ಕೃಷ್ಣನಿಗೆ ಎಲ್ಲವನ್ನು ಅರ್ಪಿಸಿ

ಶ್ರೀಲ ಪ್ರಭುಪಾದರ ಪ್ರವಚನದ ಟಿಪ್ಪಣಿರೂಪ, ದಿನಾಂಕ : 13 ಮತ್ತು 20ರ ಸೆಪ್ಟೆಂಬರ್ 1966

ನಾವು ಅಜ್ಞಾನದ ಸ್ಥಿತಿಯಿಂದಲೇ ಜೀವನದ ಗುರಿಯನ್ನು ಬೆನ್ನಟ್ಟಿಕೊಂಡು ಹೋಗುತ್ತೇವೆ. ಒಬ್ಬ ಅಜ್ಞಾನಿಗೆ ಭಗವಂತನ ವಿಜ್ಞಾನದ ಬಗ್ಗೆ ಏನೂ ತಿಳಿದಿರುವುದಿಲ್ಲ. ಆದರೂ ಅವನು ಭಗವಂತನ ಬಗ್ಗೆ ಶ್ರವಣ ಮಾಡುತ್ತಾನೆ ಎಂದರೆ ಅದು ಒಳ್ಳೆಯದೇ. ವೈದಿಕ ಸಂಪ್ರದಾಯವನ್ನು ಶ್ರುತಿ ಎಂದು ಕರೆಯುತ್ತಾರೆ.

ಅದರ ಅರ್ಥ ಶ್ರವಣದ ಮೂಲಕ ಕಲಿಯುವುದು. ಆಧ್ಯಾತ್ಮಿಕ ವಿಜ್ಞಾನಕ್ಕೆ ಉನ್ನತವಾದ ಶಿಕ್ಷಣ ಅಥವಾ ಉನ್ನತ ಬುದ್ಧಿಶಕ್ತಿಯ ಅಗತ್ಯವಿಲ್ಲ. ಕೇವಲ ಭಗವಂತನ ಶ್ರವಣದ ಮೂಲಕ ಜನನ-ಮರಣಗಳ ಸಾಗರವನ್ನು ನಾವು ದಾಟಬಹುದು. ಶಾಸ್ತ್ರಗಳು ನಮಗೆ ಮರಣದಾಚೆಗೆ ಹೋಗಲು ಸಹಾಯಕವಾಗುತ್ತವೆ.

ಆಧ್ಯಾತ್ಮಿಕ ಶಿಕ್ಷಣದ ಪ್ರಾಥಮಿಕ ಸಿದ್ಧಾಂತ ಏನೆಂದರೆ – ಆತ್ಮವು ಶಾಶ್ವತವಾಗಿದೆ ಮತ್ತು ಅದು ನಿರಂತರವಾಗಿ ದೇಹದ ಉಡುಗೆಯನ್ನು ಬದಲಾಯಿಸುತ್ತಿರುತ್ತದೆ. ಬಹಳ ಮಂದಿ ತಾವು ಶಾಶ್ವತರೆಂದು ಅಂದರೆ ಆತ್ಮವು ಅಮರವೆಂದು ತಿಳಿದುಕೊಂಡಿರುವುದಿಲ್ಲ. ನಾಸ್ತಿಕರು ಹೇಳುವುದೇನೆಂದರೆ ನಾವು ಸದಾ ಸಂತೋಷವಾಗಿರಬೇಕಾದರೆ ಹೆಚ್ಚಿನ ಹಣ ಸಂಪಾದಿಸಬೇಕು.

ಹಣದಿಂದ ಹೆಚ್ಚಿನ ಆಹಾರ ಮತ್ತು ಹೆಚ್ಚು ಹೆಚ್ಚು ಐಹಿಕ ಸುಖಗಳನ್ನು ಅನುಭವಿಸಬಹುದು ಎಂದು ಆದರೆ ನಾವು ಎಷ್ಟೇ ಐಹಿಕ ಸೌಲಭ್ಯ ಮತ್ತು ವೈಜ್ಞಾನಿಕ ಪ್ರಗತಿ ಪಡೆದಿದ್ದರೂ ಈ ಜನನ, ಮರಣ, ವೃದ್ಧಾಪ್ಯ, ಮತ್ತು ರೋಗಗಳ ಕ್ಲೇಶಗಳನ್ನು ನಿಲ್ಲಿಸಲು ನಮಗೆ ಸಾಧ್ಯವಾಗಿಲ್ಲ. ಇವೇ ನಾಲ್ಕು ದುಃಖಕರವಾದ ಸ್ಥಿತಿಗಳು ನಮಗೆ ನಿಜವಾದ ಸಂತೋಷಕ್ಕೆ ಅಡ್ಡಿಪಡಿಸುತ್ತವೆ.

ಈ ಎಲ್ಲ ದುಃಖಗಳ ಅಂತ್ಯ ಕೇವಲ ಆತ್ಮಸಾಕ್ಷಾತ್ಕಾರದಿಂದ ಮಾತ್ರ ಸಾಧ್ಯವಾಗುತ್ತದೆ. ಹಾಗಾದರೆ ಇದು ಹೇಗೆ ಸಾಧ್ಯ? ಭಗವಂತನಿಲ್ಲದೆ ಐಹಿಕ ಜಗತ್ತು ಇಲ್ಲ. ಭಗವಂತನೇ ಎಲ್ಲ ಸೃಷ್ಟಿಯ ಮೂಲ. ಕಾರು ಬಸ್ಸುಗಳು ತಮ್ಮಿಂದ ತಾವೇ ಚಲಿಸುವುದಿಲ್ಲ. ಅದಕ್ಕೆ ಚಾಲಕನೊಬ್ಬನ ಅವಶ್ಯಕತೆಯಿದೆ.

ಅದೇ ರೀತಿ ದೇಹವು ಕೂಡ ಆತ್ಮವಿಲ್ಲದೆ ಚಲಿಸಲಾರದು. ಜೀವಿಗಳಲ್ಲಿ ನಾವು ಕಾಣಬಹುದಾದ್ದು ಏನೆಂದರೆ ಅವು ಜಡ ಮತ್ತು ಚೇತನಗಳ ಸಂಯೋಗದಿಂದ ಕೂಡಿಸಲ್ಪಟ್ಟಿವೆ. ಜೀವಿಯಲ್ಲಿ ಆತ್ಮ ಚೈತನ್ಯವಿಲ್ಲದೆ ಜಡವು ಅಲ್ಲಿ ವಿಕಸಿತವಾಗುವುದಿಲ್ಲ. ತಂದೆ-ತಾಯಿಗಳಿಬ್ಬರೇ ಒಂದು ಮಗುವಿನ ಜನನಕ್ಕೆ ಕಾರಣರಾಗುವುದಿಲ್ಲ.

ಚೈತನ್ಯ ಶಕ್ತಿಯು ತಾಯಿಯ ಗರ್ಭದಲ್ಲಿ ಮೊದಲು ಪ್ರವೇಶಿಸಿ ಒಂದು ಮಗುವಿನ ದೇಹವಾಗಿ ವಿಕಾಸವಾಗದೆ ತಂದೆ ತಾಯಿಗಳೇ ನೇರವಾಗಿ ಮಗುವಿಗೆ ಜನ್ಮ ಕೊಡುವುದಿಲ್ಲ. ಯಾವಾಗ ಕಾರು, ಬಸ್ಸು ಟ್ರಕ್, ಪ್ರಾಣಿಗಳು, ಕ್ರಿಮಿಕೀಟಗಳು, ಜೀವಿಗಳು ಮುಂತಾದ ಯಾವುದೆಲ್ಲವೂ ಚಲಿಸುತ್ತದೆಯೋ ಅಲ್ಲಿ ಜಡ ಮತ್ತು ಚೇತನಗಳ ಸಂಗಮವಿದೆ.

ಒಂದು ಚೈತನ್ಯಶಕ್ತಿಯಿಲ್ಲದೆ ಈ ಎಲ್ಲ ವಸ್ತುಗಳು ಹೇಗೆ ಚಲಿಸುವುದಕ್ಕೆ ಸಾಧ್ಯವಿಲ್ಲವೋ ಹಾಗೆಯೇ ಇಡೀ ಬ್ರಹ್ಮಾಂಡವು ಒಬ್ಬ ಪರಮಾತ್ಮ ಅಥವಾ ಪರಮ ಶಕ್ತಿಯ ಸಹಾಯವಿಲ್ಲದೆ ಹೇಗೆ ಚಲಿಸಲು ಸಾಧ್ಯ?

ಯಾವುದೇ ಐಹಿಕ ವಸ್ತು ತನಗೆ ತಾನೇ ಚಲಿಸಲು ಸಾಧ್ಯವಿಲ್ಲ. ಬಾಹ್ಯಾಕಾಶದ ಉಪಗ್ರಹಗಳು ಭೂಮಿಯ ಮೇಲಿರುವ ಮನುಷ್ಯನ ನಿಯಂತ್ರಣದಿಂದ ಚಲಿಸುತ್ತವೆ. ಯಂತ್ರಗಳನ್ನು (ಮೆಷಿನ್‌ಗಳು) ನಿಯಂತ್ರಿಸಲು ಮಾನವ ಶಕ್ತಿ ಬೇಕೇಬೇಕು. ಯಾವುದೇ ವಿನಾಯಿತಿ ಇಲ್ಲದೇ ಚಲಿಸುವುದು, ಚಲಿಸದೇ ಇರುವ ವಸ್ತುಗಳು ಇವೆ ಎಂದರೆ ಅವು ಜಡ ಮತ್ತು ಚೇತನಗಳ ಸಂಯೋಗವಾಗಿರಲೇಬೇಕು.

ಜಡವಾದ ವಸ್ತುವಿನ ವಿಶೇಷವೇನೆಂದರೆ ಅದು ಶಾಶ್ವತವಲ್ಲ. ಆದರೂ ಪ್ರಕೃತಿಯಲ್ಲಿ ಅದು ಬದಲಾವಣೆಗೆ ಒಳಗಾಗುವಂತದ್ದು. ಆತ್ಮವೆಂಬುದು ನಮ್ಮ ನಿಜವಾದ ಗುರುತು. ಅದು ಶಾಶ್ವತವಾಗಿದೆ. ನಾವು ಕ್ಷಣಿಕವಾದವುಗಳಿಗೆ ಅಂಟಿಕೊಳ್ಳಬಾರದು. ಈ ವಿಶ್ವವು ಇಲ್ಲದೇ ಹೋಗಬಹುದು.

ಆದರೆ ನಾವು ಶಾಶ್ವತವಾದ ಹಂತಕ್ಕೆ ಬರುವುದಕ್ಕೆ ಕೃಷ್ಣ ಪ್ರಜ್ಞೆಯಲ್ಲಿಯೇ ಇರಬೇಕು. ಅಶಾಶ್ವತಕ್ಕೆ ಅಂಟಿಕೊಂಡಿರುವವರನ್ನು ಬಿಡುಗಡೆ ಮಾಡಲು ಈ ಕೃಷ್ಣ ಪ್ರಜ್ಞೆಯನ್ನು ನಾವು ಅವರಿಗೆ ಬೋಧಿಸಬೇಕು. ಅವರು ಕೇಳಲಿ, ಕೇಳದೆಯೇ ಇರಲಿ ನಮ್ಮಿಂದ ಸಾಧ್ಯವಾದುದನ್ನು ಮಾಡಬೇಕು.

ನಾವು ಸಾಧ್ಯವಾದಷ್ಟು ಒಳ್ಳೆಯ ಪ್ರಯತ್ನಗಳನ್ನು ಮಾಡುತ್ತಿದ್ದರೆ ನಮಗೆ ಅನುಯಾಯಿಗಳು ಇರುವರೋ, ಇಲ್ಲವೋ ಆ ವ್ಯತ್ಯಾಸಗಳ ಕಡೆ ಗಮನ ಹೋಗುವುದಿಲ್ಲ. ಇಂದು ಯಾರೂ ಮಾನವ ಜನ್ಮದ ಪರಿಪೂರ್ಣತೆಯನ್ನು ಪಡೆಯಲು ಸಿದ್ಧವಿಲ್ಲ. ಉದಾಹರಣೆಗೆ ನಾವು ಪ್ರಾಣಿಗಳಿಗೇನಾದರೂ ಬೋಧಿ ಸಿದರೂ ಅವು ಕೇಳಲು ಸಿದ್ಧವಿಲ್ಲ.

ಅವುಗಳ ಪಾಡಿಗೆ ಅವು ಇರುತ್ತವೆ. ಅದೇ ರೀತಿಯಾಗಿ ಬಹಳ ಮಂದಿ ಜನರು ಕೂಡ ಯಾವ ಬೋಧನೆಗೂ ಕಿವಿಗೊಡದೆ ಇರುತ್ತಾರೆ. ಆದುದರಿಂದಲೇ ಪ್ರಭು ಜೀಸಸ್ ಕ್ರೈಸ್ತನು ಹೇಳುತ್ತಾನೆ – “ಹಂದಿಗಳ ಮುಂದೆ ಮುತ್ತುಗಳನ್ನು ಹಾಕಬೇಡಿ”. ನಮ್ಮ ನಿತ್ಯವಾದ ಜೀವನವು ಯಾವುದು ಶಾಶ್ವತವಾಗಿದೆಯೋ ಅದಕ್ಕೆ ಸಮರ್ಪಣೆಯಾಗಿರಬೇಕು.

ಎಲ್ಲಿ ಎಲ್ಲವೂ ಸರ್ವನಾಶವಾಗುವುದೋ ಅಲ್ಲಿ ಪರಮಪ್ರಭು ಸದಾ ಅತ್ವದಲ್ಲಿರುತ್ತಾನೆ. ಕೃಷ್ಣ ಹೇಳುತ್ತಾನೆ. – “ನಾನು ಸೃಷ್ಟಿಗಿಂತ ಮೊದಲು ಇದ್ದೆ. ಸೃಷ್ಟಿಯ ವಿನಾಶದ ಅನಂತರವೂ ಇರುತ್ತೇನೆ” ದೇಹವು ಮರಣಹೊಂದಿದ ಮೇಲೆ ಕಣ್ಮರೆಯಾಗುತ್ತದೆ. ಆದರೆ ಆತ್ಮವು ಕಣ್ಣರೆಯಾಗುವುದಿಲ್ಲ ಹುಟ್ಟಿದ ಕೂಸು ಬೆಳೆಯುತ್ತಿದ್ದಂತೆ ಕೂಡು ಮಾಯವಾಗಿ ಆ ಸ್ಥಳದಲ್ಲಿ ಓಡಾಡುವ ಪುಟ್ಟ ಮಗುವು ಬರುತ್ತದೆ.

ಆದರೆ ತಾಯಿಯು ತನ್ನ ಕೂಸಿನ ಕಣ್ಮರೆಯಿಂದ ವಿಚಲಿತಳಾಗುವುದಿಲ್ಲ ಮುಂದೆ ಮಗುವು ಬೆಳೆಯುತ್ತಾ ಮಗುವು ಮಾಯವಾಗಿ ಆ ಸ್ಥಳದಲ್ಲಿ ಯೌವನತೆ, ವಯಸ್ಕತೆ ರೂಪಧಾರಣೆಯನ್ನು ಮಾಡುತ್ತದೆ. ಮರಣ ಮತ್ತು ಪುನರ್ಜನ್ಮ ಇದೇ ರೀತಿಯಾದ ಪ್ರಕ್ರಿಯೆಯಾಗಿದೆ.

ಭಗವಂತನು ಎಲ್ಲ ಕಡೆ ಇದ್ದಾನೆ. ಅಂದರೆ ಇದರ ಅರ್ಥ ಭಗವತ್ಪ್ರೇಮ ನಿರಾಕಾರ ಎಂದರ್ಥವಲ್ಲ. ಮಾನವನಿಗೆ ಪ್ರೀತಿ ಮಾಡಲು ಒಂದು ವಸ್ತುವಿನ ಅಗತ್ಯವಿದೆ. ಪ್ರೀತಿ ಪಾತ್ರವಾಗದೇ ಇರುವಂತಹ ವಸ್ತುವಿನಿಂದ ಮನುಷ್ಯನಿಗೆ ಏನೂ ಮಾಡಲು ಸಾಧ್ಯವಿಲ್ಲ. ನಾವು ಭಗವಂತನನ್ನು ಪ್ರೀತಿಸುವುದರಿಂದ ಅವನು ಯಾವಾಗಲೂ ಇರುತ್ತಾನೆ ಮತ್ತು ಎಲ್ಲ ಕಡೆಗಳಲ್ಲಿಯೂ ಅವನನ್ನು ನಾವು ಕಾಣಬಹುದು.

ಆಧ್ಯಾತ್ಮಿಕ ಪ್ರಗತಿಯು ಭಗವತ್ಪ್ರೇಮದ ಪ್ರಗತಿಯಾಗಿದೆ. ಅದು ಕೊಡುವ ಮತ್ತು ತೆಗೆದುಕೊಳ್ಳುವ ಪ್ರಕ್ರಿಯೆಯಾಗಿದೆ. ನಾವು ಎಲ್ಲವನ್ನೂ ಭಗವಂತನಿಗೆ ಕೊಡುವುದರ ಮೂಲಕ ಅದನ್ನು ಪ್ರಾರಂಭಿಸುತ್ತೇವೆ. ನಾವು ಎಲ್ಲವನ್ನು ಭಗವಂತನಿಗೆ ಕೊಡಲು ಸಿದ್ಧರಾಗಿರಲೇಬೇಕು. ಏಕೆಂದರೆ ಈ ಎಲ್ಲವೂ ಅವನದೇ ಆಗಿದೆ.

ನಮ್ಮ ದೇಹ ಮತ್ತು ಇಂದ್ರಿಯಗಳು ಕೂಡ ಭಗವಂತನಿಗೆ ಸಂಬಂಧಪಟ್ಟಿವೆ. ಅವನು ನಮಗೆ ಇಂದ್ರಿಯಗಳನ್ನು ಕೊಟ್ಟಿದ್ದಾನೆ. ಏಕೆಂದರೆ ಇಂದ್ರಿಯಗಳಿಂದ ಸುಖವನ್ನು ಪಡೆದು ಸಂತೋಷಿಸಲು, ನಾವು ಕೃಷ್ಣನಿಗೆ ಸಮಸ್ತವನ್ನು ಸಮರ್ಪಿಸಿದರೆ ಕೃಷ್ಣ ತನ್ನನ್ನು ತಾನೇ ನಮಗೆ ಅರ್ಪಿಸಿಕೊಳ್ಳುತ್ತಾನೆ. ಯಾವಾಗ ನಮ್ಮೊಂದಿಗೆ ಕೃಷ್ಣನಿದ್ದಾನೋ ಆಗ ನಮಗೆ ಏನೂ ಬೇಡವಾಗುತ್ತದೆ.

ನಾವು “ಇದು ನನ್ನ ದೇಹ”, “ನನ್ನ ಇಂದ್ರಿಯಗಳು’ ಎಂದು ಹೇಳುತ್ತೇವೆ. ಏಕೆಂದರೆ ಇವು ನಮಗೆ ಉಪಯೋಗಿಸಲು ಕೊಡಲ್ಪಟ್ಟಿವೆ. ನಿಜವಾಗಿಯೂ ಅವು ಕೃಷ್ಣನಿಗೆ ಸಂಬಂಧಪಟ್ಟಿದ್ದು ಎಂದು ತಿಳಿದುಕೊಂಡು ನಾವು ಅವನ ಉದ್ದೇಶಗಳಿಗಾಗಿಯೇ ಉಪಯೋಗಿಸಬೇಕು.

ನಮ್ಮ ತುಂಡು, ತುಂಡು ಪ್ರಜ್ಞೆಯು ಅವನ ಪೂರ್ಣದೊಂದಿಗೆ ಕೂಡಿಕೊಳ್ಳಬೇಕು. ನಮ್ಮ ಶರೀರವು ಭಗವಂತನಿಂದ ಕೊಡಲ್ಪಟ್ಟ ಆಹಾರದ ಮೇಲೆ ಜೀವಿತವಾಗಿದೆ. ಆದ್ದರಿಂದ ನಾವು ಅವನನ್ನು ಬಿಟ್ಟು ಬೇರೆ ಉದ್ದೇಶಗಳಿಗೆ ಈ ದೇಹವನ್ನು ಏಕೆ ಉಪಯೋಗಿಸಬೇಕು? ನಮ್ಮ ಎಲ್ಲ ಉದ್ದೇಶಗಳು ಆಧ್ಯಾತ್ಮಿಕವಾಗಿರಬೇಕು.

ಏಕೆಂದರೆ ನಮ್ಮ ಚೈತನ್ಯವು ಎಲ್ಲ ಉದ್ದೇಶಗಳ ಆಧಾರವಾಗಿದೆ. ಪರ್ವತ, ಕಲ್ಲುಗಳು ಇತರೆ ಯಾವುದೇ ಬೆಳೆದರೂ ಅದರಲ್ಲಿ ಚೈತನ್ಯವಿದೆ. ಇಂದಿನ ವಿಜ್ಞಾನವು ಕೂಡ ಇಡೀ ವಿಶ್ವವು ಬೆಳೆಯುತ್ತಿದೆ ಎಂಬುದನ್ನು ಸಮರ್ಥಿಸುತ್ತದೆ. ಅಂದ ಮೇಲೆ ಈ ವಿಶ್ವದಲ್ಲಿಯೂ ಚೈತನ್ಯಶಕ್ತಿ ಇರಲೇಬೇಕು. ನಿರ್ಜಿವ ಪ್ರಾಣಿ ಅಥವಾ ನಿರ್ಜೀವ ಗಿಡಗಳಿಗೆ ಆಧ್ಯಾತ್ಮಿಕ ಕಿಡಿಯಿಲ್ಲದ ಮಗುವು ಬೆಳೆಯುವುದಿಲ್ಲ.

ನಾವು ಜೀವಿಗಳು ಆಧ್ಯಾತ್ಮಿಕವಾಗಿದ್ದೇವೆ. ನನ್ನ ಪ್ರಜ್ಞೆಯೇ ಅದರ ಲಕ್ಷಣ. ಕೃಷ್ಣನು ಪರಮ ಚೈತನ್ಯನಾಗಿದ್ದಾನೆ. ಆದ್ದರಿಂದ ಅವನು ನೈಸರ್ಗಿಕವಾದ ನಿಜವಾದ ಧಾಮವಾಗಿದ್ದಾನೆ. ಪ್ರಜ್ಞೆಯ ಮೂಲ ಹೋರಾಟದ ಉದ್ದೇಶವೇ ಪರಮ ಪ್ರಭುವಾಗಿದೆ.

ಶಾಸ್ತ್ರಗಳು ಪರಮಪ್ರಭುವಿಗೆ ನಿರಾಕಾರ ರೂಪವೆಂದು ಹೇಳಿದಾಗ ಅದರ ಅರ್ಥ ಕೃಷ್ಣನಿಗೆ ಆಧ್ಯಾತ್ಮಿಕ ರೂಪವಿದೆ. ಅವನು ಎಲ್ಲ ಕಡೆಯೂ ಅಂತರ್ಯಾಮಿಯಾಗಿದ್ದಾನೆ ಎಂದರ್ಥ. ಇದಕ್ಕೆ ಉದಾಹರಣೆಯಾಗಿ ಸೂರ್ಯನನ್ನು ಹೋಲಿಸಿ ಹೇಳಬಹುದು. ಸೂರ್ಯ ಒಂದೇ ಇದ್ದರೂ ಅದಕ್ಕೊಂದು ರೂಪವಿದೆಯೆಂದು ಅಲ್ಲಗಳೆಯಲು ಸಾಧ್ಯವಿಲ್ಲ. ಏಕೆಂದರೆ ಅದು ಒಂದೇ ಆಗಿದ್ದರೂ ಅದನ್ನು ಎಲ್ಲ ಜಾಗಗಳಲ್ಲಿಯೂ ನಾವು ನೋಡಬಹುದು.

ಕೃಷ್ಣನಿಗೆ ಇಂದ್ರಿಯಗಳಿಲ್ಲ ಎಂದರೆ ಅವನಿಗೆ ನಮ್ಮಂತೆ ಅಪೂರ್ಣವಾದ, ಮಿತಶಕ್ತಿಯ ಇಂದ್ರಿಯಗಳಿಲ್ಲ ಎಂದರ್ಥ. ಕೃಷ್ಣ ಮತ್ತು ಜೀವಿಗಳ ನಡುವಿನ ವ್ಯತ್ಯಾಸವೇನೆಂದರೆ ಕೃಷ್ಣನು ಶ್ರೇಷ್ಠ ಪರಮ ಪುರುಷನಾಗಿದ್ದಾನೆ. ಜೀವಿಗಳೆಲ್ಲರೂ ಅವನಿಗೆ ಅಧೀನವಾಗಿವೆ. ನಾವು ಜೀವಿಗಳು ಬಂಗಾರದ ಧೂಳಿನ ಒಂದು ಕಣವಾಗಿದ್ದೇವೆ.

ಆದರೆ ಕೃಷ್ಣನು ಇಡೀ ಬ೦ಗಾರದ ದೈತ್ಯ ಪರ್ವತವೇ ಆಗಿದ್ದಾನೆ. ಕೃಷ್ಣನು ಇಂದ್ರಿಯ ಸುಖದಲ್ಲಿ ತೊಡಗಿರುವಂತೆ ಕಾಣುವುದು ಅವನು ತನ್ನ ಭಕ್ತರಿಗೆ ಸಂತೋಷ ಪಡಿಸುವುದಕ್ಕೋಸ್ಕರ ಮಾತ್ರ. ಕೃಷ್ಣನಿಗೆ ಸ್ವತಃ ಇಂದ್ರಿಯ ತೃಪ್ತಿಯ ಅವಶ್ಯಕತೆಯಿಲ್ಲ. ಅವನಿಗೆ ತನ್ನ ಭಕ್ತರ ಶೋಷಣೆ ಮಾಡುವ ಯಾವ ಆಸೆಯೂ ಇಲ್ಲ.

ಆದರೆ ಭಕ್ತನಾದವನು ತನ್ನ ಸೇವೆಯನ್ನು ಮಾಡಲು ಇಚ್ಛಿಸುವುದರಿಂದ ಕೃಷ್ಣನು ಅವರನ್ನು ತನ್ನ ಸೇವಕರೆಂದು ಇಟ್ಟುಕೊಳ್ಳುತ್ತಾನೆ. ತನ್ನ ಭಕ್ತರಿಗೆ ಪ್ರೀತಿಯನ್ನು ಕೊಡುವುದಕ್ಕಾಗಿಯೇ ಕೃಷ್ಣನು ಇಂದ್ರಿಯ ಸುಖದಲ್ಲಿ ತೊಡಗಿದ್ದಾನೆ. ಭಕ್ತನು ತನಗೆ ಕೊಟ್ಟಿರುವುದಕ್ಕಿಂತ ಹೆಚ್ಚಿನದನ್ನು ಕೃಷ್ಣ ಭಕ್ತನಿಗೆ ದಯಪಾಲಿಸುತ್ತಾನೆ.

ಅದೇ ಶಾಸ್ತ್ರಗಳಲ್ಲಿ ಕೃಷ್ಣನು ಪದಗಳ ಆಚೆ ಇದ್ದಾನೆ ಎಂದರೆ ಅವನು ಸೂಕ್ಷ್ಮಾತಿಸೂಕ್ಷ್ಮನಾಗಿದ್ದಾನೆ ಎಂದು ಹೇಳಲಾಗಿದೆ. ಅಂದರೆ ಅದರ ಅರ್ಥ ಅವನಿಗೆ ಇಂದ್ರಿಯಗಳು, ವಾಕ್ ಶಕ್ತಿ ಇಲ್ಲವೆಂದು ಅಲ್ಲ. ಕೃಷ್ಣನಿಗೆ ನಮ್ಮಂತೆ ಗುಣಗಳಿವೆ. ಆದರೆ ಅವನ ಗುಣಗಳು ಆಧ್ಯಾತ್ಮಿಕ, ಶುದ್ಧ ಮತ್ತು ಅಳತೆಮೀರಿದ್ದಾಗಿದೆ.

ನಮ್ಮ ಗುಣಗಳು ಕೂಡ ಆಧ್ಯಾತ್ಮಿಕವಾಗಿವೆ. ಆದರೆ ಅವು ಐಹಿಕ ಪ್ರಕೃತಿಯಿಂದ ಆವರಿಸಲ್ಪಟ್ಟಿವೆ. ಆದುದರಿಂದ ಅವು ಮಿತವಾಗಿವೆ. ಕೃಷ್ಣನ ಲೋಕ ನಮ್ಮ ಅಳತೆಗೆ ಮೀರಿದ ಲೋಕವಾದರೂ ಕೃಷ್ಣ ನಮ್ಮ ಈ ಲೋಕದಲ್ಲಿಯೂ ಇದ್ದಾನೆ. ಆದರೆ ಅವನು ಯಾವಾಗಲೂ ತನ್ನ ಶುದ್ಧ ಭಕ್ತರೊಂದಿಗೆ ಇದ್ದಾನೆ.

ನಾವು ಅವನ ನಾಮಜಪವನ್ನು ಮಾಡಿದಾಗ ಅವನು ನಮ್ಮ ನಾಲಗೆಯ ಮೇಲೂ ಇದ್ದಾನೆ. ಜನರು ಹೇಳುತ್ತಾರೆ – ‘ಕೃಷ್ಣನು ಭೌತಿಕ ದೇಹದಲ್ಲಿ ಜನಿಸುವುದಿಲ್ಲ ಎಂದು.’ ಆದರೆ ಏಕೆ ಸಾಧ್ಯವಿಲ್ಲ? ಅವನು ಎಲ್ಲ ಕಡೆಯೂ ಇದ್ದಾನೆ, ಎಲ್ಲವನ್ನು ಸೃಷ್ಟಿಸುತ್ತಾನೆ ಎಂದಾಗ ಸಾಮಾನ್ಯ ಮನುಷ್ಯ ಗರ್ಭದಲ್ಲಿ ಸಾಮಾನ್ಯ ಶಿಶುವಾಗಿ ಏಕೆ ಜನಿಸಲಾರ?

ಕೃಷ್ಣನು ಒಂದೇ ಕಾಲದಲ್ಲಿ ಏಕವಾಗಿದ್ದಾನೆ ಮತ್ತು ಅನೇಕವಾಗಿದ್ದಾನೆ. ಅವನು ವಿಭಜಿಸಲಾರದವನಾಗಿದ್ದರೂ ಕೂಡ ಒಂದು ಭಾಗವಾದಂತೆ ಕಾಣುತ್ತಾನೆ. ಸಾಮಾನ್ಯ ಜನರು ಕೃಷ್ಣನು ಐಹಿಕ ಪ್ರಕೃತಿಯ ನಿಯಮಗಳ ಆಚೆ ಇದ್ದಾನೆ ಎಂಬುದು ತಿಳಿದಿಲ್ಲ.

ಆಧ್ಯಾತ್ಮಿಕ ಕ್ಷೇತ್ರದಲ್ಲಿ ಒಂದರಿಂದ ಒಂದನ್ನು ಕಳೆದರೆ ಒಂದು ಉಳಿಯುತ್ತದೆ. ನೀವು ಕೃಷ್ಣನಿಂದ ಎಷ್ಟೇ ಏನೇ ಪಡೆದುಕೊಂಡರೂ ಅವರು ಪೂರ್ಣ ಮತ್ತು ಪರಿಪೂರ್ಣನಾಗಿದ್ದಾನೆ. ಅವನೇ ಹೇಳಿದಂತೆ ಅದು ಅವನ ಸ್ವರೂಪವೇ ಆಗಿದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi