ಪ್ರಭುಪಾದ  ಉವಾಚ

(ಶ್ರೀಲ ಪ್ರಭುಪಾದರ ಬೋಧನೆಗಳಿಂದ ಆಯ್ದ ನುಡಿಮುತ್ತುಗಳು)

ಈ ಭಕ್ತಿಸೇವೆಯಿಂದ ಯಾರು ಭಗವತ್ಪ್ರೇಮವನ್ನು ಬೆಳೆಸಿಕೊಂಡಿದ್ದಾರೋ ಅವರು ಸದಾ ಕೃಷ್ಣನನ್ನು ನೋಡುತ್ತಾರೆ. ಆದರೆ ಲೌಕಿಕ ಕತ್ತಲಿನಲ್ಲಿರುವವರು ಸಂದೇಹವಿರುವವರು. ಅವರು ಹೇಳುತ್ತಾರೆ, `ದೇವರು ಸತ್ತಿದ್ದಾನೆ’, `ದೇವರಿಲ್ಲ’, `ನೀವು ನನಗೆ ದೇವರನ್ನು ತೋರಿಸಬಲ್ಲಿರಾ?’ ಇದು ರೋಗ ಸ್ಥಿತಿ. ದೆವ್ವ ಬಡಿದ ವ್ಯಕ್ತಿಯು ತನ್ನ ತಂದೆಯನ್ನು ನೋಡುವುದಿಲ್ಲ. ಕೆಲವು ಬಾರಿ ಅವನು ತನ್ನ ತಂದೆಯನ್ನು ಖಂಡಿಸುತ್ತಾನೆ. ಅವನು ಆಕ್ರಮಣ ಮಾಡುತ್ತಾನೆ. ಆದುದರಿಂದ ಇದು ಹುಚ್ಚುತನದ ಸ್ಥಿತಿ. ವ್ಯಕ್ತಿಯು ಭಗವಂತನನ್ನು ಅರ್ಥಮಾಡಿಕೊಳ್ಳದಿದ್ದರೆ, ಅದು ಹುಚ್ಚುತನ, ದೆವ್ವದ ಕಾಟದ ಸ್ಥಿತಿ ಎಂದು ಅವರು ಅರ್ಥ ಮಾಡಿಕೊಳ್ಳಬೇಕು.


ನಿಮಗೆ ಭೋಗಿಸುವ ಅಪೇಕ್ಷೆ, ನನಗೆ ಭೋಗಿಸುವ ಅಪೇಕ್ಷೆ. ಅಲ್ಲಿ ಹೋರಾಟವಿರಬೇಕು. ನಾವು ನಿಜವಾದ ಭೋಕ್ತೃಗಳಲ್ಲ, ಕೃಷ್ಣನ ಆನಂದಕ್ಕಾಗಿ ಅವನಿಗೆ ನಾವು ಸೇವೆ ಸಲ್ಲಿಸಬೇಕಾದುದು ನಮ್ಮ ಸ್ವರೂಪ ಸ್ಥಿತಿ ಎನ್ನುವುದು ನಮಗೆ ತಿಳಿದ ಕೂಡಲೇ, ಆಗ ಅದೇ ನಮ್ಮ ನಿಜವಾದ ಸಂತೋಷ, ಸುಖ.


ಈ ಲೇಖನ ಶೇರ್ ಮಾಡಿ

ಹೊಸ ಪೋಸ್ಟ್‌ಗಳು