರೈಯ ದಕ್ಷಿಣಕ್ಕೆ 12 ಕಿ.ಮೀ. ದೂರದಲ್ಲಿರುವ ತೇರಳಂದೂರು ಗ್ರಾಮದಲ್ಲಿ ಭವ್ಯವಾದ ಗೋಸಖ ದೇವಾಧಿರಾಜ ಪೆರುಮಾಳ್ ಮಂದಿರವಿದೆ. ಇಲ್ಲಿ ಭಗವಂತನಿಗೆ ಗೋವುಗಳಿಗಿಂತ ಇನ್ಯಾವುದೂ ಅಮೂಲ್ಯವಲ್ಲ. ಒಂದು ದಿನ ಶ್ರೀ ಕೃಷ್ಣ ಮತ್ತು ಅವನ ಮಿತ್ರರು ವಿಹಾರಕ್ಕೆಂದು ಯಮುನಾ ನದಿಯ ದಡಕ್ಕೆ ಬಂದರು. ಸದಾ ಕೋಗಿಲೆ ಮತ್ತು ನವಿಲಿನ ಸುಮಧುರ ಧ್ವನಿಯಿಂದ ಪ್ರತಿಧ್ವನಿಸುತ್ತಿರುವ ವೃಂದಾವನ ಅರಣ್ಯವು ವೈವಿಧ್ಯಮಯ ಫಲಗಳ ಮರಗಳಿಂದ ತುಂಬಿದೆ. ಆದುದರಿಂದ ತಮ್ಮ ಬುತ್ತಿಯನ್ನು ಬಿಚ್ಚಲು…

ಭಾರತದಲ್ಲಿ ನಾಲ್ಕು ಪ್ರಮುಖ ಪುಣ್ಯಧಾಮಗಳಿವೆ. ಭಗವಂತನು ನಾಲ್ಕು ಯುಗಗಳಲ್ಲಿ ಈ ನಾಲ್ಕು ಧಾಮಗಳಲ್ಲಿ ತನ್ನ ದಿವ್ಯ ಲೀಲೆಗಳನ್ನು ನಡೆಸಿರುವನು…
ಪುರಾಣ ಕಥೆ
ಸಂಪಾದಕೀಯ

ಶ್ರೀಲ ಪ್ರಭುಪಾದರು ತಮ್ಮ ಕಾಲೇಜಿನ ಸಮಯದ ಒಂದು ಸ್ವಾರಸ್ಯಕರ ಘಟನೆ ನೆನಪಿಸಿಕೊಳ್ಳುತ್ತಾರೆ. ಅವರ ಮಿತ್ರರೊಬ್ಬರು ಅವರಿಗೆ ಹೇಳಿದ ವೃತ್ತಾಂತ ಇದು. ಆ ಮಿತ್ರರು ವೈದ್ಯಕೀಯ ವಿದ್ಯಾರ್ಥಿಗಳಾಗಿದ್ದಾಗ ಒಂದು…

ಆಸ್ಟ್ರೇಲಿಯಾ ದೇಶದಲ್ಲಿ 16 ವರ್ಷಕ್ಕಿಂತ ಕಡಮೆ ವಯಸ್ಸಿನ ಮಕ್ಕಳಿಗೆ ಈಗ ಸೋಷಿಯಲ್ ಮೀಡಿಯಾ ಬ್ಯಾನ್ ಮಾಡಲಾಗಿದೆ. ಕೆಲ ಸಮಯದಿಂದ ಇದನ್ನು ವ್ಯಾಪಕವಾಗಿ ಚರ್ಚಿಸಿ, ನಿನ್ನೆ ಆದೇಶ ಹೊರಡಿಸಲಾಗಿದೆ….

ಆದಿಯಲ್ಲಿ ಗರ್ಭೋದಕ ವಿಷ್ಣುವಿನ ನಾಭಿಯಿಂದ ಕಮಲಪುಷ್ಪ ಒಂದು ಹುಟ್ಟುತ್ತದೆ. ಆ ಕಮಲದ ಮೇಲೆ ಬ್ರಹ್ಮದೇವರ ಜನನ ಆಗುತ್ತದೆ. ಆಗ “ನಾನು ಎಲ್ಲಿಂದ ಬಂದೆ?” ಎಂದು ತಿಳಿಯಲು ಬ್ರಹ್ಮ ಪ್ರಯತ್ನ…

ಕೃಷ್ಣಪ್ರಜ್ಞೆಯ ಪ್ರಚಾರದ ಕೆಲಸ ಕಷ್ಟವೆನಿಸಿದರೂ, ಅಪಾಯ ಎದುರಾದರೂ, ಕೃಷ್ಣ ಕೈಂಕರ್ಯ ಮಾತ್ರ ನಿಲ್ಲಿಸಲಾಗದು. ʼಥ್ಯಾಂಕ್ ಲೆಸ್ ಜಾಬ್ʼ ಮಾಡುವ ನಮಗೆ ಯಾರು ಧನ್ಯವಾದ ಹೇಳಲಿ ಬಿಡಲಿ….
ಮುಂಬರುವ ಕಾರ್ಯಕ್ರಮಗಳು
ವಿಡಿಯೋ
ನಮ್ಮನ್ನು ಬೆಂಬಲಿಸಿ

ज्ञातिभिर्वण्टयते नैव चोरेणापि न नीयते ।
दाने नैव क्षयं याति विद्यारत्नं महाधनम् ॥
ವಿದ್ಯೆ ಎಂಬುದು ಮಹಾ ಧನ. ಅದನ್ನು ಸಂಬಂಧಿಗಳು ದೋಚಲಾರರು, ಕಳ್ಳರು ಕದಿಯಲಾರರು.
ದಾನ ಮಾಡಿದರೆ ಕ್ಷೀಣಿಸದೆ, ಅದರ ವೃದ್ಧಿಯೇ ಆಗುತ್ತದೆ.
ಈ ಆನ್ಲೈನ್ ಪತ್ರಿಕೆ ನಿಮಗೆ ಇಷ್ಟವಾಗಿದ್ದರೆ, ನಿಮಗಾಗಿ ಇದನ್ನು ಇನ್ನೂ ಹೆಚ್ಚು ಉಪಯುಕ್ತ ಮತ್ತು ಆಕರ್ಷಕವಾಗಿಸಲು ಸಹಾಯ ಮಾಡಿ. ವಿದ್ಯೆಯ ದಾನಕ್ಕಾಗಿ ದೇಣಿಗೆ ನೀಡಿ.