ಹಲವು ಬಗೆಯ ಚಟ್ನಿಪುಡಿಗಳು

ವನಿತಾ ಕೃಷ್ಣ ಪಾಕಶಾಲೆ

– ಶ್ರೀಮತಿ ಎಂ. ಅಹಲ್ಯಾ

ಹುಣಸೆ ಮರದ ಎಲೆಗಳ ಚಟ್ನಿಪುಡಿ

ಬೇಕಾಗುವ ಪದಾರ್ಥಗಳು :

ಹುಣಸೆ ಎಲೆಗಳು – 200 ಗ್ರಾಂ

ಹುರಿದ ಕಡ್ಲೆಕಾಯಿ ಬೀಜ – 100 ಗ್ರಾಂ

ಹುರಿದ ಬಿಳಿ ಎಳ್ಳು -75 ಗ್ರಾಂ

ಕೆಂಪು ಮೆಣಸಿನಕಾಯಿ – 17

ಉಪ್ಪು – ರುಚಿಗೆ ತಕ್ಕಷ್ಟು

ಎಣ್ಣೆ ಅಥವಾ ತುಪ್ಪ – 2 ಚಮಚ

ಮಾಡುವ ವಿಧಾನ : ಹುಣಸೆ ಎಲೆಗಳನ್ನು ಬಿಸಿಮಾಡಿ ಪುಡಿಮಾಡಿಕೊಳ್ಳಬೇಕು. ಕಡ್ಲೆಕಾಯಿ ಬೀಜಗಳನ್ನು ಮತ್ತು ಎಳ್ಳನ್ನು ಬೇರೆ ಬೇರೆ ಪುಡಿಮಾಡಿಕೊಂಡು ಎಲ್ಲವನ್ನೂ ಎಣ್ಣೆಯಲ್ಲಿ ಬಿಸಿಮಾಡಿ ಸೇರಿಸಬೇಕು.

ಕರಿಬೇವಿನ ಸೊಪ್ಪಿನ ಚಟ್ನಿಪುಡಿ

ಬೇಕಾಗುವ ಪದಾರ್ಥಗಳು :

ಕರಿಬೇವಿನ ಸೊಪ್ಪು – 2 ಕಟ್ಟು

ಒಣಕೊಬ್ಬರಿ – 3/4 ಗಿಟಕು

ಉಪ್ಪು- ರುಚಿಗೆ ತಕ್ಕಷ್ಟು

ಕೆಂಪು ಮೆಣಸಿನಪುಡಿ – 1/2 ಟೀ ಚಮಚ

ತುಪ್ಪ – 3 ಚಮಚ

ಮಾಡುವು ವಿಧಾನ: ಕರಿಬೇವಿನ ಸೊಪ್ಪನ್ನು ಬಿಸಿಮಾಡಿ ಪುಡಿಮಾಡಬೇಕು. ಕೊಬ್ಬರಿಯನ್ನು ತುರಿದು ಸ್ವಲ್ಪ ಬಿಸಿಮಾಡಿ ಮತ್ತು ತುಪ್ಪವನ್ನು ಬಿಸಿ ಮಾಡಿ ಮೇಲೆ ತಿಳಿಸಿರುವ ಎಲ್ಲ ಪದಾರ್ಥಗಳನ್ನು ಸೇರಿಸಿ ಬಿಸಿಮಾಡಬೇಕು. ಇದೇ ತರಹ ಪುದಿನ ಸೊಪ್ಪು ಮತ್ತು ಸಬ್ಬಕ್ಕಿ ಸೊಪ್ಪಿನಲ್ಲಿ ಮಾಡಬಹುದು.

ಹುರಿಗಡಲೆ ಚಟ್ನಿಪುಡಿ

ಬೇಕಾಗುವ ಪದಾರ್ಥಗಳು:

ಹುರಿಗಡಲೆ – 250 ಗ್ರಾಂ

ಒಣ ಕೊಬ್ಬರಿ – 3/4 ಗಿಟುಕು

ಕೆಂಪು ಮೆಣಸಿನಕಾಯಿ – 18

ಹುಣಸೇಹಣ್ಣು – ಗೋಲಿ ಗಾತ್ರದಷ್ಟು

ಬೆಲ್ಲ – ಸ್ವಲ್ಪ

ಕೊತ್ತಂಬರಿ ಸೊಪ್ಪು – ಸ್ವಲ್ಪ

ಮಾಡುವ ವಿಧಾನ: ಮೆಣಸಿನಕಾಯಿಯನ್ನು ಸ್ವಲ್ಪ ಎಣ್ಣೆಯಲ್ಲಿ ಬಾಡಿಸಿಕೊಳ್ಳಬೇಕು, ಹುಣಸೇಹಣ್ಣು ಮತ್ತು ಕೊಬ್ಬರಿಯನ್ನು ಸ್ವಲ್ಪ ಬಿಸಿಮಾಡಿಕೊಂಡು ಅನಂತರ ಎಲ್ಲವನ್ನೂ ಸೇರಿಸಿ ಪುಡಿ ಮಾಡಿಕೊಳ್ಳಬೇಕು.

ಗೋಧಿ ಮತ್ತು ಬೇಳೆಗಳ ಚಟ್ನಿಪುಡಿ

ಬೇಕಾಗುವ ಪದಾರ್ಥಗಳು :

ಗೋಧಿ – 250 ಗ್ರಾಂ

ಕಡ್ಲೆಬೇಳೆ – 100 ಗ್ರಾಂ

ಉದ್ದಿನ ಬೇಳೆ – 100 ಗ್ರಾಂ

ಬ್ಯಾಡಗಿ ಮತ್ತು ಗುಂಟೂರು ಮೆಣಸಿನಕಾಯಿ-150 ಗ್ರಾಂ

ಒಣಕೊಬ್ಬರಿ ದೊಡ್ಡದು – 1 ಗಿಟಕು

ಹುಣಸೇಹಣ್ಣು – 1 ನಿಂಬೆಹಣ್ಣಿನ ಗಾತ್ರ

ಬೆಲ್ಲ – 1 ನಿಂಬೆ ಹಣ್ಣಿನ ಗಾತ್ರ

ಉಪ್ಪು – ರುಚಿಗೆ ತಕ್ಕಷ್ಟು

ಎಣ್ಣೆ – 1 ಚಮಚ

ಕರಿಬೇವಿನ ಸೊಪ್ಪು – 1 ಕಟ್ಟು

ಇಂಗು – ಸ್ವಲ್ಪ

ಮಾಡುವ ವಿಧಾನ: ಮೆಣಸಿನಕಾಯಿ, ಗೋಧಿ, ಉದ್ದಿನಬೇಳೆ, ಕರೀಬೇವಿನ ಸೊಪ್ಪು, ಕೊಬ್ಬರಿ, ಹುಣಸೇಹಣ್ಣು ಮತ್ತು ಕಡ್ಲೆಬೇಳೆಗಳನ್ನು ಬೇರೆ ಬೇರೆಯಾಗಿ ಹುರಿದುಕೊಂಡು ಅನಂತರ ಪುಡಿಮಾಡಿಕೊಂಡು ಎಲ್ಲವನ್ನು ಸೇರಿಸಿ ಮಿಕ್ಸಿಯಲ್ಲಿ ಪುಡಿಮಾಡಿಟ್ಟುಕೊಂಡರೆ ರುಚಿಯಾದ ಚಟ್ನಿಪುಡಿ ತಯಾರಾಗುತ್ತದೆ. ಎಲ್ಲ ತರಹದ ಪುಡಿಗಳನ್ನು ಶ್ರೀರಾಧಾಕೃಷ್ಣನಿಗೆ ಅರ್ಪಿಸಿ ಎಲ್ಲರೂ ಮನೆಯಲ್ಲಿ ಸೇವಿಸಿ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi