ಶ್ರೀಕೃಷ್ಣನ ಅಷ್ಟ ಮಹಿಷಿಯರು

ಮತ್ತು ಮಕ್ಕಳು

– ಆಧಾರ: ಭಾಗವತ 10ನೇ ಸ್ಕಂಧ, 1ನೇ ಅಧ್ಯಾಯ

ಶ್ರೀ ಕೃಷ್ಣನಿಗೆ ಹದಿನಾರು ಸಾವಿರದ ಒಂದು ನೂರಾ ಎಂಟು ಪತ್ನಿಯರು. ಅವರಲ್ಲಿ ಎಂಟು ಮಂದಿ ‘ಅಷ್ಟ ಮಹಿಷಿ’ಯರೆಂದೇ ಕರೆಯಲ್ಪಡುವರು. ಅವರೆಲ್ಲರಿಗೂ ತಲಾ ಹತ್ತು ಮಂದಿ ಮಕ್ಕಳು. ಭಗವಾನ್ ಶ್ರೀಕೃಷ್ಣನ ಅಷ್ಟ ಪತ್ನಿಯರು ಮತ್ತು ಅವರ ಮಕ್ಕಳ ಹೆಸರುಗಳನ್ನು ಇಲ್ಲಿ ನೀಡಲಾಗಿದೆ;

ರುಕ್ಮಿಣಿ : ಪ್ರದ್ಯುಮ್ನ ಚಾರುದೇಷ್ಣ, ಸುದೇಷ್ಣ, ಚಾರುದೇಹ, ಸುಚಾರು, ಚಾರುಗುಪ್ತ, ಭದ್ರಚಾರು, ಚಾರುಚಂದ್ರ, ವಿಚಾರು ಮತ್ತು ಚಾರು.

ಸತ್ಯಭಾಮ: ಭಾನು, ಸುಭಾನು, ಸ್ವರ್ಭಾನು, ಪ್ರಭಾನು, ಭಾನುಮನ್, ಚಂದ್ರಭಾನು, ಬೃಹದ್ಭಾನು, ಅತಿಭಾನು, ಶ್ರೀಭಾನು ಮತ್ತು ಪ್ರತಿಭಾನು.

ಜಾಂಬವತಿ : ಸಾಂಬ, ಸುಮಿತ್ರ, ಪುರುಜಿತ್, ಶತಜಿತ್, ಸಹಸ್ರಜಿತ್, ವಿಜಯ, ಚಿತ್ರಕೇತು, ವಸುಮಾನ್, ದೈವಿಕ ಮತ್ತು ಕ್ರತು.

ನಗ್ನಜಿತಿ : ವೀರ, ಚಂದ್ರ, ಅಶ್ವಸೇನ, ಚಿತ್ರಗು, ವೇಗವಾನ್, ವೃಷ, ಆಮ, ಶಂಕು, ವಸು ಮತ್ತು ಕುಂತಿ.

ಕಾಳಿಂದಿ : ಶ್ರುತ, ಕವಿ, ವೃಷ, ವೀರ, ಸುಬಾಹು, ಭದ್ರ, ಶಾಂತಿ, ದರ್ಶ, ಪೂರ್ಣಮಾಸ ಮತ್ತು ಸೋಮಕ.

ಮದ್ರಾ : ಪ್ರಘೋಷ, ಗಾತ್ರವಾನ್, ಸಿಂಹ, ಬಲ, ಪ್ರಬಲ, ಊರ್ಧಗ, ಮಹಾಶಕ್ತಿ, ಸಹಾ, ಓಜ ಮತ್ತು ಅಪರಾಜಿತ.

ಮಿತ್ರವಿಂದಾ : ವೃಕ, ಹರ್ಷ, ಅನಿಲ, ಗೃಧ್ರ, ವರ್ಧನ, ಉನ್ನದ, ಮಹಾಂಶ, ಪವನ, ವಹ್ನಿ ಮತ್ತು ಕ್ಷುಧಿ.

ಭದ್ರಾ: ಸಂಗ್ರಾಮಜಿತ, ಬೃಹತ್ಸೇನ, ಸುರ, ಪ್ರಹರಣ, ಅರಿಜಿತ್, ಜಯ, ಸುಭದ್ರ, ವಾಮ, ಆಯುರ್ ಮತ್ತು ಸತ್ಯಕ.

ಇವರಷ್ಟೇ ಅಲ್ಲದೆ ಶ್ರೀಕೃಷ್ಣನಿಗೆ ರೋಹಿಣಿ ಎಂಬ ಪತ್ನಿಯಲ್ಲಿ ದೀಪ್ತಿಮಾನ್, ತಾಮ್ರತಪ್ತ ಮೊದಲಾದ ಹತ್ತು ಮಂದಿ ಶೂರರು ಜನಿಸಿದರು. ಜೊತೆಗೆ ಎಲ್ಲ ಹದಿನಾರು ಸಾವಿರ ಪತ್ನಿಯರಲ್ಲೂ ಹತ್ತು ಮಕ್ಕಳು ಜನಿಸಿ, ಕೃಷ್ಣನ ಮಕ್ಕಳ ಸಂಖ್ಯೆ ಲಕ್ಷವನ್ನು ಮೀರಿತು!

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi