ಆಧ್ಯಾತ್ಮಿಕ ಆತ್ಮದ ಅಗತ್ಯವೇನೆಂದರೆ ಲೌಕಿಕ ನಿರ್ಬಂಧಗಳ ಸೀಮಿತ ಕ್ಷೇತ್ರಗಳಿಂದ ಮುಕ್ತಿ ಹಾಗೂ ಸಂಪೂರ್ಣ ಸ್ವಾತಂತ್ರ್ಯದ ಅಪೇಕ್ಷೆಯನ್ನು ಸಾಕಾರಗೊಳಿಸುವುದೇ ಆಗಿದೆ. ಅವನಿಗೆ ವಿಶ್ವದ ಮುಚ್ಚಿದ ಗೋಡೆಗಳ ಆಚೆಗೆ ಬರಬೇಕಾಗಿದೆ. ಮುಕ್ತವಾದ ಬೆಳಕು ಮತ್ತು ಆಧ್ಯಾತ್ಮಿಕತೆಯನ್ನು ಕಾಣುವುದು ಅವನ ಅಪೇಕ್ಷೆ. ಸಂಪೂರ್ಣ ಆಧ್ಯಾತ್ಮಿಕ ತತ್ತ್ವ ಅಥವಾ ಚೈತನ್ಯ ಶಕ್ತಿಯಾದ ದೇವೋತ್ತಮ ಪರಮ ಪುರುಷನನ್ನು ಭೇಟಿಯಾದಾಗ ಮಾತ್ರ ಅಂಥ ಸಂಪೂರ್ಣ ಸ್ವಾತಂತ್ರ್ಯದ ಸಾಧನೆ ಸಾಧ್ಯ.
– ಶ್ರೀ ಶ್ರೀಮದ್ ಎ.ಸಿ. ಭಕ್ತಿ ವೇದಾಂತ ಸ್ವಾಮಿ ಪ್ರಭುಪಾದ
ಶ್ರೀಮದ್ ಭಾಗವತ 1.2.8 ಭಾವಾರ್ಥ
* * * *
ದೇಹಾಂತ ಬುದ್ಧಿಯ ಹಾಗೂ `ನಾನು’, `ನನ್ನದು’ ಎಂದೇ ಯೋಚಿಸುವವರಿಗೆ ದೇವರ ಪವಿತ್ರ ನಾಮವು ಎಂದಿಗೂ ಹೊರಗೆಡಲ್ಪಡುವುದಿಲ್ಲ. ಆಮೋದ ಪ್ರಮೋದದ ಮಾನಸಿಕತೆಯನ್ನು ತಿರಸ್ಕರಿಸದಿದ್ದರೆ ಅಲೌಕಿಕ, ಆಧ್ಯಾತ್ಮಿಕ ವೇದಿಕೆಯನ್ನು ಮುಟ್ಟುವುದು ಸಾಧ್ಯವಿಲ್ಲ.
– ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಠಾಕೂರ
ಪ್ರಾಕೃತ – ರಸ ಶತ – ದೂಷಿನೀ
* * * *
ನೀನು ನನ್ನ ಪ್ರಜ್ಞೆಯನ್ನು ಹೊಂದಿದಾಗ ಬದ್ಧಜೀವನದ ಎಲ್ಲ ಅಡ್ಡಿಗಳನ್ನು ನನ್ನ ಕೃಪೆಯಿಂದ ನಿವಾರಿಸಿಕೊಳ್ಳುವೆ. ಆದರೆ ನೀನು ಇಂತಹ ಪ್ರಜ್ಞೆಯಲ್ಲಿ ಕೆಲಸಮಾಡದೆ ಅಹಂಕಾರದಿಂದ ಕೆಲಸ ಮಾಡಿದರೆ, ನನ್ನ ಮಾತನ್ನು ಕೇಳದೆ ಹೋದರೆ ಮುಳುಗಿ ಹೋಗುತ್ತೀಯೆ.
– ಶ್ರೀಕೃಷ್ಣ, ಭಗವದ್ಗೀತೆ 18.58
* * * *
ಗಂಧ ಮತ್ತು ಕರ್ಪೂರದಂತೆ ತಂಪಾದ, ಶಾಂತವಾದ ಯಶೋದ ಪುತ್ರನ (ಶ್ರೀಕೃಷ್ಣ) ವೈಭವವನ್ನು ಯಾರು ನಿತ್ಯ ಹಾಡುತ್ತಾರೋ ಅವರು ಕಲಿ ಯುಗದ ಯಾವುದೇ ತೊಂದರೆಗೆ ಸಿಲುಕುವುದಿಲ್ಲ. ಅವರು ಪ್ರತಿಯೊಂದು ಹೆಜ್ಜೆಯಲ್ಲಿಯೂ ಅತ್ಯಂತ ಸಿಹಿಯಾದ ಜೇನಿನ ಹಠಾತ್ ಪ್ರವಾಹವನ್ನು ಅನುಭವಿಸುತ್ತಾರೆ.
– ಶ್ರೀ ಕವಿರತ್ನ, ಪದ್ಯಾವಳಿ 41
* * * *
ಪ್ರತಿಯೊಬ್ಬರಿಗೂ ದೇವೋತ್ತಮ ಪರಮ ಪುರುಷನೇ ಆಶ್ರಯ. ಬೇರೆಯವರಿಂದ ರಕ್ಷಿಸಲ್ಪಡಬೇಕೆಂದು ಯಾರಾದರೂ ಅಪೇಕ್ಷಿಸಿದರೆ ಅವರು ದೊಡ್ಡ ಮೂರ್ಖರೇ ಸರಿ. ಅದು ಹೇಗೆಂದರೆ, ನಾಯಿ ಬಾಲ ಹಿಡಿದು ಸಮುದ್ರ ದಾಟಬೇಕೆಂದು ಅಪೇಕ್ಷೆಪಟ್ಟಂತೆ.
– ದೇವತೆಗಳು, ಶ್ರೀಮದ್ ಭಾಗವತಮ್: 6.9.22
* * * *
ಸಾವಿನ ಅನಂತರ ಗುಳ್ಳೆನರಿ ಅಥವಾ ನಾಯಿಗೆ ಆಹಾರವಾಗಬಲ್ಲ ದೇಹವು ಆಧ್ಯಾತ್ಮಿಕ ಆತ್ಮವಾದ ನನಗೆ ವಾಸ್ತವವಾಗಿ ಏನೂ ಒಳ್ಳೆಯದನ್ನು ಮಾಡದು. ಅದು ಅಲ್ಪಾವಧಿಗೆ ಉಪಯೋಗಿಯಾಗಿದ್ದು ಯಾವುದೇ ಕ್ಷಣದಲ್ಲಿ ನಶಿಸಿಹೋಗಬಹುದು. ದೇಹ ಮತ್ತು ಅದರ
ಸ್ವಾಧೀನ, ಅದರ ಸಂಪತ್ತು ಮತ್ತು ಬಂಧುಗಳು ಎಲ್ಲರೂ ಬೇರೆಯವರ ಒಳಿತಿಗಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಇಲ್ಲವಾದರೆ ಅವು ಸಂಕಟ ಮತ್ತು ಕ್ಲೇಶಕ್ಕೆ ಮೂಲವಾಗುತ್ತವೆ.
– ಋಷಿ ದಧೀಚಿ, ಶ್ರೀಮದ್ ಭಾಗವತಮ್: 6.10.10
* * * *
ಪರಮಾತ್ಮನು ಎಲ್ಲ ಜೀವಿಗಳ ಅಂತರಂಗದೊಳಗೆ ನೆಲೆಸಿದ್ದಾನೆ. ಆದರೆ ಪ್ರತಿಯೊಬ್ಬರಲ್ಲಿಯೂ ಪ್ರಕಟಗೊಳ್ಳುವುದಿಲ್ಲ. ಶ್ರೇಷ್ಠ ಜ್ಞಾನ ಮತ್ತು ಶುದ್ಧ ದೃಷ್ಟಿ ಉಳ್ಳವರು ಅವನನ್ನು ಅರಿತು, ಗ್ರಹಿಸಿಕೊಳ್ಳಬಹುದು.
– ಯಮರಾಜ, ಕಠ ಉಪನಿಷದ್ 3.12
* * * *
ದೇವರ ಶುದ್ಧ ಪ್ರೀತಿಯಲ್ಲಿ ಅಲೌಕಿಕ ಭಕ್ತಿ ಪೂರ್ವಸೇವೆಯ ಹಂತವನ್ನು ಸಾಧಿಸಿದ ಮೇಲೆ ಒಬ್ಬ ವ್ಯಕ್ತಿ ಪರಿಪೂರ್ಣ, ಅಮರ ಹಾಗೂ ಶಾಂತಿಯುತನಾಗುತ್ತಾನೆ.
– ನಾರದ ಮುನಿ, ನಾರದ ಭಕ್ತಿ ಸೂತ್ರ 4
* * * *