ಸಮೋಸಾ ಫೀಸ್ಟ್‌

ಬಿಸಿ ಬಿಸಿ ಸಮೋಸಗಳನ್ನು ನೋಡಿದಾಗ ಅದನ್ನು ತಿನ್ನಬೇಕೆಂದು ಬಯಸುವುದು ಸಹಜ. ಎಲ್ಲ ಸಮೋಸಗಳ ಆಕಾರ ಒಂದೇ ಆದರೂ ಅದರಲ್ಲಿ ಬಳಸುವ ಪದಾರ್ಥಗಳು ಬದಲಾದಂತೆ ರುಚಿಯೂ ಭಿನ್ನವಾಗಿರುತ್ತದೆ. ಭಕ್ತಿವೇದಾಂತ ದರ್ಶನದ ಓದುಗರಿಗೆ ಈ ಸಂಚಿಕೆಯಲ್ಲಿ ಸಮೋಸ ಮಾಡುವ ವಿಧಾನವನ್ನು ತಿಳಿಸಿದ್ದೇವೆ. ಈ ಎಲ್ಲವನ್ನು ಶ್ರದ್ಧೆಯಿಂದ ತಯಾರಿಸಿ ಶ್ರೀ ರಾಧಾಕೃಷ್ಣರಿಗೆ ಅರ್ಪಿಸಿ ಮನೆಯವರೊಂದಿಗೆ ಸೇವಿಸಿ.

ವೆಜಿಟೆಬಲ್‌ ಸಮೋಸ

ಬೇಕಾಗುವ ಪದಾರ್ಥಗಳು :

ಬೇಯಿಸಿದ ತರಕಾರಿಗಳು
ಆಲೂಗಡ್ಡೆ – 1 ಕಪ್‌
ಬಟಾಣಿ – 1/2 ಕಪ್‌
ಬೀನ್‌್ಸ – 1/2 ಕಪ್‌
ಕ್ಯಾರೆಟ್‌ – 1/2 ಕಪ್‌
ಹಸಿ ಮೆಣಸಿನಕಾಯಿ – 2
ಅಚ್ಚ ಖಾರದ ಪುಡಿ – 1/2 ಚಮಚ
ಧನಿಯಾ ಪುಡಿ – 1/4 ಚಮಚ
ಜೀರಿಗೆ ಪುಡಿ – 1/4 ಚಮಚ
ಗರಂ ಮಸಾಲ – 1/2 ಚಮಚ
ಚಾಟ್‌ ಮಸಾಲ – 1/4 ಚಮಚ
ಸೋಂಪು – 1/2 ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಮೈದಾ – 2 ಕಪ್‌
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಕರಿಯಲು

ಮಸಾಲೆ ಮಾಡುವ ವಿಧಾನ: ಒಂದು ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ ಕಾಯಿಸಿ. ಕಾದ ಎಣ್ಣೆಗೆ ಸೋಂಪು ಹಾಕಿ ಅನಂತರ ಸಣ್ಣಗೆ ಹೆಚ್ಚಿ ಬೇಯಿಸಿದ ತರಕಾರಿಗಳನ್ನು ಹಾಕಿ ಹುರಿಯಿರಿ. (ಬೇಯಿಸಿದ ತರಕಾರಿಗಳನ್ನು ಒಂದು ಬಟ್ಟೆಗೆ ಹಾಕಿ ಅದರಲ್ಲಿರುವ ನೀರಿನ ಅಂಶವನ್ನೆಲ್ಲ ತೆಗೆದುಬಿಡಿ) ಕೊನೆಯದಾಗಿ ಉಪ್ಪು ಮತ್ತು ಎಲ್ಲ ಮಸಾಲೆ ಪದಾರ್ಥಗಳನ್ನು ಹಾಕಿ ಬಾಡಿಸಿ. ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಮಿಕ್‌್ಸ ಮಾಡಿ ಇಳಿಸಿ.
ಸಮೋಸ ಮಾಡುವ ವಿಧಾನ: ಮೈದಾಹಿಟ್ಟಿಗೆ ಸ್ವಲ್ಪ ಉಪ್ಪು ಸೇರಿಸಿ ಮೂರು ಚಮಚ ಬಿಸಿ ಎಣ್ಣೆ ಹಾಕಿ ಚೆನ್ನಾಗಿ ಮಿಕ್‌್ಸ ಮಾಡಿ, ಅನಂತರ ಸ್ವಲ್ಪ ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿ. ಇದನ್ನು 30 ನಿಮಿಷ ಮುಚ್ಚಿಡಿ. 30 ನಿಮಿಷದ ಅನಂತರ ಮೈದಾ ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ಮಾಡಿ ಚಪಾತಿಯಂತೆ ಲಟ್ಟಿಸಿ. ಇದನ್ನು ಅರ್ಧ ಭಾಗ ಕತ್ತರಿಸಿ. ಎಲ್ಲ ಬದಿಗಳಿಗೆ ನೀರು ಸವರಿ. ಅನಂತರ ಕೋನ್‌ ಆಕಾರದಲ್ಲಿ ಮಡಚಿ ಒಳಗೆ ತರಕಾರಿ ಮಸಾಲೆಯನ್ನು ತುಂಬಿ. ಕೊನೆಗೆ ಮೇಲಿನ ಭಾಗವನ್ನು ಸ್ವಲ್ಪ ನೀರು ಸವರಿ ಚೆನ್ನಾಗಿ ಒತ್ತಿ ಮುಚ್ಚಬೇಕು. ಇಲ್ಲದಿದ್ದರೆ ತರಕಾರಿ ಮಿಶ್ರಣವೆಲ್ಲ ಹೊರಗೆ ಬರುವ ಸಾಧ್ಯತೆ ಇರುತ್ತದೆ. ಇದನ್ನು ಕಾದ ಎಣ್ಣೆಯಲ್ಲಿ ಕರಿದರೆ ಬಿಸಿ-ಬಿಸಿಯಾದ ವೆಜಿಟೆಬಲ್‌ ಸಮೋಸ ಸಿದ್ಧ. ಇದನ್ನು ಟೊಮೆಟೊ ಸಾಸ್‌ ಜೊತೆ ಸವಿಯಬಹುದು.

ಕ್ಯಾಬೇಜ್‌ ಸಮೋಸ

ಬೇಕಾಗುವ ಪದಾರ್ಥಗಳು :

ಸಣ್ಣಗೆ ಹೆಚ್ಚಿದ ಕ್ಯಾಬೇಜ್‌ – 2 ಕಪ್‌
ಕಡಲೆ ಬೇಳೆ – 1/2 ಕಪ್‌
ಅಚ್ಚ ಖಾರದ ಪುಡಿ – 1 1/2 ಚಮಚ
ಚಾಟ್‌ ಮಸಾಲ – 1/2 ಚಮಚ
ಹಸಿ ತೆಂಗಿನ ತುರಿ – 4 ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಉದ್ದಿನ ಬೇಳೆ – 1 ಚಮಚ
ಗೋಧಿಹಿಟ್ಟು – 1 1/2 ಕಪ್‌
ಮೈದಾ – 1/2 ಕಪ್‌
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಕರಿಯಲು

ಮಾಡುವ ವಿಧಾನ : ಗೋದಿ ಹಿಟ್ಟಿಗೆ ಮೈದಾ, ಬಿಸಿ ಎಣ್ಣೆ, ಸ್ವಲ್ಪ ಉಪ್ಪು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಇಡಿ. ಕ್ಯಾಬೇಜ್‌ ಹಾಗೂ ಕೊತ್ತಂಬರಿ ಸೊಪ್ಪನ್ನು ತೊಳೆದು ಸಣ್ಣಗೆ ಹೆಚ್ಚಿಡಿ. ಕಡಲೆಬೇಳೆಗೆ ಸ್ವಲ್ಪ ನೀರು ಮತ್ತು ಉಪ್ಪು ಸೇರಿಸಿ ಬೇಯಿಸಿಕೊಳ್ಳಿ. ಒಲೆಯ ಮೇಲೆ ಬಾಣಲೆಯಿಟ್ಟು ಎರಡು ಚಮಚ ಎಣ್ಣೆ ಹಾಕಿ ಕಾಯಿಸಿ. ಕಾದ ಎಣ್ಣೆಗೆ ಉದ್ದಿನ ಬೇಳೆ ಹಾಕಿ ಬಾಡಿಸಿ ಅನಂತರ ಹೆಚ್ಚಿದ ಕ್ಯಾಬೆಜ್‌ ಅನ್ನು ಹಾಕಿ ಐದು ನಿಮಿಷ ಬೇಯಿಸಿ. ಇದಕ್ಕೆ ಬೇಯಿಸಿದ ಕಡ್ಲೆಬೇಳೆ, ಚಾಟ್‌ ಮಸಾಲ, ಅಚ್ಚ ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್‌್ಸ ಮಾಡಿ ಅನಂತರ ಒಲೆಯಿಂದ ಕೆಳಗಿಳಿಸಿ. ಕೊನೆಯದಾಗಿ ಹಸಿ ತೆಂಗಿನ ತುರಿ, ಕೊತ್ತಂಬರಿ ಸೊಪ್ಪನ್ನು ಸೇರಿಸಿ. ಕಲೆಸಿದ ಗೋಧಿ ಹಿಟ್ಟಿನಿಂದ ಸಣ್ಣ ಪೂರಿಗಳಂತೆ ಲಟ್ಟಿಸಿ ಅರ್ಧಕ್ಕೆ ಕತ್ತರಿಸಿ ಕೋನಿನ ಆಕಾರ ಮಾಡಿ. ಅದರೊಳಗೆ ಕ್ಯಾಬೆಜ್‌ ಮಿಶ್ರಣವನ್ನು ತುಂಬಿ ಸಮೋಸದಂತೆ ಮಾಡಿ ಕಾದ ಎಣ್ಣೆಯಲ್ಲಿ ಕರಿದರೆ ರುಚಿಯಾದ ಕ್ಯಾಬೇಜ್‌ ಸಮೋಸ ಸವಿಯಲು ಸಿದ್ಧ.

ಕಡಲೆ ಕಾಳಿನ ಸಿಹಿ ಸಮೋಸ

ಬೇಕಾಗುವ ಪದಾರ್ಥಗಳು :

ಕಡಲೆ ಕಾಳು – 1 ಕಪ್‌
ಖೋವಾ – 1/2 ಕಪ್‌
ಸಕ್ಕರೆ – 1 ಕಪ್‌
ಏಲಕ್ಕಿಪುಡಿ – 1/2 ಚಮಚ
ಮೈದಾ – 1/2 ಕಪ್‌
ಚಿರೋಟಿ ರವೆ – 1/2 ಕಪ್‌
ತುಪ್ಪ – 2 ಚಮಚ
ಉಪ್ಪು – ಚಿಟಿಕೆ
ಎಣ್ಣೆ – ಕರಿಯಲು

ಮಾಡುವ ವಿಧಾನ : ಮೈದಾಹಿಟ್ಟಿಗೆ ಚಿರೋಟಿ ರವೆ, ಉಪ್ಪು, ತುಪ್ಪ, ಬಿಸಿ ಎಣ್ಣೆ ಅಗತ್ಯವಿದ್ದಷ್ಟು ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ಕಡಲೆ ಕಾಳನ್ನು ಚೆನ್ನಾಗಿ ಬೇಯಿಸಿಕೊಂಡು ಅದಕ್ಕೆ ನೀರು ಹಾಕದೆ ನುಣ್ಣಗೆ ರುಬ್ಬಿಕೊಳ್ಳಿ. ಬಾಣಲೆಯನ್ನು ಒಲೆಯ ಮೇಲಿಟ್ಟು ಅದಕ್ಕೆ ಖೋವಾ, ಸಕ್ಕರೆ, ರುಬ್ಬಿದ ಕಡಲೆಕಾಳನ್ನು ಹಾಕಿ ಗಟ್ಟಿಯಾಗುವ ತನಕ ಕೈಯಾಡಿಸುತ್ತಿರಿ.

ಮೈದಾಹಿಟ್ಟಿನಿಂದ ಚಪಾತಿ ಲಟ್ಟಿಸಿ ಅದರೊಳಗೆ ಕಡಲೆಕಾಳಿನ ಮಿಶ್ರಣವಿಟ್ಟು ತ್ರಿಕೋನಾಕಾರವಾಗಿ ಸುರುಳಿ ಸುತ್ತಿ. ಸುರುಳಿ ಸುತ್ತಿದ ಸಮೋಸವನ್ನು ಕಾದ ಎಣ್ಣೆಗೆ ಹಾಕಿ ಹದವಾದ ಉರಿಯಲ್ಲಿ ಬೇಯಿಸಿದರೆ ಕಡಲೆಕಾಳಿನ ಸಿಹಿ ಸಮೋಸ ಸವಿಯಲು ಸಿದ್ಧ.


ಈ ಉಪಾಯ ನಿಮಗೆ ತಿಳಿದಿರಲಿ

  • ಹಾಲು ಕುದಿಯುವಾಗ ಪಾತ್ರೆ ಅಂಚಿಗೆ ಎಣ್ಣೆ ಸವರಿದರೆ ಹಾಲು ಉಕ್ಕಿ ಹೊರಗೆ ಬರುವುದನ್ನು ತಡೆಯಬಹುದು.
  • ಹಿಟ್ಟು ಕಲೆಸುವಾಗ ಬಿಸಿ ನೀರು ಹಾಕಿದರೆ ಚಪಾತಿ, ರೊಟ್ಟಿ, ಪೂರಿ ಮೃದುವಾಗಿರುತ್ತದೆ.
  • ಮೊಸರಿಗೆ ಹೆಪ್ಪು ಹಾಕುವಾಗ ತೊಟ್ಟು ತೆಗೆದ ಹಸಿರು ಮೆಣಸಿನಕಾಯಿಯನ್ನು ಹಾಕಿದರೆ, ಅದು ಐಸ್‌ ಕ್ರೀಮ್‌ನಂತೆ ತುಂಬ ಬೇಗ ಹೆಪ್ಪಾಗುತ್ತದೆ.
  • ತುಂಬ ದಿನಗಳವರೆಗೆ ಫ್ರಿಡ್‌್ಜ, ವಾಷಿಂಗ್‌ ಮೆಷಿನ್‌ ಬಳಸದಿದ್ದರೆ ಅದರಲ್ಲಿ ಇದ್ದಲಿನ ಚೂರುಗಳನ್ನು ಹಾಕಿಡಿ. ಇದರಿಂದ ಅದರಲ್ಲಿ ಬೂಷ್ಟು ಬರುವುದನ್ನು ತಡೆಯಬಹುದು.
ಈ ಲೇಖನ ಶೇರ್ ಮಾಡಿ

ಹೊಸ ಪೋಸ್ಟ್‌ಗಳು