ವೇದವಾಕ್ಯ

ಈ ಲೌಕಿಕ ಜಗತ್ತಿನಲ್ಲಿ ಸಮಾಜ, ಸಮುದಾಯ, ಕುಟುಂಬ, ದೇಶ ಅಥವಾ ಮನುಕುಲಗಳ ರೂಪದಲ್ಲಿ ಇತರರಿಗೆ ಒಳಿತನ್ನು ಮಾಡುವ ಮನೋಭಾವವು ಪರಿಶುದ್ಧನಾದ ಜೀವಿಯು ಪರಮಪ್ರಭುವಿನ ಸಂತೋಷದಿಂದ ಯಾವ ಸಂತೋಷವನ್ನು ಪಡೆಯುತ್ತಾನೆಯೋ ಅದೇ ಮೂಲಭಾವನೆಯ ಭಾಗಶಃ ಅಭಿವ್ಯಕ್ತಿಯಾಗಿದೆ.

ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ,
ಶ್ರೀಮದ್‌ ಭಾಗವತ 2.3.10

* * * *

ಒಬ್ಬ ವ್ಯಕ್ತಿಯು ಎಲ್ಲ ವೇದಗಳನ್ನು ದಾಟಿ ಇನ್ನೊಂದು ಪಕ್ಕಕ್ಕೆ ಹೋಗಿದ್ದರೂ, ಎಲ್ಲ ಅಪೌರುಷೇಯ ಧರ್ಮಗ್ರಂಥಗಳಲ್ಲಿ ಪಂಡಿತನಾಗಿದ್ದರೂ, ಅವನು ಪರಮ ಪ್ರಭುವಿನ ಭಕ್ತನಾಗಿಲ್ಲದಿದ್ದರೆ, ಅವನನ್ನು ನರಾಧಮನೆಂದು ಪರಿಗಣಿಸಬೇಕು.

ಗರುಡಪುರಾಣ (ಶ್ರೀಮದ್‌ ಭಾಗವತ 2.9.36
ಭಾವಾರ್ಥದಲ್ಲಿ ಉದ್ಧೃತ)

* * * *

ಮಾಯೆಯು ಮಿಥ್ಯೆ ಅಥವಾ ತಾತ್ಕಾಲಿಕವಾಗಿದ್ದರೂ ಮಾಯೆಯ ಹಿನ್ನೆಲೆಯು ಪರಮ ಐಂದ್ರಜಾಲಿಕನಾದ ದೇವೋತ್ತಮ ಪುರುಷ. ಅವನೇ ಮಹೇಶ್ವರ, ಪರಮ ನಿಯಂತ್ರಕ.

ಶ್ವೇತಾಶ್ವತರ ಉಪನಿಷದ್‌  4.10

* * * *

ಪ್ರಭುವಿನ ಭಕ್ತರು ಸಮಸ್ತ ಬ್ರಹ್ಮಾಂಡದ ಅಭಿವ್ಯಕ್ತಿಯು ವಿನಾಶವಾದ ಮೇಲೂ ತಮ್ಮ ವೈಯಕ್ತಿಕ ಅಸ್ತಿತ್ವಗಳನ್ನು ಎಂದೂ ನಾಶಮಾಡಿಕೊಳ್ಳುವುದಿಲ್ಲ. ಪ್ರಭು ಮತ್ತು ಅವನ ಸಹಚರರಾದ ಭಕ್ತರು ಸದಾ ಐಹಿಕ ಮತ್ತು ಆಧ್ಯಾತ್ಮಿಕ ಲೋಕಗಳೆರಡರಲ್ಲೂ ಶಾಶ್ವತವಾಗಿರುತ್ತಾರೆ.

ಸ್ಕಾಂದ ಪುರಾಣ, ಕಾಶೀಖಂಡ,
(ಶ್ರೀಮದ್‌ ಭಾಗವತ 3.7.37 ಭಾವಾರ್ಥದಲ್ಲಿ ಉದ್ಧೃತ)

* * * *

ಅಗ್ನಿಯು ಒಂದು ಕಡೆ ನೆಲೆಸಿದ್ದರೂ ಅದರ ಕಾಂತಿಯು ಎಲ್ಲ ಕಡೆಯೂ ಪಸರಿಸುವಂತೆ, ದೇವೋತ್ತಮ ಪರಮ ಪುರುಷನಾದ ಪರಬ್ರಹ್ಮನ್‌ನ ಶಕ್ತಿಗಳು ವಿಶ್ವದಾದ್ಯಂತ ಪಸರಿಸಿವೆ.

ವಿಷ್ಣುಪುರಾಣ 1.22.53

* * * *

ಯಾರ ಅವತಾರಗಳು, ಗುಣಗಳು ಮತ್ತು ಚಟುವಟಿಕೆಗಳು ಲೋಕ ವಿದ್ಯಮಾನಗಳ ರಹಸ್ಯಮಯ ಪರಿಮಿತಿಗಳೋ ಅಂತಹವನ ಆಶ್ರಯವನ್ನು ನಾನು ತೆಗೆದುಕೊಳ್ಳುತ್ತೇನೆ. ಒಬ್ಬ ವ್ಯಕ್ತಿಯು ಇಹಜೀವನವನ್ನು ತೊರೆಯುವಾಗ ಅರಿತೋ ಅರಿಯದೆಯೋ ಅವನ ದಿವ್ಯ ನಾಮಗಳನ್ನು ಪ್ರಾರ್ಥಿಸಿದರೆ ಖಂಡಿತವಾಗಿಯೂ ಅನೇಕ ಜನ್ಮಗಳ ಪಾಪಗಳನ್ನು ಕೂಡಲೇ ತೊಳೆದುಕೊಳ್ಳುತ್ತಾನೆ, ಮತ್ತು ತಪ್ಪದೆ ಅವನನ್ನು ಐದುತ್ತಾನೆ.

ಬ್ರಹ್ಮ, ಶ್ರೀಮದ್‌ ಭಾಗವತ 3.9.15

* * * *

ಸೂರ್ಯ ಸಹಜವಾಗಿಯೇ ಬಿಸಿಯಾಗಿರುತ್ತದೆ, ಚಂದ್ರ ಸಹಜವಾಗಿಯೇ ಶೀತಲವಾಗಿರುತ್ತದೆ, ಭೂಮಿಯು ಸಹಜವಾಗಿಯೇ ಸಹನಶೀಲವಾಗಿರುತ್ತದೆ, ವಾಯುವು ಸಹಜವಾಗಿಯೇ ಅವಿಶ್ರಾಂತವಾಗಿರುತ್ತದೆ, ಮುನಿಗಳು ಸಹಜವಾಗಿಯೇ ಗಂಭೀರವಾಗಿರುತ್ತಾರೆ, ಸಾಗರವು ಸಹಜವಾಗಿಯೇ ಆಳವಾಗಿರುತ್ತದೆ. ಅದೇ ರೀತಿಯಲ್ಲಿ , ಕೃಷ್ಣನು ಸಹಜವಾಗಿಯೇ ಪ್ರೇಮ ನಿಯಂತ್ರಿತನಾಗಿರುತ್ತಾನೆ.

ಶ್ರೀಲ ಕೃಷ್ಣದಾಸ ಕವಿರಾಜ ಗೋಸ್ವಾಮಿ,
ಶ್ರೀಗೋವಿಂದ ಲೀಲಾಮೃತ

* * * *

ಕೃಷ್ಣಪ್ರಜ್ಞೆಯಲ್ಲಿ ಶುದ್ಧ ಭಕ್ತಿಸೇವೆಯನ್ನು ನೂರಾರು ಸಾವಿರಾರು ಜನ್ಮಗಳ ಪುಣ್ಯ ಕಾರ್ಯಗಳಿಂದ ಕೂಡ ಪಡೆಯಲಾಗುವುದಿಲ್ಲ. ಒಂದು ಬೆಲೆಯನ್ನು ಕೊಡುವ ಮೂಲಕ ಮಾತ್ರ ಅದನ್ನು ಪಡೆಯಬಹುದು – ಅದೆಂದರೆ ಅದನ್ನು ಪಡೆಯಬೇಕೆಂಬ ತೀವ್ರವಾದ ಆಸೆ. ಅದು ಎಲ್ಲಾದರೂ ಲಭ್ಯವಿದೆಯೆಂದರೆ ವ್ಯಕ್ತಿಯು ತಡಮಾಡದೆ ಅದನ್ನು ಕೊಳ್ಳಬೇಕು.

ಶ್ರೀಲ ರೂಪ ಗೋಸ್ವಾಮಿ, ಪದ್ಯಾವಲೀ

* * * *

ಈ ಲೇಖನ ಶೇರ್ ಮಾಡಿ