ನೀನು ವಿಶ್ವದ ವಿಮೋಚಕ ಮತ್ತು ನೀನು ಎಲ್ಲರ ಪ್ರಭು. ನೀನು ಸಕಲ ಸಂಪತ್ತನ್ನೂ ಹೊಂದಿರುವೆ. ದಿಟವಾಗಿ, ನೀನೇ ಏಕಾಂಗಿಯಾಗಿ ವಿಶ್ವವನ್ನು ಸಂರಕ್ಷಿಸುತ್ತಿರುವೆ. ಓ, ಗೌರಹರಿ, ನಿನ್ನ ಸೇವೆ ಮಾಡಲು ಅನುಗ್ರಹಿಸಿ ನನ್ನ ಜೀವನ ಸಾರ್ಥಕವಾಗುವಂತೆ ಮಾಡು ಮತ್ತು ನನ್ನನ್ನು ರಕ್ಷಿಸು.
– ಸಾರ್ವಭೌಮ ಭಟ್ಟಾಚಾರ್ಯ, ಶ್ರೀ ಚೈತನ್ಯ ಶತಕ
* * * *
ನೀನು ದೇವೋತ್ತಮ ಪರಮ ಪುರುಷ, ಪರಂಧಾಮ, ಪವಿತ್ರ, ಪರಿಪೂರ್ಣ ಸತ್ಯ. ನೀನು ನಿತ್ಯನು, ದಿವ್ಯನು, ಆದಿ ಪುರುಷನು. ನಿನಗೆ ಹುಟ್ಟಿಲ್ಲ. ನೀನೇ ಅತ್ಯಂತ ಶ್ರೇಷ್ಠನು. ನಾರದ, ಅಸಿತ, ದೇವಲ ಮತ್ತು ವ್ಯಾಸರಂತಹ ಮಹರ್ಷಿಗಳು ನಿನ್ನ ವಿಷಯದಲ್ಲಿ ಈ ಸತ್ಯವನ್ನು ದೃಢಪಡಿಸುತ್ತಾರೆ. ಈಗ ನೀನೇ ಇದನ್ನು ನನಗೆ ಹೇಳುತ್ತಿರುವೆ.
– ಅರ್ಜುನ, ಭಗವದ್ಗೀತೆ
* * * *
ತಜ್ಞ ಭೂ ವಿಜ್ಞಾನಿಯು ಚಿನ್ನ ನಿಕ್ಷೇಪ ಎಲ್ಲಿದೆ ಎಂದು ಅರಿತುಕೊಳ್ಳಬಲ್ಲ ಮತ್ತು ಅನೇಕ ವಿಧಾನಗಳಿಂದ ಅದನ್ನು ಅದಿರಿನಿಂದ ತೆಗೆಯಬಲ್ಲ. ಅದೇ ರೀತಿ, ನಮ್ಮ ದೇಹದಲ್ಲಿ ಆಧ್ಯಾತ್ಮಿಕ ವಸ್ತುಗಳು ಹೇಗಿರುತ್ತೆಂದು ಆಧ್ಯಾತ್ಮಿಕವಾಗಿ ಉನ್ನತಿ ಹೊಂದಿದ ವ್ಯಕ್ತಿ ಅರ್ಥಮಾಡಿಕೊಳ್ಳಬಲ್ಲ. ಅದೇ ರೀತಿ ಆಧ್ಯಾತ್ಮಿಕ ಜ್ಞಾನವನ್ನು ಪೋಷಿಸಿಕೊಳ್ಳುವ ಮೂಲಕ ಅವನು ಆಧ್ಯಾತ್ಮಿಕ ಜೀವನದಲ್ಲಿ ಪರಿಪೂರ್ಣತೆ ಹೊಂದಬಹುದು. ಆದರೆ, ತಜ್ಞರಲ್ಲದವರಿಗೆ ಚಿನ್ನ ಎಲ್ಲಿದೆ ಎಂದು ಹೇಗೆ ತಿಳಿಯುವುದಿಲ್ಲವೋ ಅದೇ ರೀತಿ ಆಧ್ಯಾತ್ಮಿಕ ಜ್ಞಾನವನ್ನು ಪೋಷಿಸಿಕೊಳ್ಳದ ಮೂರ್ಖನಿಗೆ ದೇಹದಲ್ಲಿ ಆತ್ಮ ಹೇಗೆ ಅಸ್ತಿತ್ವ ಹೊಂದಿರುತ್ತದೆ ಎಂಬುವುದು ಅರ್ಥವಾಗುವುದಿಲ್ಲ.
– ಪ್ರಹ್ಲಾದ, ಭಾಗವತ
* * * *
ದೇವೋತ್ತಮ ಪರಮ ಪುರುಷ ಶ್ರೀ ಕೃಷ್ಣನೇ ಆದ ಶ್ರೀ ಚೈತನ್ಯ ಮಹಾಪ್ರಭುಗಳ ಅಲೌಕಿಕ ರೂಪಕ್ಕೆ ಜಯ, ಜಯ! ನನ್ನ ಪ್ರೀತಿಯ ಪ್ರಭು, ನಿನ್ನ ಕೃಪೆಯಿಂದ ನನಗೆ ನಿನ್ನ ಚರಣ ಕಮಲದಲ್ಲಿ ಆಶ್ರಯ ಕೊಡು.
– ಶ್ರೀಲ ಕೃಷ್ಣ ದಾಸ ಕವಿರಾಜ ಗೋಸ್ವಾಮಿ, ಚೈತನ್ಯ ಚರಿತಾಮೃತ
* * * *






Leave a Reply