ವೇದವಾಕ್ಯ

ಕೃಷ್ಣಸೇವೆಯಲ್ಲಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವುದಕ್ಕಾಗಿ ಮಾತ್ರ, ಕೃಷ್ಣ ಸಂಬಂಧವಾಗಿ ಸ್ತ್ರೀ ಮತ್ತು ಪುರುಷರು ಗೃಹಸ್ಥರಾಗಿ ಒಟ್ಟಿಗೆ ಬಾಳಬೇಕು. ಮಕ್ಕಳು, ಪತ್ನಿ ಮತ್ತು ಪತಿ ಎಲ್ಲರನ್ನೂ ಕೃಷ್ಣಪ್ರಜ್ಞಾ ಕರ್ತವ್ಯಗಳಲ್ಲಿ ತೊಡಗಿಸಿ, ಆಗ ಈ ಎಲ್ಲ ದೈಹಿಕ ಅಥವಾ ಐಹಿಕ ಬಂಧನಗಳು ಕಣ್ಮರೆಯಾಗುತ್ತವೆ.

– ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ,
ಶ್ರೀಮದ್‌ ಭಾಗವತಮ್‌: 3.31.42, ಭಾವಾರ್ಥ

* * * *

ಆಧ್ಯಾತ್ಮಿಕ ಜಗತ್ತಿನಲ್ಲಿ ವ್ಯಕ್ತಿಯ ಆತ್ಮವು ತಿನ್ನುತ್ತದೆ, ಆಡುತ್ತದೆ ಮತ್ತು ಉಪಭೋಗಿಸುತ್ತದೆ.

– ಛಾಂದೋಗ್ಯ ಉಪನಿಷದ್‌: 8.12.3

* * * *

ಹರೇಕೃಷ್ಣ ಮಹಾಮಂತ್ರದ ಹದಿನಾರು ಶಬ್ದಗಳು – ಹರೇ ಕೃಷ್ಣ  ಹರೇ ಕೃಷ್ಣ  ಕೃಷ್ಣ  ಕೃಷ್ಣ  ಹರೇ ಹರೇ / ಹರೇ ರಾಮ ಹರೇ  ರಾಮ ರಾಮ ರಾಮ ಹರೇ ಹರೇ – ವಿಶೇಷವಾಗಿ ಕಲಿಯುಗದ ಪಾಪಗಳನ್ನು ಪ್ರತಿರೋಧಿಸಲೆಂದೇ ಉದ್ದಿಷ್ಟವಾದವುಗಳು. ಈ ಯುಗದ ಕಾಲುಷ್ಯದಿಂದ ವ್ಯಕ್ತಿಯು ಪಾರಾಗಬೇಕೆಂದರೆ ಹರೇ ಕೃಷ್ಣ ಮಹಾಮಂತ್ರವನ್ನು ಜಪಿಸದೆ ಬೇರೆ ಮಾರ್ಗವಾವುದೂ ಇಲ್ಲ. ಸಮಸ್ತ ವೈದಿಕ ಸಾಹಿತ್ಯವನ್ನು ಅನ್ವೇಷಿಸಿದರೂ ಹರೇ ಕೃಷ್ಣ ಜಪಕ್ಕಿಂತ ಶ್ರೇಷ್ಠವಾದ ಇನ್ನೊಂದು ಧರ್ಮ ವಿಧಾನವನ್ನು ಕಂಡುಕೊಳ್ಳಲಾಗದು.

– ಪ್ರಭು ಬ್ರಹ್ಮ, ಕಲಿಸಂತರಣ ಉಪನಿಷದ್‌: 5.6

* * * *

ಓ ನಂದ ಮಹಾರಾಜನ ಪುತ್ರನಾದ ಕೃಷ್ಣನೆ, ನಾನು ನಿನ್ನ ಶಾಶ್ವತ ದಾಸ. ಆದರೂ ಹೇಗೋ ನಾನು ಈ ಜನನ ಮತ್ತು ಮರಣದ ಸಾಗರದಲ್ಲಿ ಬಿದ್ದಿದ್ದೇನೆ. ಈ ಮರಣದ ಸಾಗರದಿಂದ ನನ್ನನ್ನು ದಯವಿಟ್ಟು ಮೇಲಕ್ಕೆ ಎತ್ತಿ ನಿನ್ನ ಪಾದಕಮಲದ ಒಂದು ಧೂಳಿನ ಕಣವಾಗಿ ಇರಿಸಿಕೊ.

– ಶ್ರೀ ಚೈತನ್ಯ ಮಹಾಪ್ರಭು, ಶ್ರೀ ಶಿಕ್ಷಾಷ್ಟಕ: 5

* * * *

ದೇವೋತ್ತಮ ಪರಮ ಪುರುಷ ಮತ್ತು ವ್ಯಕ್ತಿಗತ ಚೇತನಾತ್ಮಗಳು ಶಾಶ್ವತವಾಗಿ ವಿಶಿಷ್ಟ ಅಸ್ತಿತ್ವಗಳು ಎಂದು ಒಬ್ಬ ವ್ಯಕ್ತಿಯು ಅರ್ಥಮಾಡಿಕೊಂಡಾಗ, ಅವನು ಮುಕ್ತಿಗೆ ಅರ್ಹನಾಗುತ್ತಾನೆ ಮತ್ತು ಆಧ್ಯಾತ್ಮಿಕ ಲೋಕದಲ್ಲಿ ಶಾಶ್ವತವಾಗಿ ನೆಲೆಸುತ್ತಾನೆ.

– ಶ್ವೇತಾಶ್ವತರ ಉಪನಿಷದ್‌: 1.6

* * * *

ಒಬ್ಬ ವ್ಯಕ್ತಿಯು ಯಾವುದೇ ವಿಧಾನದಿಂದ ಕೃಷ್ಣನಲ್ಲಿ ತನ್ನ ಮನಸ್ಸನ್ನು ನೆಲೆಯೂರಬೇಕು. ಧರ್ಮಗ್ರಂಥಗಳಲ್ಲಿ ಪ್ರಸ್ತಾವಿತವಾಗಿರುವ ಎಲ್ಲ ವಿಧಿ ನಿಷೇಧಗಳು ಈ ತತ್ತ್ವಕ್ಕೆ ದಾಸರಾಗಿರಬೇಕು.

– ಶ್ರೀಲ ರೂಪ ಗೋಸ್ವಾಮೀ,
ಭಕ್ತಿರಸಾಮೃತ ಸಿಂಧು: 1.2.4ರಲ್ಲಿ ಉದ್ಧೃತ

* * * *

ನಾಟಕವೊಂದರ ನಟನಂತೆ ಆಡುತ್ತಿರುವ ಪ್ರಭುವಿನ ರೂಪಗಳು, ನಾಮಗಳು ಮತ್ತು ಚಟುವಟಿಕೆಗಳ ದಿವ್ಯ ಸ್ವರೂಪವನ್ನು ಅಲ್ಪಜ್ಞಾನಿಯಾದ ಮೂರ್ಖನು ಅರ್ಥಮಾಡಿಕೊಳ್ಳಲಾರ. ತಮ್ಮ ಊಹಾಪೋಹಗಳಲ್ಲಾಗಲಿ ಅಥವಾ ಶಬ್ದಗಳಲ್ಲಾಗಲಿ ಅವರು ಅಂತಹ ಸಂಗತಿಗಳನ್ನು ಅಭಿವ್ಯಕ್ತಿಸಲಾರರು.

– ಶ್ರೀ ಸೂತ ಗೋಸ್ವಾಮೀ, ಶ್ರೀಮದ್‌ ಭಾಗವತಮ್‌: 1.3.37

* * * *

ಈ ಲೇಖನ ಶೇರ್ ಮಾಡಿ