ವೇದವಾಕ್ಯ

ಜಗತ್ತಿನ ಪಾರಮಾರ್ಥಿಕ ಇತಿಹಾಸಗಳಲ್ಲಿ ಒಬ್ಬ ನಿರಾಕಾರವಾದಿಯು ಅನಂತರ ಭಕ್ತನಾದ ಅನೇಕ ಪ್ರಸಂಗಗಳು ಕಂಡುಬರುತ್ತವೆ. ಆದರೆ ಒಬ್ಬ ಭಕ್ತನು ಎಂದೂ ನಿರಾಕಾರವಾದಿಯಾಗಿಲ್ಲ. ಈ ಸಂಗತಿಯು ಸಾಧಿಸುವುದೇನೆಂದರೆ ಪಾರಮಾರ್ಥಿಕ ಸೋಪಾನದಲ್ಲಿ ಒಬ್ಬ ಭಕ್ತನು ಏರಿದ ಮೆಟ್ಟಿಲು ನಿರಾಕಾರವಾದಿ ಏರಿದ
ಮೆಟ್ಟಿಲಿಗಿಂತ ಎತ್ತರದಲ್ಲಿದೆ.

– ಶ್ರೀ ಶ್ರೀಮದ್‌ ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದ,
ಶ್ರೀಮದ್‌ ಭಾಗವತಮ್‌ : 1.18.16 ಭಾವಾರ್ಥ

* * * *

ಐಹಿಕ ಅಸ್ತಿತ್ವದ ವಿಷಯದಲ್ಲಿ ಭೀತರಾಗಿರುವವರು ವೈದಿಕ ಸಾಹಿತ್ಯವನ್ನು ಆರಾಧಿಸುತ್ತಾರೆ. ಕೆಲವರು ವೈದಿಕ ಸಾಹಿತ್ಯದ ಉಪಸಿದ್ಧಾಂತಗಳಾದ ಸ್ಮೃತಿಯನ್ನು ಆರಾಧಿಸುತ್ತಾರೆ. ಇತರರು ಮಹಾಭಾರತವನ್ನು ಆರಾಧಿಸುತ್ತಾರೆ. ನಾನಾದರೋ ದೇವೋತ್ತಮ ಪರಮ ಪುರುಷನೂ, ಪರಮಸತ್ಯನೂ ಆದ ಕೃಷ್ಣನು ಯಾರ ಅಂಗಳದಲ್ಲಿ ಆಟವಾಡುತ್ತಿದ್ದಾನೆಯೋ ಅಂತಹ, ಕೃಷ್ಣನ ತಂದೆಯಾದ ನಂದಮಹಾರಾಜನನ್ನು ಆರಾಧಿಸುತ್ತೇನೆ.

– ರಘುಪತಿ ಉಪಾಧ್ಯಾಯ,  ಪದ್ಯಾವಲೀ : 12.6

* * * *

ಭಕ್ತಿಸೇವೆ ರಹಿತನಾದ ವ್ಯಕ್ತಿಗೆ ಶ್ರೇಷ್ಠವಾದ ಕುಲ ಅಥವಾ ದೇಶದಲ್ಲಿ ಜನ್ಮತಾಳುವುದು, ಅಪೌರುಷೇಯ ಧರ್ಮಗ್ರಂಥಗಳ ಜ್ಞಾನ, ಕಠಿಣ ವ್ರತಗಳು ಹಾಗೂ ತಪಸ್ಸಿನ ಆಚರಣೆ ಹಾಗೂ ವೇದ ಮಂತ್ರಗಳ ಪಠಣ – ಇವು ಹೆಣವನ್ನು ಅಲಂಕರಿಸಿದ ಆಭರಣಗಳಂತೆ. ಅಂತಹ ಆಭರಣಗಳು ಜನಸಾಮಾನ್ಯರ ಕಪೋಲಕಲ್ಪಿತ ಉಪಭೋಗಗಳಿಗೆ ಒದಗುತ್ತವೆಯಷ್ಟೆ.

– ಹರಿಭಕ್ತಿ ಸುಧೋದಯ : 3.12

* * * *

ಇತರ ಜೀವಿಗಳ ಯಾತನೆಯನ್ನು ಕಂಡು ದುಃಖಪಡುವವನ ಮತ್ತು ಅವರ ಸಂತೋಷವನ್ನು ಕಂಡು ಆನಂದಪಡುವವನ ಧರ್ಮ ತತ್ತ್ವಗಳನ್ನು, ಧರ್ಮಾತ್ಮರಾದ ಮತ್ತು ಉದಾರಿಗಳಾದ ಉನ್ನತೋನ್ನತ ವ್ಯಕ್ತಿಗಳು, ಅವಿನಾಶಿ ಎಂದು
ಪ್ರಶಂಸಿಸುತ್ತಾರೆ.

– ಶ್ರೀ ದಧೀಚಿ ಮುನಿ, ಶ್ರೀಮದ್‌ ಭಾಗವತಮ್‌ : 6.10.9

* * * *

ನಾನು ಬೋಧಿಸಿದ, ನನ್ನನ್ನು ಸೇರುವ ವಿಧಾನಗಳನ್ನು ಗಂಭೀರವಾಗಿ ಅನುಸರಿಸುವವರು ಮಾಯೆಯಿಂದ ವಿಮುಕ್ತಿಯನ್ನು ಪಡೆಯುತ್ತಾರೆ ಮತ್ತು ನನ್ನ ಧಾಮವನ್ನು ತಲಪಿದ ಮೇಲೆ ಕೊನೆಗೂ ಪರಿಪೂರ್ಣವಾಗಿ ಪರಮ ಸತ್ಯವನ್ನು ಅರ್ಥಮಾಡಿಕೊಳ್ಳುತ್ತಾರೆ.

– ಶ್ರೀಕೃಷ್ಣ , ಶ್ರೀಮದ್‌ ಭಾಗವತಮ್‌ : 11.20.37

* * * *

ಮುಕ್ತಿಯು ಐಹಿಕ ಅಸ್ತಿತ್ವದ ಬಂಧನವನ್ನು ನಾಶಮಾಡುತ್ತದೆಯಾದರೂ, `ನೀನು ಒಡೆಯ ನಾನು ನಿನ್ನ ಸೇವಕ’ ಎನ್ನುವುದನ್ನು ಮರೆಯಿಸುವಂತಹ ಮುಕ್ತಿಯನ್ನು ನಾನು ಅಪೇಕ್ಷಿಸುವುದಿಲ್ಲ.

– ಶ್ರೀರಾಮಚಂದ್ರನಿಗೆ ಶ್ರೀ ಹನುಮಾನ್‌ ಉವಾಚ,
 ಭಕ್ತಿರಸಾಮೃತ ಸಿಂಧುವಿನಲ್ಲಿ ಉದ್ಧೃತ : 1.2.49

* * * *

ಕೃಷ್ಣನನ್ನು ಕುರಿತ ಪರಿಶುದ್ಧ ಪ್ರೇಮವು ಎಲ್ಲ ಜೀವಿಗಳ ಹೃದಯಗಳಲ್ಲೂ ಶಾಶ್ವತವಾಗಿ ಸ್ಥಾಪಿತವಾಗಿದೆ. ಅದು ಇನ್ನೊಂದು ಆಕರದಿಂದ ಪಡೆಯಬೇಕಾದ ಸಂಗತಿಯಲ್ಲ. ಕೃಷ್ಣನನ್ನು ಕುರಿತ ಶ್ರವಣ ಕೀರ್ತನಗಳಿಂದ ಹೃದಯವು ಪರಿಶುದ್ಧವಾದಾಗ ಜೀವಿಯು ಸಜಹವಾಗಿಯೇ ಜಾಗೃತನಾಗುತ್ತಾನೆ.

– ಶ್ರೀ ಚೈತನ್ಯ ಮಹಾಪ್ರಭು,
ಶ್ರೀ ಚೈತನ್ಯ ಚರಿತಾಮೃತ, ಮಧ್ಯಲೀಲಾ : 22.107

* * * *

ಈ ಲೇಖನ ಶೇರ್ ಮಾಡಿ