ವೇದವಾಕ್ಯ

ಓ ಸರ್ವ ಶ್ರೇಷ್ಠನೇ, ಬ್ರಹ್ಮನಿಗಿಂತಲೂ ಶ್ರೇಷ್ಠನಾದ ಮಹಾತ್ಮನೇ, ನೀನು ಆದಿ ಸೃಷ್ಟಿಕರ್ತ. ಆದುದರಿಂದ ಅವರು ನಿನಗೆ ಯಾಕೆ ತಮ್ಮ ಆದರಪೂರ್ವಕ ಪ್ರಣಾಮಗಳನ್ನು ಅರ್ಪಿಸಬಾರದು? ಓ, ಅನಂತನೇ, ದೇವತೆಗಳ ದೇವ, ಜಗನ್ನಿವಾಸನು. ನೀನು ಅಜೇಯನಾದ ಮೂಲನು. ಎಲ್ಲ ಕಾರಣಗಳ ಕಾರಣನು. ಈ ಲೌಕಿಕ ಅಭಿವ್ಯಕ್ತಿಗೆ ಅತೀತನಾದವನು.

– ಆರ್ಜುನ, ಭಗವದ್ಗೀತೆ

* * * *

ಪ್ರಹ್ಲಾದ ಮಹಾರಾಜನು ಉತ್ತರಿಸಿದನು, “ಓ, ಅಸುರ ಶ್ರೇಷ್ಠನೇ, ರಾಕ್ಷಸ ರಾಜನೇ, ನಾನು ನನ್ನ ಆಧ್ಯಾತ್ಮಿಕ ಗುರುವಿನಿಂದ ಅರಿತಿರುವಂತೆ, ತಾತ್ಕಾಲಿಕ ದೇಹ ಮತ್ತು ಗೃಹವನ್ನು ಸ್ವೀಕರಿಸಿರುವ ವ್ಯಕ್ತಿಯು ಆತಂಕದಲ್ಲಿರುತ್ತಾನೆ. ಏಕೆಂದರೆ, ಬರೀ ಸಂಕಷ್ಟಗಳೇ ಇರುವ ಮತ್ತು ನೀರಿಲ್ಲದ ಕತ್ತಲು ಬಾವಿಯಲ್ಲಿ ಅವನು ಬಿದ್ದುಬಿಟ್ಟಿರುತ್ತಾನೆ. ವ್ಯಕ್ತಿಯು ಈ ಸ್ಥಿತಿಯನ್ನು ತೊರೆದು ಅರಣ್ಯಕ್ಕೆ ಹೋಗಬೇಕು. ಸ್ಪಷ್ಟವಾಗಿ ಹೇಳಬೇಕೆಂದರೆ, ಕೃಷ್ಣ ಪ್ರಜ್ಞೆಯೊಂದೇ ವ್ಯಾಪಕವಾಗಿರುವ ವೃಂದಾವನಕ್ಕೆ ಹೋಗಬೇಕು. ಮತ್ತು ಈ ರೀತಿ ದೇವೋತ್ತಮ ಪರಮ ಪುರುಷನಲ್ಲಿ ಆಶ್ರಯ ಪಡೆಯಬೇಕು.”

– ಪ್ರಹ್ಲಾದ, ಭಾಗವತ

* * * *

ವ್ಯಕ್ತಿಯು ತನ್ನ ಪೂರ್ಣ ಸಮಯವನ್ನು; ಅಂದರೆ ದಿನದ 24 ಗಂಟೆಗಳನ್ನೂ ಭಗವಂತನ ನಾಮ, ಅಲೌಕಿಕ ರೂಪ, ಗುಣ ಲಕ್ಷಣ ಮತ್ತು ಶಾಶ್ವತ ಲೀಲೆಗಳನ್ನು ಜಪಿಸಲು ಮತ್ತು ಸ್ಮರಿಸಲು ಉಪಯೋಗಿಸಿಕೊಳ್ಳಬೇಕು. ಹೀಗೆ ಕ್ರಮೇಣ ತಮ್ಮ ನಾಲಗೆ ಮತ್ತು ಮನಸ್ಸನ್ನು ತೊಡಗಿಸಿಕೊಳ್ಳಬೇಕು. ಈ ರೀತಿ ವ್ರಜದಲ್ಲಿ (ಗೋಲೋಕ ವೃಂದಾವನ ಧಾಮ) ವಾಸಿಸಬೇಕು ಮತ್ತು ಭಕ್ತರ ಮಾರ್ಗದರ್ಶನದ ಮೂಲಕ ಕೃಷ್ಣನಿಗೆ ಸೇವೆ ಸಲ್ಲಿಸಬೇಕು. ಭಗವಂತನ ಭಕ್ತಿ ಸೇವೆಯಲ್ಲಿ ತಲ್ಲೀನರಾಗಿರುವ ಮತ್ತು ಪ್ರಭುವಿನ ಪ್ರೀತಿಯ ಭಕ್ತರ ಹೆಜ್ಜೆಗಳನ್ನು ಅನುಸರಿಸಬೇಕು.

– ಶ್ರೀಲ ರೂಪ ಗೋಸ್ವಾಮಿ, ಉಪದೇಶಾಮೃತ

* * * *

ಆಧ್ಯಾತ್ಮಿಕ ಬದುಕಿನ ಉನ್ನತಿಗಾಗಿ, ಅಂತಹ ತಪಸ್ಸು ಅಗತ್ಯ. ತಪಸ್ಸು ಎಂದರೆ ನೋವು ಉಂಟುಮಾಡಬಹುದಾದ ಯಾವುದನ್ನಾದರೂ ಸ್ವಯಂ ಸ್ವೀಕರಿಸುವುದು. ಉದಾಹರಣೆಗೆ, ನಾವು ಅನೈತಿಕ ಲೈಂಗಿಕತೆ, ಮದ್ಯ, ಜೂಜು, ಮಾಂಸ ಭಕ್ಷಣೆ ಮುಂತಾದವುಗಳು ನಿಷಿದ್ಧ ಎಂದು ಶಿಫಾರಸು ಮಾಡುತ್ತೇವೆ. ಆದುದರಿಂದ ಇಂತಹ ಕೆಟ್ಟ ಚಟಗಳಿರುವವರಿಗೆ ಆರಂಭದಲ್ಲಿ ಇದನ್ನು ತ್ಯಜಿಸುವುದು ಕಷ್ಟವಾಗಬಹುದು. ಆದರೂ ಅದನ್ನು ಅವರು ಒಪ್ಪಿಕೊಳ್ಳಲೇಬೇಕು. ಅದೇ ತಪಸ್ಸು.

– ಶ್ರೀಲ ಪ್ರಭುಪಾದ

* * * *

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi