ಭಕ್ತಿ ವೇದಾಂತ ದರ್ಶನ
ಭಕ್ತಿ ವೇದಾಂತ ದರ್ಶನವು ಕೃಷ್ಣ ಪ್ರಜ್ಞೆಯ ಬೋಧನೆಗಾಗಿ ಪ್ರಕಾಶನಗೊಳ್ಳುತ್ತಿರುವ ಮಾಸಪತ್ರಿಕೆ. ಶ್ರೀಲ ಪ್ರಭುಪಾದರು ಬೋಧಿಸಿರುವ ಆಧ್ಯಾತ್ಮಿಕ ವಿಷಯಗಳನ್ನು ಕುರಿತ ಲೇಖನಗಳು ಈ ಪತ್ರಿಕೆಯಲ್ಲಿ ಅಡಕವಾಗಿವೆ. ಇದರ ಜೊತೆಗೆ ಇಸ್ಕಾನ್ ರಾಧಾಕೃಷ್ಣ ಮಂದಿರಕ್ಕೆ ಸಂಬಂಧಿಸಿದ ವಾರ್ತೆ ಮತ್ತು ಕಾರ್ಯಕ್ರಮಗಳನ್ನು ಕುರಿತ ಮಾಹಿತಿಯೂ ಇದರಲ್ಲಿ ಇರುತ್ತದೆ. ಇದರೊಂದಿಗೆ, ಯಾತ್ರಾ ಸ್ಥಳಗಳನ್ನು ಕುರಿತಂತೆ ಲೇಖನಗಳು ಮತ್ತು ಸಾತ್ವಿಕ ಪಾಕ ವಿಧಾನಗಳೂ ಈ ಪತ್ರಿಕೆಯಲ್ಲಿ ಉಂಟು. ಅಷ್ಟೇ ಅಲ್ಲ, ಅನೇಕ ಆಸಕ್ತಿದಾಯಕ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಅರಿವು ಮೂಡಿಸಲು ಪುಟಗಳನ್ನು ಮೀಸಲಿಡಲಾಗಿದೆ. ಸಮಾಜಕ್ಕೆ ಆಧ್ಯಾತ್ಮಿಕ ಜ್ಞಾನವನ್ನು ವ್ಯವಸ್ಥಿತವಾಗಿ ತಿಳಿಸುವ, ಮತ್ತು ಭಗವದ್ಗೀತೆ ಮತ್ತು ಶ್ರೀಮದ್ ಭಾಗವತದಂತಹ ಧರ್ಮಗ್ರಂಥಗಳಲ್ಲಿ ವ್ಯಕ್ತಪಡಿಸಿರುವಂತೆ ಕೃಷ್ಣಪ್ರಜ್ಞೆಯನ್ನು ಪ್ರಚುರ ಪಡಿಸುವ ಪ್ರಯತ್ನ ಇದಾಗಿದೆ.