ಶ್ರೀಕೃಷ್ಣನಿಗೆ ಸಕಲೈಶ್ವರ್ಯಗಳ ಇದ್ದರೂ, ಬರದ ಬಡತನದಲ್ಲಿ ಸಾಗುತ್ತಿರುತ್ತಾನೆ. ಆದರೆ ಶ್ರೀಕೃಷ್ಣನ ಭಕ್ತರು ಯಾವಾಗಲೂ ಕಡುಬಡತನ ಅನುಭವಿಸುವವರಾಗಿದ್ದು, ಪರಶಿವನ ಭಕ್ತರು ಐಶ್ವರ್ಯ ವಂಶರಾಗಿದ್ದರು. ಈ ವಿಚಿತ್ರ ವಿಷಯವನ್ನು ವಿವರಿಸುವಂತೆ ಪರೀಕ್ಷಿತ್ ಮಹಾರಾಜ ಸುಖದೇವ ಗೋಸ್ವಾಮಿಯವರನ್ನು ಕೇಳಿದಾಗ, ಆ ಋಷಿ ಹೇಳಿದರು, ”ಪರಶಿವ ಪ್ರಕೃತಿಯ ಮೂರು ರೂಪಗಳ ಸಂಕೇತ ಎನ್ನುವಂತಹ ಅಹಂಕಾರದ ಮೂರು ರೂಪಗಳಲ್ಲಿ ತೋರುತ್ತಾನೆ.

ಈ ಅಹಂಕಾರ ರೂಪದಿಂದ ಮೂರು ವಿಧದ ಭೌತಿಕ ಅಂಶಗಳು ಮೊದಲಾಗಿ ಐಹಿಕ ರೀತಿಯ ಬದಲಾವಣೆಗಳು ಹುಟ್ಟಿಕೊಳ್ಳುತ್ತವೆ. ಎಲ್ಲ ಸೇರಿ ಒಟ್ಟು ಹದಿನಾರು ಅಂಶಗಳಾಗುತ್ತವೆ. ಆದರೆ ಪರಶಿವನ ಇಂತಹ ಯಾವುದಾದರೊಂದು ಅಂಶವಿರುವ ರೂಪವನ್ನು ಅವನ ಭಕ್ತನೊಬ್ಬ ಆರಾಧಿಸಿದಾಗ, ಆ ಭಕ್ತನಿಗೆ ಅದಕ್ಕೆ ಸಂಬಂಧಿಸಿದಂತಹ ಐಹಿಕ ಐಶ್ವರ್ಯ ಸುಖಗಳೆಲ್ಲವೂ ದೊರಕುತ್ತವೆ.
ಆದರೆ, ಶ್ರೀ ಹರಿಯು ಐಹಿಕ ವೈಭೋಗಗಳಿಗೆ ಅಪ್ರಾಪಂಚಿಕರಾಗುತ್ತಾರೆ.” ತನ್ನ ಅಶ್ವಮೇಧ ಯಾಗ ಕೊನೆಗೊಂಡ ಸಮಯದಲ್ಲಿ ಯುಧಿಷ್ಠಿರ ರಾಜ ಇಂತಹದೇ ಪ್ರಶ್ನೆಯನ್ನು ಶ್ರೀಕೃಷ್ಣನಿಗೆ ಕೇಳುವಾಗ, ಶ್ರೀಕೃಷ್ಣ ಹೀಗೆ ಉತ್ತರಿಸಿದ: “ನನಗೆ ಯಾರಾದರೂ ವಿಶೇಷ ಅನುಕಂಪ ಹುಟ್ಟಿದರೆ, ಹಂತಹಂತವಾಗಿ ಅವನ ಐಶ್ವರ್ಯವನ್ನು ಕಿತ್ತುಕೊಳ್ಳುತ್ತೇನೆ.
ಆಮೇಲೆ ಕಡುಬಡತನದಲ್ಲಿರುವ ಮನುಷ್ಯನ ಹೆಂಡತಿ, ಮಕ್ಕಳು ಮತ್ತು ಬಂಧು ಬಾಂಧವರೆಲ್ಲರೂ ಅವನನ್ನು ಬಿಟ್ಟುಹೋಗಿಬಿಡುತ್ತಾರೆ. ಆಗವನು ನನ್ನ ಭಕ್ತರನ್ನು ಆಶ್ರಯಿಸುತ್ತಾನೆ. ಆಗವನು ಐಹಿಕ ಜೀವನದಿಂದ ಬಿಡುಗಡೆ ಹೊಂದುತ್ತಾನೆ ಮತ್ತು ಮೋಕ್ಷವನ್ನು ಹೊಂದುತ್ತಾನೆ. ವೈಕುಂಠ ಸೇರುತ್ತಾನೆ.”
ಶ್ರೀಬ್ರಹ್ಮದೇವರು, ಶ್ರೀವಿಷ್ಣು ಮತ್ತು ಶ್ರೀ ಶಿವದೇವರು – ಈ ತ್ರಿಮೂರ್ತಿಗಳಲ್ಲಿ ಪ್ರತಿಯೊಬ್ಬರೂ ತಾವೇ ವರಗಳನ್ನು ಕೊಡಬಲ್ಲರು ಅಥವಾ ತಡೆಹಿಡಿಯಬಲ್ಲರು, ಆದರೆ ಬ್ರಹ್ಮದೇವರು ಮತ್ತು ಶಿವದೇವರು ಬೇಗ ತೃಪ್ತಿಗೊಂಡೋ ಅಥವಾ ಬೇಗ ಕೋಪಗೊಂಡೋ ಇದ್ದರೆ, ಶ್ರೀ ವಿಷ್ಣು ಮಾತ್ರ ಹಾಗಿಲ್ಲ.
ಒಮ್ಮೆ ವಕ್ರಾಸುರ ಎನ್ನುವ ರಾಕ್ಷಸ, ಪರಶಿವನನ್ನು ಮೆಚ್ಚಿಸುವುದಕ್ಕಾಗಿ, ಪುಣ್ಯಕ್ಷೇತ್ರವಾದ ಕೇದಾರನಾಥಕ್ಕೆ ಹೋಗಿ, ಸ್ವಂತ ದೇಹದ ಚೂರುಗಳನ್ನೇ ಸಮರ್ಪಣೆಗಳಾಗಿ ಅಗ್ನಿಕುಂಡಕ್ಕೆ ಹಾಕುತ್ತ ಪರಶಿವನನ್ನು ಪೂಜಿಸತೊಡಗಿದ. ಆದರೆ, ಪರಶಿವ ಪ್ರತ್ಯಕ್ಷನಾಗದಿದ್ದಾಗ, ವಕ್ರಾಸುರ ತನ್ನ ತಲೆಯನ್ನೇ ಕತ್ತರಿಸಿಡಲು ನಿರ್ಧರಿಸಿದ.

ಇನ್ನೇನು ಕತ್ತು ಕತ್ತರಿಸಿಕೊಳ್ಳಬೇಕು ಎಂದು ಪ್ರಾರಂಭಿಸಿದಾಗ ಪರಶಿವ ಅಗ್ನಿಕುಂಡದಲ್ಲಿ ಕಾಣಿಸಿಕೊಂಡು ಅವನನ್ನು ತಡೆದ. ಏನು ಬೇಕಾದರೂ ವರ ಕೊಡುತ್ತೇನೆ ಕೇಳು ಎಂದು ಹೇಳಿದ. ವಕ್ರ ಹೇಳಿದ : “”ನಾನು ಯಾರ ತಲೆಯ ಮೇಲೆ ಕೈಯಿಡುತ್ತೇನೋ ಅವನಿಗೆ ಅಲ್ಲೇ ಮರಣವಾಗಬೇಕು.”
ಪರಶಿವ ವರವನ್ನು ಕೊಡಲೇಬೇಕಾಯಿತು – ‘ತಥಾಸ್ತು’ ಎಂದ. ಆ ಕೂಡಲೇ ಆ ಕೇಡಿಗ ರಾಕ್ಷಸ ಈ ವರ ನಿಜವೋ ಸುಳ್ಳೋ ಎಂದು ಪರೀಕ್ಷಿಸಲು ಪರಶಿವನ ತಲೆಯ ಮೇಲೆಯೇ ಕೈಯಿಡಲು ಬಂದ. ಭಯಗೊಂಡ ಪರಶಿವ ಜೀವಭಯದಿಂದ ಶ್ರೀವಿಷ್ಣು ನೆಲೆಸಿರುವ ಶ್ವೇತದ್ವೀಪಕ್ಕೆ ಓಡಿಬಂದ.
ಆಗ ಶ್ರೀಹರಿ ಒಬ್ಬ ವಿದ್ಯಾರ್ಥಿಯ ವೇಷವನ್ನು ಧರಿಸಿ ವಕ್ರಾಸುರನ ಹತ್ತಿರ ಬಂದ. ಸಿಹಿದನಿಯಲ್ಲಿ ಆ ರಾಕ್ಷಸನಿಗೆ ಹೇಳಿದ: “ನನ್ನ ಪ್ರೀತಿಯ ವನಕಾ, ಸ್ವಲ್ಪ ಹೊತ್ತು ಸುಧಾರಿಸಿಕೊ, ಏನು ಮಾಡಬೇಕೆಂದಿದ್ದೀಯ ಹೇಳು.” ಈ ಕಿರಿಯನ ಸಿಹಿಯಾದ ಮಾತುಗಳನ್ನು ಕೇಳಿ ಸೋತು ಹೋದ ವಕ್ರಾಸುರ ನಡೆದದ್ದೆಲ್ಲವನ್ನೂ ಹೇಳಿದ.
ಆಗ ಶ್ರೀವಿಷ್ಣು ಹೇಳಿದ – “ಪ್ರಜಾಪತಿ ದಕ್ಷ ಶಾಪ ಕೊಟ್ಟಾಗಿನಿಂದ ಶಿವನು ಒಂದು ಮಾಂಸಾಹಾರಿ ಗುಮ್ಮನಂತಾಗಿ ಹೋಗಿದ್ದಾನೆ. ಆದ್ದರಿಂದ ಅವನ ಮಾತನ್ನು ನೀನು ನಂಬಬಾರದು. ನೀನೇ ಸ್ವತಃ ಪರೀಕ್ಷಿಸಿಕೊಳ್ಳಬೇಕು. ನಿನ್ನ ತಲೆಯ ಮೇಲೆಯೇ ನಿನ್ನ ಕೈಯನ್ನಿರಿಸಿಕೊಂಡು ನಿಜವೋ- ಸುಳ್ಳೋ ತಿಳಿದುಕೊ.”
ಈ ಮಾತುಗಳಿಂದ ಗಲಿಬಿಲಿಗೊಂಡ ಆ ಮೂಢ ರಾಕ್ಷಸ ತನ್ನ ತಲೆಯನ್ನು ತಾನೇ ಮುಟ್ಟಿಕೊಂಡ. ಕೂಡಲೇ ಅದು ಚೂರುಚೂರಾಗಿ ಒಡೆದುಹೋಗಿ ನೆಲದ ಮೇಲೆ ಚೆಲ್ಲಾಡಿತು. ಕೂಡಲೇ ಆಕಾಶದಲ್ಲಿ “ವಿಜಯ!”, “ಪ್ರಣಾಮಗಳು!” ಮತ್ತು “ಚೆನ್ನಾಗಿ ಮಾಡಿದೆ” ಎನ್ನುವ ಮಾತುಗಳು ಕೇಳಿ ಬಂದವು ಮತ್ತು ಉಪದೇವತೆಗಳು, ಋಷಿಗಳು ಮತ್ತು ನಕ್ಷತ್ರ ದೇವತೆಗಳು, ಗಂಧರ್ವರು ಎಂದು ಎಲ್ಲರೂ ಪರಮ ಪುರುಷನನ್ನು ಅಭಿನಂದಿಸಿ ಹೊಗಳುತ್ತ ಮೇಲಿನಿಂದ ಹೂವುಗಳನ್ನು ಸುರಿಸತೊಡಗಿದರು.
ಹೀಗೆ, ಎಲ್ಲ ಐಹಿಕಗಳಿಗೂ ಅಪ್ರಾಪಂಚಿಕನಾದ ದೇವೋತ್ತಮ ಪರಮ ಪುರುಷ ನಾರಾಯಣನ ದಯದಿಂದ, ರಾಕ್ಷಸನೊಬ್ಬನಿಂದ ಪರಶಿವನ ಕೊನೆಯಾಗುವುದು ತಪ್ಪಿತು. ನಂಬಿಕೆ ಮತ್ತು ಭಕ್ತಿಯಿಂದ ಈ ಕಥೆಯನ್ನು ಕೇಳುವ ಯಾರಾದರೂ, ಐಹಿಕ ಸಂಕೋಲೆಗಳಿಂದ ಮತ್ತು ತಮ್ಮ ಶತ್ರುಗಳ ಹಿಡಿತದಿಂದ ಖಂಡಿತ ಬಿಡುಗಡೆ ಹೊಂದುತ್ತಾರೆ.






Leave a Reply