ಬಾವಿಯೊಳಗಿನ ಕಪ್ಪೆ

ಪಾತ್ರಗಳು: ಬಾವಿಕಪ್ಪೆ (ಬಾ.ಕ), ಸಮುದ್ರ ಕಪ್ಪೆ (ಸ.ಕ)

ಬಾ.ಕ: ಆಹಾ! ನನ್ನ ಬಾವಿ…”ಇದಷ್ಟು ಸುಂದರವಾಗಿದೆ. ಇಂತಹಾ ಬಾವಿಯಲ್ಲಿ ವಾಸಿಸುತ್ತಿರುವ ನನಗಿಂತ ಅದೃಷ್ಟವಂತ ಬೇರೆ ಯಾರಿದ್ದಾನೆ?

(ಬಾ. ಕ. ಯು ನಿಂತಲ್ಲೆ ತಿರುಗುತ್ತ ವಟಗುಟ್ಟುವ ಸದ್ದು ಮಾಡುವುದು) ಓಹ್! ನನ್ನ ಬಾವಿಯ ಗೋಡೆಗಳೆಷ್ಟು ಚೆಂದ! ಇದರ ನೀರೆಷ್ಟು ಚೆಂದ!! ಓಹ್! ಓಹ್!!

ಸ.ಕ: (ಬಾವಿಯೊಳಗೆ ಜಿಗಿಯುತ್ತಾ…) ಓ ಗೆಳೆಯಾ, ನನ್ನ ಪ್ರೀತಿಯ ಗೆಳೆಯಾ, ಎಲ್ಲಿದ್ದೀಯೆ?

ಬಾ.ಕ: ಏನಯ್ಯಾ!? ಎಲ್ಲಿ ಹೋಗಿಬಿಟ್ಟಿದ್ದೆ ನೀನು? ಬಾ ಬಾ… ನನ್ನನ್ನು ನೋಡು, ನಾನಂತೂ ಈ ಬಾವಿಯನ್ನಗಲಿ ಒಂದು ಘಳಿಗೆ ಇರಲಾರೆ.

ಸ.ಕ: ಬಿಡು ಬಿಡು, ನಾನು ಅದೆಷ್ಟು ದೊಡ್ಡ ಸಮುದ್ರ ನೋಡಿ ಬಂದೆ ಗೊತ್ತಾ? ನೀನು ಊಹಿಸಲೂ ಸಾಧ್ಯವಿಲ್ಲ!

ಬಾ.ಕ: ಏನು? ಸಮುದ್ರವಾ? ಅದೇನೂ ನನ್ನ ಬಾವಿಯಷ್ಟು ದೊಡ್ಡದಿರಲಾರದು ಅಲ್ಲವೇ?

ಸ.ಕ: ಓಹ್! ಅದು ಬಹಳ ಬಹಳ ದೊಡ್ಡದು.

ಬಾ.ಕ: ಸ್ವಲ್ಪ ಸುಮ್ಮನಿರ್ತೀಯಾ?

ಸ.ಕ: ನಿಜವಾಗ್ಲೂ…

ಬಾ.ಕ: ನನ್ನ ಬಾವಿಯ ಎರಡರಷ್ಟಿದೆಯೇ ನಿನ್ನ ಸಮುದ್ರ?

ಸ.ಕ: ಅದಕ್ಕಿಂತಲೂ ಬಹಳ ದೊಡ್ಡದು.

ಬಾ.ಕ: ನನ್ನ ಬಾವಿಯ ಐದರಷ್ಟು ದೊಡ್ಡೆದೇ?

ಸ.ಕ: (ನಗುತ್ತ) ಖಂಡಿತವಾಗ್ಲೂ ಅದು ಮತ್ತೂ ಬಹಳ ದೊಡ್ಡದು!

ಬಾ.ಕ: ನನ್ನ ಬಾವಿಯ ಹತ್ತರಷ್ಟು!?

ಸ.ಕ: ಛೆ! ಛೆ!! ಅದಕ್ಕಿಂತಲೂ ದೊಡ್ಡದಿದೆ ಸಮುದ್ರ.

ಬಾ.ಕ: ( ಕಿರುಚಾಡುತ್ತಾ) ನನ್ನ ಬಾವಿಗಿಂತ ನೂರುಪಟ್ಟು ದೊಡ್ಡದಿದೆಯೇನು ಅದು?

ಸ.ಕ: (ತಲೆ ಮೇಲೆ ಕೈ ಇಟ್ಟುಕೊಳ್ಳುತ್ತಾ) ಗೆಳೆಯ, ಸಮುದ್ರ ಎಷ್ಟು ದೊಡ್ಡದಿದೆಯೆಂದು ನೀನು ಊಹಿಸಲಾರೆ. ನೀನೇಕೆ ಅದನ್ನೊಮ್ಮೆ ನೋಡಿ ಬರಬಾರದು?

ಬಾ.ಕ: ನಾನೇಕೆ ಹೋಗಲಿ? (ಸಿಡಿಮಿಡಿಗುಟ್ಟುತ್ತ, ಉಸಿರೆಳೆದುಕೊಂಡು ಮೈಯುಬ್ಬಿಸುತ್ತಾ) ಅದೇನು ಇಷ್ಟು ದೊಡ್ಡದಾ?

ಸ.ಕ: ಇಲ್ಲ ಇಲ್ಲ, ಇಲ್ಲ!

ಬಾ.ಕ: (ಮತ್ತೂ ಹೆಚ್ಚು ಮೈಯುಬ್ಬಿಸಿ) ಸಮುದ್ರ ಇ….. ಷ್ಟು…. ದೊಡ್ಡದಾ?

ಸ.ಕ: ಛೆ! ಬಿಟ್ಟು ಬಿಡು, ಖಂಡಿತಾ ಇಲ್ಲ.

ಬಾ.ಕ: (ಮತ್ತಷ್ಟು ಉಸಿರೆಳೆದುಕೊಂಡು ಮೈ ಉಬ್ಬಿಸುತ್ತಾ…) ಇ…ಷ್ಟು…. ದೊ…ಡ್‌…ಡ್ಡ…ದಾ… ನಿ… (ಎನ್ನುತ್ತಲೇ ಹೊಟ್ಟೆ ಒಡೆದು ಸತ್ತುಹೋಗುತ್ತದೆ. ಈ ಸಂದರ್ಭದಲ್ಲಿ ಪರದೆ ಹಿಂದಿನಿಂದ ಬಲೂನು ಒಡೆದ ಸದ್ದು ಬರುತ್ತದೆ)

ತಿರುಳು: ಶ್ರೀಲ ಪ್ರಭುಪಾದರು ಆಧುನಿಕ ವಿಜ್ಞಾನಿಗಳನ್ನು ಬಾವಿ ಕಪ್ಪೆಯ ಥರದವರು ಎನ್ನುತ್ತಾರೆ. ಇಂಥವರು ತಮ್ಮ ಗ್ರಹಿಕೆಗೆ ನಿಲುಕದ ಸಂಗತಿಯನ್ನು ಅಪ್ರಬುದ್ಧವಾಗಿ ಅರಿಯಲು ಪ್ರಯತ್ನ ಪಡುತ್ತಾರೆ.

ಆಕರ: ಶ್ರೀಲ ಪ್ರಭುಪಾದರ ಬೋಧನೆಗಳು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi