ಧೂರ್ತ ಚಿಕ್ಕಮ್ಮ

ಆಕರ : ಮಾಯಾಪುರ ಉಪನ್ಯಾಸ, 26ನೇ ಜನವರಿ, 1974

ಒಮ್ಮೆ ಪ್ರಭುಪಾದರು ಅಪಾತ್ರರಿಗೆ ಕೊಡುವ ದಾನದಿಂದ ಆಗುವ ಅನಾಹುತಗಳು ಮತ್ತು ಅರಿವಿನಿಂದಲೇ ಮಾಡಿದ ತಪ್ಪುಗಳಿಂದ ಆಗುವ ಪರಿಣಾಮಗಳನ್ನು ಕುರಿತು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ, ಬೇಕೆಂದೇ ತನ್ನ ಸಾಕುಮಗನನ್ನು ತಪ್ಪು ದಾರಿಗೆಳೆದ ಧೂರ್ತ ಹೆಂಗಸಿನ ಕಥೆ ಹೇಳಿದರು.-

ಒಬ್ಬ ಬಾಲಕ ತಂದೆ ತಾಯಿಯರನ್ನು ಕಳೆದುಕೊಂಡು ಚಿಕ್ಕಮ್ಮನ ಆಶ್ರಯಕ್ಕೆ ಬಂದ. ಆಕೆ ಅವನ ಬಗ್ಗೆ ವಿಶೇಷ ಕಾಳಜಿ ತೋರದೆ, ಎಲ್ಲೆಂದರಲ್ಲಿ ವ್ಯವಹರಿಸುವ ಸ್ವೇಚ್ಛೆ ನೀಡಿದಳು. ಆ ಹುಡುಗ ಬಹಳ ಬೇಗ ದುಷ್ಟರ ಸಹವಾಸಕ್ಕೆ ಸಿಲುಕಿದ, ಕಳ್ಳತನ ಮೊದಲು ಮಾಡಿದ.

ಒಮ್ಮೆ ಆತ ತಾನು ಕದ್ದ ವಸ್ತುವನ್ನು ಚಿಕ್ಕಮ್ಮನಿಗೆ ತೋರಿಸಿದ. ಆಕೆ ಸಂತೋಷದಿಂದ ಅವನನ್ನಪ್ಪಿ ಮುದ್ದಾಡಿದಳು. ಇದರಿಂದ ಪ್ರೋತ್ಸಾಹ ಪಡೆದ ಬಾಲಕ ಈ ದುಷ್ಕೃತ್ಯವನ್ನು ಮುಂದುವರಿಸಿಕೊಂಡು ಹೋದ. ಮುಂದೆ ಅವನೊಬ್ಬ ಕುಖ್ಯಾತ ಕಳ್ಳನಾದ ಮತ್ತು ಕೊಲೆ ಆಪಾದನೆಯ ಮೇಲೆ ಜೈಲು ಸೇರಿದ.

ಆತನ ಅಪರಾಧ ದೃಢಪಟ್ಟು, ಗಲ್ಲು ಶಿಕ್ಷೆ ವಿಧಿಸಲಾಯಿತು. ನೇಣಿಗೇರಿಸುವ ಮುನ್ನ ಆತನ ಕೊನೆಯ ಇಚ್ಛೆ ಏನೆಂದು ಕೇಳಲಾಯಿತು.

ಆ ಹುಡುಗ, ತಾನೊಮ್ಮೆ ತನ್ನ ಚಿಕ್ಕಮ್ಮನ ಬಳಿ ಮಾತನಾಡಬೇಕೆಂದು ಹೇಳಿದ. ಅವನ ಚಿಕ್ಕಮ್ಮ ಅಳುತ್ತ ನಿಂತಿದ್ದವಳು, ತನ್ನ ಸಾಕುಮಗ ಏನೋ ಹೇಳುವನೆಂದು ಕೊಂಚ ಮುಂದೆ ಬಗ್ಗಿದಳು. ಆ ಹುಡುಗ ಆಕೆಯ ಕಿವಿಯನ್ನು ಬಲವಾಗಿ ಕಚ್ಚಿ ಹಾಕಿದ. ಅವಳ ಕಿವಿಯಿಂದ ರಕ್ತ ಸೋರಲಾರಂಭಿಸಿತು.

ಅವನು ಉದ್ವೇಗದಿಂದ ಅರಚಿದ – “ನಾನು ಮೊದಲ ಬಾರಿ ಕಳುವು ಮಾಡಿದಾಗ ನೀನು ಮುದ್ದಿಸುವ ಬದಲು ದಂಡಿಸಿದ್ದರೆ, ನಾ ನ ಹೀಗಾಗುತ್ತಿರಲಿಲ್ಲ, ಮತ್ತು ನನಗೆ ಈ ಗತಿ ಬರುತ್ತಲೇ ಇರಲಿಲ್ಲ!”

ನೀತಿ : ದುಷ್ಕೃತ್ಯಗಳಿಗೆ ಪ್ರೋತ್ಸಾಹ ನೀಡುವುದು, ಅವನ್ನು ಮಾಡುವುದಕ್ಕಿಂತ ಘೋರ ಅಪರಾಧ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi