ಕಲ್ಕಿ ಅವತಾರ

ಮಕ್ಕಳೇ,

ಕಲ್ಕಿ ಅವತಾರವು ಕೃಷ್ಣನ ದಶಾವತಾರಗಳಲ್ಲಿ ಹತ್ತನೆಯ ಅವತಾರವಾಗಿದೆ. ಭಾಗವತದಲ್ಲಿ ಕಲ್ಕಿಯ ಅವತಾರದ ಬಗ್ಗೆ ಭವಿಷ್ಯ ಹೇಳಿದೆ. ಅಂದರೆ, ಕಲ್ಕಿಯು ಇನ್ನೂ ಅವತರಿಸಿಲ್ಲ ಮತ್ತು ಅವನು ಬರಲು ಇನ್ನೂ ಬಹಳ ಸಮಯವಿದೆ. ಸರಿಯಾಗಿ ಹೇಳುವುದಾದರೆ, ಅವನ ಅವತಾರಕ್ಕೆ ಇನ್ನು 4,27,000 ವರ್ಷ ಸಮಯವಿದೆ.

ಈ ಯುಗದ ಹೆಸರು ಕಲಿಯುಗ ಎಂದು. ನಾವು ಟಿವಿ, ವೃತ್ತಪತ್ರಿಕೆಗಳಲ್ಲಿ ಕಳ್ಳತನ, ಭ್ರಷ್ಟಾಚಾರಗಳ ಬಗ್ಗೆ ಕೇಳುತ್ತಲೇ ಇದ್ದೇವೆ. ಈ ಸಮಸ್ಯೆಗಳು ಈ ಕಲಿಯುಗದ ಅಂತ್ಯದವರೆಗೆ ಮಿತಿಮೀರಿ ಜಾಸ್ತಿಯಾಗಿಬಿಡುತ್ತವೆ. ಆಗ ಪರಮ ದಯಾಳುವಾದ ಕೃಷ್ಣನು ತನ್ನ ಭಕ್ತರನ್ನು ರಕ್ಷಿಸಲು ಮತ್ತು ಈ ಪಾಪಿಷ್ಠರನ್ನು ಶಿಕ್ಷಿಸಲು ಕಲ್ಕಿಯ ರೂಪ ಧರಿಸಿ ಬರುವನು. ಕಲ್ಕಿಯು ಸಂಬಲ ಎಂಬ ಗ್ರಾಮದಲ್ಲಿ ವಿಷ್ಣುಯಶ ಎಂಬ ಬ್ರಾಹ್ಮಣರ ಮನೆಯಲ್ಲಿ ಜನಿಸುತ್ತಾನೆ. ತನ್ನ ದೇವದತ್ತ ಎಂಬ ಕುದುರೆಯನ್ನೇರಿ ಕೈಯಲ್ಲಿ ಖಡ್ಗವನ್ನು ಹಿಡಿದು ಭೂಮಿಯಲ್ಲೆಲ್ಲ ಸಂಚರಿಸುವನು. ಹೀಗೆ ಅವನು ಚೋರರನ್ನು ಸಂಹರಿಸುವನು. ಎಲ್ಲ ದುಷ್ಟರ ಸಂಹಾರವಾದ ಮೇಲೆ ಮತ್ತೆ ಹೊಸ ಸತ್ಯಯುಗವೊಂದು ಪ್ರಾರಂಭವಾಗುತ್ತದೆ. ಇಂತಹ ಕರುಣಾಳು ಭಗವಂತನಿಗೆ ನಮ್ಮ ಭಕ್ತಿಪೂರ್ವಕ ಪ್ರಣಾಮಗಳನ್ನು ಅರ್ಪಿಸೋಣ.

ಹರೇಕೃಷ್ಣ.

ಈ ಲೇಖನ ಶೇರ್ ಮಾಡಿ