ಪ್ರಭುಪಾದ ಉವಾಚ

(ಶ್ರೀಲ ಪ್ರಭುಪಾದರ ಬೋಧನೆಗಳಿಂದ ಆಯ್ದ ನುಡಿ ಮುತ್ತುಗಳು)


ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವಂತೆ ಈ ಬೋಧನಾ ಕಾರ್ಯವು ವಿಶ್ವಾದ್ಯಂತ ನಡೆಯುತ್ತಿದೆ. ಇದು ಶ್ರೀ ಚೈತನ್ಯ ಮಹಾಪ್ರಭುಗಳ ಅಪೇಕ್ಷೆ. ಅದು ಈಗಾಗಲೇ ಅವರಿಂದ ಯೋಜಿತವಾಗಿದೆ. ನಾವು ಕೇವಲ ಸ್ವಲ್ಪ ನೆರವು ನೀಡುತ್ತಿದ್ದೇವೆ, ಅಷ್ಟೆ. ಆದುದರಿಂದ ನಮ್ಮ ಭಕ್ತಿಸೇವೆ ಎಂದರೆ ಕೃಷ್ಣ ಅಥವಾ ಭಗವಂತನು ಏನೇನು ಅಪೇಕ್ಷಿಸುವನೋ ಅದಕ್ಕೆ ಸಹಕಾರ ನೀಡಲು ಪ್ರಯತ್ನಿಸಬೇಕು. ಅದು ನಮ್ಮ ಪರಿಪೂರ್ಣತೆ. ನೀವು ಏನು ಮಾಡುವುದೂ ಸಾಧ್ಯವಿಲ್ಲ. ಅವನೇ ಎಲ್ಲವನ್ನೂ ಮಾಡುತ್ತಿದ್ದಾನೆ. ಆದರೆ ನೀವು ಕೇವಲ ನಿಮ್ಮ ಅಪೇಕ್ಷೆಯಿಂದ ಸಹಕರಿಸಿದರೆ, ಅದನ್ನು ಭಕ್ತಸೇವೆ ಎಂದು ಕರೆಯುತ್ತಾರೆ.


“ನೀವು ಏನು ಮಾಡುತ್ತಿರುವಿರೋ ಅದೆಲ್ಲ ಅಸಂಬದ್ಧ, ಅವೆಲ್ಲ ಅವಿವೇಕತನ…” ಎಂದು ನಾವು ಹೇಳುವುದಿಲ್ಲ. ಔಷಧ ಮತ್ತು ಪಥ್ಯ… ರೋಗವಿದ್ದರೆ, ಕಾಯಿಲೆ ಇದ್ದರೆ, ನೀವು ಸೂಕ್ತವಾದ ಔಷಧ ಮತ್ತು ಪಥ್ಯ ನೀಡಿದರೆ ವ್ಯಕ್ತಿಯು ಗುಣಮುಖನಾಗುತ್ತಾನೆ. ಅದರಲ್ಲಿ ಸಂದೇಹವೇ ಇಲ್ಲ. ಹರಿನಾಮವೇ ಔಷಧ ಮತ್ತು ಕೃಷ್ಣ ಪ್ರಸಾದವೇ ಪಥ್ಯ.


ಈ ಲೇಖನ ಶೇರ್ ಮಾಡಿ