ಪ್ರಭುಪಾದ ಉವಾಚ

(ಶ್ರೀಲ ಪ್ರಭುಪಾದರ ಬೋಧನೆಗಳಿಂದ ಆಯ್ದ ನುಡಿಮುತ್ತುಗಳು)

ಪ್ರಪಂಚದ ಅನೇಕ ಭಾಗಗಳಲ್ಲಿ ಜೀವನಕ್ಕೆ ಅಗತ್ಯವಾದ ಎಲ್ಲ ಸೌಲಭ್ಯಗಳಿಂದ ಕೂಡಿದ, ಸಂಪತ್ತು ತುಂಬಿದ ಮತ್ತು ಆರ್ಥಿಕವಾಗಿ ಅಭಿವೃದ್ಧಿಹೊಂದಿದ ಅನೇಕ ರಾಷ್ಟ್ರಗಳಿವೆ. ಆದರೂ ಅಲ್ಲಿ ಲೌಕಿಕ ಅಸ್ತಿತ್ವದ ಸಮಸ್ಯೆಗಳು ಇದ್ದೇ ಇವೆ. ಅವರು ನೆಮ್ಮದಿಗಾಗಿ ಅನೇಕ ಮಾರ್ಗಗಳನ್ನು ಅರಸುತ್ತಿದ್ದಾರೆ. ಆದರೆ ಕೃಷ್ಣನ ಸಲಹೆ ಪಡೆದರೆ ಅಥವಾ ಕೃಷ್ಣನ ಅಧಿಕೃತ ಪ್ರತಿನಿಧಿಯ ಮೂಲಕ ಅಂದರೆ ಕೃಷ್ಣಪ್ರಜ್ಞೆಯಲ್ಲಿ ಇರುವವರ ಮೂಲಕ ಕೃಷ್ಣ ವಿಜ್ಞಾನವಾದ ಭಗವದ್ಗೀತೆ ಮತ್ತು ಭಾಗವತದ ಸಲಹೆ ಪಡೆದರೆ ಮಾತ್ರ ಅವರು ನಿಜವಾದ ಸುಖವನ್ನು ಪಡೆಯುತ್ತಾರೆ.

* * *

ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಪ್ರಶ್ನೆ ಮತ್ತು ಉತ್ತರಗಳ ಗಡಬಿಡಿಯಲ್ಲಿದ್ದರೆ ನ್ಯಾಯಾಲಯದಲ್ಲಿ ವಕೀಲರು ಮತ್ತು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಲ್ಲಿ ಪ್ರಶ್ನೆ ಕೇಳುತ್ತ ಮತ್ತು ಉತ್ತರ ನೀಡುವುದರಲ್ಲಿ ನಿರತರಾಗಿದ್ದಾರೆ. ಅದೇ ರೀತಿ ಸಂಸತ್ತಿನಲ್ಲಿ ಸದಸ್ಯರು ಪ್ರಶ್ನೋತ್ತರದಲ್ಲಿ ಮಗ್ನರಾಗಿದ್ದಾರೆ. ಹಾಗೆಯೇ ರಾಜಕಾರಣಿಗಳು ಮತ್ತು ಪತ್ರಿಕೆಯವರು ಪ್ರಶ್ನೆ ಕೇಳುತ್ತ ಮತ್ತು ಅದಕ್ಕೆ ಉತ್ತರ ಪಡೆಯುತ್ತಿದ್ದಾರೆ. ಅವರೆಲ್ಲ ತಮ್ಮ ಜೀನವವಿಡೀ ಹಾಗೆ ಪ್ರಶ್ನೋತ್ತರದಲ್ಲಿ ಕಳೆದರೂ ಅವರಿಗೆ ತೃಪ್ತಿ ಸಿಗುವುದಿಲ್ಲ. ಕೃಷ್ಣನನ್ನು ಕುರಿತ ಪ್ರಶ್ನೆ ಮತ್ತು ಉತ್ತರಗಳಿಂದ ಮಾತ್ರ ಆತ್ಮಕ್ಕೆ ತೃಪ್ತಿ ಸಿಗುವುದು ಸಾಧ್ಯ.

* * *

ಲೌಕಿಕ ಅಪೇಕ್ಷೆಗಳ ಕೊಳಕು ತುಂಬಿದ ನಮ್ಮ ಹೃದಯವನ್ನು ಶುದ್ಧೀಕರಿಸುವ ಕಲೆ ಎಂದರೆ ಕೃಷ್ಣಪ್ರಜ್ಞೆ.  ಜೀವಿಗಳಾದ ನಮಗೆಲ್ಲ  ಆಸೆ ಎಂಬುವುದು ಇದ್ದೇ ಇರುತ್ತದೆ. ಆದುದರಿಂದ ನಾವು ಬಯಕೆಗಳನ್ನು ಬಿಡಲಾರೆವು. ಆದರೆ ನಮ್ಮ ಬಯಕೆಗಳನ್ನು ಶುದ್ಧೀಕರಿಸಬಹುದು. ಬಯಕೆಗಳನ್ನು ಕೊಲ್ಲುವುದು ಪರಿಹಾರವಲ್ಲ. ಆದರೆ ಬಯಕೆಗಳನ್ನು ಗುಣಪಡಿಸುವುದು – ರೋಗಿಷ್ಠ ಸ್ಥಿತಿಯನ್ನು ಗುಣಪಡಿಸುವುದು – ಸರಿಯಾದ ಪರಿಹಾರ. ಗೊಂದಲಗಳ ಧೂಳನ್ನು ನಮ್ಮ ಹೃದಯದಿಂದ ಹೊರಹಾಕಿದಾಗ ನಮ್ಮ ನಿಜವಾದ ಸ್ಥಾನ ತಿಳಿಯಲು ಮತ್ತು ಬದುಕಿನ ಅಂತಿಮ ಗುರಿಯ ಕಡೆ ಹೆಜ್ಜೆ ಹಾಕಲು ಸಾಧ್ಯವಾಗುತ್ತದೆ.

* * *

ಈ ಲೇಖನ ಶೇರ್ ಮಾಡಿ