ಮೊಸರಿನ ರಾಯಿತಗಳು

ಸೌತೆಕಾಯಿಯ ರಾಯಿತ

ಬೇಕಾಗುವ ಪದಾರ್ಥಗಳು :

ಸೌತೆಕಾಯಿ -1

ಕೊತ್ತಂಬರಿ ಸೊಪ್ಪು – ಸ್ವಲ್ಪ

ಜೀರಿಗೆ – 1/2 ಚಮಚ

ಹುರಿಗಡಲೆ – 2 ಚಮಚ

ಮೊಸರು – 1 ಕಪ್‌

ಉಪ್ಪು – ರುಚಿಗೆ ತಕ್ಕಷ್ಟು

ಹಸಿರು ಮೆಣಸಿನಕಾಯಿ – 2

ಕಾಯಿತುರಿ – 3 ಚಮಚ

ಸಾಸಿವೆ – 1/4 ಚಮಚ

ಎಣ್ಣೆ – 1 ಚಮಚ

ಮಾಡುವ ವಿಧಾನ: ಸೌತೆಕಾಯಿಯ ಸಿಪ್ಪೆ ತೆಗೆದು ಸಣ್ಣಗೆ ಚೂರುಗಳನ್ನು ಮಾಡಬೇಕು. ಕಾಯಿತುರಿ, ಮೆಣಸಿನಕಾಯಿ, ಜೀರಿಗೆ, ಹುರಿಗಡಲೆ ಮತ್ತು ಕೊತ್ತಂಬರಿಸೊಪ್ಪನ್ನು ಸೇರಿಸಿ ನುಣ್ಣಗೆ ರುಬ್ಬಿ, ಇದಕ್ಕೆ ಸಾಸಿವೆ ಜೀರಿಗೆಯನ್ನು ಎಣ್ಣೆಯಲ್ಲಿ ಒಗ್ಗರಣೆ ಮಾಡಿದ ನಂತರ ಸೌತೆಕಾಯಿ ಮೊಸರು ಸೇರಿಸಿದರೆ ತಿನ್ನಲು ರುಚಿ.

ಬದನೆಕಾಯಿಯ ರಾಯಿತ

ಬೇಕಾಗುವ ಪದಾರ್ಥಗಳು :

ಗುಂಡುಬದನೆಕಾಯಿ -2

ಜೀರಿಗೆ – 1/2 ಚಮಚ

ಸಾಸಿವೆ – 1/2 ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಮೊಸರು – 2 ಕಪ್‌

ಹಸಿರು ಮೆಣಸಿನಕಾಯಿ – 4

ಕರಿಬೇವು – 1 ಕಡ್ಡಿ

ಇಂಗು – 1 ಚಿಟಿಕೆ

ಕಾಯಿತುರಿ – 1 ಕಪ್‌

ಎಣ್ಣೆ – 1 ಚಮಚ

ಮಾಡುವ ವಿಧಾನ: ಬದನೆಕಾಯಿ ಮತ್ತು ಮೆಣಸಿನಕಾಯಿಯನ್ನು ಸುಟ್ಟು ಸಿಪ್ಪೆ ತೆಗೆದು ಕಿವುಚಿಕೊಳ್ಳಬೇಕು. ಒಗ್ಗರಣೆಗೆ ಸಾಸಿವೆ, ಕರಿಬೇವು ಮತ್ತು ಇಂಗನ್ನು ಹಾಕಿ ಕೊನೆಗೆ ಮೊಸರಿನಲ್ಲಿ ಇದರ ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿದ ನಂತರ ಸವಿಯಲು ಸಿದ್ಧ. ಇದೇ ತರಹ ಆಲೂಗೆಡ್ಡೆ ಮತ್ತು ಗೆಣಸಿನಲ್ಲಿ ಮಾಡಬಹುದು, ಆದರೆ ಇವುಗಳನ್ನು ನೀರಿನಲ್ಲಿ ಬೇಯಿಸಿಕೊಳ್ಳಬೇಕು.

ಬಾಳೇಕಾಯಿ ರಾಯಿತ

ಬೇಕಾಗುವ ಪದಾರ್ಥಗಳು :

ಬಾಳೇಕಾಯಿ ಚಿಕ್ಕದು -2

ಹಸಿರುಮೆಣಸಿನಕಾಯಿ -4

ಉಪ್ಪು – ರುಚಿಗೆ ತಕ್ಕಷ್ಟು

ಮೊಸರು – 1 ಕಪ್‌

ಕಾಯಿತುರಿ – 1 ಕಪ್‌

ಜೀರಿಗೆ, ಸಾಸಿವೆ – 1/2 ಚಮಚ

ಎಣ್ಣೆ – 1 ಚಮಚ

ಸಾಸಿವೆ – 1 ಚಮಚ

ಕರೀಬೇವು – 1 ಕಡ್ಡಿ

ಕೊತ್ತಂಬರಿ – ಸ್ವಲ್ಪ

ಮಾಡುವ ವಿಧಾನ: ಬಾಳೇಕಾಯಿಯನ್ನು ಸಿಪ್ಪೆ ತೆಗೆದು ಬೇಯಿಸಿದ ನಂತರ ಸಾಸಿವೆ, ಜೀರಿಗೆ, ಮೆಣಸಿನಕಾಯಿ, ಕರೀಬೇವು ಕೊತ್ತಂಬರಿ ಮತ್ತು ಇಂಗನ್ನು ಒಗ್ಗರಣೆ ಮಾಡಿ ಮೊಸರಿನಲ್ಲಿ ಉಪ್ಪು ಮತ್ತು ಬೇಯಿಸಿದ ಬಾಳೇಕಾಯಿಯನ್ನು ಸೇರಿಸಿ ಕದಡಿದರೆ ರುಚಿಯಾದ ರಾಯಿತ ಸಿದ್ಧ.

ಬಾಳೇದಿಂಡಿನ ಮೊಸರು ರಾಯಿತ

ಬೇಕಾಗುವ ಪದಾರ್ಥಗಳು :

ಬಾಳೆದಿಂಡು – 5 ಇಂಚು

ಮೊಸರು – 2 ಕಪ್‌

ಕೆಂಪುಮೆಣಸಿನಕಾಯಿ – 2

ಇಂಗು – 1 ಚಿಟಿಕೆ

ಸಾಸಿವೆ – 1/4 ಚಮಚ

ಎಣ್ಣೆ – 1 ಚಮಚ

ಕರೀಬೇವು – 1 ಕಡ್ಡಿ

ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ: ಬಾಳೆದಿಂಡನ್ನು ಸಣ್ಣಗೆ ಹೆಚ್ಚಬೇಕು. 2 ಲೋಟ ನೀರಿಗೆ 2 ಚಮಚ ಮಜ್ಜಿಗೆಯನ್ನು ಸೇರಿಸಿ ಬಾಳೆದಿಂಡನ್ನು ಅದರಲ್ಲಿ ಸೇರಿಸಿದ ನಂತರ ದಿಂಡಿನ ನಾರನ್ನು ಮತ್ತು ನೀರನ್ನು ತೆಗೆದು ಸಾಸಿವೆ, ಕರೀಬೇವು ಇಂಗನ್ನು ಒಗ್ಗರಣೆ ಮಾಡಿ ಮೊಸರಿನಲ್ಲಿ ಉಪ್ಪು ಮತ್ತು ಇಂಗನ್ನು ಸೇರಿಸಿ ನಂತರ ಮಿಕ್ಕ ಪದಾರ್ಥಗಳನ್ನು ಸೇರಿಸಬೇಕು. ಎಲ್ಲಾ ರಾಯಿತಗಳನ್ನು ಮಾಡಿ ಶ್ರೀರಾಧಾಕೃಷ್ಣರಿಗೆ ಅರ್ಪಿಸಿ ಮನೆಯಲ್ಲಿ ಎಲ್ಲರೂ ಸೇವಿಸಬಹುದು.

ಈ ಲೇಖನ ಶೇರ್ ಮಾಡಿ