-
ಇಂದಿನ ದರ್ಶನ
ಇಸ್ಕಾನ್ ದೇವಸ್ಥಾನ, ಜನವರಿ 16, 2025, ಗುರುವಾರ
-
ವೈಕುಂಠ ಏಕಾದಶೀ ಅಭಿಷೇಕ
ವೈಕುಂಠ ಏಕಾದಶಿಯಂದು ನಸುಕಿನಲ್ಲಿ ದೇವರಿಗೆ ವಿಶೇಷ ಅಭಿಷೇಕ ಅರ್ಪಿಸಲಾಯಿತು. ಕೆಲ ದೃಶ್ಯಗಳು ನಿಮಗಾಗಿ ನೀಡಿದೆ.
-
ವೈಕುಂಠ ದ್ವಾರ ಅನಾವರಣ
ವೈಕುಂಠ ಏಕಾದಶಿಯಂದು ನಸುಕಿನಲ್ಲಿ ನಡೆಯುತ್ತಿರುವ ವೈಕುಂಠ ದ್ವಾರ ಅನಾವರಣ ಕಾರ್ಯಕ್ರಮ ವೀಕ್ಷಿಸಿ.
-
ಇಂದಿನ ದರ್ಶನ
ಇಸ್ಕಾನ್ ದೇವಸ್ಥಾನ, ರಾಜಾಜಿನಗರ, ಬೆಂಗಳೂರು ಜನವರಿ 1, 2025 ಬುಧವಾರ
-
ಮಾಸಿಕ ರಜತ ಮಹೋತ್ಸವ 2024
23 ಡಿಸೆಂಬರ್ 2024 ರಂದು, ರಾಜಾಜಿನಗರದ ಇಸ್ಕಾನ್ ಹರೇ ಕೃಷ್ಣ ಗಿರಿಯಲ್ಲಿ ಮಾಸಿಕ ರಜತ ಮಹೋತ್ಸವದಲ್ಲಿ ಭಕ್ತರು ಪಾಲ್ಗೊಂಡಿದ್ದರು. ಇದು ಶ್ರೀ ಶ್ರೀ ರಾಧಾ ಕೃಷ್ಣಚಂದ್ರರಿಗೆ 25ಕ್ಕೂ ಹೆಚ್ಚು ವರ್ಷಗಳ ಸಮರ್ಪಿತ ಸೇವೆಯನ್ನು ಗುರುತಿಸುತ್ತದೆ. ಈ ಸಂದರ್ಭದಲ್ಲಿ ನಡೆದ ವಾಹನೋತ್ಸವ, ಜೂಲನ್ ಉತ್ಸವ, ಪಲ್ಲಕ್ಕಿ ಉತ್ಸವದಂತಹ ಪವಿತ್ರ ಮತ್ತು ಸಂತೋಷದಾಯಕ ದೃಶ್ಯಗಳನ್ನು ವೀಕ್ಷಿಸಿ ಮತ್ತು ಇತರರೊಂದಿಗೆ ಹಂಚಿಕೊಳ್ಳಿ.
-
ಶ್ರೀ ಚೈತನ್ಯ ಮಹಾಪ್ರಭುಗಳ ದಿವ್ಯ ಜೀವನದ ಅನಾವರಣ
ಶ್ರೀ ಥಾವರ್ ಚಂದ್ ಗೆಹ್ಲೋಟ್, ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಿಂದ ಪುಸ್ತಕ ಬಿಡುಗಡೆದಿವ್ಯ ಉಪಸ್ಥಿತಿ – ಶ್ರೀ ಶ್ರೀ ವಿದ್ಯಾ ಶ್ರೀಶ ತೀರ್ಥ ಸ್ವಾಮೀಜಿ, ವ್ಯಾಸರಾಜ ಮಠ (ಸೋಸಲೆ) ಡಿಸೆಂಬರ್ 8, 2024 ಇಸ್ಕಾನ್ ಬೆಂಗಳೂರು, ಭಕ್ತಿ ಚಳವಳಿಯ ಶ್ರೇಷ್ಠ ಸಂತರು ಮತ್ತು ಸುಧಾರಕರಾದ ಶ್ರೀ ಚೈತನ್ಯ ಮಹಾಪ್ರಭುಗಳ ಜೀವನ ಮತ್ತು ಉಪದೇಶಗಳನ್ನು ಸುಂದರವಾಗಿ ಚಿತ್ರಿಸುವ ವಿಶ್ವಂಭರ ಎಂಬ ಮಹತ್ತ್ವಪೂರ್ಣ ಕನ್ನಡ ಕಾದಂಬರಿಯ ಬಿಡುಗಡೆಯನ್ನು ಪ್ರಕಟಿಸಲು ಹರ್ಷಿಸುತ್ತದೆ. ಪುಸ್ತಕ ಮತ್ತು ಲೇಖಕರ ಪರಿಚಯ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ…
-
ಬಾಂಗ್ಲಾದೇಶದಲ್ಲಿ ಶಾಂತಿಗಾಗಿ ಪ್ರಾರ್ಥಿಸಿ ಸಂಕೀರ್ತನೆ
ಕಳೆದ ಕೆಲವು ತಿಂಗಳುಗಳಿಂದ ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯದವರು ತೀವ್ರ ದೌರ್ಜನ್ಯಕ್ಕೆ ಗುರಿಯಾಗಿದ್ದಾರೆ. ದೇವಾಲಯಗಳ ಮೇಲೆ ದಾಳಿ ನಡೆದಿದೆ. ಸನಾತನ ಧರ್ಮದ ಅನುಯಾಯಿಗಳು ಜೀವ ಬೆದರಿಕೆಯನ್ನು ಎದುರಿಸುತ್ತಿದ್ದಾರೆ. ನೊಂದಿರುವ ಈ ಜನರಿಗೆ ರಕ್ಷಣೆಯನ್ನು ನೀಡಬೇಕೆಂದು ಒತ್ತಾಯಿಸಿ ಇಸ್ಕಾನ್ ಆಂದೋಲನವು ವಿಶ್ವಾದ್ಯಂತ ಸಂಕೀರ್ತನ ಕಾರ್ಯಕ್ರಮವನ್ನು ಆಯೋಜಿಸಿತ್ತು. ವಿಶ್ವ ಸಂಕೀರ್ತನೆಯು ವಿಶ್ವ ಹಿಂದೂ ಸಮುದಾಯದ ನೋವು ಮತ್ತು ದುಃಖದ ಶಾಂತಿಯುತ ಪ್ರದರ್ಶನವಾಗಿದೆ. ಅದು ಬಾಂಗ್ಲಾದೇಶದ ಹಿಂದೂಗಳ ಪರವಾಗಿ ಒಗ್ಗಟ್ಟಿನ ಪ್ರದರ್ಶನವಾಗಿದೆ. ಬಾಂಗ್ಲಾದೇಶದಲ್ಲಿ ಕಿರುಕುಳಕ್ಕೆ ಗುರಿಯಾಗಿರುವ ಅಲ್ಪಸಂಖ್ಯಾತರ ಜೊತೆ ಒಗ್ಗಟ್ಟನ್ನು ವ್ಯಕ್ತಪಡಿಸಲು ಇಸ್ಕಾನ್…
-
ವಿಷ್ಣು ಸಹಸ್ರನಾಮ ಪಾರಾಯಣ
ಇಸ್ಕಾನ್ ಬೆಂಗಳೂರು 15 ನವೆಂಬರ್ 2024 ರಂದು ರಾಜಾಜಿನಗರದ ಇಸ್ಕಾನ್ ಹರೇ ಕೃಷ್ಣ ಗಿರಿಯಲ್ಲಿ ಕಾರ್ತಿಕ ದೀಪೋತ್ಸವದ ಸಂದರ್ಭದಲ್ಲಿ 16ನೇ ವಾರ್ಷಿಕ ವಿಷ್ಣು ಸಹಸ್ರನಾಮ ಅಖಂಡ ಪಾರಾಯಣವನ್ನು ಆಯೋಜಿಸಿತ್ತು. ಬೆಂಗಳೂರು, ಮೈಸೂರು, ಚೆನ್ನೈ ಮತ್ತು ಇತರ ಸ್ಥಳಗಳಿಂದ 1500ಕ್ಕೂ ಹೆಚ್ಚು ಭಕ್ತರು 27 ತಂಡಗಳಲ್ಲಿ ವಿಷ್ಣು ಸಹಸ್ರನಾಮವನ್ನು ಪಠಿಸಲು ಆಗಮಿಸಿದ್ದರು. ವಿಶ್ವವಿಖ್ಯಾತ ವೇದ ವಿದ್ವಾಂಸ ವಿದ್ಯಾವಾಚಸ್ಪತಿ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ, ಗ್ಲೋಬಲ್ ವಿಷ್ಣುಸಹಸ್ರನಾಮ ಸತ್ಸಂಗ ಒಕ್ಕೂಟದ ಸಂಸ್ಥಾಪಕರು ಹಾಗೂ ಪ್ರಮುಖ ವಿಷ್ಣುಸಹಸ್ರನಾಮ ತಂಡಗಳ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಈ…
-
ಪ್ರಭುಪಾದರ 47ನೇ ಪುಣ್ಯದಿನಾಚರಣೆ
ರಾಜಾಜಿನಗರದ ಇಸ್ಕಾನ್ ಹರೇ ಕೃಷ್ಣ ಗಿರಿಯಲ್ಲಿ ಇಸ್ಕಾನ್ ಸಂಸ್ಥಾಪನಾಚಾರ್ಯರಾದ ಶ್ರೀಲ ಪ್ರಭುಪಾದರ 47ನೇ ಪುಣ್ಯದಿನಾಚರಣೆಯ ದೃಶ್ಯಗಳು. ವಸಂತಪುರದ ಇಸ್ಕಾನ್ ವೈಕುಂಠ ಗಿರಿಯಲ್ಲಿ ಇಸ್ಕಾನ್ ಸಂಸ್ಥಾಪನಾಚಾರ್ಯರಾದ ಶ್ರೀಲ ಪ್ರಭುಪಾದರ 47ನೇ ಪುಣ್ಯದಿನಾಚರಣೆಯ ದೃಶ್ಯಗಳು.
-
ಗೋವರ್ಧನ ಪೂಜೆ
ಇಸ್ಕಾನ್, ಹರೇ ಕೃಷ್ಣ ಗಿರಿ, ರಾಜಾಜಿನಗರ, ಬೆಂಗಳೂರು. ನವೆಂಬರ್ 2, 2024, ಶನಿವಾರ ಇಸ್ಕಾನ್, ವೈಕುಂಠ ಗಿರಿ, ವಸಂತಪುರ, ಬೆಂಗಳೂರು. ನವೆಂಬರ್ 2, 2024, ಶನಿವಾರ ಇಸ್ಕಾನ್, ಬಳ್ಳಾರಿ ನವೆಂಬರ್ 2, 2024, ಶನಿವಾರ