ಮಹಾತ್ಮರಾದ ಮಹರ್ಷಿ ವಾಲ್ಮೀಕಿಯವರು ರಾಮನ ಲೀಲೆಗಳನ್ನು ಸವಿವರವಾಗಿ ವರ್ಣಿಸಿದ್ದಾರೆ. ಅವರು ತಮ್ಮ ಹಿಂದಿನ ಜೀವನದಲ್ಲಿ ಒಬ್ಬ ಡಕಾಯಿತನಾಗಿ ಜೀವನೋಪಾಯಕ್ಕಾಗಿ ಜನರನ್ನು ಕೊಲ್ಲುತ್ತಿದ್ದರೆಂದು ಜನಪ್ರಿಯ ಕಥೆಗಳಿವೆ. ನಾರದ ಋಷಿಯ ಭೇಟಿಯಿಂದ ಹೃದಯ ಪರಿವರ್ತನೆಯಾಗಿ ಓರ್ವ ಸಾಧುಗಳಾದರು.

ಗ್ರಂಥಗಳ ಪ್ರಕಾರ ವಾಲ್ಮೀಕಿ ಒಬ್ಬ ಮಹರ್ಷಿಯ ಪುತ್ರರು. ಅವರು ದೀರ್ಘಕಾಲ ವ್ರತಗಳನ್ನಾಚರಿಸಿ ಪರಿಪೂರ್ಣರಾದರು. ಅವರ ಪ್ರಖ್ಯಾತ ಶಿಷ್ಯರಲ್ಲಿ ಒಬ್ಬರು ಭರದ್ವಾಜ ಮಹರ್ಷಿಗಳು, ಅವರಿಬ್ಬರೂ ಒಮ್ಮೆ ನದಿಗೆ ಸ್ನಾನಕ್ಕಾಗಿ ಹೊರಟರು. ವಾಲ್ಮೀಕಿ ಸ್ನಾನ ಮುಗಿಸಿದನಂತರ ಒಂದು ಮರದ ಮೇಲೆ ಒಂದು ಗಂಡು ಮತ್ತು ಹೆಣ್ಣು ಕ್ರೌಂಚ ಪಕ್ಷಿಗಳು ಕುಳಿತಿರುವುದನ್ನು ನೋಡಿದರು.
ಅದೇ ಸಮಯಕ್ಕೆ ಒಬ್ಬ ಬೇಡನು ತನ್ನ ಬಿಲ್ಲಿನಿಂದ ಗಂಡು ಪಕ್ಷಿಯನ್ನು ಕೊಂದನು. ವಾಲ್ಮೀಕಿ ಋಷಿಗಳು ಕುಪಿತರಾಗಿ ಬೇಡನಿಗೆ ಶಾಪ ನೀಡಿದರು. “ನೀನು ಎಷ್ಟು ಕ್ರೂರಿ? ಹೀಗೇಕೆ ಮಾಡಲು ನಿನಗೆ ಸಾಧ್ಯವಾಯಿತು? ನಿನ್ನೆಲ್ಲಾ ಸಂತೋಷ ಹೊರಟು ಹೋಗಿ ನೀನು ಎಂದಿಗೂ ಜೀವನದಲ್ಲಿ ಸುಖದಿಂದಿರದಂತಾಗಲಿ.”
ವಾಲ್ಮೀಕಿ ತಮ್ಮ ಆಶ್ರಮಕ್ಕೆ ವಾಪಸ್ಸಾದಮೇಲೆ ಹೀಗೆಂದು ಯೋಚಿಸಿದರು, “ನಾನು ಏಕೆ ಅಷ್ಟು ಕುಪಿತನಾದೆ? ನಾನೊಬ್ಬ ಋಷಿ ನನ್ನ ಇಂದ್ರಿಯಗಳ ಮೇಲೆ ನಿಯಂತ್ರಣ ಹೊಂದಿರಬೇಕಾಗಿರುವ ವ್ಯಕ್ತಿ. ಜೀವನ ಹಾಗೂ ಮರಣ ನಶ್ವರ. ನಾನು ಇದನ್ನು ನೋಡಿ ಏಕೆ ಇಷ್ಟೊಂದು ಕ್ಷೋಭೆಗೊಳಗಾದೆ.
ಇಂತಹ ಮಾತುಗಳು ನನ್ನ ಬಾಯಿಯಿಂದ ಹೇಗೆ ಬಂದವು? “ಅವರ ಮಾತುಗಳು ಬಹಳಷ್ಟು ವಿಶಿಷ್ಟವಾಗಿದ್ದವು. ರಾಮಾಯಣದಲ್ಲಿರುವ ಪ್ರತಿಯೊಂದು ಶ್ಲೋಕದಲ್ಲೂ ಎಲ್ಲ ನಾಲ್ಕು ಸಾಲುಗಳಿಗೆ ಒಂದೇ ಛಂದಸ್ಸನ್ನು ಉಪಯೋಗಿಸಿದಂತೆ ಇವುಗಳೂ ಕೂಡ ಅದೇ ಛಂದಸ್ಸನ್ನು ಹೊಂದಿದ್ದವು. ತಮ್ಮಿಂದ ಇಂತಹ ನಿರ್ದಿಷ್ಟ ಪದಗಳು ಮತ್ತು ನಿರ್ದಿಷ್ಟ ಛಂದಸ್ಸು ಹೇಗೆ ಬಂದವೆಂದು ಅವರು ಆಶ್ಚರ್ಯಚಕಿತರಾದರು.
ಆಗ ಬ್ರಹ್ಮದೇವರು ಪ್ರತ್ಯಕ್ಷವಾಗಿ ಹೇಳಿದರು, “ನೀನು ಶ್ರೀರಾಮನ ಲೀಲೆಗಳ ಕುರಿತು ಈ ಛಂದಸ್ಸನ್ನು ಬಳಸಿ ಶ್ಲೋಕಗಳನ್ನು ರಚಿಸಬೇಕು.” ವಾಲ್ಮೀಕಿ ಋಷಿಗಳು ತಮ್ಮಿಂದ ಈ ಕಾರ್ಯ ಹೇಗೆ ಸಾಧ್ಯವಾಗುವುದೆಂದು ಚಿಂತಿಸತೊಡಗಿದರು. ಆ ಸಮಯದಲ್ಲಿ ನಾರದಮುನಿಗಳು ಪ್ರತ್ಯಕ್ಷರಾಗಿ ವಾಲ್ಮೀಕಿಯವರಿಗೆ ಉಪದೇಶಿಸಿದರು.
“ನೀನು ಸಮಾಧಿ ಅವಸ್ಥೆಯಲ್ಲಿ ಪ್ರಭು ಶ್ರೀರಾಮನ ಲೀಲೆಗಳ ಬಗ್ಗೆ ಧ್ಯಾನ ಮಾಡಿದರೆ ನಿನ್ನ ಹೃದಯದಲ್ಲಿ ಭಕ್ತಿಯ ಫಲವಾಗಿ ಆ ಎಲ್ಲ ಲೀಲೆಗಳು ಪ್ರಕಟವಾಗುವವು.” ಈ ಆದೇಶಗಳನ್ನು ವಾಲ್ಮೀಕಿ ಶಿರಸಾವಹಿಸಿದರು. ಅವರ ಹೃದಯದಲ್ಲಿ ಪ್ರಭುವಿನ ಲೀಲೆಗಳು ಪ್ರಕಟವಾದಂತೆ ಅವರು ರಾಮಾಯಣವನ್ನು ಬರೆಯಲು ಆರಂಭಿಸಿದರು.
ವಾಲ್ಮೀಕಿಯವರೂ ಸಹ ಪ್ರಭು ರಾಮನ ಕಾಲದಲ್ಲಿ ಅದೇ ಲೋಕದಲ್ಲಿದ್ದರು. ಆದರೆ ರಾಮ ತನ್ನೆಲ್ಲಾ ಲೀಲೆಗಳನ್ನು ಆಡುತ್ತಿರುವ ಮುಂಚೆಯೇ ವಾಲ್ಮೀಕಿ ಸೀತಾ ಭೂಮಿಯನ್ನು ಪ್ರವೇಶಿಸುವ ಘಟನೆಯನ್ನು ಬಿಟ್ಟು ಎಲ್ಲವನ್ನೂ ಬರೆದಿದ್ದರು. ಅವರು ಅದನ್ನು ಏಕೆ ಬರೆಯಲಿಲ್ಲ? ಏಕೆಂದರೆ ಅವರು ಲವ ಮತ್ತು ಕುಶರಿಗೆ ರಾಮನ ಲೀಲೆಗಳನ್ನು ನಿತ್ಯ ವಿವರಿಸುತ್ತಿದ್ದರು. ಅವರು ಮೊದಲೇ ಸೀತೆಗೆ ಕೊನೆಗೆ ಏನಾಯಿತೆಂದು ಹೇಳಿದ್ದರೆ ಅವರು ತುಂಬ ಕ್ಷೋಭಿತರಾಗುತ್ತಿದ್ದರು.
ಮಹಾರಾಜ ದಶರಥರು ಶ್ರೀರಾಮಚಂದ್ರನ ಶಾಶ್ವತವಾದ ತಂದೆ ಹಾಗೂ ಕೌಸಲ್ಯ ಶಾಶ್ವತವಾದ ತಾಯಿ. ಕೃಷ್ಣನ ವಿವಿಧ ಪ್ರಕಟಣೆಗಳಲ್ಲಿ ಅವರಿಬ್ಬರೂ ಪ್ರಭುವಿನ ಶಾಶ್ವತವಾದ ತಂದೆ ಮತ್ತು ತಾಯಿಗಳಾಗಿದ್ದಾರೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ ಯಶೋದೆ ಮತ್ತು ನಂದ ಮಹಾರಾಜರು ದಶರಥ ಮತ್ತು ಕೌಸಲ್ಯರಿಗಿಂತ ಭಿನ್ನರೇನೂ ಅಲ್ಲ.
ಮಹಾರಾಜ ದಶರಥರಿಗೆ ವಯಸ್ಸು ಹೆಚ್ಚುತ್ತಿದ್ದರೂ ಮಗನಾಗಿಲ್ಲವೆಂದು ಚಿಂತೆ ಕಾಡಲಾಯಿತು. ಹೀಗಾಗಿ ಅವರು ತಮ್ಮ ಕುಲಗುರುಗಳಾದ ವಸಿಷ್ಠರ ಬಳಿಗೆ ಹೋಗಿ ಒಬ್ಬ ಮಗನನ್ನು ಪಡೆಯಲೋಸುಗ ಒಂದು ಪರೇಷ್ಟ ಯಜ್ಞವನ್ನು ಮಾಡಬೇಕೆಂದು ಕೇಳಿಕೊಂಡರು. ಯಜ್ಞ ಶಿಷ್ಟವಾದ ಪಾಯಸದ ಅರ್ಧ ಭಾಗವನ್ನು ಕೌಸಲ್ಯ, ಕಾಲು ಭಾಗವನ್ನು ಕೈಕೇಯಿ ಮತ್ತು ಇನ್ನೊಂದು ಕಾಲು ಭಾಗವನ್ನು ಸುಮಿತ್ರಳಿಗೆ ನೀಡಲಾಯಿತು.
ಅನಂತರ ಎಲ್ಲ ರಾಣಿಯರು ಗಂಡುಮಕ್ಕಳಿಗೆ ಜನ್ಮವಿತ್ತರು. ಕೌಸಲ್ಯಳಿಗೆ ರಾಮನು, ಕೈಕೇಯಿಗೆ ಭರತನು ಮತ್ತು ಸುಮಿತ್ರೆಗೆ ಲಕ್ಷ್ಮಣ ಮತ್ತು ಶತ್ರುಘ್ನರು ಹುಟ್ಟಿದರು. ಮಕ್ಕಳನ್ನು ಎಲ್ಲರೂ ಪ್ರೀತಿಸುತ್ತಿದ್ದರು. ಮಕ್ಕಳು ಬಾಲ್ಯದಲ್ಲಿ ತುಂಟ ಆಟಗಳನ್ನಾಡುತ್ತಿದ್ದರು. ಅವರು ವಿಶ್ವಾಮಿತ್ರನೊಂದಿಗೆ ಸಿದ್ಧ ಆಶ್ರಮಕ್ಕೆ ಹೋಗಿ ಋಷಿಗಳ ಯಜ್ಞದಲ್ಲಿ ವಿಘ್ನ ಉಂಟು ಮಾಡುತ್ತಿದ್ದ ಇಬ್ಬರು ರಾಕ್ಷಸರನ್ನು ಕೊಂದರು.
ತನ್ನ ಪತಿಯ ಶಾಪದಿಂದ ಕಲ್ಲಾಗಿದ್ದ ಆಹಲೆಗೆ ಶ್ರೀರಾಮನು ಶಾಪದಿಂದ ಮುಕ್ತಿ ನೀಡಿದನು. ಶ್ರೀ ವಾಲ್ಮೀಕಿ ಮುನಿಗಳು ನಾರದರ ಆಶೀರ್ವಾದದಿಂದ ತಮ್ಮ ಕಣ್ಣು ಮುಂದೆ ಜರಗುತ್ತಿರುವಂತೆ ಸ್ಪಷ್ಟವಾಗಿ ಈ ಎಲ್ಲ ಲೀಲೆಗಳನ್ನು ನೋಡಿದರು.

ಸೀತಾದೇವಿಯ ಸ್ವಯಂವರಕ್ಕಾಗಿ ವಿಶ್ವಾಮಿತ್ರರು ರಾಮ ಮತ್ತು ಲಕ್ಷ್ಮಣರೊಂದಿಗೆ ಜನಕಪುರಿಗೆ ಹೋದರು. ಅಲ್ಲಿ ರಾಮನು ಮಹಾರಾಜ ಜನಕನಿಗೆ ಪರಶುರಾಮ ನೀಡಿದ್ದ ಶಿವನ ಧನಸ್ಸನ್ನು ಮುರಿದನು. ಆ ಸಮಯದಲ್ಲಿ ಪರಶುರಾಮ ಪ್ರತ್ಯಕ್ಷನಾಗಿ ಹಿಂದೆ ಕ್ಷತ್ರಿಯರ ಮೇಲೆ ಕುಪಿತನಾದಂತೆ ಕುಪಿತಗೊಂಡನು.
ರಾಮನು ಯಾವುದೇ ಪರಿಶ್ರಮವಿಲ್ಲದೆ ಬಿಲ್ಲನ್ನು ಮುರಿದಾಗ, ಆತನ ಅಂಶವೇ ತಾನು ಎಂದು ಅರಿತನು. ಈಗ ಈ ಬಿಲ್ಲು ನನ್ನ ಕೈಯಲ್ಲಿದೆ. ನಾನು ಯಾರನ್ನಾದರೂ ಕೊಲ್ಲಬೇಕು. ನಿನ್ನನ್ನು ಅಥವಾ ನಿನ್ನ ಹೃದಯದಲ್ಲಿರುವ ಕೋಪವನ್ನು ಕೊಲ್ಲಬೇಕು. ಹಿಂದೆ ಶ್ರೀ ಪರಶುರಾಮನು ಇಪ್ಪತ್ತೊಂದು ಸಲ ಎಲ್ಲ ಕ್ಷತ್ರಿಯರನ್ನು ಕೊಂದಿದ್ದ.
ಹೀಗೆ ಭೂಮಿತಾಯಿಯು ದುಷ್ಟರಾಜರ ಭಾರದಿಂದ ಮುಕ್ತಳಾಗಿದ್ದಳು. ಈಗ ಆ ಕೋಪದ ಅಗತ್ಯವಿಲ್ಲದಿರುವ ಕಾರಣ ಶ್ರೀರಾಮನು ಹೀಗೆ ಹೇಳಿದನು. ”ನಾನು ನಿನ್ನಲ್ಲಿನ ಕೋಪವನ್ನು ಕೊಲ್ಲುತ್ತೇನೆ.” ಪರಶುರಾಮ ಪ್ರಾರ್ಥಿಸಿದನು, “ದಯಮಾಡಿ, ನನ್ನ ಹೃದಯದಲ್ಲಿರುವ ಕೋಪವನ್ನು ತೆಗೆದುಹಾಕಿ.”
ಪ್ರಭು ರಾಮ ಅದನ್ನು ತೆಗೆದ ಮೇಲೆ ಪರಶುರಾಮ ಓರ್ವ ಋಷಿಯಾಗಿ, ತದನಂತರ ಹಲವಾರು ವ್ರತಗಳನ್ನಾಚರಿಸಿದನು. ಶ್ರೀರಾಮ ಮತ್ತು ಸೀತಾದೇವಿಯವರ ವಿವಾಹವಾಯಿತು. ಇಬ್ಬರೂ ಅಯೋಧ್ಯೆಗೆ ಬಂದರು.
ಮಹಾರಾಜ ದಶರಥರಿಂದ ತನಗೆ ಎರಡು ವರಗಳನ್ನು ಕೇಳಿದ ರಾಣಿ ಕೈಕೇಯಿಯ ಲೀಲೆಯ ಹಿಂದೆ ಒಂದು ರಹಸ್ಯವಿದೆ. ಕೈಕೇಯಿ ಕ್ರೂರಿಯಾಗಿರಲಿಲ್ಲ. ಅವಳು ರಾಮನನ್ನು ತನ್ನ ಮಗ ಭರತನಿಗಿಂತ ಹೆಚ್ಚು ಪ್ರೀತಿಸುತ್ತಿದ್ದಳು. ರಾಮನು ಹುಡುಗನಾಗಿದ್ದಾಗ ತಾಯಿ ಕೈಕೇಯಿಯ ತೊಡೆಯಮೇಲೆ ಕುಳಿತು ಪ್ರಾರ್ಥಿಸಿಕೊಂಡನು.
“ನಾನು ನಿನ್ನನ್ನು ಏನೋ ಕೇಳಬೇಕೆಂದಿದ್ದೇನೆ. ನಾನು ಬೆಳೆದು ನನ್ನ ಮದುವೆಯಾದ ಅನಂತರ ಮನೆಗೆ ಮರಳಿದಾಗ ನನ್ನನ್ನು ಹದಿನಾಲ್ಕು ವರ್ಷ ಕಾಡಿಗೆ ಕಳುಹಿಸು. ಇದನ್ನು ಕೇಳಿ ಕೈಕೇಯಿ ಮೂರ್ಛಿತಳಾದಳು. ಅವಳು ಪ್ರಜ್ಞಾವಸ್ಥಳಾದಾಗ ಹೀಗೆ ಹೇಳಿದಳು. “ನಾನು ಇಂತಹ ಕ್ರೂರತನವನ್ನು ತೋರಿಸಲು ಸಾಧ್ಯವಿಲ್ಲ.” ಆದರೆ ಪ್ರಭು ರಾಮನು ಹೇಳಿದನು, “ಇಡೀ ಲೋಕದ ಕಲ್ಯಾಣಕ್ಕಾಗಿ ನೀನು ಇದನ್ನು ಮಾಡಲೇಬೇಕು.” ಆದ್ದರಿಂದ ಕೈಕೇಯಿ ಇದಕ್ಕೆ ಒಪ್ಪಿದಳು.
ಈ ಸಂದರ್ಭದಲ್ಲಿ ಇನ್ನೊಂದು ಮುಖ್ಯ ವಿಷಯವಿದೆ. ರಾಜ ದಶರಥರು ಕೌಸಲ್ಯಳನ್ನು ಮದುವೆಯಾದಾಗ ಅವರಿಗೆ ಅವಳಿಂದ ಮಕ್ಕಳಾಗಲಿಲ್ಲ. ಅವರು 360 ರಾಣಿಯರನ್ನು ಮದುವೆಯಾದರು. ಆದರೂ ಅವರಿಗೆ ಮಕ್ಕಳಾಗಲಿಲ್ಲ. ಒಮ್ಮೆ ಅವರು ಕಾಡಿನಲ್ಲಿ ಪ್ರಾಣಿಗಳನ್ನು ಭೇಟೆಯಾಡಲು ಹೊರಗೆ ಹೋಗಿ ಅಫ್ಘಾನಿಸ್ತಾನದ ಸೀಮೆಯಷ್ಟು ದೂರ ಪ್ರಯಾಣ ಮಾಡಿದರು.
ಅವರಿಗೆ ತುಂಬ ದಣಿವಾಗಿತ್ತು. ಹೀಗಾಗಿ ಆ ಇಡೀ ಪ್ರದೇಶದ ರಾಜನಾದ ತನ್ನ ಮಿತ್ರ, ಮಹಾರಾಜ ಕೈಕೇಯನ ಬಳಿಗೆ ಹೋದರು. ಮಹಾರಾಜ ಕೈಕೇಯನು ರಾಜನ ಆರೈಕೆ ಮಾಡಲೆಂದು ತನ್ನ ಮಗಳಿಗೆ ಆದೇಶಿಸಿದನು. ಮರುದಿನ, ಅವಳ ಸೇವೆಯಿಂದ ತುಂಬ ಸಂತುಷ್ಟನಾದ ಮಹಾರಾಜ ದಶರಥರು ತಾವು ಕೈಕೇಯಿಯನ್ನು ಮದುವೆಯಾಗಬಹುದೇ ಎಂದು ಕೇಳಿದರು.
ರಾಜ ಕೈಕೇಯನು ಒಪ್ಪಿಕೊಂಡನು. ಆದರೆ ಒಂದು ಷರತ್ತು ಹಾಕಿದನು. “ಅವಳಿಗೆ ಮಗನಾದರೆ ಆತನೇ ನಿನ್ನ ಇಡೀ ಸಾಮ್ರಾಜ್ಯದ ರಾಜನಾಗುವನು.” ಮಹಾರಾಜ ಉತ್ತರಿಸಿದನು, “ಇದಕ್ಕಿಂತ ಹೆಚ್ಚು ಸಂತೋಷ ತರುವ ವಿಷಯವು ಇನ್ನೊಂದಿಲ್ಲ. ನನಗೆ ಮಗನಿಲ್ಲ ಆದ್ದರಿಂದ ಅವಳಿಗೆ ಮಗನಾದರೆ ನನ್ನ ಇಡೀ ರಾಜ್ಯವನ್ನೇ ಅವನಿಗೆ ಕೊಡುವೆ.” ರಾಮನ ಬದಲು ಭರತ ರಾಜನಾಗಲು ಇದು ಇನ್ನೊಂದು ಕಾರಣವಾಗಿದೆ.
ಇದನ್ನು ಹೊರತಾಗಿಸಿ, ಇನ್ನೊಂದು ಕಾರಣವೂ ಇದೆ. ಒಮ್ಮೆ ಭರತನ ಮಾವ ಬಂದು ಭರತ ಮತ್ತು ಶತ್ರುಘ್ನರು ಕೆಲವು ದಿನಗಳ ಕಾಲ ತಮ್ಮೊಂದಿಗಿರಬೇಕೆಂದು ಕೇಳಿಕೊಂಡರು. ಈ ಮಧ್ಯೆ ರಾಮನವಮಿ – ಶ್ರೀರಾಮನ ಜನ್ಮದಿನ ಬಂತು. ಆ ದಿನದಂದು ಅವನ ಜನ್ಮದಿನೋತ್ಸವ ಮತ್ತು ಮದುವೆಯೂ ಆಯಿತು.

ಆ ದಿನಕ್ಕೆ ಹಿ೦ದಿನ ದಿನ ಮಹಾರಾಜ ದಶರಥರು ತಾನು ರಾಮನಿಗೆ ರಾಜ್ಯವನ್ನು ನೀಡಿ ಅವನನ್ನು ಯುವರಾಜನಾಗಿ ಮಾಡಲು ಇಚ್ಛೆಪಡುತ್ತಿದ್ದೇನೆಂದು ವಸಿಷ್ಠರಿಗೆ ಹೇಳಿದರು. ತಾವು ಅನುಪಸ್ಥಿತಿಯಲ್ಲಿ ಎಲ್ಲ ಕೆಲಸ ಕಾರ್ಯಗಳನ್ನು ರಾಮನು ನಿರ್ವಹಿಸಿ ತಾವು ಈ ಪ್ರಪಂಚವನ್ನು ತೊರೆದ ಮೇಲೆ ಅವನೇ ರಾಜನಾಗುವನೆಂದರು.
ಇದನ್ನು ಕೇಳಿ ಪ್ರತಿಯೊಬ್ಬರು ಸಂತುಷ್ಟರಾದರು. ವಷಿಸ್ಟರು ಹೇಳಿದರು, “ನಾಳೆ, ರಾಮ ನಮಮಿ, ಎಲ್ಲ ಗ್ರಹಗಳ ಸ್ಥಾನಗಳು ತುಂಬ ಶುಭಕರವಾಗಿವೆ. ನೀನು ನಾಳೆಯೇ ಅವನಿಗೆ ಪುಣ್ಯ ಉಪದೇಶವನ್ನು ನೀಡಬೇಕು. “ಭರತ ಮತ್ತು ಶತ್ರುಘ್ನರೊಂದಿಗೆ ಮಾತನಾಡಲು ಸಮಯವಿರಲಿಲ್ಲ. ಮಹಾರಾಜ ದಶರಥ ಹೀಗೆಂದು ಆಲೋಚಿಸಿದರೂ ಸಹ, “ನಾನು ಈಗಾಗಲೇ ಭರತನಿಗೆ ನನ್ನ ರಾಜ್ಯವನ್ನು ನೀಡಬೇಕೆಂದು ಭರವಸೆ ನೀಡಿದ್ದೇನೆ. ಆದ್ದರಿಂದ ಅವನ ಮುಂದೆ ಶ್ರೀರಾಮನಿಗೆ ರಾಜ್ಯವನ್ನು ನೀಡಲಸಾಧ್ಯ.”
ಕೈಕೇಯಿ ಇದನ್ನು ಕೇಳಿದಾಗ ಸಂತುಷ್ಟಳಾಗಿ ರಾಮನ ಪಟ್ಟಾಭಿಷೇಕದ ಸುದ್ದಿಯನ್ನು ತಂದ ಸಖಿ ಮಂಥರೆಗೆ ಹಾರವನ್ನು ನೀಡಿದಳು. ದೇವತೆಗಳಿಂದ ಪ್ರಭಾವಿತಳಾಗಿ ಮತ್ತು ಶ್ರೀರಾಮನು ತನ್ನ ಲೀಲೆಗಳನ್ನು ನಿರ್ವಹಿಸಬೇಕಾದ ಕಾರಣ ಮಂಥರೆಯ ಮನಸ್ಸು ದುಷ್ಟವಾಯಿತು. ಅವಳು ಕೈಕೇಯಿಗೆ ಹೇಳಿದಳು, “ನೀನು ಇಷ್ಟು ಮೂರ್ಖಳಾಗಲು ಹೇಗೆ ಸಾಧ್ಯ? ರಾಮನು ರಾಜನಾದರೆ ಭರತನು ಅವನ ಸೇವಕನಾಗುತ್ತಾನೆ.
ನೀನು ಅವನ ಸೇವಕಿಯಾಗುವೆ. ನಿನ್ನ ಇಡೀ ಜೀವನ ಕೌಸಲ್ಯ ಮತ್ತು ಶ್ರೀರಾಮನ ಸೇವೆಯಲ್ಲೇ ಕಳೆಯಬೇಕಾಗುವುದು.’ ಮೊದಮೊದಲು ಕೈಕೇಯಿ ವಿರೋಧಿಸಿದಳು. ಅವಳು ಮಂಥರೆಯ ಮಾತುಗಳಿಂದ ಪ್ರಭಾವಿತಳಾಗಲಿಲ್ಲ. ಆದರೆ ಅವಳು ರಾಮನು ತನ್ನನ್ನು ಯೌವನದಲ್ಲಿ ಕಾಡಿಗೆ ಕಳುಹಿಸಬೇಕೆಂದು ಕೋರಿದ್ದನ್ನು ನೆನೆಸಿಕೊಂಡಳು.
ಇದನ್ನು ನೆನೆಸಿಕೊಂಡು ಅವಳ ಹೃದಯ ಕಲ್ಲಾಯಿತು. ಅನಂತರ ಅವಳು ಮಹಾರಾಜ ದಶರಥರ ಬಳಿಗೆ ಹೋಗಿ ಎರಡು ವರಗಳನ್ನು ಕೇಳಿದಳು. ಮಹಾರಾಜ ಅವುಗಳನ್ನು ಕೇಳಿ ಮೂರ್ಛಿತರಾದನು. ಪ್ರಭು ರಾಮನಿಗೆ ಈ ಸಂಗತಿ ತಿಳಿದಾಗ ಅವನು ತಾಯಿ ಕೈಕೇಯಿ ತಾನು ಕೋರಿದ್ದನ್ನು ನೆರವೇರಿಸಿದ್ದಾಳೆಂದು ತುಂಬ ಪ್ರಸನ್ನನಾದನು. ಅವನು ಮಹಾರಾಜ ಮತ್ತು ರಾಣಿ ಕೈಕೇಯಿಯ ಬಳಿಗೆ ಬಂದಾಗ, ಕೈಕೇಯಿ ಅವನು ಕಾಡಿಗೆ ಹೋಗಬೇಕು ಇದೇ ಮಹಾರಾಜ ದಶರಥರ ಇಚ್ಛೆಯೆಂದೂ ಹೇಳಿದಳು.
ಶ್ರೀರಾಮನು ಕಾಡಿಗೆ ಹೋಗಿ ಚಿತ್ರಕೂಟದಲ್ಲಿ ವಾಸಿಸುತ್ತಿದ್ದಾಗ ಭರತನು ಹಲವಾರು ಪ್ರಜೆಗಳೊಂದಿಗೆ ಅಲ್ಲಿಗೆ ಹೋಗಿ ಅಯೋಧ್ಯೆಗೆ ತೆರಳಲು ಬಿನ್ನಹ ಮಾಡಿಕೊಂಡನು. ಶ್ರೀರಾಮನನ್ನು ನೋಡಲು ಹೋಗುವ ಮಾರ್ಗದಲ್ಲಿ ಭರತನು ಭರದ್ವಾಜ ಋಷಿಯ ಆಶ್ರಮಕ್ಕೆ ಹೋದನು. ಅಲ್ಲಿ ಭರದ್ವಾಜರು, “ದಯವಿಟ್ಟು ಒಂದು ದಿನ ಇಲ್ಲಿದ್ದು ನಮ್ಮ ಆತಿಥ್ಯವನ್ನು ಸೇವಿಸಿ’ ಎಂದು ಮನವಿ ಮಾಡಿಕೊಂಡರು.
ಆದರೆ ಭರತ ತಾನು ಲಕ್ಷಾಂತರ ಜನರೊಂದಿಗೆ ಬಂದಿದ್ದೇನೆಂದನು. ಅಯೋಧ್ಯೆಯ ಬಹುತೇಕ ಜನರು ಅವನೊಟ್ಟಿಗಿದ್ದರು. ಇಷ್ಟು ಜನರ ಸತ್ಕಾರ ಹೇಗೆ ಸಾಧ್ಯವೆಂದು ಭರತನು ಕೇಳಿದನು. ಆದರೆ ಭರದ್ವಾಜರು ಉತ್ತರಿಸಿದರು, ದಯಮಾಡಿ, ನಿಮ್ಮನ್ನೆಲ್ಲಾ ಸತ್ಕರಿಸುವ ಅವಕಾಶ ನೀಡಿ.’ ಭರದ್ವಾಜರ ಅಲೌಕಿಕ ಶಕ್ತಿಯಿಂದ ಅಯೋಧ್ಯೆಗಿಂತ ಹೆಚ್ಚು ಸಂಪತ್ತುಗಳ ನಗರವೊಂದು ಪ್ರಕಟವಾಯಿತು.
ಪ್ರತಿ ರಾಣಿಯರಿಗೆ ಒಂದು ಅರಮನೆಯಿತ್ತು. ಅನ್ನಕೂಟದಂತೆ ಹಲವಾರು ವಿಧಗಳ ಭಕ್ಷ್ಯ ಭೋಜನಗಳನ್ನು ಸೃಷ್ಟಿಸಿ ಎಲ್ಲರಿಗೂ ಹಂಚಲಾಯಿತು. ಕೈಕೇಯಿ ಕೂಡ ರಾಮನ ಬಳಿ ಹೋಗಿ ಪ್ರಾರ್ಥಿಸಿದಳು. “ನೀನು ಕಾಡಿಗೆ ಹೋಗಬೇಕೆಂದು ವರವನ್ನು ಕೇಳಿದವಳು ನಾನೇ. ನಾನೇ ನಿನ್ನನ್ನು ಹೋಗೆಂದು ಹೇಳಿದ್ದರಿಂದ ಈಗ ನಾನು ನನ್ನ ಮಾತುಗಳನ್ನು ವಾಪಸ್ಸು ತೆಗೆದುಕೊಳ್ಳುತ್ತೇನೆ.
ಈಗ ನೀನು ವಾಪಾಸ್ಸಾಗಬೇಕೆಂದು ನಾನು ನಿನ್ನನ್ನು ಕೇಳಿಕೊಳ್ಳುತ್ತಿದ್ದೇನೆ.” ಶ್ರೀರಾಮ ಉತ್ತರಿಸಿದನು, ”ಆದೇಶವು ನಿಮ್ಮಿಂದ ಮಾತ್ರವಲ್ಲ. ನೀವು ಮತ್ತು ತಂದೆಯವರಿಬ್ಬರೂ ಒಟ್ಟಿಗೆ ಇದನು ಕೇಳಿದ್ದೀರಿ, ತಂದೆಯು ಇಲ್ಲಿಲ್ಲದ ಕಾರಣ ಅವರಿಗೆ ಇದು ಇಷ್ಟವಿದೆಯೋ ಇಲ್ಲವೋ ಗೊತ್ತಿಲ್ಲ. ಆದ್ದರಿಂದ ನನಗೆ ವಾಪಾಸ್ಸಾಗಲು ಇಷ್ಟವಿಲ್ಲ.”
ಮಹಾರಾಜ ಜನಕ, ಭರತನೊಂದಿಗೆ ರಾಜಸಭೆಯಲ್ಲಿ ಮಾತನಾಡಿದನು. ಜನಕ ಮಹಾರಾಜ ಪ್ರೇಮದ ಅರ್ಥವನ್ನು ವಿವರಿಸಿದನು. ತನ್ನ ಪ್ರಿಯತಮನನ್ನು ಸಂತುಷ್ಟಗೊಳಿಸುವುದನ್ನು ಅರಿಯುವುದೇ ನಿಜವಾದ ಪ್ರೇಮ ಎಂದು ಅವನು ಹೇಳಿದನು. ರಾಮನ ಇಚ್ಛೆ ತಾನು ಇಲ್ಲಿಯೇ ಇರುವುದೆಂದರೆ ಅವನು ಹೇಳಿದ ಹಾಗೆ ಮಾಡೋಣ. ನಿಮ್ಮ ಇಚ್ಛೆಯನ್ನು ಅವನ ಮೇಲೆ ಹೇರಬೇಡಿ.”
ಸೀತಾ ಮತ್ತು ರಾಮ ಅನಸೂಯಳ ಆಶ್ರಮಕ್ಕೆ ಹೋದಾಗ, ಅವಳು ಏನನ್ನೂ ತಿನ್ನದಿದ್ದರೂ ದೇಹ ಕೃಶವಾಗದಂತಹ ವಿಶಿಷ್ಟ ಅಂಗವಸ್ತ್ರವನ್ನು ಸೀತೆಗೆ ನೀಡಿದಳು. ಆದ್ದರಿಂದಲೇ ರಾವಣನು ನೀಡಿದ ಆಹಾರವನ್ನು ಇಡೀ ವರ್ಷ ಸೀತೆ ತಿನ್ನದಿದ್ದರೂ ಕೃಶಳಾಗಲಿಲ್ಲ.
ರಾವಣನನ್ನು ಕೊಲ್ಲುವ ಒಂದು ಬಿಲ್ಲನ್ನು ಅಗಸ್ತ್ಯಋಷಿ ನೀಡಿದರು. ಅನಂತರ ಶೂರ್ಪನಖಿ ಬಂದಳು. ಲಕ್ಷ್ಮಣ ಅವಳ ಮೂಗನ್ನು ಕಡಿದನು. ರಾಮ ಖರ ಮತ್ತು ದೂಷಣನನ್ನು ಕೊಂದನು. ಖರ ಎಂದರೆ ಕತ್ತೆ. ಅನಂತರ ಅವನು ತ್ರಿಶುರನೆಂಬ ರಾಕ್ಷಸನನ್ನು ಕೊಂದನು. ಶೂರ್ಪನಖಳ ಅಪಮಾನದ ಸೇಡನ್ನು ತೀರಿಸಿಕೊಳ್ಳಲು ರಾವಣ ಸೀತೆಯನ್ನು ಅಪಹರಿಸಿದನು.
ರಾಮ ಮರೀಚನನ್ನು ಕೊಂದನು. ರಾಮಲಕ್ಷ್ಮಣರು ಶಬರಿಯನ್ನು ಭೇಟಿ ಮಾಡಿದರು. ಕಿಷ್ಕಿಂಧೆಯಲ್ಲಿ ಅವರು ಹನುಮಂತನನ್ನು ಭೇಟಿ ಮಾಡಿದರು. ರಾಮ ಲಕ್ಷ್ಮಣರನ್ನು ಪರೀಕ್ಷಿಸಲು ಹನುಮಂತನು ಮೊದಲು ಬ್ರಾಹ್ಮಣನಾಗಿ ಕಾಣಿಸಿಕೊಂಡನು. ಅನಂತರ ಋಷ್ಯಮೂಕ ಪರ್ವತದಲ್ಲಿ ಸುಗ್ರೀವನು ಶ್ರೀರಾಮವನ್ನು ಭೇಟಿಯಾಗಿ ಪರಸ್ಪರ ಸ್ನೇಹ ಒಪ್ಪಂದವನ್ನು ಮಾಡಿಕೊಂಡರು. ವಾಲಿ ತನಗೇನು ಮಾಡಿದನೆಂದು ಸುಗ್ರೀವ ತಿಳಿಸಿದನಂತರ ಶ್ರೀರಾಮನು ವಾಲಿಯನ್ನು ಕೊಂದನು.






Leave a Reply