ನಮ್ಮ ಮನಸ್ಸು ಮತ್ತು ಇಂದ್ರಿಯಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ನೆರವಾಗಲೆಂದೇ ಉಪವಾಸವಿರುವುದು ಎಂದು ವೈದಿಕ ಧರ್ಮ ಗ್ರಂಥಗಳು ಹೇಳುತ್ತವೆ. ಇದರಿಂದ ನಾವು ಆಧ್ಯಾತ್ಮಿಕ ಸಾಕ್ಷಾತ್ಕಾರದಲ್ಲಿ ಮುನ್ನಡೆಯಬಹುದು.
ನನ್ನ ತೂಕ ಹೆಚ್ಚಾಗಿದೆ. ಒಂದಷ್ಟು ತೂಕವನ್ನು ಇಳಿಸಬೇಕೆಂದುಕೊಳ್ಳುವೆ. ನಾನು ಕಷ್ಟಪಟ್ಟು ಉಪವಾಸ ಮಾಡಲು ದೃಢ ನಿರ್ಧಾರವನ್ನು ಕೈಗೊಳ್ಳುವೆ. ಆದರೂ ಅಧಿಕ ತೂಕದ ಸಮಸ್ಯೆಯನ್ನು ನಿವಾರಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಕಾರಣ ನನ್ನ ಆಹಾರ ಕ್ರಮ.

ಉಪವಾಸದಿಂದ ಪಡೆದ ಲೌಕಿಕ ಗುರಿಗಳು ಉಳಿದ ಎಲ್ಲದರಂತೆ ತಾತ್ಕಾಲಿಕ ಮತ್ತು ಸೀಮಿತ. ಭಾರತವು ಬ್ರಿಟಿಷ್ ಆಡಳಿತದಿಂದ ಮುಕ್ತವಾಯಿತು. ಆದರೆ ಅದು ದಿನನಿತ್ಯದ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಬಿಕ್ಕಟ್ಟುಗಳಿಂದ ಮುಕ್ತವಾಗಿಲ್ಲ. ಅಥವಾ ಪ್ರವಾಹ, ಬರ ಮತ್ತು ಬಡತನದಿಂದ ಮುಕ್ತವಾಗಿಲ್ಲ. ವಿಯೆಟ್ನಾಂ ಯುದ್ಧ ಅಂತ್ಯಗೊಂಡಿತು. ಆದರೆ ಇತರ ಯುದ್ಧಗಳು ತಲೆ ಎತ್ತುತ್ತಿವೆ. ಅದೇ ರೀತಿ ನೀವು ಉಪವಾಸದಿಂದ ಆರೋಗ್ಯ ಹೊಂದಬಹುದು. ಆದರೆ ಎಲ್ಲಿಯವರೆಗೆ? ರೋಗವು ಲೌಕಿಕ ಲೋಕದ ಅನಿವಾರ್ಯ ಭಾಗವಾಗಿದೆ.
ಆದರೆ ಒಬ್ಬ ಅಲೌಕಿಕನ ಉಪವಾಸವು ತುಂಬಾ ಭಿನ್ನ. ಅವನ ಗುರಿಯು ತಾತ್ಕಾಲಿಕವೂ ಅಲ್ಲ, ಸೀಮಿತವೂ ಅಲ್ಲ. ಅವನು ಡಂಗೂರ ಸಾರಿಕೊಂಡು ತನ್ನ ಉಪವಾಸವನ್ನು ಆರಂಭಿಸುವುದಿಲ್ಲ. ಅಥವಾ ಪ್ರತಿ ದಿನ ತೂಕವನ್ನು ನೋಡಿಕೊಳ್ಳುವುದೂ ಇಲ್ಲ. ಯಾವ ಪಶ್ಚಾತ್ತಾಪವೂ ಇಲ್ಲದೆ ಪುನಃ ಪುಷ್ಕಳ ಭೋಜನವನ್ನು ತಿನ್ನುವ ದಿನಕ್ಕಾಗಿ ಹಾತೊರೆಯುವುದೂ ಇಲ್ಲ. ವಾಸ್ತವವಾಗಿ ಪ್ರಗತಿಹೊಂದಿದ ಅಲೌಕಿಕರು ಯಾವುದೇ ವೈಯಕ್ತಿಕ ಲಕ್ಷ್ಯವಿಲ್ಲದೆ ಉಪವಾಸ ಮಾಡುತ್ತಾರೆ ಮತ್ತು ಆಹಾರ ಸೇವನೆಯನ್ನೂ ಮರೆಯುತ್ತಾರೆ! ಅಂತಹ ಪ್ರಗತಿಹೊಂದಿದ ಭಕ್ತರಿಗೆ ಈ ಮರೆವು ಭಗವಂತನನ್ನು ಕುರಿತ ಸ್ವಯಂ ಪ್ರೇರಿತ ಪ್ರೇಮದ ಫಲವಾಗಿದೆ. ಉದಾಹರಣೆಗೆ ಶ್ರೀ ಚೈತನ್ಯರ ಶಿಷ್ಯರಾದ ಆರು ಗೋಸ್ವಾಮಿಗಳು ಭಕ್ತಿಸೇವೆ ಮತ್ತು ಭಗವಂತನ ಸ್ಮರಣೆಯಲ್ಲಿ ಎಷ್ಟು ಮಗ್ನರಾಗಿದ್ದರೆಂದರೆ ಅವರು ಆಹಾರ ಸೇವನೆಯನ್ನು ನಿರ್ಲಕ್ಷಿಸಿದ್ದರು.

ಅಂತಹ ಭಾವನೆಯನ್ನು ಅರ್ಥಮಾಡಿಕೊಳ್ಳಬಹುದು. ಕೆಲವು ಬಾರಿ ನಾವು ಟಿವಿ ಕಾರ್ಯಕ್ರಮ ನೋಡುತ್ತಿರುವಾಗ ಅಥವಾ ಓದಿನಲ್ಲಿ ಮಗ್ನರಾಗಿದ್ದಾಗ, ಯಾರಾದರೂ ನಮ್ಮನ್ನು ಊಟಕ್ಕೆ ಕರೆದರೆ ಅದು ನಮ್ಮ ಗಮನಕ್ಕೆ ಬರುವುದಿಲ್ಲ. ಆದರೆ ನಮ್ಮ ಈ ಅನ್ಯಮನಸ್ಕತೆಯನ್ನು ನಾವು ಕೃಷ್ಣಭಕ್ತರೊಂದಿಗೆ ಹೋಲಿಸುವುದು ಸಾಧ್ಯವಿಲ್ಲ.
ಭಗವಂತನನ್ನು ಕುರಿತ ಸ್ವಯಂಪ್ರೇರಿತ ಭಕ್ತಿಯ ವೇದಿಕೆಯಲ್ಲಿ ಇಲ್ಲದವರಿಗೆ ಧರ್ಮಗ್ರಂಥಗಳು ವಿಶೇಷ ಆಚರಣೆಯನ್ನು ಸೂಚಿಸಿವೆ. ನಾವೂ ಕೂಡ ಈ ವೇದಿಕೆಗೆ ಬರಲು ಅದು ಸಹಾಯಮಾಡುತ್ತದೆ. ನಾವು ಭಗವಂತನ ಮತ್ತು ಅವನ ಪ್ರತಿನಿಧಿಗಳ ಆವಿರ್ಭಾವದ ದಿನಗಳಂದು ಹಾಗೂ ಪ್ರತಿ ಏಕಾದಶಿಯಂದು ಉಪವಾಸ ಆಚರಿಸುತ್ತೇವೆ. ಕೃಷ್ಣನಾಮವನ್ನು ಜಪಿಸುವುದು, ಕೃಷ್ಣಪ್ರಜ್ಞೆಯನ್ನು ಕುರಿತ ಉಪನ್ಯಾಸದಲ್ಲಿ ಭಾಗವಹಿಸುವುದು ಇಂತಹ ದಿವ್ಯಕ್ರಿಯೆಗಳಲ್ಲಿ ಮಗ್ನರಾಗಿ ದೈಹಿಕ ಅಗತ್ಯಗಳನ್ನು ಕನಿಷ್ಠಗೊಳಿಸುತ್ತೇವೆ. ಅಂದರೆ ಗುರಿಯು ಆಧ್ಯಾತ್ಮಿಕ ಪ್ರಗತಿ ಮತ್ತು ಆತ್ಮ ಸಾಕ್ಷಾತ್ಕಾರ.

ಏಕಾದಶಿಯ ಆಚರಣೆಗೆ ಹೇಗೆ? ಇಡೀ ದಿನ ಉಪವಾಸವಿರಬಹುದು. ಅಥವಾ ಹಣ್ಣು, ಹಾಲು ಸೇವಿಸಬಹುದು. ಏಕಾದಶಿಯಂದು ಧಾನ್ಯ ತಿನ್ನುವುದಿಲ್ಲ.