ಆಧಾರ: ಶ್ರೀ ಚೈತನ್ಯ ಚರಿತಾಮೃತ, ಆದಿಲೀಲಾ-7.106, ಶ್ರೀ ಶ್ರೀಮದ್ ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದರ ಭಾವಾರ್ಥ ವಿವರಣೆ
ಅಲ್ಪಾಕ್ಷರಮ್ ಅಸಂದಿಗ್ಧಂ ಸಾರವತ್ ವಿಶ್ವತೋಮುಖಮ್ |
ಅಸ್ತೋಭಮ್ ಅನವದ್ಯಂ ಚ ಸೂತ್ರಂ ಸೂತ್ರವಿದೋ ವಿದುಃ ||

”ಸೂತ್ರವು ಸೂಕ್ತಿಗಳ ಸಂಗ್ರಹ. ಇದು ಎಲ್ಲ ಜ್ಞಾನದ ಸಾರವನ್ನು ಅತ್ಯಂತ ಕಡಮೆ ಪದಗಳಲ್ಲಿ ವ್ಯಕ್ತಪಡಿಸುತ್ತದೆ. ವಿಶ್ವಮಾನ್ಯವೂ ದೋಷರಹಿತವೂ ಆಗಿರುತ್ತದೆ.”
(ವಾಯುಪುರಾಣ, ಸ್ಕಂದಪುರಾಣ)
ಜ್ಞಾನಕ್ಕೆ 3 ಬಗೆಯ ಆಕರಗಳಿವೆ. ಅವನ್ನು ‘ಪ್ರಸ್ಥಾನತ್ರಯ’ ಎಂದು ಕರೆಯುವರು. ಅವು:
1. ನ್ಯಾಯ ಪ್ರಸ್ಥಾನ – ವೇದಾಂತ ಸೂತ್ರ
2. ಶ್ರುತಿ ಪ್ರಸ್ಥಾನ – ಉಪನಿಷತ್ತು
3. ಸ್ಮೃತಿ ಪ್ರಸ್ಥಾನ – ಗೀತಾ, ಮಹಾಭಾರತ, ಪುರಾಣಗಳು
ವೇದಾಂತ ಸೂತ್ರವನ್ನು ಶ್ರೀ ವೇದವ್ಯಾಸರು ರಚಿಸಿದರು. ಅದರ ಅಧಿಕೃತ ವ್ಯಾಖ್ಯೆಯಾಗಿ ‘ಶ್ರೀಮದ್ಭಾಗವತ’ ವನ್ನು ಕೂಡ ಅವರು ರಚಿಸಿದರು.
ವೇದಾಂತ ಸೂತ್ರದಲ್ಲಿ 4 ಅಧ್ಯಾಯಗಳಿವೆ.
ಸಂಬಂಧ ಜ್ಞಾನ – 1 ಮತ್ತು 2ನೆಯ ಅಧ್ಯಾಯಗಳು – ಪರಮ ಪ್ರಭುವಿನೊಡನೆ ಜೀವಿಯ ಸಂಬಂಧದ ವಿವರಣೆ.

ಅಭಿಧೇಯ ಜ್ಞಾನ – 3ನೆಯ ಅಧ್ಯಾಯ – ಪರಮ ಪ್ರಭುವಿನೊಡನೆ ಜೀವಿಯು ವ್ಯವಹರಿಸಬೇಕಾದ ಸ್ವರೂಪದ (ಭಕ್ತಿಸೇವೆ) ವಿವರಣೆ.
ಪ್ರಯೋಜನ ಜ್ಞಾನ – 4ನೆಯ ಅಧ್ಯಾಯ – ಭಕ್ತಿಸೇವೆಯ ಪ್ರಯೋಜನಗಳ ವರ್ಣನೆ.
ಪ್ರತಿ ಅಧ್ಯಾಯವೂ 4 ಪಾದಗಳನ್ನು ಹೊಂದಿದ್ದು, ವೇದಾಂತ ಸೂತ್ರವು ಷೋಡಶ ಪಾದ ಎಂದೂ ಕರೆಯಲ್ಪಡುತ್ತದೆ. ಪ್ರತಿ ಪಾದವೂ 5 ಅಧಿಕರಣಗಳಲ್ಲಿ ಸಂಪೂರ್ಣವಾಗಿ ವಿವರಿಸಲ್ಪಟ್ಟಿದೆ. ಅವು:
1. ಪ್ರತಿಜ್ಞಾನ – ಪ್ರಕರಣ ಗ್ರಂಥದ ಉದ್ದೇಶದ ಶಾಸ್ತ್ರೋಕ್ತ ಘೋಷಣೆ.
2. ಹೇತು – ಕಾರಣ ವಿವರಣೆ.
3. ಉದಾಹರಣ – ಉದಾಹರಣೆಗಳ ನೀಡಿಕೆ.
4. ಉಪನಯ – ಕೃತಿಯ ವಸ್ತುವನ್ನು ಅರಿವಿನ ಹತ್ತಿರಕ್ಕೆ ತರುವಿಕೆ. ಹಾಗೂ
5. ನಿಗಮನ – ಪ್ರಮಾಣಭೂತ ವೈದಿಕ ಶಾಸ್ತ್ರಗಳ ಉದ್ಧರಣೆಯಿಂದ ಸಮರ್ಥಿಸುವಿಕೆ.
ಎಲ್ಲ ಪ್ರಮುಖ ಆಚಾರ್ಯರೂ ವೇದಾಂತ ಸೂತ್ರದ ವ್ಯಾಖ್ಯಾನಗಳನ್ನು ರಚಿಸಿದ್ದು, ಭಗವದ್ಭಕ್ತಿಸೇವೆಯ ಆಧಾರದ ಮೇಲೆ ರಚನೆಗೊಂಡ ವ್ಯಾಖ್ಯಾನಗಳು ಮಾತ್ರ ಅಧಿಕೃತ ವ್ಯಾಖ್ಯಾನಗಳಾಗಿವೆ.
ವಿದ್ವತ್ ವಲಯದಲ್ಲಿ ವೇದಾಂತ ಸೂತ್ರವನ್ನು ಇತರ ಕೆಲವು ಹೆಸರುಗಳಿಂದ ಕರೆಯಲಾಗುತ್ತದೆ. ಅವು ಹೀಗಿವೆ:
1. ಬ್ರಹ್ಮಸೂತ್ರ
2. ಶಾರೀರಕ ಸೂತ್ರ
3. ವ್ಯಾಸ ಸೂತ್ರ
4. ಬಾದರಾಯಣ ಸೂತ್ರ
5. ಉತ್ತರ ಮೀಮಾಂಸಾ
6. ವೇದಾಂತ ದರ್ಶನ ಇತ್ಯಾದಿ… ಇತ್ಯಾದಿ






Leave a Reply