ಪ್ರಭುಪಾದ ಉವಾಚ

(ಶ್ರೀಲ ಪ್ರಭುಪಾದರ ಬೋಧನೆಗಳಿಂದ ಆಯ್ದ ನುಡಿಮುತ್ತುಗಳು)

ಧರ್ಮಗ್ರಂಥಗಳ ಆದೇಶದ ಪ್ರಕಾರ ದೇವೋತ್ತಮ ಪರಮ ಪುರುಷನು ಮಾತ್ರ ಪೂಜಾರ್ಹನು. ಆದರೆ ಧರ್ಮಗ್ರಂಥಗಳ ಆದೇಶಗಳನ್ನು ಚೆನ್ನಾಗಿ ತಿಳಿಯದವರು ಅಥವಾ ಅದರಲ್ಲಿ ಹೆಚ್ಚು ಶ್ರದ್ಧೆಯಿಲ್ಲದವರು ಐಹಿಕ ಪ್ರಕೃತಿಯ ಗುಣಗಳಲ್ಲಿ ತಮ್ಮ ತಮ್ಮ ವಿಶಿಷ್ಟ ನೆಲೆಗಳಿಗನುಗುಣವಾಗಿ ಬೇರೆ ಬೇರೆ ವಸ್ತುಗಳನ್ನು ಪೂಜಿಸುತ್ತಾರೆ.

– ಭಗವದ್ಗೀತೆ 17.4, ಭಾವಾರ್ಥ


* * *

ಧರ್ಮಗ್ರಂಥಗಳ ಆದೇಶಗಳಲ್ಲಿ ಹೇಳದಿರುವ ತಪಸ್ಸುಗಳನ್ನು ಸೃಷ್ಟಿಮಾಡುವವರು ಇದ್ದಾರೆ. ಉದಾಹರಣೆಗೆ ಸಂಪೂರ್ಣವಾಗಿ ರಾಜಕೀಯವಾದ ಗುರಿಯನ್ನು ಸಾಧಿಸಲು ಉಪವಾಸ ಮಾಡುವುದು. ಇದನ್ನು ಧರ್ಮಗ್ರಂಥಗಳ ಆದೇಶಗಳಲ್ಲಿ ಹೇಳಿಲ್ಲ. ಆಧ್ಯಾತ್ಮಿಕ ಮುನ್ನಡೆಗಾಗಿ ಉಪವಾಸಮಾಡಬೇಕೆಂದು ಧರ್ಮಗ್ರಂಥಗಳು ಹೇಳಿವೆ. ಯಾವುದೋ ರಾಜಕೀಯ ಗುರಿ ಅಥವಾ ಸಾಮಾಜಿಕ ಉದ್ದೇಶಕ್ಕಾಗಿ ಅಲ್ಲ. ಭಗವದ್ಗೀತೆಯ ಪ್ರಕಾರ ಇಂತಹ ತಪಸ್ಸುಗಳನ್ನು ಮಾಡುವವರು ನಿಶ್ಚಯವಾಗಿಯೂ ಅಸುರರು.

– ಭಗವದ್ಗೀತೆ 17.5-6, ಭಾವಾರ್ಥ


* * *

ಮನುಷ್ಯನು ತನಗೆ ಬೇಕಾದಂತೆ ನಡೆಯಬಹುದು, ಹಾಗೆ ನಡೆದರೂ ಪರಿಪೂರ್ಣತೆಯನ್ನು ಪಡೆಯಬಹುದು ಎಂದು ಕೆಲವು ಧರ್ಮಪ್ರಚಾರಕರು ವಾದಿಸುತ್ತಾರೆ. ಆದರೆ ಈ ಮೂರ್ಖ ಮಾರ್ಗದರ್ಶಕರು ಧರ್ಮಗ್ರಂಥದ ನಿರ್ದೇಶನಕ್ಕೆ ಅನುಗುಣವಾಗಿ ನಡೆಯುತ್ತಿಲ್ಲ. ಅವರು ಮಾರ್ಗಗಳನ್ನು ಸೃಷ್ಟಿಮಾಡಿ ಜನಸಾಮಾನ್ಯರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ.

– ಭಗವದ್ಗೀತೆ 17. 7 ಭಾವಾರ್ಥ


* * *

ಈ ಲೇಖನ ಶೇರ್ ಮಾಡಿ