ಸರಳ ಜೀವನ, ಉನ್ನತ ವಿಚಾರ

ಪ್ರಪಂಚದ ಎಲ್ಲ ರೋಗಗಳಿಗೂ ಆಧ್ಯಾತ್ಮಿಕತೆಯೇ ಮೂಲ. ಕಾರ್ಯರೂಪದಲ್ಲಿ ನಮಗೆ ದಕ್ಕದ, ಆಧ್ಯಾತ್ಮಿಕವಾಗಿ ತಪ್ಪು ಎನ್ನಬಹುದಾದ ವಸ್ತುವಿನ ಬೆನ್ನು ಹತ್ತಿ ನಮ್ಮ ಆತ್ಮವನ್ನು ಮಾರಿಕೊಂಡು ಬಳಲುತ್ತಿದ್ದೇವೆ. ನಮ್ಮ ವಸ್ತುಸ್ಥಿತಿಯನ್ನು ನಾವು ಬದಲಿಸಿಕೊಳ್ಳುವುದರ ಬಗ್ಗೆ ಪುನರ್ ಪರಿಶೀಲನೆ ಮಾಡುವ ಅಗತ್ಯವಿದೆ. ಅದನ್ನು ಮಾಡುವವರೆಗೂ ನಮಗೆ ಶಾಂತಿ ಸಿಗುವುದಿಲ್ಲ. ನಮ್ಮಲ್ಲಿ ಅಥವಾ ನಮ್ಮೊಳಗೆ ಇಂತಹ ಶಾಂತಿ ನೆಲೆಸಲಾರದು.? – ಅರ್ನಾಲ್ಡ್ ಟಾಯ್‌ನಬಿ, ಲಂಡನ್ ಅಬ್ಸರ್ವರ್‌, 25ನೇ ಅಕ್ಟೋಬರ್ 1972

ಟಾಯ್‌ನಬಿ ಅವರ ಈ ಹೇಳಿಕೆಗೆ ಕಾರಣವಿದೆ. ಅದೇನೆಂದರೆ ಪ್ರಸ್ತುತ ಜಗತ್ತಿನಾದ್ಯಂತ ಸರ್ಕಾರಗಳು ಕೈಗೊಳ್ಳುವ ಎಲ್ಲ ಸಾಮಾಜಿಕ ಅಭಿವೃದ್ಧಿ ಕಾರ್ಯಗಳು ಆರ್ಥಿಕ, ತಂತ್ರಜ್ಞಾನ, ವಿಜ್ಞಾನ ಹಾಗೂ ಭೌತಿಕ ಶಿಕ್ಷಣವನ್ನು ಅವಲಂಬಿಸಿರುವುದೇ ಆಗಿದೆ.

ಕಳೆದ ಎರಡೂವರೆ ಸಾವಿರ ವರ್ಷಗಳ ಮಾನವನ ಇತಿಹಾಸ ಗಮನಿಸಿದಾಗ ಮನುಷ್ಯ ಭೌತಿಕ ಸಂಸ್ಕೃತಿಯನ್ನು ಯಾವ ಮಟ್ಟಿಗೆ ಅವಲಂಬಿಸಿದ್ದಾನೆ ಎನ್ನುವುದು ಸಮಾಜ ವಿಜ್ಞಾನಿ ಪಿಟಿರಿಮ್ ಸೊರೋಕಿನ್ ಅವರ ಅಂಕಿ ಅಂಶ ವಿಶ್ಲೇಷಣೆ ದೃಢೀಕರಿಸುತ್ತದೆ. ಆದರೆ ಇದು ಏಕಮುಖವಾದದ್ದು. ಸೊರೋಕಿನ್ ಹೀಗೆ ಬರೆಯುತ್ತಾರೆ.

‘ನಾವು ಅತ್ಯಂತ ವೈಜ್ಞಾನಿಕವಾದ, ತಾಂತ್ರಿಕವಾದ, ಶತಮಾನದಲ್ಲಿ ಬದುಕುತ್ತಿದ್ದೇವೆ. ಆ ಶತಮಾನವೇ ಮುಂದಿನ ಇಪ್ಪತ್ತೈದು ಶತಮಾನಗಳಿಗೆ ಘೋರವಾಗುವ ಸಾಧ್ಯತೆ ಇದೆ.’

ಅಂದರೆ, ಸಮಾಜದ ಅಭಿವೃದ್ಧಿಗೆ ಭೌತಿಕ ಯೋಜನೆಗಳು ವಿಫಲವಾಗುತ್ತಿವೆ ಎನ್ನುವುದು ಇದರಿಂದ ತಿಳಿಯುತ್ತದೆ. ವಿರೋಧಾಭಾಸವೆಂದರೆ ಭೌತಿಕವಾಗಿ ಮುಂದುವರಿದ ರಾಷ್ಟ್ರಗಳು ಕೂಡ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ನಿರಾಸಗೆ ಒಳಗಾಗಿರುವುದು. ಭೌತಿಕತೆಯಿಂದ ಮಹತ್ವವಾದುದನ್ನು ಸಾಧಿಸಿರುವವರು ಮಾನಸಿಕ ಯಾತನೆಯಿಂದ ಬಳಲುತ್ತಿದ್ದಾರೆ.

ಅಂತಹ ಸಂಪದ್ಭರಿತ ದೇಶಗಳಲ್ಲಿ ಅಪರಾಧದ ಮಟ್ಟವೂ ಅಧಿಕವಾಗಿದೆ. ಬಡವ ಹಾಗೂ ಶ್ರೀಮಂತ ಒಂದೇ ತೆರನಾದ ನೋವಿನಿಂದ ಬಳಲುತ್ತಿದ್ದಾನೆ. ಇವರಿಬ್ಬರ ಸಮಸ್ಯೆಯ ಮೂಲ ಕಾರಣ ಒಂದೆ. ಇವರಿಬ್ಬರೂ ಕೂಡ ಅಭೌತಿಕವಾದ ಯಾವುದೋ ಒಂದು ಕೊರತೆಯಿಂದ ನರಳುತ್ತಿದ್ದಾರೆ. ಅವರಿಗೆ ಒಂದು ಆಧಾರದ ಅಗತ್ಯವಿದೆ.

ಅದನ್ನೇ ಇತಿಹಾಸಕಾರ ಥಿಯೊಡೊರ್‌‌ ರಸಾಕ್ ಹೀಗೆ ವ್ಯಾಖ್ಯಾನಿಸುತ್ತಾನೆ. ‘ ಅತೀಂದ್ರಿಯದ ವ್ಯವಹಾರದ ಅನುಪಸ್ಥಿತಿಯಲ್ಲಿ ತಾಂತ್ರಿಕ ಸಾಧನೆಗಳಲ್ಲ ಅರ್ಥಹೀನ ಎನ್ನಿಸಿಬಿಡುತ್ತವೆ. ಅವು ಅತೃಪ್ತಿಯನ್ನು ಉಳಿಸುವುದರ ಜೊತೆಗೆ ಜಗತ್ತಿಗೆ ಸಹಿಷ್ಣುತೆ, ಶಾಶ್ವತ ಮೌಲ್ಯ ನೀಡುವಂತಹ ಆಯಾಮವನ್ನು ಕೊಡುತ್ತವೆ.’

ಮನಃಶಾಸ್ತ್ರಜ್ಞ ಅಬ್ರಹಾಂ ಮಾಸ್ಲೋ ಅವರು, ಭೌತಿಕ ಸೂತ್ರಗಳನ್ನೇ ನಂಬಿಕೊಂಡಿರುವವರು ಮಾನವನ ಪ್ರಗತಿಯ ನಿಷೇಧವನ್ನು ಅನುಭವಿಸಬೇಕಾಗುತ್ತದೆ ಎನ್ನುವುದನ್ನು ಹೇಳಿದ್ದಾರೆ. ‘ಇಂತಹ ವರ್ತನೆಯ ಸೂತ್ರದಲ್ಲಿ ಬದುಕುವವರು ನಿರಾಸೆ, ಸಿನಿಕತನದಿಂದ ಜೀವನ ಸಾಗಿಸುವಂತಾಗುತ್ತದೆ ಎನ್ನುತ್ತಾರೆ.

ಇಂತಹ ಉತ್ಸಾಹ ಶೂನ್ಯ ಬದುಕಿಗೆ ಆಧ್ಯಾತ್ಮಿಕ ಪ್ರಜ್ಞಾ ಸಂಸ್ಥೆಗಳು ಪರ್ಯಾಯವಾಗಬಲ್ಲವು. ಇಂತಹ ಒಂದು ಸಲಹೆ ಎರಡು ಬಗೆಯ ಆಕ್ಷೇಪಣೆಗೆ ದಾರಿ ಮಾಡಿಕೊಡುತ್ತದೆ. ಒಂದು – ಧರ್ಮ ಯಾವಾಗಲೂ ಮತತತ್ತ್ವ ಸಿದ್ಧಾಂತಪರವಾದದ್ದು ಜೊತೆಗೆ ಧರ್ಮ ಯುದ್ಧಕ್ಕೆ ಆಸ್ಪದ ಕೊಡುವಂತದ್ದು. ಎರಡು – ಆಧ್ಯಾತ್ಮಿಕ ಸಮಾಜವೇ ಅಸಹಜವಾದದ್ದು.

ಪಾಶ್ಚಾತ್ಯ ಧಾರ್ಮಿಕ ಇತಿಹಾಸ ತಿಳಿದುಕೊಂಡವರು ಮೊದಲನೆಯ ಆಕ್ಷೇಪವನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಭಾರತದ ವೈದಿಕ ನಾಗರಿಕತೆಯ ಇತಿಹಾಸ ಗಮನಿಸಿದಾಗ, ನೈಜ ಆಧ್ಯಾತ್ಮಿಕ ಸಮಾಜದಲ್ಲಿ ಬದುಕುವ ಜನ ಸಹಿಷ್ಣುತೆ ಹೊಂದಿದವರಾಗಿರುತ್ತಾರೆ ಎನ್ನುವುದು ಗೊತ್ತಾಗುತ್ತದೆ. ವೈದಿಕ ಸಂಸ್ಕೃತಿಯನ್ನು ಅನುಸರಿಸುವವರು ಇಂದಿಗೂ ಕೂಡ ಕ್ರೈಸ್ತ, ಬೌದ್ಧ, ಇಸ್ಲಾಂ ಧರ್ಮಗಳ ಎಲ್ಲ ದೃಷ್ಟಿಯನ್ನೂ ಗೌರವಿಸುತ್ತಾರೆ.

ಆಧ್ಯಾತ್ಮಿಕ ಸಮಾಜ ಅಸಹಜವಾದದ್ದು ಎಂದು ಹೇಳುವ ಇನ್ನೊಂದು ಆಕ್ಷೇಪಣೆಯೂ ಕೂಡ ವೈದಿಕ ಇತಿಹಾಸದ ಎದುರು ಸೊರಗಿ ಹೋಗುತ್ತದೆ. ಜಗತ್ತಿನ ಅತ್ಯಂತ ಪುರಾತನವಾದ ವೈದಿಕ ನಾಗರಿಕತೆ ಅತ್ಯಂತ ಆಧ್ಯಾತ್ಮಿಕವಾದದ್ದು. ಡಾ. ಸೊರೋಕಿನ್ ನಡೆಸಿದ ಇತಿಹಾಸದ ಅಧ್ಯಯನದಿಂದ ನಮಗೆ ತಿಳಿದು ಬರುವುದೇನೆಂದರೆ ಭೌತಿಕ ಸಿದ್ಧಾಂತವನ್ನು ಆಧರಿಸಿದ ರಾಷ್ಟ್ರವಾಗಲಿ, ಉದ್ಯಮವಾಗಲಿ ಅಥವಾ ಇನ್ನಾವುದೇ ಆಗಿರಲಿ ಅದರ ಗರಿಷ್ಠ ಜೀವಿತಾವಧಿ ಕೆಲವು ನೂರು ವರ್ಷಗಳು ಮಾತ್ರ.

ಇದೇ ವೇಳೆ ಆಧ್ಯಾತ್ಮಿಕ ಸಂಸ್ಥೆಗಳ ಕುರಿತು ಸೊರೋಕಿನ್ ಹೀಗೆ ಹೇಳುತ್ತಾನೆ. “ಸುದೀರ್ಘವಾಗಿ ಅಸ್ತಿತ್ವದಲ್ಲಿರುವ ಸಂಸ್ಥೆಗಳೆಂದರೆ ಅವು ನೈತಿಕ-ಧಾರ್ಮಿಕ ಸಂಘಟನೆಗಳು – ಟೋಯಿಸಮ್, ಕನ್ಫೂಶಿಯಾನಿಸಂ, ಹಿಂದೂಯಿಸಂ, ಬುದ್ಧಿಸಂ, ಕ್ರಿಶ್ಚಿಯಾನಿಟಿ, ಮೊಹಮಡಾನಿಸಂ ಹೀಗೆ – ಇವು ದೀರ್ಘಕಾಲ ಉಳಿದುಕೊಂಡಿರುವ ಆಧ್ಯಾತ್ಮಿಕ ಸಂಘಟನೆಗಳು.

ಈ ಸಂಘಟನೆಗಳು ಎರಡು ಮೂರು ಸಾವಿರ ವರ್ಷಗಳಿಂದ ಜೀವಂತವಾಗಿವೆ. ಪ್ರಾಯೋಗಿಕವಾಗಿ ಮತ್ತು ಸಾಮರ್ಥ್ಯದ ದೃಷ್ಟಿಯಿಂದ ಜನರ ಮೂಲ ಆಧ್ಯಾತ್ಮಿಕ ಹಂಬಲವನ್ನು ತೃಪ್ತಿಪಡಿಸುವುದರಿಂದ ಆಧ್ಯಾತ್ಮಿಕ ಸಂಘಟನೆಗಳು ಇಂತಹ ದೀರ್ಘಾಯುಷ್ಯವನ್ನು ಪಡೆಯುತ್ತದೆ.

ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಸ್ಥಾಪಿಸಿದ ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘವು ಪ್ರಸ್ತುತ, ನಮ್ಮ ಸಾಮಾಜಿಕ ಸಮಸ್ಯೆಗಳಿಗೆ ಧಾರ್ಮಿಕ ಪರಿಹಾರ ಕಂಡುಕೊಡುವ ಪ್ರಯತ್ನ ಮಾಡುತ್ತಿದೆ. ಜಗತ್ತಿನ ಅತಿದೊಡ್ಡ ಆಧ್ಯಾತ್ಮಿಕ ಜ್ಞಾನದ ಕಾರ್ಯಕ್ಷೇತ್ರ ಎನಿಸಿರುವ ವೇದಗಳನ್ನು ನೂರಕ್ಕೂ ಹೆಚ್ಚು ಮೈಕ್ರೋಕಾಸ್ಮಿಕ್ ಆಧ್ಯಾತ್ಮಿಕ ಸಮುದಾಯಗಳ ನಿರ್ವಹಣೆಯಲ್ಲಿ ಇಸ್ಕಾನ್ ತೊಡಗಿದೆ.

ಮಾನವನ ಪರಿಸ್ಥಿತಿಯನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಇಸ್ಕಾನ್ ಕೈಗೊಂಡಿರುವ ಕೆಲಸವನ್ನು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಮೊದಲುಗೊಂಡು ಸಮಾಜ ವಿಜ್ಞಾನಿಗಳು, ಸರ್ಕಾರದ ಅಧಿಕಾರಿಗಳು ಪ್ರಶಂಸಿಸಿದ್ದಾರೆ. ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಧಾರ್ಮಿಕ ಶಾಲೆಯ ನಿರ್ದೇಶಕ ಡಾ. ಜಾನ್ ಬಿ ಓ‌ ಅವರು ಇಸ್ಕಾನ್‌ನ ಸಾಮಾಜಿಕ ಸೇವೆಯನ್ನು ಹೀಗೆ ಬಣ್ಣಿಸಿದ್ದಾರೆ: “ನಾವೆಲ್ಲರೂ ಎದುರು ನೋಡುತ್ತಿದ್ದಂತಹ ಕ್ರಾಂತಿಯು ನಿಮ್ಮ ಕಾರ್ಯಕ್ರಮಗಳ ಮೂಲಕ ಈಡೇರುತ್ತಿದೆ.”

ಕೃಷ್ಣಪಜ್ಞಾ ಸಂಘವನ್ನು ಕ್ರಾಂತಿಕಾರಿ ಎಂದು ಡಾ. ಓರ್ ಏಕೆ ಕರೆದರು? ಪರಮ ಪದದೊಂದಿಗೆ ನಾವು ಮರೆತು ಹೋಗಿರುವ ಸಂಬಂಧ, ಮಾನವನ ಸಮಸ್ಯೆ ಇವುಗಳನ್ನು ಕೃಷ್ಣಪ್ರಜ್ಞಾ ಸಂಘ ನೇರವಾಗಿ ಹೃದಯಕ್ಕೆ ತಟ್ಟುವಂತೆ ಹೇಳುವುದೇ – ಓರ್ ಅವರ ಈ ಹೇಳಿಕೆಗೆ ಪ್ರೇರಣೆಯಾಗಿರಬಹುದು.

ದೇವರ ಜೊತೆಯ ನಮ್ಮ ಸಂಬಂಧದ ಅರಿವು ಮೂಡಿದಾಗ ಮಾತ್ರ ಸಮಾಜದ ಯಶಸ್ಸು ಕಾಣಲು ಸಾಧ್ಯ ಸಾಮಾಜಿಕ ಸಂಸ್ಥೆಗಳನ್ನು ನೈಸರ್ಗಿಕ ನಿಯಮಗಳು ಹೇಗೆ ಆಳುತ್ತವೆ ಎನ್ನುವುದರ ಅರಿವು ದೇವರ ಜೊತೆಗಿನ ನಮ್ಮ ಸಂಬಂಧದಿಂದ ತಿಳಿಯುತ್ತದೆ. ನಮ್ಮ ಆಧ್ಯಾತ್ಮಿಕ ಬಿಕ್ಕಟ್ಟನ್ನು ಉತ್ತಮಪಡಿಸುವುದೇ ಕೃಷ್ಣಪ್ರಜ್ಞೆಯ ಮೂಲ ಉದ್ದೇಶವಾದರೂ ಅದರೊಂದಿಗೆ ನಮ್ಮ ಐಹಿಕ ಸಮಸ್ಯೆಗಳನ್ನೂ ಪರಿಹರಿಸುತ್ತದೆ.

ಒಂದು ವಸ್ತುವಿನ ವಿನ್ಯಾಸದ ಆವಿಷ್ಕಾರಕ್ಕೆ ವಿಜ್ಞಾನ ಸಹಕಾರಿಯಾಗುತ್ತದೆ. ವೈದಿಕ ಸಮಾಜದಲ್ಲಿ ಕಂಡುಬರುವ ಸಾಮಾಜಿಕ ಅಭಿವೃದ್ಧಿಯ ವೈಜ್ಞಾನಿಕ ನಿಯಮಗಳ ಮೂಲಕ ಸಾಮರಸ್ಯದ ಬದುಕಿನ ವಿನ್ಯಾಸ ನೀಡುವ ಪ್ರಯತ್ನವನ್ನು ಇಸ್ಕಾನ್ ಮಾಡುತ್ತಿದೆ.

ಸಾಮಾಜಿಕ ರೋಗಗಳ ಲಕ್ಷಣವನ್ನು ನಿಷ್ಪ್ರಯೋಜಕ ಎನ್ನುವ ರೀತಿ ಪ್ರತಿಪಾದಿಸುವುದಕ್ಕಿಂತಲೂ ಮಾನವರ ಬದುಕಿನಲ್ಲಿ ತುಂಬಿರುವ ಆಧ್ಯಾತ್ಮಿಕ ಶೂನ್ಯವನ್ನು ಪ್ರಕೃತಿ ಹಾಗೂ ದೇವರ ನಿಯಮಗಳನ್ನು ಅನುಸರಿಸುವ ಮೂಲಕ ರೋಗವನ್ನು ಉಪಚರಿಸುವುದನ್ನು ಕೃಷ್ಣಪ್ರಜ್ಞೆ ಸಮುದಾಯವನ್ನು ನೋಡಿ ಜಗತ್ತಿನ ಆಡಳಿತ ತಿಳಿದುಕೊಳ್ಳಬಹುದಾಗಿದೆ.

ಸಮಾಜದ ಕಾರ್ಯ ಹೇಗೆ ನಡೆಯುತ್ತದೆ ಎನ್ನುವುದನ್ನು ತಿಳಿದುಕೊಳ್ಳಲು ಮೊದಲು ನಾವು ಕನಿಷ್ಠಪಕ್ಷ ಸೈದ್ಧಾಂತಿಕವಾಗಿ ಮನುಷ್ಯನ ಆಧ್ಯಾತ್ಮಿಕ ಸ್ವರೂಪ ಮತ್ತು ಅವನ ಆಧ್ಯಾತ್ಮಿಕ ಅವಶ್ಯಕತೆಯ ಬಗ್ಗೆ ಅರಿತುಕೊಳ್ಳಬೇಕಾಗುತ್ತದೆ. ಆಗ ಆಧ್ಯಾತ್ಮಿಕ ಸಮಾಜದ ಸಂಭವನೀಯತೆ, ಅಪೇಕ್ಷೆ, ವಾಸ್ತವಿಕತೆ ಎಲ್ಲವೂ ನಮಗೆ ಸ್ಪಷ್ಟವಾಗಿ ಗೋಚರವಾಗುತ್ತದೆ.

ಮನುಷ್ಯ ಎರಡು ಸ್ತರಗಳಲ್ಲಿ ಏಕಕಾಲದಲ್ಲಿ ಬದುಕುತ್ತಿರುವ ಅಲ್ಪಜೀವಿ ಎಂದು ವೈದಿಕ ಸಾಹಿತ್ಯ ವಿವರಿಸುತ್ತದೆ. ನಮ್ಮ ದೇಹ ಹಾಗೂ ಪರಿಸರವನ್ನು ಒಳಗೊಂಡಂತಹ ಭೌತಿಕ ಬಲ, ಸ್ಪಷ್ಟವಾದ ಮತ್ತು ನವಿರಾದ ಜಗತ್ತಿನಲ್ಲಿ ನಾವು ಮೊದಲು ವಾಸಿಸುತ್ತೇವೆ. ಭೌತಿಕ ಬಲದಲ್ಲಿನ ವಸ್ತು, ದ್ರವ, ವಿಕಿರಣ ಶಕ್ತಿ, ಅನಿಲ, ವ್ಯೋಮ, ಮನಸ್ಸು ಬುದ್ಧಿಮತ್ತೆ, ಹಾಗೂ ಐಹಿಕ ಅಹಮಿಕೆ ಎಲ್ಲವೂ ಸೇರಿಕೊಂಡಿರುತ್ತದೆ.

ನಮ್ಮ ನಾಲ್ಕು “ಮೃಗಿಯ” ಅವಶ್ಯಕತೆಗಳಾದ ಅನ್ನ, ವಿಶ್ರಾಂತಿ, ಲೈಂಗಿಕ ಹಾಗೂ ರಕ್ಷಣೆ (ವಸತಿ ಒಳಗೊಂಡು) ಎಲ್ಲವೂ ನಮಗೆ ಈ ಸ್ತರದಲ್ಲಿ ಲಭಿಸುತ್ತದೆ. ಭೌತಿಕ ಬಲ ಯಾಂತ್ರಿಕವಾದ, ಪ್ರಜ್ಞಾಹೀನ ಅಸ್ತಿತ್ವವನ್ನು ಹೊಂದಿದ್ದು ಇದು ಕಾರಣ ಮತ್ತು ಪರಿಣಾಮಗಳ ನಿಯಮಗಳಿಗೆ ಒಳಪಟ್ಟಿರುತ್ತದೆ.

ಭೌತಿಕ ಬಲಕ್ಕೆ ಚಾಲನೆ ಸಿಗುವುದು ಪ್ರಜ್ಞೆ ಇರುವ ವ್ಯಕ್ತಿಯಿಂದ. ಅತ್ಯಂತ ಶ್ರೇಷ್ಠವಾದ ಮನುಷ್ಯನ ಮಿದುಳು ಒಂದು ಅದ್ಭುತ ಕಂಪ್ಯೂಟರ್ ಆದರೂ ಕೂಡ ಅದು ಸೂಕ್ತ ರೀತಿ ಕೆಲಸ ಮಾಡಲು ಗುಣಾತ್ಮಕವಾದ ಮತ್ತು ಪ್ರಜ್ಞಾ ಸಹಿತವಾದ ಶಕ್ತಿಬೇಕು.

ಮನುಷ್ಯನ ಎರಡನೇ ಸ್ತರದ ಅಸ್ತಿತ್ವವಾದ ಪ್ರಜ್ಞೆ ಅಥವಾ ಆಧ್ಯಾತ್ಮಿಕ ಶಕ್ತಿಯ ಎದುರು ಭೌತಿಕ ಬಲ ಅತ್ಯಂತ ಕೆಳಮಟ್ಟದ್ದು. ಆಧ್ಯಾತ್ಮಿಕ ಶಕ್ತಿಯ ಮೂಲ ಲಕ್ಷಣ ಅದರ ನಿರಂತರತೆ ಅಥವಾ ಚಿರಸ್ಥಾಯಿ. ಸ್ವಯಂ ಜ್ಞಾನದ ವೇದ ಸಾಹಿತ್ಯವಾದ ಭಗವದ್ಗೀತೆಯಲ್ಲಿ ಕೃಷ್ಣ ಈ ವಿಷಯಕ್ಕೆ ಹೆಚ್ಚಿನ ಒತ್ತು ನೀಡುತ್ತಾನೆ.

‘ಮೂರ್ತ ರೂಪವಾದ ಆತ್ಮ (ಪ್ರಜ್ಞೆ) ದೇಹದಲ್ಲಿ ನಿರಂತರವಾಗಿ ಅಂದರೆ ಬಾಲ್ಯ, ಯೌವ್ವನ ಮುಪ್ಪು ಈ ಎಲ್ಲ ಹಂತಗಳಲ್ಲೂ ಚಲಿಸುವಂತೆ ಸಾವಿನಲ್ಲಿ ಆತ್ಮ ಇನ್ನೊಂದು ದೇಹಕ್ಕೆ ಹರಿಯುತ್ತದೆ.’ (ಭಗವದ್ಗೀತಾ 2.13)

ಕೃಷ್ಣನ ಈ ಮಾತಿನ ಸತ್ಯವನ್ನು ಅರಿತುಕೊಳ್ಳಲು ನಮ್ಮ ದೇಹದ ಕಾರ್ಯ, ಮಾನಸಿಕ ಪ್ರಕ್ರಿಯೆ, ಪ್ರಜ್ಞೆ ಇವುಗಳನ್ನು ಪ್ರಕೃತಿಯೊಂದಿಗೆ ಪ್ರತಿಬಿಂಬಿಸಬಹುದು. ಚಿತ್ರಮಂದಿರದಲ್ಲಿ ಪ್ರದರ್ಶಿತವಾಗುವ ಚಿತ್ರವನ್ನು ಇದಕ್ಕೆ ಹೋಲಿಸಬಹುದು. ನಾವು ನೋಡುತ್ತಿರುವುದು ಒಬ್ಬ ವ್ಯಕ್ತಿಯ ಆತ್ಮಚರಿತ್ರೆಯ ಚಿತ್ರ ಎಂದಿಟ್ಟುಕೊಳ್ಳೋಣ.

ಆ ವ್ಯಕ್ತಿಯ ಹುಟ್ಟು, ಬೆಳವಣಿಗೆ, ಸಾಧನೆ, ಅವನ ಅಂತ್ಯ ಹೀಗೆ ಎಲ್ಲ ವಿಚಾರಗಳೂ ಪರದೆಯ ಮೇಲೆ ಮೂಡುತ್ತವೆ. ಚಿತ್ರ ಮೂಡುವಾಗ ಸಾವಿರಾರು ಬಿಂಬಗಳು ಪರದೆಯ ಮೇಲೆ ಹಾದು ಹೋಗುತ್ತವೆ. ಇಡೀ ಚಿತ್ರ ಮುಗಿದು ಚಿತ್ರಮಂದಿರದಲ್ಲಿ ಬೆಳಕು ಮೂಡಿದಾಗ ಚಿತ್ರ ಪ್ರದರ್ಶನಕ್ಕಿಂತ ಮೊದಲು ಪರದೆ ಯಾವ ರೂಪದಲ್ಲಿ ಇತ್ತೋ ಅದೇ ರೂಪದಲ್ಲಿ ಪ್ರದರ್ಶನದ ಬಳಿಕವೂ ಯಾವುದೇ ಬದಲಾವಣೆ ಇಲ್ಲದೆ ಹಾಗೆ ಕಾಣುತ್ತದೆ.

ಪ್ರಜ್ಞೆ (ಆತ್ಮ) ಎನ್ನುವುದು ಚಿತ್ರ ಪರದೆಯ ಹಾಗೆ ನಮ್ಮ ಜೀವನದಲ್ಲಿ ನಾವು ಅನುಭವಿಸುವ ಎಲ್ಲ ರೀತಿಯ ಘಟನೆಗಳೂ ಪರದೆ ಮೇಲೆ ಮೂಡಿ ಬಂದ ಚಿತ್ರದ ಹಾಗೆ. ಒಮ್ಮೆ ಒಬ್ಬನ ಜೀವನ ‘ಚಿತ್ರ’ ಮುಗಿದ ಮೇಲೆ ಅವನಲ್ಲಿ ಇರುವ ಪ್ರಜ್ಞೆ ಪರಿಪೂರ್ಣವಾಗಿ ಹಾಗೆಯೇ ಇನ್ನೊಂದು ದೇಹಕ್ಕೆ ಸೇರಿಕೊಂಡು ಹೊಸ ಆಲೋಚನೆ ಭಾವನೆಗಳ ಅನುಭವಕ್ಕೆ ಒಳಪಡುತ್ತದೆ.

ಭೌತಿಕ ವಿಜ್ಞಾನಿಗಳು ಈ ನೋಟವನ್ನು ಅಲ್ಲಗಳೆಯುವುದಕ್ಕೆ ತೀವ್ರವಾಗಿ ಪ್ರಯತ್ನಿಸಿದ್ದಾರೆ. ದೇಹ ಮತ್ತು ಮನಸ್ಸುಗಳನ್ನು ನಿರಂತರವಾಗಿ ಬದಲಾಯಿಸುವಂತಹ ಭೌತವಸ್ತು ಭೌತಿಕ ಬಲದಲ್ಲಿ ಇದೆ. ಅದನ್ನೇ ಅವರು ಭೌತ ವಸ್ತು ಎಂದು ಅರ್ಥೈಸಿದ್ದಾರೆ.

ಪ್ರತಿಯೊಂದು ಜೀವಿಗೂ ಅದರದೇ ಆದ ಶಾಶ್ವತವಾದ ಗುರುತು ಇರುವುದೇ ಆದಲ್ಲಿ ಭೌತ ವಿಜ್ಞಾನಿಗಳು ಒಪ್ಪಿಕೊಳ್ಳುವುದಕ್ಕೆ ಇಚ್ಛಿಸದ ಅಭೌತಿಕವಾದ ಅಥವಾ ಆಧ್ಯಾತ್ಮಿಕವಾದ ಶಕ್ತಿಯೊಂದು ಇದೆ ಎನ್ನುವುದಕ್ಕೆ ಇದು ಬಲಯುತವಾದ ಪುರಾವೆಯನ್ನು ಒದಗಿಸುತ್ತದೆ.

ಇತ್ತೀಚಿನವರೆಗೂ ವಿಜ್ಞಾನಿಗಳು ನಮ್ಮ ಮಿದುಳಿನಲ್ಲಿ ಭೌತಿಕವಾದ ವಸ್ತುವೊಂದನ್ನು ಕಂಡುಹಿಡಿಯುವ ಭರವಸೆ ಇಟ್ಟುಕೊಂಡಿದ್ದರು. ಮಿದುಳಿನಲ್ಲಿರುವ ಭೌತ ವಸ್ತುವನ್ನು ಸೈದ್ಧಾಂತಿಕವಾಗಿ ಸ್ಮರಣ ಗುರುತು ಅಥವಾ ಎನ್‌ ಗ್ರಾಮ್ ಎಂದು ಕರೆದರು. ಸ್ಮರಣ ಗುರುತು ಜೀವಿ ಬದುಕಿರುವವರೆಗೂ ಜೀವಂತವಾಗಿ ಇರುತ್ತದೆ.

ಬಳಿಕ ಅದು ಜೀವಿಯೊಂದಿಗೇ ಸಾಯುತ್ತದೆ. ಅಂದರೆ ಭೌತಿಕ ವಸ್ತುವಿನ ಗುರುತಿಗೆ ಸ್ಮರಣಗುರುತು ಒಂದು ತಾತ್ಕಾಲಿಕ ಸ್ಥಾನಮಾನವನ್ನು ಮಾತ್ರ ನೀಡುತ್ತದೆ. 1975ರ ಹಾರ್ಪರ್ ಮ್ಯಾಗಜಿನ್‌ನ ಡಿಸೆಂಬರ್ ಸಂಚಿಕೆ ‘ಸ್ಮರಣಗುರುತು’ ಪತ್ತೆ ಮಾಡುವಲ್ಲಿ ವಿಜ್ಞಾನಿಗಳು ಸಂಪೂರ್ಣವಾಗಿ ವಿಫಲವಾಗಿರುವ ವರದಿಯನ್ನು ಪ್ರಕಟಿಸಿದೆ. ಸ್ಮರಣಗುರುತು ಕಂಡುಹಿಡಿಯಲು ವಿಜ್ಞಾನ ವಿಫಲವಾಯಿತು. ಇದನ್ನು ಪತ್ತೆ ಮಾಡಲು ಮೂವತ್ತಕ್ಕೂ ಹೆಚ್ಚು ವರ್ಷ ಆಳವಾದ ಅಧ್ಯಯನ ನಡೆಸಿದ ಡಾ. ಕಾರ್ಲ್ ವ್ಯಾಶ್ಲೆ  “ತನ್ನ ಮುರ್ಖತನವನ್ನು ನೋಡಿ ತಾನೇ ನಕ್ಕ.”

ಸರಳವಾಗಿ ಹೇಳುವದಾದರೆ ಭೌತವಿಜ್ಞಾನ ‘ಪ್ರಜ್ಞೆ’ ಯಿಂದ ದಿಗ್ಭ್ರಮೆಗೆ ಒಳಗಾಗಿದೆ. ಯಾಕೆ? ನ್ಯೂಯಾರ್ಕ್‌ನ ಟ್ರಾಂಕ್ಸ್‌ನಲ್ಲಿರುವ ಆಲ್ಬರ್ಟ್ ಐನ್‌ ಸ್ಪೇನ್‌ ಮೆಡಿಸಿನ್ ಕಾಲೇಜಿನ ಡಾ. ಆಲಿವರ್ ಸಾಕ್ಸ್‌ ಹಾರ್ಪರ್ ಸಂಚಿಕೆಯಲ್ಲಿ ಬರೆದಿರುವಂತೆ ‘ಪ್ರಜ್ಞೆ ವಿಶ್ಲೇಷಣೆ ಅಥವಾ ಕೂಲ೦ಕಷ ಪರಿಶೀಲನೆಗೆ ಶರಣಾಗುವುದಿಲ್ಲ.’ ಡಾ. ಸಾಕ್ಸ್ ಮತ್ತು ವಿಜ್ಞಾನಿಗಳು ಮಾಡಬಹುದಾಗಿದ್ದ ಉತ್ತಮ ಕೆಲಸವೆಂದರೆ ‘ಸ್ಮರಣ ಗುರುತಿನ ಸ್ವರೂಪವನ್ನು ಪ್ರತಿಮೆ ಹಾಗೂ ರೂಪಕಗಳ ಮೂಲಕ ವಿವರಿಸಬಹುದಿತ್ತು.’

ಆಧ್ಯಾತ್ಮಿಕ ಹಾಗೂ ಭೌತಿಕ ಬಲಗಳ ನಡುವಿನ ಗುಣಾತ್ಮಕ ವ್ಯತ್ಯಾಸಗಳನ್ನು ಆಲೋಚನಾ ಪರ ನೋಟದಿಂದ ತಿಳಿಯಲು ಸಾಧ್ಯ. ಆ ಮೂಲಕ ನೇರವಾಗಿ ‘ಪ್ರಜ್ಞೆ’ಯನ್ನು ಅರಿತುಕೊಳ್ಳಬಹುದು. ಮೊದಲಿಗೆ ಭೌತಿಕ ಮೂಲ ವಸ್ತುವಿನ ಸ್ಪಷ್ಟತೆಯನ್ನು ಪರೀಕ್ಷಿಸಬೇಕು. ಘನವಸ್ತು, ದ್ರವ, ವಿಕಿರಣಶಕ್ತಿ, ಅನಿಲ ಹಾಗೂ ವ್ಯೋಮ ಇವುಗಳಿಂದ ಎಲ್ಲ ರೀತಿಯ ರಾಸಾಯನಿಕ ಸಂಯುಕ್ತ ಹಾಗೂ ಅಂಗಗಳ ಉತ್ಪತ್ತಿಯಾಗುವುದು.

ಇವೆಲ್ಲವೂ ಅಜ್ಞಾನ, ಚೇತನರಹಿತ ಮತ್ತು ಜೀವರಹಿತವಾದವು. ಪ್ರಜ್ಞೆ ಉಳ್ಳ ಜೀವಿ ಇವುಗಳಿಗೆ ಜೀವ ತುಂಬುವವರೆಗೂ ಇವು ಜಡವಾಗಿಯೇ ಇರುತ್ತವೆ. ಆ ಬಳಿಕ ಪ್ರಜ್ಞೆ ಹೇಗೆ ನಮ್ಮ ದೇಹಕ್ಕೆ ಚೈತನ್ಯ ತುಂಬುತ್ತದೆ ಎನ್ನುವುದರ ಬಗ್ಗೆ ಚಿಂತಿಸಬಹುದು. ನಾವು ನಮ್ಮ ಪ್ರಜ್ಞೆಯನ್ನೇ ಪರೀಕ್ಷೆಗೆ ಒಳಪಡಿಸಬಹುದು. ನಮ್ಮ ಭಾವನೆಗಳು, ಆಲೋಚನೆ, ಬಯಕೆಗಳು, ನಮ್ಮ ಇಚ್ಛೆ ಅಂದರೆ ಆಯ್ಕೆ ಮತ್ತು ಚಲನಾ ಸಾಮರ್ಥ್ಯ ಹಾಗೂ ನಮ್ಮ ಗುರುತು, ಮೂಲ, ಗುರಿ ಇವುಗಳನ್ನು ಪ್ರಜ್ಞೆಯ ಮೂಲಕ ಪರೀಕ್ಷಿಸಬಹುದು.

ನಾವು ನೋಡಿದ ಹಾಗೆ, ಭೌತಿಕ ಶರೀರ ಹಾಗೂ ಪ್ರಜ್ಞಾವ್ಯಕ್ತಿಯ ನಡುವೆ ಅಂತರ ಇರುವುದು ಗೋಚರವಾಗುತ್ತದೆ. ನಾವು ಎರಡು ಜಗತ್ತಿನಲ್ಲಿ ಬದುಕುತ್ತಿದ್ದೇವೆ. ಒಂದು ಬಾಹ್ಯ ಜಗತ್ತು. ಇಲ್ಲಿ ಭೌತಿಕ ಶರೀರ ಹಾಗೂ ಕಾರ್ಯಕ್ಷೇತ್ರವನ್ನು ಕಾಣಬಹುದಾಗಿದೆ. ಇನ್ನೊಂದು ಆಂತರಿಕ ಜಗತ್ತು. ಪ್ರಜ್ಞೆ ಇಲ್ಲಿ ಪ್ರಮುಖವಾದದ್ದು. ಈ ಪ್ರಜ್ಞೆ ನಮಗೆ ಜೀವ ಜ್ಯೋತಿಯನ್ನು ಒದಗಿಸುತ್ತದೆ. ಮನುಷ್ಯನ ಈ ಎರಡೂ ಪ್ರಕೃತಿಗಳನ್ನು ಈಡೇರಿಸುವಂತಾದಾಗಲೇ ಪರಿಪೂರ್ಣ ಸಮಾಜ ಸಾಧ್ಯ.

ಸಾಮಾಜಿಕ ನೀತಿ: ಆಧ್ಯಾತ್ಮಿಕ ತಿಳಿವಳಿಕೆ ಮಾನವನ ಶ್ರಮದ ದೃಷ್ಟಿಕೋನವನ್ನು ಬದಲಾಯಿಸುತ್ತದೆ. ಜೀವನವನ್ನು ಭೌತಿಕ ನೆಲೆಯಲ್ಲಿ ಕಲ್ಪಿಸಿಕೊಳ್ಳುವುದರಿಂದ ಐಹಿಕ ಬಯಕೆಗಳು ದ್ವಿಗುಣಗೊಳ್ಳುತ್ತಾ, ಕೈಗಾರಿಕೆ ಹಾಗೂ ತಂತ್ರಜ್ಞಾನದ ಮಿತಿಮೀರಿದ ಬೆಳವಣಿಗೆಗೆ ದಾರಿ ಮಾಡಿಕೊಡುತ್ತದೆ.

ಇದು ನಗರ-ಗ್ರಾಹಕ ಆರ್ಥಿಕ ವ್ಯವಸ್ಥೆಯೊಂದಿಗೆ ಹೊಟ್ಟೆಬಾಕತನಕ್ಕೆಆಸ್ಪದ ಮಾಡಿಕೊಡುತ್ತದೆ. ಇಂತಹ ಬೆಳವಣಿಗೆ ಪರಿಸರ ಹಾಗೂ ಸಾಮಾಜಿಕ ದುರಂತಕ್ಕೆ ನಾಂದಿಯಾಗುತ್ತದೆ ಎಂದು ಸಮಾಜ ವಿಜ್ಞಾನಿಗಳು ಈ ವಿಷಯದಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆ ಕಾರಣ ಸರಳ ಜೀವನಕ್ಕೆ – ಅಂದರೆ ಪ್ರಕೃತಿ ನಿಯಮಗಳ ಜೊತೆ ಸಾಮರಸ್ಯದಿಂದ ಕೂಡಿದ ಬದುಕು – ಮರಳುವುದು ಇಂದಿನ ತುರ್ತು ಅಗತ್ಯವಾಗಿದೆ.

ಆಧ್ಯಾತ್ಮಿಕ ಸಮಾಜ ಜನರಿಗೆ ತೃಪ್ತಿಯನ್ನು ನೀಡುವಂತಹ ಕೆಲಸವನ್ನು ಮಾಡುತ್ತದೆ. ಹಾಗಾಗಿ, ವೈದಿಕ ಸಮಾಜದ ಧ್ಯೇಯ ಸರಳ ಜೀವನ ಮತ್ತು ಉನ್ನತ ವಿಚಾರ’ವಾಗಿದೆ. ಅಮೆರಿಕದಲ್ಲಿರುವ ಸುಮಾರು 30ಕ್ಕೂ ಹೆಚ್ಚು ಇಸ್ಕಾನ್ ಕೇಂದ್ರಗಳು ಸರಳ ಜೀವನ ಮತ್ತು ಉನ್ನತ ವಿಚಾರದ ಮಾರ್ಗದರ್ಶಿ ಸೂತ್ರಗಳ ಬಗ್ಗೆ ಪ್ರಾಯೋಗಿಕವಾಗಿ ರುಜುವಾತುಪಡಿಸುತ್ತಿದೆ.

ಮಧ್ಯಮ ಮತ್ತು ಮೇಲ್ವರ್ಗದ ಸದಸ್ಯರೇ ಅಧಿಕ ಸಂಖ್ಯೆಯಲ್ಲಿ ಇದ್ದಾರೆ. ಇವರ ವಾರ್ಷಿಕ ಆದಾಯ ಸರಿಸುಮಾರು 17,000 ಅಮೆರಿಕನ್ ಡಾಲರ್. ವಾರ್ಷಿಕ ಸರಿಸುಮಾರು 4,000 ಡಾಲ‌ರ್‌ ಆದಾಯ ಇರುವಂತಹವರೂ ಸದಸ್ಯರಾಗಿದ್ದಾರೆ. (ಇಸ್ಕಾನ್‌ನ ಫಾರ್ಮ್- ಪ್ರಾಜೆಕ್ಟ್ ಕುಟುಂಬದ ಆದಾಯ ಇದಕ್ಕಿಂತಲೂ ಕಡಮೆಯದು).

ಆದಾಯದಲ್ಲಿ ಗಣನೀಯವಾದ ಇಳಿಕೆ ಇದ್ದರೂ ಕೂಡ ಇಸ್ಕಾನ್‌ನ ಭಕ್ತರು ತೃಪ್ತಿಕರವಾದ ಮತ್ತು ಸಂತೋಷಭರಿತ ಜೀವನ ನಡೆಸುತ್ತಿದ್ದಾರೆ. ಇದು ಹೇಗೆ ಸಾಧ್ಯವಾಯಿತು? ಇದನ್ನು ಸರಳವಾಗಿ ವಿವರಿಸುವುದಾದಲ್ಲಿ ಇವರೆಲ್ಲರೂ ಐಹಿಕ ಬಯಕೆಗಳನ್ನು ಕಡಿಮೆಗೊಳಿಸಿ ಆತ್ಮ ಸಾಕ್ಷಾತ್ಕಾಋ ಹಾಗೂ ಆಧ್ಯಾತ್ಮಿಕ ಸಂಸ್ಕೃತಿಯಲ್ಲಿ ಅರ್ಥಪೂರ್ಣವಾಗಿ ತೊಡಗಿಕೊಂಡಿದ್ದು, ನೀರಿನಿಂದ ಹೊರತೆಗೆದ ಮೀನಿನ ಉದಾಹರಣೆ ಇಲ್ಲಿ ಹೆಚ್ಚು ಸೂಕ್ತ.

ಸಮುದ್ರದಲ್ಲಿನ ಮೀನನ್ನು ತೆಗೆದು ನೆಲದ ಮೇಲೆ ಬಿಟ್ಟಾಗ ಅದು ಇನ್ನಿಲ್ಲದಷ್ಟು ಯಾತನೆಯನ್ನು ಅನುಭವಿಸುತ್ತದೆ. ಮತ್ತೆ ಅದು ನೆಮ್ಮದಿಯಿಂದ ಬದುಕಬೇಕಾದರೆ ಮರಳಿ ನೀರಿಗೆ ಹೋಗಬೇಕು. ಹಾಗೇನೇ ಮಾನವನು ಪ್ರಾಕೃತಿಕ ಆಧ್ಯಾತ್ಮಿಕ ಪರಿಸರದಿಂದ ಬೇರೆಯಾದಾಗ ಇದೇ ರೀತಿಯ ತವಕ, ತಲ್ಲಣಗಳನ್ನು ಅನುಭವಿಸುತ್ತಾನೆ. ಜೀವನಾಧಾರ ವಾತಾವರಣವನ್ನು ನೀಡುವ ಆಧ್ಯಾತ್ಮಿಕ ಸಮಾಜಕ್ಕೆ ಮರಳಿದಾಗ ಮಾತ್ರ ಅವನು ನೆಮ್ಮದಿಯನ್ನು ಕಾಣುತ್ತಾನೆ.

ಶ್ರೀಮದ್ಭಾಗವತದ (ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಸಂಸ್ಕೃತದಿಂದ ಅನುವಾದಿಸಿರುವ ಆಧ್ಯಾತ್ಮಿಕ ನಾಗರಿಕತೆಯ ಮೂಲ ಗ್ರಂಥ) ಈ ಶ್ಲೋಕ ಭೌತಿಕ ಹಾಗೂ ಆಧ್ಯಾತ್ಮಿಕ ಸಮಾಜದ ರಚನೆಯಲ್ಲಿನ ವ್ಯತ್ಯಾಸಗಳನ್ನು ತಿಳಿಸುತ್ತದೆ. ದ್ವಾರಕಾಪುರಿಯಲ್ಲಿ ಎಲ್ಲ ಋತುಗಳ ಸಮೃದ್ಧಿಯೂ ಇತ್ತು.

ಎಲ್ಲೆಡೆಯೂ ಆಶ್ರಮಗಳು, ಹಣ್ಣಿನ ತೋಟ, ಹೂದೋಟ, ಉದ್ಯಾನ, ಕಮಲ ಸರೋವರಗಳಿದ್ದವು. ಅತ್ಯಂತ ಯೋಜಿತವಾಗಿ ನಿರ್ಮಾಣವಾದ ಆ ನಗರದಲ್ಲಿ ರಸ್ತೆ, ಹಾದಿ, ಬೀದಿಗಳು ವ್ಯವಸ್ಥಿತವಾಗಿದ್ದವು. ಆ ನಗರದಲ್ಲಿ ವಸತಿಗೃಹಗಳು, ಆಡಳಿತ ಸೌಧಗಳು, ದೇವಾಲಯಗಳ ಜೊತೆಗೆ ವಿವಿಧ ಬಗೆಯ ವಾಸ್ತುಶಿಲ್ಪ ಸೌಂದರ್ಯವೂ ಇತ್ತು.

ದ್ವಾರಕಾ ಕುರಿತು ತಮ್ಮ ವಿಚಾರವನ್ನು ಮಂಡಿಸಿರುವ ಶ್ರೀಲ ಪ್ರಭುಪಾದರು, ನೈಸರ್ಗಿಕ ಕೊಡುಗೆಗಳಾದ ಹೂವು, ಹಣ್ಣುಗಳನ್ನು ಅವಲಂಬಿಸಿದ ಜನ, ಕೈಗಾರಿಕೋದ್ಯಮವಿಲ್ಲದೆ ಕೊಳಗೇರಿ ಮತ್ತು ಸ್ಲಮ್ ಗಳನ್ನು ವಾಸಯೋಗ್ಯ ಮನೆಗಳಾಗಿ ಮೇಲ್ದರ್ಜೆಗೆ ಏರಿಸುವ ಪ್ರಯತ್ನ ಮಾಡಿದರು.

ನಾಗರಿಕತೆಯ ಬೆಳವಣಿಗೆ ಮಾನವರ ಪ್ರಾಕೃತಿಕ ಸಂತಸವನ್ನು ಹಾಳುಗೆಡಹುವಂತಿರಬಾರದು. ಆಧ್ಯಾತ್ಮಿಕ ಮೂಲ ಪ್ರವೃತ್ತಿಯನ್ನು ಆಸ್ವಾದಿಸುವಂತಹ ಅಭಿವೃದ್ಧಿ ಬೇಕು. ಜೀವನದ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಆಧ್ಯಾತ್ಮಿಕ ಜ್ಞಾನವನ್ನು ತಿಳಿದುಕೊಳ್ಳಲು ಮಾನವ ಶಕ್ತಿಯ ಸದುಪಯೋಗವಾಗಬೇಕು. ಹೂವು, ಹಣ್ಣು, ಸುಂದರ ವನಗಳು, ಉದ್ಯಾನಗಳು, ಹಂಸ, ಬಾತುಕೋಳಿಗಳು ವಿಹರಿಸುವ ಕಮಲ ಸರೋವರ, ಮಾನವನ ದೇಹಕ್ಕೆ ಅಗತ್ಯ ಪೌಷ್ಟಿಕಾಂಶ ನೀಡುವಂತಹ ಹಸುವಿನ ಹಾಲು, ಬೆಣ್ಣೆ ಸಮರ್ಪಕವಾಗಿ ದೊರಕಬೇಕು.

ನಮ್ಮ ಜೀವನ ನಿರ್ವಹಣೆಗೆ ಅಗತ್ಯವಾಗಿ ಬೇಕಾದ ಎಲ್ಲ ಅನುಕೂಲತೆಗಳೂ ಪ್ರಕೃತಿಯಲ್ಲಿಯೇ ಇವೆ ಎಂದು ಶ್ರೀಮದ್ಭಾಗವತ ಹಾಗೂ ವೈದಿಕ ಸಾಹಿತ್ಯ ವಿವರಿಸಿ ಹೇಳುತ್ತದೆ. ಐಹಿಕ ಸಂತಸಕ್ಕಾಗಿ ನಾವು ಪ್ರಕೃತಿಯನ್ನು ಹೆಚ್ಚಾಗಿ ಶೋಷಿಸಿದಷ್ಟೂ ನೈಸರ್ಗಿಕ ರಚನೆ, ಅದರ ಸಂಪತ್ತು ಎಲ್ಲವೂ ಕೂಡ ನಾಶವಾಗುತ್ತಾ ಬರುತ್ತವೆ.

ಪ್ರತಿಯೊಬ್ಬ ಜೀವಿಯೂ ಕೂಡ ತನ್ನ ಆಸೆ ಹಾಗೂ ಚಟುವಟಿಕೆಯನ್ನು ಎಲ್ಲರ ಲಾಭಕ್ಕೆ ನಿಷ್ಕಳಂಕವಾಗಿ ಬಳಸಿಕೊಂಡಾಗ ಮಾತ್ರ ಅವನ ಜೀವನ ಸಂತೋಷವನ್ನು ಕಾಣಲು ಸಾಧ್ಯ. ಇದು ನಮ್ಮ ದೇಹ ಮತ್ತು ಕೈಗಳ ನಡುವಿನ ಸಂಬಂಧದ ಹಾಗೆ. ದೇಹಕ್ಕೆ ಕೈ ಅಂಟಿಕೊಂಡಿರುವ ತನಕ ಕೈಗಳು ದೇಹದ ಅಗತ್ಯಗಳನ್ನು ಪೂರೈಸುತ್ತವೆ.

ಕೈಯನ್ನು ದೇಹದಿಂದ ಕತ್ತರಿಸಿದಾಗ ಹೀನ ಮಾನವ ಯೋನಿಯಲಿ ಜನಿಸಿದೆನೋ ನಾನು ಅದು ಕೈಯಾಗಿಯೇ ಉಳಿದಿರುತ್ತದೆ. ಆದರೆ ದೇಹಕ್ಕೆ ಕೂಡಿಕೊಂಡ ಕೈಗಿರುವ ಸಾಮರ್ಥ್ಯ ಕತ್ತರಿಸಿದ ಕೈಗಿರುವುದಿಲ್ಲ. ಹಾಗೆಯೇ ನಾವು ಕೂಡ (ದೇವರು ಅಥವಾ ಕೃಷ್ಣನ) ಸಮಷ್ಟಿಯ ಒಂದು ಭಾಗ. ನಾವು ಈ ಸಮಷ್ಟಿಯಿಂದ ದೂರವಾದಾಗ ಅಥವಾ ಬೇರ್ಪಟ್ಟಾಗ ಸಾಮಾಜಿಕ ಅಶಾಂತಿ ಉಂಟಾಗುತ್ತದೆ.

ಮಾನವ ಸಮಾಜದ ವಿವಿಧ ಭಾಗಗಳನ್ನು ಸಮಷ್ಟಿಯ ಜೊತೆ ಸಮನ್ವಯಗೊಳಿಸಲು ವೈದಿಕ ಸಾಹಿತ್ಯ ವರ್ಣಾಶ್ರಮ ಧರ್ಮವನ್ನು ಸೂಚಿಸುತ್ತದೆ. ವರ್ಣಾಶ್ರಮ ಧರ್ಮ ಎನ್ನುವುದು ಒಂದು ವಿಸ್ತಾರವಾದ ಸಾಮಾಜಿಕ ಸಂಸ್ಥೆ. ಇದರ ಮೂಲಕ ಪ್ರತಿಯೊಬ್ಬನೂ ಆಧ್ಯಾತ್ಮಿಕವನ್ನು ಅರ್ಥಮಾಡಿಕೊಳ್ಳುವ ಹಂತಕ್ಕೆ ಏರಬಹುದಾಗಿದೆ.

ಭೌತಿಕ ಅಗತ್ಯಗಳನ್ನು ಈಡೇರಿಸಲು ಸಮಾಜದಲ್ಲಿ ನಾಲ್ಕು ವರ್ಣ ಅಥವಾ ಗುಂಪುಗಳಿವೆ. ಅಪಾರ ಜ್ಞಾನ ಸಂಪಾದಿಸಿದ ಬುದ್ಧಿಜೀವಿಗಳು, ಆಡಳಿತಗಾರರು ಮತ್ತು ಸೇನೆ, ರೈತರು ಹಾಗೂ ವ್ಯಾಪಾರಿಗಳು, ಈ ಮೂರೂ ಗುಂಪುಗಳಿಗೆ ನೆರವಾಗುವ ಸಹಾಯಕರು. “ಅರ್ಹತೆಯ ಮೇಲೆ ಈ ಗುಂಪನ್ನು ಮಾಡಲಾಗಿದೆಯೇ ವಿನಾ ಹುಟ್ಟಿನಿಂದಲೇ ಇದು ಬರುವುದಿಲ್ಲ’ ಎಂದು ಶ್ರೀಲ ಪ್ರಭುಪಾದರು ಹೇಳುತ್ತಾರೆ.

ಬುದ್ಧಿಜೀವಿಗಳು, ವಿದ್ವಾಂಸರು, ಉಪನ್ಯಾಸಕರು ಮೊದಲನೆಯ ಗುಂಪಿನಲ್ಲಿ ಬರುತ್ತಾರೆ. ಇವರನ್ನು ಬ್ರಾಹ್ಮಣರು ಎಂದು ಕರೆಯಲಾಗುತ್ತದೆ. ಉಳಿದ ಮೂರು ಗುಂಪುಗಳಿಗೆ ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಎಲ್ಲ ರೀತಿಯ ತಿಳಿವಳಿಕೆ ನೀಡುವುದು ಇವರ ಕೆಲಸ. ಬ್ರಾಹ್ಮಣರು ಸಮಾಜದ ಮೆದುಳಿದ್ದ ಹಾಗೆ.

ಭಗವದ್ಗೀತೆಯಲ್ಲಿ (3.21) ಶ್ರೀಕೃಷ್ಣ ಹೇಳುವ ಹಾಗೆ ‘ಮಹಾನ್ ವ್ಯಕ್ತಿ ಯಾವ ರೀತಿ ನಡೆದುಕೊಳ್ಳುತ್ತಾನೋ ಹಾಗೆಯೇ ಸಾಮಾನ್ಯ ವ್ಯಕ್ತಿಯೂ ಆ ಮಹಾನ್ ಪುರುಷನ ಹೆಜ್ಜೆಗುರುತನ್ನು ಅನುಸರಿಸುತ್ತಾನೆ.’ ಅವನು ಯಾವ ಮಟ್ಟದಲ್ಲಿ ಸಮಾಜಕ್ಕೆ ಕೊಡುಗೆ ನೀಡುತ್ತಾನೋ ಇಡೀ ಜಗತ್ತು ಅದನ್ನು ಅನುಸರಿಸುತ್ತದೆ.

ಬ್ರಾಹ್ಮಣನಲ್ಲಿ ಹುಟ್ಟಿಕೊಳ್ಳುವ ಭ್ರಷ್ಟಾಚಾರ ನೈಜವಾಗಿ ಇಡೀ ಸಮಾಜಕ್ಕೂ ವ್ಯಾಪಿಸುತ್ತದೆ. ಇದನ್ನು ಸರಿಪಡಿಸುವುದಕ್ಕಾಗಿಯೇ ವರ್ಣಾಶ್ರಮ ಧರ್ಮದಲ್ಲಿ ಬ್ರಾಹ್ಮಣ ಹೇಗೆ ಬದುಕಬೇಕು ಎಂದು ತಿಳಿಸಲಾಗಿದೆ. ಬ್ರಾಹ್ಮಣನು : ಸಂಬಳವನ್ನೂ ತೆಗೆದುಕೊಳ್ಳದೆ ಸರಳವಾದ ಜೀವನ ನಡೆಸಬೇಕು. ಉಳಿದ ಮೂರು ಗುಂಪುಗಳು ಬ್ರಾಹ್ಮಣನ ಬದುಕಿಗೆ ಅಗತ್ಯವಾಗಿ ಬೇಕಾದುದನ್ನು ಉಚಿತವಾಗಿ ಪೂರೈಕೆ ಮಾಡಬೇಕು.

ಹೀಗೆ ಬ್ರಾಹ್ಮಣನು ಐಹಿಕ ಬದುಕಿನಿಂದ ಮುಕ್ತನಾಗಿ ಆಧ್ಯಾತ್ಮಿಕ ಹಾಗೂ ವೈದಿಕ ಸಾಹಿತ್ಯದ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು. ಸಮಾಜವನ್ನು ಯಾವ ರೀತಿ ವ್ಯವಸ್ಥಿತಗೊಳಿಸಬೇಕು, ಸಮಾಜದ ಒಳಿತಿಗೆ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎನ್ನುವುದರ ಜೊತೆಗೆ ಪ್ರತಿಯೊಬ್ಬರನ್ನೂ ಆಧ್ಯಾತ್ಮಿಕ ಪ್ರಜ್ಞೆ, ಕೃಷ್ಣಪ್ರಜ್ಞೆಯ ಕಡೆಗೆ ಕೊಂಡೊಯ್ಯುವ ಕೆಲಸ ಮಾಡಬೇಕು. ಬ್ರಾಹ್ಮಣನು ಈ ಜ್ಞಾನವನ್ನು ಜನಸಾಮಾನ್ಯರಿಗೆ, ಆಡಳಿತಗಾರರಿಗೆ ಧನಾಪೇಕ್ಷೆ ಇಲ್ಲದೆ ತಿಳಿಸಿ ಹೇಳುವ ಕೆಲಸ ಮಾಡಬೇಕು.

ಬ್ರಾಹ್ಮಣನಾದವನು ಹೇಗೆ ನಡೆದುಕೊಳ್ಳಬೇಕು ಎಂದು ಶ್ರೀಕೃಷ್ಣ ಭಗವದ್ಗೀತೆಯಲ್ಲಿ(18.42) ಹೀಗೆ ಹೇಳುತ್ತಾನೆ. “ಬ್ರಾಹ್ಮಣನಾದವನು ಶಾಂತಿ, ಆತ್ಮಸಂಯಮ, ತಪಸ್ಸು, ಪರಿಶುದ್ಧತೆ, ಸಹಿಷ್ಣುತೆ, ಪ್ರಾಮಾಣಿಕತೆ, ಪ್ರಜ್ಞೆ, ತಿಳಿವಳಿಕೆ ಹಾಗೂ ಧಾರ್ಮಿಕತೆ – ಈ ಗುಣಗಳನ್ನು ಹೊಂದಿ ಕಾರ್ಯ ನಿರ್ವಹಿಸಬೇಕು.’

ಬ್ರಾಹ್ಮಣನಲ್ಲಿ ವೈಯಕ್ತಿಕ ಲಾಭದಲ್ಲಿ ಆಸಕ್ತಿ ಇಲ್ಲದಿರುವಿಕೆ ಮತ್ತು ಸಚ್ಚಾರಿತ್ರ್ಯ. ಉಳಿದ ವರ್ಣದವರಿಗೆ ಬ್ರಾಹ್ಮಣನ ಬಗ್ಗೆ ಗೌರವ ಹಾಗೂ ಅವನಂತೆ ನಡೆದುಕೊಳ್ಳುವ ಮನೋಭಾವ ಬರುತ್ತದೆ. ಈ ಪರಸ್ಪರ ನಂಬಿಕೆಯಿಂದಾಗಿ ವೈದಿಕ ಸಮಾಜದಲ್ಲಿ ವರ್ಗ ಶೋಷಣೆ ಎನ್ನುವುದು ಇರಲಿಲ್ಲ. ಆದರೆ ಇಂದಿನ ಆಧುನಿಕ ಯುಗದಲ್ಲಿಯೂ ಶೋಷಣೆಯ ವಿರುದ್ಧ ಹೋರಾಟ ನಡೆಯುತ್ತಲೇ ಇದೆ.

‘ನಾಯಕತ್ವ, ಶಕ್ತಿ, ಖಚಿತತೆ, ಯುದ್ಧದಲ್ಲಿ ಧೈರ್ಯ, ಉದಾರತೆ ನಾಯಕತ್ವ ಗುಣ, ಸಂಪತ್ತಿನ ಕ್ರೋಡೀಕರಣ ಇವು ಕ್ಷತ್ರಿಯರಲ್ಲಿ ಇರಬೇಕಾದ ಗುಣ.’ (ಭಗವದ್ಗೀತೆ 18.43). ಕ್ಷತ್ರಿಯರು ಯೋಧರು ಹಾಗೂ ಆಡಳಿತಗಾರರು. ಬ್ರಾಹ್ಮಣ ನೀಡುವ ಸಲಹೆಯನ್ನು ಕ್ಷತ್ರಿಯರು ಕಾರ್ಯಗತಗೊಳಿಸುವುದರ ಜೊತೆಗೆ ನೀತಿತತ್ತ್ವಗಳನ್ನು ಜಾರಿಗೊಳಿಸಬೇಕು.

ಈ ಕಾರ್ಯವನ್ನು ನಿರ್ವಹಿಸುತ್ತಾ ಭೂಮಿಯ ಮೇಲೆ ಜೀವಿಸುತ್ತಿರುವ ಎಲ್ಲ ತರಹದ ಜೀವಿಗಳಿಗೆ (ಪ್ರಾಣಿ, ಗಿಡ ಮರಗಳನ್ನು ಒಳಗೊಂಡಂತೆ ಯಾವುದೇ ರೀತಿಯ ಅಪಾಯ ತಟ್ಟದಂತೆ ರಕ್ಷಣೆ ಒದಗಿಸಬೇಕು. ಅಲ್ಲಿಗೆ ಕ್ಷತ್ರಿಯರು ಸಮಾಜದ ತೋಳು.

ವೈದಿಕ ಆಡಳಿತದ ಪ್ರಧಾನ ಕಾರ್ಯಾಧಿಕಾರಿಯನ್ನು ರಾಜರ್ಷಿ ಎಂದು ಕರೆಯುತ್ತಿದ್ದರು. ರಾಜ ಎಂದು ಕರೆಯುತ್ತಿದ್ದರು. ರಾಜ ಎಂದರೆ ‘ರಾಜಕೀಯ ಮುಖ್ಯಸ್ಥ ಮತ್ತು ಋಷಿ ಎಂದರೆ ‘ಸಂನ್ಯಾಸಿ’. ಆಡಳಿತ ಸೂತ್ರಗಳ ಜ್ಞಾನದ ಜೊತೆಗೆ ರಾಜರ್ಷಿಯು ಆಧ್ಯಾತ್ಮಿಕ ವಿಷಯಗಳನ್ನು ತಿಳಿದವನಾಗಿರಬೇಕು.

ಒಬ್ಬ ಯೋಗ್ಯ ನಾಗರಿಕ ಹೇಗಿರಬೇಕು ಎನ್ನುವುದಕ್ಕೆ ಅವನೇ ಸ್ಪಷ್ಟ ನಿದರ್ಶನ. ನಿಸ್ವಾರ್ಥಿಯಾಗಿ ಎಲ್ಲರೊಂದಿಗೆ ಸಹಕಾರದಿಂದ ಬದುಕುವುದಕ್ಕೆ ರಾಜರ್ಷಿ ಉಳಿದವರಿಗೆ ಪ್ರೇರಣೆ ನೀಡುತ್ತಿದ್ದ. ಆರೋಗ್ಯವಂತ ಸಮಾಜ ಜಡತೆಯನ್ನು ತ್ಯಜಿಸುತ್ತದೆ. ರಾಜರ್ಷಿಯು ಪ್ರತಿಯೊಬ್ಬ ನಾಗರಿಕನನ್ನು ನಾಲ್ಕೂ ಗುಂಪುಗಳಲ್ಲಿ ಒಂದರಲ್ಲಾದರೂ ತೊಡಗಿಸುತ್ತಿದ್ದ.

“ಉಳುಮೆ, ಪಶುಸಂಗೋಪನೆ ಮತ್ತು ವ್ಯಾಪಾರ ವೈಶ್ಯರ ಗುಣ’ (ಭಗವದ್ಗೀತೆ 18.44) ವೈಶ್ಯರದು ಉತ್ಪಾದಕರ ವಲಯ. ಕೃಷಿ, ಹೈನುಗಾರಿಕೆ, ವ್ಯಾಪಾರ ಮೊದಲಾದವುಗಳಿಂದ ಸಮಾಜಕ್ಕೆ ಆರ್ಥಿಕ ಮೂಲವನ್ನು ಕಲ್ಪಿಸುವುದು ಇವರ ಕರ್ತವ್ಯ. ಜೀವನ ನಿರ್ವಹಣೆಗೆ ಅಗತ್ಯವಾದ ಉತ್ಪನ್ನಗಳ ತಯಾರಿಕೆಯಲ್ಲಿ ವೈಶ್ಯರು ತೊಡಗುವುದರಿಂದ ಅವರು ಸಮಾಜದ ‘ಹೊಟ್ಟೆ’ಯ ಹಾಗೆ.

ಉದ್ಯಮದಲ್ಲಿ ಉತ್ಪಾದನೆ ಹಾಗೂ ವ್ಯಾಪಾರ ಎರಡೂ ಸೇರಿಕೊಂಡಿರುತ್ತದೆ. ತಾಂತ್ರಿಕ ಪ್ರಗತಿಯನ್ನು ಉಳಿಸಿಕೊಂಡು ಕೈಗಾರೀಕರಣವನ್ನು ಗಮನಾರ್ಹವಾಗಿ ಕಡಿತಗೊಳಿಸುವ ಅಗತ್ಯವಿದೆ. ಯಾಂತ್ರೀಕೃತ ಕೈಗಾರಿಕೆ ನಿರುದ್ಯೋಗ, ಮಾಲಿನ್ಯ ಹಾಗೂ ಅಹಿತವಾದ ಕೆಲಸ, ಪರಿಸರದ ಬದುಕಿಗೆ ದಾರಿ ಮಾಡಿಕೊಡುತ್ತದೆ.

ಯಾಂತ್ರೀಕರಣದ ಮೂಲ ಸ್ವರೂಪದ ಸಮಸ್ಯೆಗಳನ್ನು ಶ್ರೀಲ ಪ್ರಭುಪಾದರು ಹೀಗೆ ವಿವರಿಸುತ್ತಾರೆ : ನೂರು ಜನ ಮಾಡುವ ಕೆಲಸವನ್ನು ಒಂದು ಯಂತ್ರ ಮಾಡಿದಲ್ಲಿ ಅದರಿಂದ ನೂರು ಮಂದಿ ನಿರುದ್ಯೋಗಿಗಳಾಗುತ್ತಾರೆ. ಒಬ್ಬ ಟೆಕ್ನೀಶಿಯನ್‌ ಎಲ್ಲರ ಸಂಬಳವನ್ನು ಪಡೆದುಕೊಳ್ಳುತ್ತಾನೆ.

ಒಬ್ಬ ಪರಿಣತ ಕಂಪ್ಯೂಟರ್‌ ತಜ್ಞ 30 ಸಾವಿರ ಡಾಲರ್‌ ಸಂಬಳ ಪಡೆಯುತ್ತಾನೆ. ಉಳಿದವರು ನಿರುದ್ಯೋಗಿಗಳಾಗುತ್ತಾರೆ. ಬಹಳಷ್ಟು ಜನ ಇದನ್ನೇ ನಾಗರಿಕತೆಯ ಬೆಳವಣಿಗೆ ಎಂದು ತಿಳಿಯುತ್ತಾರೆ. ಇನ್ನೊಬ್ಬರನ್ನು ಶೋಷಿಸಿ ಸಂತಸವನ್ನು ಪಡೆಯುವುದೇ ನಾಗರಿಕತೆಯ ಬೆಳವಣಿಗೆಯೇ? ಪ್ರತಿಯೊಬ್ಬರೂ ಕೂಡ ಸುಖ, ಸಂತೋಷದಿಂದ ಇರಬೇಕು. ವೈದಿಕ ನಾಗರಿಕತೆ ಅದನ್ನು ಬಯಸುತ್ತದೆ.

ಆರ್ಥಿಕ ವಿಕೇಂದ್ರಿಕರಣದ ಮೂಲಕ ಗೃಹ ಕೈಗಾರಿಕೆ ಮತ್ತು ಕರಕುಶಲ ಕಲೆಗಳಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಕೃಷ್ಣಪ್ರಜ್ಞೆ ಸಂಸ್ಥೆ ಪೂರ್ಣ ಉದ್ಯೋಗ ಭರವಸೆ ನೀಡುತ್ತದೆ. ಪರಿಸರಕ್ಕೆ ಹಾನಿಯಾಗದಂತೆ ಜನಸಾಮಾನ್ಯರು ಐಹಿಕವಾದ ಸರಳ ಜೀವನವನ್ನು ನಡೆಸುವುದಕ್ಕೆ ಅನುಕೂಲವಾಗುವಂತೆ  ಆಧ್ಯಾತ್ಮಿಕ ಸಮಾಜ ಆಧುನಿಕ ಅಭಿವೃದ್ಧಿಗಳಾದ ವಿದ್ಯುತ್‌, ಮುದ್ರಣಗಳನ್ನು ಬಳಸಿಕೊಳ್ಳುತ್ತದೆ.

“ಶ್ರೂದರು, ಕಾರ್ಮಿಕರು ಮತ್ತು ಉಳಿದವರ ಸೇವೆ ಮಾಡುವವರು” (ಭಗವದ್ಗೀತೆ 18.44). ಉಳಿದ ಮೂರು ವರ್ಣೀಯರು ಅವರ ಕರ್ತವ್ಯವನ್ನು ನಿರ್ವಹಿಸುವುದಕ್ಕೆ ನೆರವಾಗುವ ಹೊಣೆ ಹೊತ್ತವರು ಶೂದ್ರರು. ಅಲ್ಲಿಗೆ ಶೂದ್ರರು ಸಮಾಜದ ಕಾಲುಗಳು.

ಸಮಾಜದ ಮುಖಂಡರು ಆ‍ಧ್ಯಾತ್ಮಿಕ ಪ್ರಜ್ಞೆಯನ್ನು ಹೊಂದಿದವರಾಗಿದ್ದು ಸಾಮಾಜಿಕ ಕಾರ್ಯಗಳನ್ನು ನಿರ್ವಹಿಸಲು ಹಾಗೂ ಅದಕ್ಕೆ ಅಗತ್ಯವಾದ ಸಂಪತ್ತನ್ನು ಸಾಮಾಜಿಕ ಒಳಿತಿಗೆ ವಿನಿಯೋಗಿಸುತ್ತಾರೆ. ಇದರಿಂದಾಗಿ ಶೂದ್ರರೂ ಕೂಡ ಸಂತೃಪ್ತ ಜೀವನ ನಡೆಸುವಂತಾಗುತ್ತದೆ. ಆಗ ಮುಷ್ಕರ, ದೊಂಬಿ, ಕ್ರಾಂತಿ ಮೊದಲಾದವುಗಳಿಗೆ ಆಸ್ಪದ ಇರುವುದಿಲ್ಲ.

ಮಾನವನ ದೇಹದಂತೆಯೇ ಸಮಾಜದ ಚಟುವಟಿಕೆ ಸಮರ್ಪಕವಾಗಿ ನಡೆಯಲು ಮಿದುಳು, ಬಾಹು, ಹೊಟ್ಟೆ ಹಾಗೂ ಕಾಲುಗಳು ಅಗತ್ಯವಾಗಿ ಬೇಕು. ಯಾವುದೇ ಅಂಗವೂ ಕೂಡ ಉಳಿದ ಅಂಗಗಳ ಮೇಲೆ ಪ್ರಭುತ್ವ ಸಾಧಿಸಬಾರದು. ಅದಕ್ಕೆ ಬದಲಾಗಿ ಎಲ್ಲ ಅಂಗಗಳೂ ಸಾಮರಸ್ಯದಿಂದ ಒಟ್ಟಾಗಿ ಶ್ರಮಿಸಿದಲ್ಲಿ ದೇಹದ (ಸಮಾಜದ) ಆರೋಗ್ಯವೂ ಚೆನ್ನಾಗಿರುತ್ತದೆ.

ಮಾನವ ಸಮಾಜದಲ್ಲಿ ಸಹಕಾರವನ್ನು ಸಾಧಿಸಲು ಪ್ರಮುಖವಾದ ಆಯ್ಕೆಯಿದೆ. ಬಂದೂಕು ಅಥವಾ ನಾಲಗೆ, ನಿರಂಕುಶ ಪ್ರಭು ಹಿಂಸೆಯ ಮೂಲಕ ಸಾಮಾಜಿಕ ಸಹಕಾರವನ್ನು ಜನರ ಮೇಲೆ ಹೇರಬಹುದು. ಈ ಕುರಿತು ಡಾ.ಸಾರೊಕಿನ್‌ ಹೀಗೆ ಹೇಳುತ್ತಾರೆ: ಇಂತಹ ಬಲವಂತದ ಹೇರಿಕೆ ಅಲ್ಪಕಾಲ ಉಳಿಯುವಂತಹದ್ದು.

ಮುಂದೆ ಇದು ಇನ್ನಷ್ಟು ಹಿಂಸೆಗೆ ದಾರಿ ಮಾಡಿಕೊಡುತ್ತದೆ. ಮತ್ತೊಂದೆಡೆ ನಾಲಗೆ (ಅಥವಾ ಆಧ್ಯಾತ್ಮಿಕ ಶಿಕ್ಷಣ) ಸಾಮಾಜಿಕ ಸಹಕಾರವನ್ನು ಪ್ರೀತಿಸುವಂತಹ ಜ್ಞಾನೋದಯವನ್ನು ನೀಡುತ್ತದೆ. ಇಸ್ಕಾನ್‌ ಸಮುದಾಯಗಳ ಮುಖ್ಯ ಲಕ್ಷಣ ಇದೇ ಆಗಿದೆ. ಕೃಷ್ಣಪ್ರಜ್ಞೆ ಆಂದೋಲನದ ಸಂದೇಶವೇನೆಂದರೆ, ನಾವೆಲ್ಲರೂ ಪರಿಪೂರ್ಣನ (ಕೃಷ್ಣ ಅಥವಾ ಭಗವಂತ) ಒಂದು ಭಾಗವಷ್ಟೇ.

ಮಾನವ ಹೃದಯದಲ್ಲಿ ಉನ್ನತವಾದ ಪರಿರ್ವತೆಯನ್ನು ಅದು ಪ್ರಚೋದಿಸುತ್ತದೆ. ಮನುಷ್ಯನಲ್ಲಿ ಅಡಗಿರುವ ಐಹಿಕ ಭೋಗಲಾಲಸೆಯನ್ನು ಕರಗಿಸಿ ಪರಿಶುದ್ಧವಾದ ಸಮಾಜದ ಕ್ರಮಕ್ಕೆ ಅಡ್ಡಿಯಾಗಿರುವ ಕ್ಷೋಭೆಯನ್ನು ತೊಡೆದುಹಾಕುವಲ್ಲಿ ಕೃಷ್ಣಪ್ರಜ್ಞೆ ನೆರವಾಗುತ್ತದೆ.

ನಾವು ನೋಡಿದಂತೆ, ವರ್ಣಾಶ್ರಮ ಪದ್ಧತಿಯಲ್ಲಿ “ವರ್ಣ” ಭೌತಿಕ ಸಮಾಜದ ಒಳಿತಿಗಾಗಿ ಇದೆ. ಹಾಗೆಯೇ ವರ್ಣಾಶ್ರಮ ಪದ್ಧತಿಯ “ಆಶ್ರಮ” ಸಮಾಜದ ಆಧ್ಯಾತ್ಮಿಕ ಒಳಿತಿಗಾಗಿ ಇದೆ. “ಆಶ್ರಮ” ಎಂದರೆ ಜೀವನದ ಆಧ್ಯಾತ್ಮಿಕ ಕ್ರಮ. ಹಾಗೆಯೇ ವರ್ಣಾಶ್ರಮ ಪದ್ಧತಿಯಲ್ಲಿ ನಾಲ್ಕು ಕ್ರಮಗಳಿವೆ. ವಿದ್ಯಾರ್ಥಿ ಜೀವನ, ಸಾಂಸಾರಿಕ ಬದುಕು, ವಿ‍ಶ್ರಾಂತ ಜೀವನ ಹಾಗೂ ಆಧ್ಯಾತ್ಮಿಕ ಬದುಕು. ಇಲ್ಲಿ ವಿದ್ಯಾರ್ಥಿ ಜೀವನದ ಕುರಿತು ಹೇಳಲಾಗಿದೆ.

ಪ್ರಾಥಮಿಕವಾಗಿ ವೈದಿಕ ಶಿಕ್ಷಣ ಯುವ ಜನಾಂಗದ ಸಂಪೂರ್ಣ ಸಾಮರ್ಥ್ಯದ ಬೆಳವಣಿಗೆಯನ್ನು ಕೇಂದ್ರಿಕರಿಸುತ್ತದೆ. ಪ್ರಜ್ಞೆ ಮತ್ತು ಮನಸ್ಸಿನ ನಿಗ್ರಹ, ಆಧ್ಯಾತ್ಮಿಕ ತಿಳಿವಳಿಕೆ ಹಾಗೂ ಕೃಷ್ಣ (ಭಗವಂತ) ಪ್ರೇಮವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಕೃಷ್ಣಪ್ರಜ್ಞೆ ಶಾಲೆಯನ್ನು ಗುರುಕುಲ (ಆಧ್ಯಾತ್ಮಿಕ ಗುರುವಿನ ಮನೆ) ಎಂದು ಕರೆಯಲಾಗುತ್ತದೆ.

ಗುರುಕುಲದಲ್ಲಿ ವಿದ್ಯಾರ್ಥಿಗೆ ಸಚ್ಚಾರಿತ್ರ್ಯ ಬೆಳಸಿಕೊಳ್ಳುವುದನ್ನು ಆದ್ಯತೆಯ ಮೇಲೆ ಕಲಿಸುವುದರ ಜೊತೆಗೆ ಔದ್ಯೋಗಿಕ ಕುಶಲತೆಯನ್ನೂ ಹೇಳಿಕೊಡಲಾಗುತ್ತದೆ. ಡಲ್ಲಾಸ್‌ನಲ್ಲಿರುವ ಇಸ್ಕಾನ್‌ ಗುರುಕುಲದಲ್ಲಿ ಶಿಕ್ಷಣ ಪಡೆದು ಉತ್ತರ ಟೆಕ್ಸಾಸ್‌ನ ಮುಂದುವರಿದ ಶಾಲೆಯ ಆರನೇ ತರಗತಿ ಶಿಕ್ಷಕರಾಗಿರುವ ರ್ಯಾಂಡಿ ಗ್ರಿಬ್ಬಿನ್‌ ಅವರು ಆಧ್ಯಾತ್ಮಿಕ ಶಿಸ್ತು ನೀಡುವ ಪರಿಣಾಮಗಳ ಬಗ್ಗೆ ಹೀಗೆ ಹೇಳುತ್ತಾರೆ.

ಎಂತಹುದೇ ಪರಿಸ್ಥಿತಿಯಲ್ಲಿ ಎಲ್ಲಿ ಬೇಕಾದರೂ ಬದುಕುವಂತಹ ಸಾಮರ್ಥ್ಯವನ್ನು ಗುರುಕುಲದಲ್ಲಿ ಶಿಕ್ಷಣ ಪಡೆದ ಮಕ್ಕಳು ಹೊಂದಿರುತ್ತಾರೆ. ಸಾರ್ವಜನಿಕ ಶಾಲೆಗಳಲ್ಲಿ ಕಲಿತ ಮಕ್ಕಳು ಗುರುಕುಲಕ್ಕೆ ಬಂದಾಗ ಅವರಿಗೆ ವ್ಯತ್ಯಾಸ ತಿಳಿಯುತ್ತದೆ. ಗುರುಕುಲದಲ್ಲಿರುವ ಮಕ್ಕಳು ಅಭ್ಯಾಸದ ಕಡೆ ಗಮನ ಕೊಡುವುದರ ಜೊತೆಗೆ ವಿಶಾಲವಾದ ನೋಟ ಹಾಗೂ ಎಚ್ಚರಿಕೆಯನ್ನು ಹೊಂದಿದವರಾಗಿರುತ್ತಾರೆ.

ಸಾರ್ವಜನಿಕ ಶಾಲೆಗಳಲ್ಲಿ ಕಲಿಯುವ ಮಕ್ಕಳು ತಮ್ಮ ಉಡುಪು, ಹುಡುಗಿಯ/ ಹುಡುಗರನ್ನು ಆಕರ್ಷಿಸುವುದು, ಧೂಮಪಾನ ಇಂತಹ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ. ಪ್ರತಿಯೊಂದು ಶಾಲೆಯ ಆಡಳಿತ ವರ್ಗ ಶಿಸ್ತು ಮತ್ತು ಶ್ರಮ ಕಾಯಕದ ಕಡೆ ಹೆಚ್ಚಿನ ಗಮನ ಹರಿಸಬೇಕು.

ಪ್ರತಿಯೊಂದು ದೇಶವೂ ತಮ್ಮ ಮಕ್ಕಳಿಗೆ ಇದನ್ನು ಕಲಿಸಬೇಕು. ಹೀಗಿರುವಾಗ ಇಸ್ಕಾನ್‌ ಶಾಲೆಗಳು ಕೋಟ್ಯಂತರ ರೂ ಹಣ ಚೆಲ್ಲುವ ಶಿಕ್ಷಣ ಯೋಜನೆಯನ್ನು ಮೀರಿ ಬೆಳೆಯಲು ಹೇಗೆ ಸಾಧ್ಯವಾಯಿತು? ಅದಕ್ಕೆ ಉತ್ತರ ಇಲ್ಲೇ ಇದೆ. ತಂತ್ರಜ್ಞಾನ ಅಥವಾ ಬೃಹತ್‌ ಕಟ್ಟಡಗಳಲ್ಲಿ ಉತ್ತರ ಸಿಗುವುದಿಲ್ಲ. ಹೇಳಿಕೊಡುವ ರೀತಿಯಲ್ಲಿ ಉತ್ತರವಿದೆ.

ಇಸ್ಕಾನ್‌ನ ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಜೊತೆ ಸೇರಿಕೊಂಡು ಅವರಿಗೆ ಕಲಿಸುವ ಆ‍ಧ್ಯಾತ್ಮಿಕ ಶಿಕ್ಷಣವನ್ನು ತಾವೂ ಕಲಿಯುತ್ತಾ ಹೋಗುತ್ತಾರೆ. ಹಾಗಾಗಿ ವಿದ್ಯಾರ್ಥಿಗಳಿಗೆ ಥಿಯರಿಯ ಜೊತೆಗೆ ಪ್ರಾಯೋಗಿಕ ಶಿಕ್ಷಣವೂ ದೊರೆತಂತಾಗುತ್ತದೆ. ಪ್ರೀತಿಯಿಂದ ಬದುಕುವುದು, ಉತ್ಸಾಹಿಗಳಾಗಿರುವುದು, ಸಮರ್ಪಣಾ ಮನೋಭಾವವನ್ನು ಗುರುಕುಲದ ಶಿಕ್ಷಕರು ಹೊಂದಿರುತ್ತಾರೆ.

ಸಂಬಳವಿಲ್ಲದೆಯೂ ಸಂತಸದಿಂದ ಬದುಕುವುದು ಇದರಿಂದ ಸಾಧ್ಯವಾಗುತ್ತದೆ. ಗುರುಕುಲದ ಮೂಲ ತತ್ತ್ವವನ್ನು ಶ್ರೀಲ ಪ್ರಭುಪಾದರು ಹೀಗೆ ವಿವರಿಸುತ್ತಾರೆ:

ಎಲ್ಲ ಕೆಲಸಗಳಿಗೂ ಪ್ರೀತಿಯೇ ಆಧಾರ. ಅತಿಶಿಸ್ತು ಒಳೆಯದಲ್ಲ. ಅದರಿಂದಾಗಿ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಪ್ರೀತಿಯಿಂದ ಹೊರಗುಳಿಯುತ್ತಾರೆ. ಮೂಲ ತತ್ತ್ವಗಳಿಗೆ ಅವರು ವಿರುದ್ಧವಾಗಿ ನಡೆದುಕೊಂಡಾಗ ಇಲ್ಲವೇ ಪಾಲಿಸದಿದ್ದಾಗ ಶಿಸ್ತು ಹಾಗೂ ಶಿಕ್ಷೆ ಎರಡೂ ಅನಿರ್ವಾಯವಾಗುತ್ತದೆ. ಆದರೆ ಅವರು ಪ್ರೀತಿಸುವುದನ್ನು ಬೆಳೆಸಿಕೊಳ್ಳಬೇಕಾಗುತ್ತದೆ.

ಮಹಾನ್‌ ನಾಯಕರು (ಪಶ್ಚಿಮದಲ್ಲಿ ಜೀಸಸ್‌ ಹಾಗೂ ಪೂರ್ವದಲ್ಲಿ ಚೈತನ್ಯ ಮಹಾಪ್ರಭು ಅಂತಹವರು) ಆ‍ಧ್ಯಾತ್ಮಿಕ ಪ್ರೀತಿಯ ಮೂಲಕ ಕೋಟ್ಯಂತರ ಜನರನ್ನು ವ್ಯವಸ್ಥಿತವಾಗಿ ರೂಪಿಸಿದ್ದಾರೆ. ಆ‍ಧ್ಯಾತ್ಮಿಕ ಪ್ರೇಮ ಜನರನ್ನು ಪರಿಣಾಮಕಾರಿಯಾಗಿ ಒಗ್ಗೂಡಿಸುತ್ತದೆ. ಅದಕ್ಕೆ ಮುಖ್ಯ ಕಾರಣ ಆ‍ಧ್ಯಾತ್ಮಿಕ ಜ್ಞಾನ ಜನಸಾಮಾನ್ಯರನ್ನು ಉತ್ತಮ ಪುರುಷರನ್ನಾಗಿಸುತ್ತದೆ, ಆಧ್ಯಾತ್ಮಿಕ ಪ್ರೀತಿ ಭೌತಿಕ ಪ್ರತಿವಸ್ತುವನ್ನು ಹೊಂದಿಲ್ಲ ಎನ್ನುವುದನ್ನು ಇಸ್ಕಾನ್‌ ಶಾಲೆಗಳಲ್ಲಿ ಕಲಿಸಲಾಗುತ್ತದೆ.

ಪಂಥರಹಿತವಾದ ಆಧ್ಯಾತ್ಮಿಕ ಬದುಕಿನಿಂದ (ಕೃಷ್ಣಪ್ರಜ್ಞೆ) ಆಧ್ಯಾತ್ಮಿಕ ಪ್ರೀತಿ ಹುಟ್ಟುತ್ತದೆ. ಇದರ ಜೊತೆಗೆ ಸಾಮಾಜಿಕ ಸಹಕಾರವನ್ನು ಪ್ರಚೋದಿಸುವಂತಹ ವಿಶಿಷ್ಟವಾದ ಸಾಮರ್ಥ್ಯವನ್ನು ಅದು ಹೊಂದಿದೆ.

ಮುಕ್ತಾಯ: ಮಾನವ ಸಮಾಜದ ಐಹಿಕ ಹಾಗೂ ಆಧ್ಯಾತ್ಮಿಕ ಅವಶ್ಯಕತೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಾಮಾಜಿಕ ವ್ಯವಸ್ಥೆಯನ್ನು ವರ್ಣಾಶ್ರಮ ಪದ್ಧತಿ ರೂಪಿಸುತ್ತದೆ. ವರ್ಣಾಶ್ರಮ ಪದ್ಧತಿಯನ್ನು ಹೇಳುವ ವೈದಿಕ ನಿರ್ಣಯವನ್ನು ಆಧುನಿಕ ಜಗತ್ತು ಒಪ್ಪಿಕೊಳ್ಳುತ್ತದೆ.

ಇಲ್ಲದೇ ಹೋದಲ್ಲಿ ತಾರತಮ್ಯ, ಅವ್ಯವಸ್ಥೆ ತಲೆದೋರುತ್ತದೆ. ಮಾನವ ಬದುಕಿನ ಪರಮ ಗುರಿಯಾದ ಆಧ್ಯಾತ್ಮಿಕ ಅರಿವು ಮೂಡಿಸುವಂತಹ ಸಾಮಾಜಿಕ ವಾತಾವರಣವನ್ನು ನಿರ್ಮಿಸುವ ಪ್ರಾಥಮಿಕ ಘಟ್ಟವಾಗಿ ಇಸ್ಕಾನ್‌ ವರ್ಣಾಶ್ರಮವನ್ನು ಪರಿಚಯಿಸುತ್ತಿದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi