ಎಲ್ಲ ರೀತಿಯ ರಾಯತಗಳು ರೊಟ್ಟಿ, ಚಪಾತಿ, ಪೂರಿ ಮತ್ತು ಊಟದೊಂದಿಗೆ ಹೊಂದುತ್ತವೆ. ಬೇಸಗೆಯಲ್ಲಿ ಈ ಮೊಸರಿನ ರಾಯತಗಳು ಆರೋಗ್ಯಕ್ಕೂ ಒಳ್ಳೆಯದು. ವಿವಿಧ ರಾಯತಗಳನ್ನು ತಯಾರಿಸುವ ವಿಧಾನಗಳನ್ನು ನೀಡಲಾಗಿದೆ. ಶ್ರದ್ಧೆಯಿಂದ ಇವುಗಳನ್ನು ತಯಾರಿಸಿ ಶ್ರೀ ಕೃಷ್ಣನಿಗೆ ಅರ್ಪಿಸಿ ಮನೆಯವರೊಂದಿಗೆ ನೀವೂ ಸವಿಯಿರಿ.
ಆಲೂ ತೆಂಗು ರಾಯತ

ಬೇಕಾಗುವ ಸಾಮಗ್ರಿ
ಆಲೂಗೆಡ್ಡೆ – 6
ಶುಂಠಿ ತುರಿದದ್ದು – 1 ಟೇಬಲ್ ಚಮಚ
ಮೊಸರು – 1 3/4 ಬಟ್ಟಲು (425 ಎಂಎಲ್)
ಚೂರು ಮಾಡಿದ ಹಸಿ ಮೆಣಸಿನಕಾಯಿ – 1
ಉಪ್ಪು – ರುಚಿಗೆ ತಕ್ಕಷ್ಟು
ತುರಿದ ತೆಂಗಿನ ಕಾಯಿ – 1 1/2 ಬಟ್ಟಲು (100 ಗ್ರಾಂ)
ತುಪ್ಪ – 1 ಟೇಬಲ್ ಚಮಚ
ಸಾಸಿವೆ – 1 ಟೀ ಚಮಚ
ಚೂರು ಮಾಡಿದ ಟೊಮ್ಯಾಟೊ – 2
ಚೂರು ಮಾಡಿದ ಕೊತ್ತಂಬರಿ ಸೊಪ್ಪು – ಸ್ವಲ್ಪ
ಮಾಡುವ ವಿಧಾನ : ಆಲೂಗೆಡ್ಡೆಯನ್ನು ಬೇಯಿಸಿ. ಸಿಪ್ಪೆ ತೆಗೆದು ಚೂರು ಮಾಡಿ ಬಟ್ಟಲಿಗೆ ಹಾಕಿಡಿ. ಮೊಸರು, ಉಪ್ಪು ಮತ್ತು ತುರಿದ ತೆಂಗಿನಕಾಯಿಯನ್ನು ಮಿಶ್ರಣ ಮಾಡಿ. ತುಪ್ಪವನ್ನು ಸಣ್ಣ ಬಾಣಲೆಯಲ್ಲಿ ಕಾಯಿಸಿ. ಸಾಸಿವೆ ಹಾಕಿ. ಸಿಡಿದ ಮೇಲೆ ಶುಂಠಿ ಮತ್ತು ಮೆಣಸಿನಕಾಯಿಯನ್ನು ಹಾಕಿ ಚೆನ್ನಾಗಿ ಕಲಸಿ. ಈ ಮಸಾಲೆಯನ್ನು ಮೊಸರಿರುವ ಪಾತ್ರೆಗೆ ಹಾಕಿ. ಅದರಲ್ಲಿ ಆಲೂಗೆಡ್ಡೆಯನ್ನು ಹಾಕಿ ಕಲಸಿ. ಕೊನೆಯಲ್ಲಿ ಟೊಮ್ಯಾಟೊ ಚೂರು ಹಾಕಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
ಸೌತೆ ರಾಯತ

ಬೇಕಾಗುವ ಸಾಮಗ್ರಿ
ಜೀರಿಗೆ – 1/2 ಟೀ ಚಮಚ
ಸೌತೆಕಾಯಿ – 2
ಮೊಸರು – 1 1/4 ಬಟ್ಟಲು (300 ಎಂಎಲ್)
ಗರಂ ಮಸಾಲ – 1/2 ಟೀ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಕರಿ ಮೆಣಸು ಪುಡಿ – 1/4 ಟೀ ಚಮಚ
ಹಿಂಗು – 2 ಚಿಟಿಕೆ (ಕಡ್ಡಾಯವಲ್ಲ)
ಮಾಡುವ ವಿಧಾನ : ಜೀರಿಗೆಯನ್ನು ಹುರಿದು ಪುಡಿ ಮಾಡಿ. ಸೌತೆಕಾಯಿಯನ್ನು ಚೆನ್ನಾಗಿ ತೊಳೆದು ತುರಿಯಿರಿ. ಹೆಚ್ಚಿನ ನೀರನ್ನು ಹಿಂಡಿ ತೆಗೆಯಿರಿ. ಈ ತುರಿದ ಸೌತೆಕಾಯಿ ಜೊತೆಗೆ ಉಳಿದ ಎಲ್ಲ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಕಲಸಿ.
ಪಾಲಕ್ ರಾಯತ

ಬೇಕಾಗುವ ಸಾಮಗ್ರಿ
ಸ್ವಚ್ಛಗೊಳಿಸಿ ಕತ್ತರಿಸಿದ ಪಾಲಕ್ ಸೊಪ್ಪು – ಎರಡು ಕಟ್ಟು (450 ಗ್ರಾಂ)
ಗರಂ ಮಸಾಲ – 1/2 ಟೀ ಚಮಚ
ಕರಿ ಮೆಣಸು ಪುಡಿ – 1/4 ಟೀ ಚಮಚ
ಮೊಸರು – 2 ಬಟ್ಟಲು (475 ಎಂಎಲ್)
ಉಪ್ಪು – ರುಚಿಗೆ ತಕ್ಕಷ್ಟು
ಹುರಿದು ಪುಡಿ ಮಾಡಿದ ಜೀರಿಗೆ – 1 ಟೀ ಚಮಚ
ಮಾಡುವ ವಿಧಾನ : ಸೊಪ್ಪನ್ನು ಚೆನ್ನಾಗಿ ತೊಳೆಯಿರಿ. ಕುದಿಯುವ ನೀರಿನಲ್ಲಿ ಹಾಕಿ ಎರಡು ಮೂರು ನಿಮಿಷ ಇಟ್ಟು ತೆಗೆಯಿರಿ. ಮೊಸರು ಹಾಕಿದ ಪಾತ್ರೆಗೆ ಸೊಪ್ಪು ಮತ್ತು ಇತರ ಪದಾರ್ಥಗಳನ್ನು ಹಾಕಿ ಮಿಶ್ರಣ ಮಾಡಿ. ರುಚಿಯಾದ ಪಾಲಕ್ ರಾಯತ ಸಿದ್ಧ.
ಟೊಮ್ಯಾಟೊ ರಾಯತ

ಬೇಕಾಗುವ ಸಾಮಗ್ರಿ
ಮೊಸರು – 500 ಎಂಎಲ್
ಉಪ್ಪು – ರುಚಿಗೆ ತಕ್ಕಷ್ಟು
ಸಕ್ಕರೆ – 1 ಟೀ ಚಮಚ
ಚೂರು ಮಾಡಿದ ಟ್ಯೊಮಾಟೊ – 3
ಎಣ್ಣೆ – 1 ಟೀ ಚಮಚ
ಸಾಸಿವೆ – 3/4 ಟೀ ಚಮಚ
ಜೀರಿಗೆ – 1 ಟೀ ಚಮಚ
ಚೂರು ಮಾಡಿದ ಹಸಿ ಮೆಣಸಿನಕಾಯಿ – 2
ಇಂಗು – 1/4 ಟೀ ಚಮಚ
ಕತ್ತರಿಸಿದ ಕೊತ್ತಂಬರಿ ಸೊಪ್ಪು – ಸ್ವಲ್ಪ
ಕತ್ತರಿಸಿದ ಕರಿಬೇವು – 2 ಟೇಬಲ್ ಚಮಚ
ಮಾಡುವ ವಿಧಾನ : ಒಂದು ಪಾತ್ರೆಯಲ್ಲಿ ಮೊಸರನ್ನು ಗೊಟಾಯಿಸಿ. ಉಪ್ಪು, ಸಕ್ಕರೆ ಮತ್ತು ಟ್ಯೊಮಾಟೊ ಹಾಕಿ ಚೆನ್ನಾಗಿ ಕಲಸಿ. ಮಧ್ಯಮ ಉರಿಯಲ್ಲಿ, ಎಣ್ಣೆಯನ್ನು ಸಣ್ಣ ಬಾಣಲೆಯಲ್ಲಿ ಕಾಯಿಸಿ. ಸಾಸಿವೆ ಹಾಕಿ ಅದು ಸಿಡಿದ ಮೇಲೆ ಜೀರಿಗೆ ಹಾಕಿ. ಚೆನ್ನಾಗಿ ಕಲಸಿ. ಮೆಣಸಿನಕಾಯಿ ಮತ್ತು ಇಂಗು ಹಾಕಿ ಕಲಸಿ. ಅನಂತರ ಕೊತ್ತಂಬರಿ ಸೊಪ್ಪು ಮತ್ತು ಕರಿಬೇವನ್ನು ಹಾಕಿ. 20 ಸೆಕೆಂಡ್‌ನಷ್ಟು ಕಾಲ ಕಲಸಬೇಕು. ಈ ಮಿಶ್ರಣವನ್ನು ಮೊಸರಿಗೆ ಹಾಕಿ ಚೆನ್ನಾಗಿ ಕಲಸಿ. ಈಗ ರಾಯತ ಬಡಿಸಲು ಸಿದ್ಧ.