ಇಸ್ಕಾನ್ ಬೆಂಗಳೂರು ಅಧ್ಯಕ್ಷರಾದ ಶ್ರೀ ಮಧು ಪಂಡಿತ ದಾಸ ಅವರಿಗೆ ಉಡುಪಿಯಲ್ಲಿ ನಡೆದ ಪರ್ಯಾಯ ಸಮಾರಂಭದಲ್ಲಿ ಪರ್ಯಾಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಸ್ವಾಮೀಜಿ ಅವರ ಮಾತುಗಳಲ್ಲಿ…
ನಮ್ಮ ಮಧು ಪಂಡಿತ ದಾಸರು ಈವತ್ತು ಬಹಳ ವಿಶೇಷವಾದಂತಹ ಸಾಧನೆಯನ್ನು ಮಾಡಿರುವವರು. ನಾವು ಅವರೂ 40 ವರ್ಷಗಳಿಂದ ವಿಶೇಷ ಸಂಪರ್ಕದಲ್ಲಿ ಇದ್ದೇವೆ. ಅವರು ಸಾಮಾನ್ಯ ಕಾರ್ಯಕರ್ತರಾಗಿ ನಮ್ಮ ಕಣ್ಣೆದುರಿಗೇ ಈವತ್ತು ಬಹಳ ದೊಡ್ಡದಾದಂತಹ ಕೃಷ್ಣನ ದೇವಸ್ಥಾನವನ್ನು ಬೆಂಗಳೂರಿನಲ್ಲಿ ನಿರ್ಮಾಣ ಮಾಡಿರುವ ಅವರ ಸಾಧನೆ ಮತ್ತು ಸೇವೆಯನ್ನು ನೋಡಿ ನಾವೇ ಆಶ್ಚರ್ಯ ಚಕಿತರಾಗಿದ್ದೇವೆ. ಅಂತಹ ಮಧು ಪಂಡಿತ ದಾಸರು ಕೃಷ್ಣಭಕ್ತಿ ಪ್ರಚಾರದಲ್ಲಿ ವಿಶೇಷವಾದ ಸಾಧನೆಯನ್ನು ಮಾಡಿ ಎಲ್ಲರಿಗೂ ಆಶ್ಚರ್ಯ ಮತ್ತು ಸ್ಫೂರ್ತಿ ದೊರಕುವಂತೆ ಮಾಡಿದ್ದಾರೆ. ಅವರಿಗೆ ಈ ಪರ್ಯಾಯ ಪ್ರಶಸ್ತಿಯನ್ನು ನಾವು ಘೋಷಣೆ ಮಾಡ್ತಾ ಇದ್ದೇವೆ.
ಇಸ್ಕಾನ್ ನಮ್ಮ ಉಡುಪಿಯ ಶ್ರೀ ಮಧ್ವಾಚಾರ್ಯರ ಸಿದ್ಧಾಂತವನ್ನು ಒಪ್ಪಿಕೊಂಡು ಅಂತಹ ಸಿದ್ಧಾಂತವನ್ನು ಎಲ್ಲ ಕಡೆ ಪ್ರಚಾರ ಮಾಡ್ತಾ ಇದೆ. ಅಂತಹ ಒಂದು ಸಿದ್ಧಾಂತವನ್ನು ಪ್ರಚಾರ ಮಾಡತಕ್ಕಂತಹ ಸಮಾನ ಕೆಲಸವನ್ನು ಆಚಾರ್ಯರ ಸಿದ್ಧಾಂತವನ್ನು ಎಲ್ಲ ಕಡೆ ಪ್ರಚಾರ ಮಾಡುತ್ತಿರುವಂತಹ ಮಧು ಪಂಡಿತ ದಾಸ ಅವರನ್ನು ನಾವು ಈ ಪರ್ಯಾಯ ಪ್ರಶಸ್ತಿಯ ಮುಖಾಂತರ ಗುರುತಿಸಲು ಸಂತೋಷಿಸುತ್ತೇವೆ.