ಶ್ರೀ ಗದಾಧರ ಪಂಡಿತ

ಕಲ್ಕತ್ತೆಯಿಂದ ಸರಿ-ಸುಮಾರು ಎಂಟರಿಂದ ಹತ್ತು ಮೈಲಿದೂರದ, ಗಂಗಾ ತೀರದಲ್ಲಿ ಎಂದಿಯಾದಹ ಗ್ರಾಮ ಎಂಬ ಪರಿಚಿತವಾದ ಹಳಿಯೊಂದಿದೆ. ಶ್ರೀಲ ಗದಾಧರ ಪಂಡಿತ (ಗದಾಧರದಾಸ)ರು ಈ ಹಳ್ಳಿಯ ನಿವಾಸಿಗಳೆಂದು ಚಿರಪರಿಚಿತ.

ಅವರು ಶ್ರೀ ಚೈತನ್ಯ ಮಹಾಪ್ರಭುಗಳ ನಿಕಟ ಭಕ್ತರಾಗಿದ್ದರು. ಶ್ರೀಲ ಗದಾಧರ ಪಂಡಿತ ಗೋಸ್ವಾಮಿಗಳು ಶ್ರೀಮತಿ ರಾಧಾರಾಣಿಯ ಸ್ವಯಂ ಅವತಾರವಾಗಿದ್ದರು. ಗೌರ-ಗಣೋದ್ದೇಶ-ದೀಪಿಕಾ (154)ದಲ್ಲಿ ಅವರನ್ನು ಶ್ರೀಮತಿ ರಾಧಾರಾಣಿಯ ಶಕ್ತಿಯ ವಿಸ್ತಾರವೆಂದು ವರ್ಣಿಸಲಾಗಿದೆ.

ಅವರು ಶ್ರೀಲ ಗೌರಹರಿ (ಚೈತನ್ಯ ಮಹಾಪ್ರಭು) ಮತ್ತು ನಿತ್ಯಾನಂದ ಪ್ರಭುಗಳು ಬಂಗಾಳದಲ್ಲಿ ಸಂಕೀರ್ತನ ಆಂದೋಳನವನ್ನು ಉಪದೇಶಿಸಲು ಉದ್ಯುಕ್ತರಾದಾಗ ಶ್ರೀಗದಾಧರ ದಾಸರು ಪ್ರಭು ನಿತ್ಯಾನಂದರ ಪ್ರಮುಖ ಸಹವರ್ತಿಗಳಲ್ಲಿ ಒಬ್ಬರಾಗಿದ್ದರು.

ಅವರು ಪ್ರತಿಯೊಬ್ಬರನ್ನು ಹರೇಕೃಷ್ಣ ಮಹಾಮಂತ್ರವನ್ನು ಪಠಿಸಲು ಕೋರುವ ಸಂಕೀರ್ತನ ಆಂದೋಲನವನ್ನು ಉಪದೇಶಿಸಿದರು. ಶ್ರೀಲ ಗದಾಧರ ದಾಸರ ಸರಳ ಉಪದೇಶವನ್ನು ಸಮಾಜದ ಯಾರೇ ಆಗಲಿ ಯಾವುದೇ ಸ್ಥಾನದಲ್ಲಿರಲಿ ಪ್ರತಿಯೊಬ್ಬರು ಅನುಸರಿಬಹುದು.

ಒಬ್ಬ ವ್ಯಕ್ತಿ ಪ್ರಾಮಾಣಿಕನಾಗಿರಬೇಕು ಮತ್ತು ನಿತ್ಯಾನಂದ ಪ್ರಭುಗಳ ಗಂಭೀರ ಸೇವಕನಾಗಿರಬೇಕು ಮತ್ತು ಈ ಪಂಥವನ್ನು ಮನೆ ಮನೆಗೆ ಹೋಗಿ ಉಪದೇಶಿಸಬೇಕು. ಶ್ರೀಲ ಗದಾಧರ ದಾಸ ಪ್ರಭುಗಳು ಹರಿಕೀರ್ತನ ಪಂಥದ ಉಪದೇಶವನ್ನು ಮಾಡುತ್ತಿದ್ದಾಗ ಇದನ್ನು ವಿರೋಧಿಸುವ ಓರ್ವ ನ್ಯಾಯಾಧೀಶರಿದ್ದರು.

ಒಮ್ಮೆ ಪ್ರಭು ಚೈತನ್ಯ ಮಹಾಪ್ರಭುಗಳ ಹೆಜ್ಜೆಯನ್ನನುಸರಿಸಿ ಶ್ರೀ ಗದಾಧರ ದಾಸರು ಕಾಜಿ (ನ್ಯಾಯಾಧೀಶ)ಯ ಮನೆಗೆ ಹೋಗಿ “ಹರೇ-ಕೃಷ್ಣ ಮಹಾಮಂತ್ರವನ್ನು ಜಪಿಸೆಂದು ಪ್ರಾರ್ಥಿಸಿದರು. ಕಾಜಿ ಉತ್ತರಿಸಿದರು.” ಆಯಿತು, ನಾನು ನಾಳೆ ಹರೇಕೃಷ್ಣ ಮಂತ್ರವನ್ನು ಪಠಿಸುವೆ.”

ಇದನ್ನು ಕೇಳಿ ಶ್ರೀಗದಾಧರ ದಾಸ ಪ್ರಭುಗಳು ಅಲ್ಲೇ ನರ್ತಿಸಲಾರಂಭಿಸಿ ಹೀಗೆಂದು ಹೇಳಿದರು, “ನಾಳೆ ಏಕೆ? ನೀವು ಈಗಾಗಲೇ ಹರೇಕೃಷ್ಣ ಮಂತ್ರವನ್ನು ಪಠಿಸಿದ್ದೀರಿ, ಮುಂದುವರೆಸಿ ಅಷ್ಟೇ.”

ಚೈತನ್ಯ ಮಹಾಪ್ರಭುಗಳ ಕುರಿತಾದ ಗದಾಧರ ಪ್ರಭುಗಳ ಭಾವೋನ್ಮಾದಭರಿತ ಪ್ರೇಮ ಹಾಗೂ ಗುಣಲಕ್ಷಣಗಳು ಕಲ್ಪನಾತೀತವಾಗಿವೆ. ಆದ್ದರಿಂದ ಶ್ರೀ ಚೈತನ್ಯ ಮಹಾಪ್ರಭುಗಳ ಇನ್ನೊಂದು ಹೆಸರು “ಗದಾಧರ ಪ್ರಾಣನಾಥ ಅಥವಾ ಗದಾಧರ ಪಂಡಿತರ ಜೀವನ ಮತ್ತು ಆತ್ಮ.”

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi