ತುಳಸೀದೇವಿಯ ಪೂಜೆ

ಕೆಳ ಕಾಣುವ ಯಾದಿಯನ್ನು ಧರ್ಮಗ್ರಂಥಗಳಿಂದ ಹಾಗೂ ಶ್ರೀಲ ಪ್ರಭುಪಾದರ ಬೋಧನೆಗಳಿಂದ ಆಯ್ದು ಪೋಣಿಸಿದುದಾಗಿದೆ.

ತುಳಸೀದೇವಿಯ ದೇಹವು ಆಧ್ಯಾತ್ಮಿಕವಾದದ್ದು. ತುಳಸಿಯ ಅನೇಕ ಗಿಡಗಳಾಗಿ ಕಾಣಿಸಿಕೊಳ್ಳುವಳಾದರೂ ಆಕೆ ಒಬ್ಬಳು ವ್ಯಕ್ತಿ. ಕೃಷ್ಣಭಕ್ತಿ ಎಲ್ಲೆಲ್ಲಿ ಆಚರಿಸಲಾಗುವುದೋ ಅಲ್ಲಿಗೆಲ್ಲಾ ತುಳಸೀದೇವಿಯು ಬರುವಳು.

ಪ್ರತಿ ದಿನ ಬೆಳಗ್ಗೆ ಭಕ್ತರು ತುಳಸೀದೇವಿಯ ಗಿಡಕ್ಕೆ ನೀರೆರೆದು ಪೂಜೆ ಪ್ರಾರ್ಥನೆಗಳನ್ನು ಸಲ್ಲಿಸಬೇಕು ಹಾಗೂ ಆಕೆಯ ಬೃಂದಾವನಕ್ಕೆ ಮೂರು ಪ್ರದಕ್ಷಿಣೆ ಹಾಕಬೇಕು.

ಎಳೆಯ ತುಳಸಿ ಸಸಿಗಳನ್ನು ಪಕ್ಷಿಗಳು ಹಾಗೂ ಕೀಟಗಳಿಂದ ರಕ್ಷಿಸಬೇಕು. ಹೊರ ಬಂದ ಸಸಿಯನ್ನು ಮತ್ತು ಮೃತ್ತಿಕೆಯಲ್ಲಿ ಹೂಳುವುದು ಅಪರಾಧ.

ನೆಲದಲ್ಲಿ ನೆಟ್ಟಾಗ ತುಳಸೀ ಗಿಡಗಳು ಚಳಿಗಾಲವನ್ನು ತಡೆಯಲಾಗಂಥ ಸ್ಥಳಗಳಲ್ಲಿ ಸೂಕ್ತ ಗೃಹವನ್ನು ನಿರ್ಮಿಸಬೇಕು.

ತುಳಸೀ ಗಿಡಕ್ಕೆ ದಿನಂಪ್ರತಿ ತಾಜಾ ಗಾಳಿ ಹಾಗೂ ನೀರು ಒದಗುವಂತೆ ನೋಡಿಕೊಳ್ಳಬೇಕು (ಎಚ್ಚರಿಕೆ: ಹಾಕಿದ ನೀರು ಹೆಚ್ಚಾಗಬಾರದು) ಗಿಡದ ಮೇಲೆ ಬಿಸಿಲು ಬೀಳಲಿ (ಬಿಸಿಲು ಕೊಡುವ ಕೃತಕ ಲಾಟೀನುಗಳೂ ಈ ಕ್ರಿಯೆಯಲ್ಲಿ ಸಹಾಯಕ್ಕೆ ಬರುತ್ತವೆ)

ತುಳಸೀ ಗಿಡವನ್ನು ಅಲಕ್ಷಿಸುವುದಾಗಲಿ ಅಥವಾ ಗಿಡಕ್ಕೆ ಸರಿಯಾಗಿ ನೀರೆರೆಯದೆ ಇರುವುದಾಗಲಿ ಮಹದಪರಾಧ. ಪ್ರತಿ ಕೆಲಸವನ್ನೂ ಜಾಗರೂಕತೆಯಿಂದ ಮಾಡಿ.

ತುಳಸೀ ದಳಗಳನ್ನು ಬಿಡಿಸುವಾಗ ಈ ಕೆಳಗಿನ ಮಂತ್ರವನ್ನು ಪಠಿಸಿ:

ತುಳಸಿ ಅಮೃತಜನ್ಮಸಿ ಸದಾತ್ವಂ ಕೇಶವಪ್ರಿಯ |

ಕೇಶವಾರ್ಥಂ ಚಿನೋಮಿ ತ್ವಮ್‌ ವರದ ಭವ ಶೋಭವೇ ||

“ಓ ತುಳಸೀದೇವಿ ನೀನು ಅಮೃತದಿಂದ ಹುಟ್ಟಿದವಳು. ನೀನು ಸದಾ ಕೇಶವನಿಗೆ ಪ್ರಿಯಳಾದವಳು. ಈಗ ಕೇಶವನನ್ನು ಪೂಜಿಸಲೋಸುಗ ನಾನು ನಿನ್ನ ದಳಗಳನ್ನು ಹಾಗೂ ಹೂಗಳನ್ನು ಬಿಡಿಸುತ್ತಿದ್ದೇನೆ. ನೀನು ನನಗೆ ವರ ಅನುಗ್ರಹಿಸು ತಾಯಿ.”

ಮಂಜರಿಗಳ (ಹೂಗಳ) ಪಕ್ಕದಲ್ಲಿ ಮೂಡಿರುವ ಹಾಗೂ ಹಳದಿ ಬಣ್ಣಕ್ಕೆ ತಿರುಗಿರುವ ಮತ್ತು ಉದುರಲು ಬಂದಿರುವ ದಳಗಳನ್ನು ಮಾತ್ರ ಬಿಡಿಸಿ. ಎಳೆಯ ದಳಗಳನ್ನು ಬಿಡಿಸಬೇಡಿ. ಮಂಜರಿಗಳು ಮೂಡಿದೊಡನೆಯೇ ಅವನ್ನು ಬಿಡಿಸಿ. ತೆನೆಗಳು ಬಲಿತು ಅವುಗಳಲ್ಲಿ ಬೀಜಗಳು ಕಾಣಿಸಿಕೊಳ್ಳುವತನಕ ಬಿಡಬೇಡಿ.

ಬಲಿತ ತೆನೆಗಳು ಗಿಡದ ಸಾರವನ್ನು ಬಹುವಾಗಿ ಹೀರುತ್ತವೆ. ಇದೇ ಸಾರವು ಕೃಷ್ಣಸೇವೆಗೆ ಬಳಸಲು ದಳಗಳು ಹಾಗೂ ಎಳೆತೆನೆಗಳು ಆಗುವಂತೆ ನೋಡಿಕೊಳ್ಳಿ. ದಳಗಳನ್ನು ನಿಮ್ಮ ಬೆರಳ ತುದಿಗಳಿಂದ ಒಂದೊಂದಾಗಿ ಬಿಡಿಸಿ. ಗಿಡದ ರೆಂಬೆಗಳನ್ನು ಅಲ್ಲಾಡಿಸಿ ಅಥವಾ ಟೊಂಗೆಗಳಿಗೆ ಹಿಂಸೆ ನೀಡಿ ಹೊಚ್ಚಹೊಸ ದಳಗಳಿಗೆ ಘಾಸಿಯಾಗದಂತೆ ನೋಡಿಕೊಳ್ಳಬೇಕು. ದಳ ಬಿಡಿಸುವಾಗ ಶ್ರದ್ಧೆ ಇರಲಿ, ಎಚ್ಚರ ಇರಲಿ. ಕತ್ತರಿ ಮುಂತಾದ ಉಪಕರಣಗಳನ್ನು ಬಳಸಬೇಡಿ.

ತುಳಸೀ ಗಿಡವನ್ನು ಕಡಿಯಬೇಡಿ, ರೆಂಬೆಗಳನ್ನು ಮುರಿಯಬೇಡಿ. ಹೀಗೆ ಮಾಡುವುದು ಮಹಾ ಅಪರಾಧ. ತೀರ ಅಗತ್ಯವಿದ್ದರೆ ಮಾತ್ರ ಸಾರವಿಲ್ಲದ ಕೊಂಬೆಗಳನ್ನು ಮುರಿಯಿರಿ. ರೆಂಬೆಗಳು ಮೈಕೈಗೆ ತಗಲುವಂತೆ ಹರಡಿಕೊಂಡಿದ್ದರೆ ಅವನ್ನೆಲ್ಲಾ ಹಗುರಾಗಿ ಸೇರಿಸಿ ಕಟ್ಟಿ. ಅವುಗಳನ್ನು ಮುರಿಯಬೇಡಿ.

ತುಳಸೀ ದಳಗಳನ್ನು ಮತ್ತು ಮಂಜರಿಗಳನ್ನು ಬೆಳಗಿನ ಹೊತ್ತು ಮಾತ್ರ ಬಿಡಿಸಿ. ಸಂಜೆಯ ಹೊತ್ತು (ಸೂರ್ಯಾಸ್ತದಿಂದ ಸೂರ್ಯೋದಯದ ತನಕ) ಎಂದಿಗೂ ತುಳಸಿಯನ್ನು ಬಿಡಿಸಬಾರದು.

ತುಳಸಿಗಿಡಕ್ಕೆ ಎಂದಿಗೂ ರಾಸಾಯನಿಕಗಳನ್ನು ಸಿಂಪಡಿಸಬೇಡಿ.

ಕೃಷ್ಣನ ಪೂಜೆಗೆ ಹಾಗೂ ನೈವೇದ್ಯ ಪದಾರ್ಥಗಳಿಗೆ ಹಾಕಲು ತುಳಸೀ ದಳಗಳನ್ನು ಬೆಳಗಿನ ಹೊತ್ತು ಮಾತ್ರ ಬಿಡಿಸಿ. ಪ್ರತಿ ನೈವೇದ್ಯ ಪದಾರ್ಥಕ್ಕೂ ಒಂದು ದಳ ಹಾಕಿ. ಪರಮ ಪ್ರಭು ಶ್ರೀಕೃಷ್ಣನ ಪೂಜೆಗಲ್ಲದೆ ಬೇರಾವ ಉದ್ದೇಶಕ್ಕೂ ತುಳಸೀ ದಳಗಳನ್ನು ಬಿಡಿಸಬೇಡಿ.

ತುಳಸೀದಳ ಮಾಲೆ ಕೃಷ್ಣನಿಗೆ ತುಂಬ ಇಷ್ಟವಾದದ್ದು. ಶ್ರೀಗಂಧ ಚೂರ್ಣ ಹಾಗೂ ತುಳಸೀದಳಗಳನ್ನು ಪ್ರಭುವಿನ ಚರಣಾರವಿಂದಗಳಿಗೆ ಅರ್ಪಿಸುವುದು ಅತ್ಯುನ್ನತ ಪೂಜಾವಿಧಾನ. ವಿಷ್ಣುವಿನ ವಿವಿಧ ರೂಪಗಳ ಪಾದಗಳ ಮೇಲಲ್ಲದೆ ಬೇರಾರ ಪಾದಗಳ ಮೇಲೂ ತುಳಸಿ ದಳಗಳನ್ನು ಇರಿಸಬೇಡಿ. ಕೃಷ್ಣನಿಗೆ ಅರ್ಪಿಸುವ ಸಲುವಾಗಿ ಶ್ರೀಮತಿ ರಾಧಾರಾಣಿಯ ಕೈಗೆ ಒಂದು ತುಳಸೀದಳವನ್ನು ನೀಡಬಹುದು.

ಒಣಗಿದ ತುಳಸೀ ದಳಗಳನ್ನು ಕೂಡ ಕೃಷ್ಣನು ಸ್ವೀಕರಿಸುತ್ತಾನೆ.

ತಾನಾಗಿಯೇ ಸ್ವಾಭಾವಿಕವಾಗಿ ಒಣಗಿದ ತುಳಸೀಕಾಷ್ಠವನ್ನು ಬಳಸಿ ಜಪಮಣಿಗಳಂಥ ಪೂಜಾ ಸಾಮಾಗ್ರಿಗಳನ್ನು ತಯಾರಿಸಲು ಉಪಯೋಗಿಸಬಹುದು. ಹೆಚ್ಚಾದ ತುಳಸೀ ಕಾಷ್ಠವನ್ನು ನೆಲದಲ್ಲಿ ಹುಗಿಯಿರಿ.

ಚಹ ಹಾಗೂ ದ್ರವಗಳನ್ನು ತಯಾರಿಸಲು ತುಳಸೀ ದಳಗಳನ್ನು ಅಥವಾ ಮಂಜರಿಗಳನ್ನು ಉಪಯೋಗಿಸಬೇಡಿ. ಅವು ಕೃಷ್ಣನಿಗೆ ಅರ್ಪಿತವಾಗಿದ್ದರೂ ಹೀಗೆ ಉಪಯೋಗಿಸುವುದು ತಪ್ಪು. ತುಳಸೀ ದಳಗಳನ್ನು ಬೇಯಿಸುವುದು, ಬಿಸಿ ಮಾಡುವುದು ಅಥವಾ ಔಷಧಿಗಳ ತಯಾರಿಕೆಗೆ ಬಳಸುವುದು ಮಹಾ ಅಪರಾಧ.

ಜೀವ ಕಳೆಯಿಂದ ಶೋಭಿಸುವ ತುಳಸೀ ಗಿಡಗಳನ್ನು ಎಂದಿಗೂ ಕಡಿಯಬೇಡಿ. ಹೀಗೆ ಮಾಡುವುದು ಮಹಾಪರಾಧ.

ತುಳಸೀ ಗಿಡದ ನೆರಳನ್ನು ತುಳಿಯದಂತೆ ಎಚ್ಚರ ವಹಿಸಿ.

ತುಳಸೀ ದೇವಿಯು ಪ್ರಭುವಿಗೆ ಪರಮ ಪ್ರಿಯಳಾದವಳು. ಆದ್ದರಿಂದ ಪ್ರೀತಿ ಹಾಗೂ ಭಕ್ತಿಯಿಂದ ಆಕೆಯ ಸೇವೆ ಮಾಡುವುದು ಬಹು ಮುಖ್ಯ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi