ಶಸ್ತ್ರಾಸ್ತ್ರಗಳು

ಶ್ರೀಲ ಪ್ರಭುಪಾದರು ಹೇಳುತ್ತಾರೆ… ”ಮಂತ್ರವನ್ನು ಮತ್ತು ನೀರನ್ನು ಅತ್ಯಂತ ಪ್ರಮುಖ ಸಂದರ್ಭಗಳಲ್ಲಿ ಮಾತ್ರ ಬಳಸಬೇಕು. ಇದನ್ನು ಸೂಕ್ಷ್ಮ ವಿಜ್ಞಾನ ಎನ್ನುವರು. ಇದು ಅಸಂಸ್ಕೃತವಲ್ಲ. ಅವರು ಅಣ್ವಸ್ತ್ರವನ್ನು ಅನ್ವೇಷಿಸಿರುವರು.

ಅದಕ್ಕೆ ಬಹಳಷ್ಟು ರಾಸಾಯನಿಕಗಳು ಬೇಕು. ಆದರೆ ನೀವು ಯಾವಾಗಿ ಉನ್ನತವಾದ ಸೂಕ್ಷ್ಮ ಹಂತಕ್ಕೆ ಬರುತ್ತೀರೋ, ಆಗ ಕೇವಲ ಮಂತ್ರ ಹಾಗೂ ನೀರು ಸಾಕಾಗುತ್ತದೆ. ರಾಸಾಯನಿಕಗಳ ಅಗತ್ಯವಿಲ್ಲ. ನೀವು ವೇದಗಳನ್ನು ಗಂಭೀರವಾಗಿ ಅಧ್ಯಯನ ಮಾಡಿದರೆ, ನೀವು ಕೊಡ ಅರ್ಜುನನಂತೆ ಕಲಿತು, ಯುದ್ಧ ಮಾಡಬಹುದು. ಅದರಿಲ್ಲೇನೂ ಕಷ್ಟವಿರದು. ನೀವು ಕೂಡ ಅತ್ಯುನ್ನತ ಯುದ್ಧ ವಿಜ್ಞಾನ ಕಲೆಯಲ್ಲಿ ಪಾರಂಗತರಾಗಬಹುದು.    (ಭಾಗವತ ಉಪನ್ಯಾಸ; ವೃಂದಾವನ 25.09.1976)

ಆಧುನಿಕ ಅಸ್ತ್ರಗಳು

ಇತ್ತೀಚಿನ ದಿನಗಳಲ್ಲಿ ಜಗತ್ತಿನ ಎಲ್ಲ ಪ್ರಮುಖ ಖಂಡಗಳಲ್ಲಿ ಯುದ್ಧ ಎನ್ನುವುದೊಂದು ಸಾಮಾನ್ಯ ಸಂಗತಿಯಾಗಿ ಹೋಗಿದೆ. ಇದರೊಂದಿಗೆ ಆಟೋ ಕ್ಯಾನನ್, ಗನ್, ಮಿಸೈಲ್, ರೈಫಲ್, ಟ್ಯಾಂಕ್, ಫೈಟರ್ ಜೆಟ್ಸ್, ಬಾಂಬ್, ಟಾರ್ಪೆಡೊ, ಸ್ನಿಪರ್, ಗ್ರೆನೇಡ್, ಪಿಸ್ತೂಲ್, ಮಾರ್ಟರ್, ರಾಕೆಟ್, ಬ್ಯಾಟಲ್ ಶಿಪ್, ಲ್ಯಾಂಡ್ ಮೈನ್, ಸಬ್‌ಮೆರೈನ್ ಮೊದಲಾದ ಹೆಸರುಗಳು ಚಿರಪರಿಚಿತವೆನ್ನುವಷ್ಟು ಸಾಧಾರಣವಾಗಿ ಹೋಗಿವೆ.

ಇವುಗಳ ಬಗ್ಗೆ ನಾವು ವಿವಿಧ ಮಾಧ್ಯಮಗಳಲ್ಲಿ ನೋಡಿಯೋ ಕೇಳಿಯೋ ಇರುತ್ತವೆ. ಇವುಗಳು ನಮ್ಮನ್ನು ಹಿಡಿದು ಕೂರಿಸುವಷ್ಟು ಆಸಕ್ತಿ ಉಳಿಸಿಲ್ಲ. ಬಾಹ್ಯಾಕಾಶ ಆಧರಿತ ಟಂಗಸ್ಟನ್ ರಾಡ್, ಸ್ಟನ್ ಬೇಸರ್, ಹೈಪರ್ ಸಾನಿಕ್ ಸ್ಕ್ರಾಮ್ ಜೆಟ್, ಮಿಲಿಮೀಟರ್ ವೇವ್ ಬೀಮ್‌ನ್, ಮೈಕ್ರೋವೇವ್ ಇ – ಬಾಂಬ್ ಮೊದಲಾದ ಹೊಸ ಶಬ್ದವೇನಾದರೂ ಕಿವಿಗೆ ಬಿದ್ದರೆ ಮಾತ್ರ ನಾವು ಅತ್ತ ಗಮನ ನೀಡುತ್ತೇವೆ. ಸೂಟ್ ನಿಂದ ಮುಚ್ಚಿ ಹೋದ ಟಿವಿ ಜರ್ನಲಿಸ್ಟನು, “ಇವು ಭವಿಷ್ಯದ ಶಸ್ತ್ರಾಸ್ತ್ರಗಳು” ಎಂದು ಕಿರುಚುತ್ತಿರುತ್ತಾನೆ.

ಆಚ್ಚರಿಯ ವಿಷಯವೆಂದರೆ, ಅಮೆರಿಕದ ಭೂಗರ್ಭಶಾಸ್ತ್ರಜ್ಞ ಕೃತಿಕಾರ, ಇತಿಹಾಸಜ್ಞ ಅಡ್ವೆಂಚರ್ ಅನ್‌ ಲಿಮಿಟೆಡ್ ಪ್ರೆಸ್‌ನ ಸಂಸ್ಥಾಪಕ ಹಾಗೂ ಸಂಶೋಧಕ ಡೇವಿಡ್ ಬೆಲ್ ಡ್ರೆಸ್ ಅವರು, ಈ ಎಲ್ಲ ಶಸ್ತ್ರಾಸ್ತ್ರಗಳು ಭವಿಷ್ಯದವಲ್ಲ. ಬದಲಿಗೆ ಭೂತ ಕಾಲದವು ಎಂದು ಹೇಳುತ್ತಾರೆ! ಅಚ್ಚರಿಯಾಯಿತೆ? ಬೆಲ್ ಡ್ರೆಸ್ ಪ್ರಕಾರ, ”ಮಹಾಭಾರತದಲ್ಲಿ ಉಲ್ಲೇಖಿಸಿರುವಂತೆ, ಅದರ ಮಹಾಯುದ್ಧವು ಯುದ್ಧವಿಮಾನಗಳು, ರಾಸಾಯನಿಕಗಳು, ಕ್ಷಿಪಣಿಗಳು, ಜೀವರಾಸಾಯನಿಕ ಅಸ್ತ್ರ ಹಾಗೂ ಅಣ್ವಸ್ತ್ರಗಳನ್ನು ಬಳಸಿ ನಡೆದಿತ್ತು.”

ಇದು ನಿಜವೇ? ಹೆಚ್ಚಿನ ವಿವರಗಳನ್ನು ತಿಳಿಯಲು ಪ್ರಯತ್ನಿಸೋಣ.

ಯುದ್ಧವಿಜ್ಞಾನ

ಪ್ರಾಚೀನ ಕಾಲದಲ್ಲಿ, ಯುದ್ಧ ವಿಜ್ಞಾನದ ಬೋಧನೆಯಿರುವ ಧನುರ್ವೇದವನ್ನು ಯುದ್ಧ ವಿದ್ಯಾಪಾರಂಗತರಾದ ದ್ರೋಣಾಚಾರ್ಯ, ಪರಶುರಾಮ ಮೊದಲಾದ ಆಚಾರ್ಯರು ಬೋಧಿಸುತ್ತಿದ್ದರು. ಅವರು ವೇದ ಮಂತ್ರಗಳ ಮೂಲಕ ಅಸ್ತ್ರಗಳನ್ನು ನಿಯಂತ್ರಿಸುವ ರಹಸ್ಯವನ್ನು ಉಪದೇಶಿಸುತ್ತಿದ್ದರು.

ಒಟ್ಟಾರೆ ಯುದ್ಧ ವಿಜ್ಞಾನವು ಭೌತಿಕ ಶಸ್ತ್ರಾಸ್ತ್ರಗಳ ಮೇಲೆ ಅವಲಂಬಿತವಾಗಿದ್ದರೂ ವೈದಿಕ ಮಂತ್ರಗಳಿಂದ ಸಂಸ್ಕಾರಗೊಂಡ ಬಾಣಗಳನ್ನು ಪ್ರಯೋಗಿಸುವ ಕಲೆಯು, ಮೆಶಿನ್‌ಗನ್ ಅಥವಾ ಆಟಂಬಾಂಬ್‌ಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಶಸ್ತ್ರಗಳ ಮೇಲಿನ ನಿಯಂತ್ರಣವು ವೈದಿಕ ಮಂತ್ರಗಳ ಮೂಲಕ ಸಾಧಿಸಲ್ಪಡುತ್ತದೆ.

ಮಹಾರಾಜ ದಶರಥನು ಶಬ್ದವೇಧಿ ವಿದ್ಯೆಯನ್ನು (ಶಬ್ದದ ಮೂಲಕ ಬಾಣಗಳನ್ನು ನಿಯಂತ್ರಿಸುವ ಕಲೆ) ಬಲ್ಲವನಾಗಿದ್ದನೆಂದು ರಾಮಾಯಣದಲ್ಲಿ ಉಲ್ಲೇಖಿಸಲಾಗಿದೆ. ವಸ್ತು ಅಥವಾ ಜೀವಿಯನ್ನು ನೋಡದೆ, ಕೇವಲ ಶಬ್ದವನ್ನನುಸರಿಸಿ ಬಿಲ್ಲನ್ನು ಪ್ರಯೋಗಿಸುವ ವಿದ್ಯೆಯಿದು. ಆದ್ದರಿಂದ ಇಂದಿನ ಒಟ್ಟಾರೆ ಯುದ್ಧ ಸಲಕರಣೆಗಳಿಗಿಂತ ಅದು ಅತ್ಯುತ್ತಮ ಯುದ್ಧ ವಿಜ್ಞಾನವಾಗಿದೆ.

ಭೌತಿಕ ವಸ್ತುಗಳು ಮತ್ತು ಆಯುಧಗಳು

ನಾವು ನಮ್ಮ ಪಂಚೇಂದ್ರಿಯಗಳಿಂದ ಗ್ರಹಿಸಬಹುದಾದ ವಸ್ತುಗಳೆಲ್ಲವೂ ಭೂಮಿ, ನೀರು, ಅಗ್ನಿ, ವಾಯು ಹಾಗೂ ಆಕಾಶಗಳೆಂಬ ಪಂಚಮೂಲ ವಸ್ತುಗಳಿಂದ ನಿರ್ಮಿತವಾಗಿವೆ. ವೈದಿಕ ಕಾಲದಲ್ಲಿ ಈ ಪಂಚಮೂಲ ವಸ್ತುಗಳಿಂದ ತಯಾರಾದ ಅನೇಕ ಆಯುಧಗಳಿದ್ದಂತೆ ತೋರುತ್ತದೆ.

ಆದರೆ ಆಧುನಿಕ ಕಾಲದಲ್ಲಿ ಅಗ್ನಿಯನ್ನೊಳಗೊಂಡ ಆಯುಧವೇ ಹೆಚ್ಚು. ಅಣ್ವಸ್ತ್ರಗಳು ಬಗೆಯ ಭೌತಿಕ ವಸ್ತುಗಳನ್ನೊಳಗೊಂಡ ಶಸ್ತ್ರಾಸ್ತ್ರಗಳು ಇರುತ್ತಿದ್ದವು. ವಾಯುಅಸ್ತ್ರ ಕೂಡ ಅಗ್ನಿಮೂಲದವೇ ಆಗಿವೆ. ಆದರೆ ಪ್ರಾಚೀನ ಕಾಲದಲ್ಲಿ ಎಲ್ಲ ವಿವಿಧ ಆಯುಧ (ಟಾರ್ನೆಡೋ) ದ ವಿವರಣೆಯಿರುವ ಪಾಠಗಳನ್ನು ನಾವು ಅಂದಿನ ಕೃತಿಗಳಲ್ಲಿ ನೋಡಬಹುದು.

ಪ್ರಾಚೀನ ಕಾಲದಲ್ಲಿ ಒಂದು ಬಗೆಯ ಆಯುಧವನ್ನು ಅದರ ವಿರುದ್ಧ ಗುಣದ ಆಯುಧದಿಂದ ನಿವಾರಿಸಬಹುದಾಗಿತ್ತು. ಉದಾಹರಣೆಗೆ ಅಗ್ನ್ಯ ಸ್ತ್ರವನ್ನು ಜಲಾಸ್ತ್ರದಿಂದ ನಿವಾರಿಸಲಾಗುತ್ತಿತ್ತು. ಆದರೆ ಆಧುನಿಕ ವಿಜ್ಞಾನಕ್ಕೆ ಇದರ ಅರಿವಿಲ್ಲ. ಪ್ರಾಚೀನ ಇತಿಹಾಸದಲ್ಲಿ ಶತ್ರುವಿನ ಹಾದಿ ತಪ್ಪಿಸಿ, ಬಲ ಕುಗ್ಗಿಸುವ ಸಲುವಾಗಿ ಜಲಾಸ್ತ್ರದಿಂದ ಮಂಜಿನ ಮುಸುಕನ್ನು ಏರ್ಪಡಿಸುತ್ತಿದ್ದ ನಿದರ್ಶನಗಳಿವೆ.

ವೀರ ಯೋಧರು ಈ ಮುಸುಕನ್ನು ಆಗಸದ ಕಾವಿನಿಂದ ಕರಗಿಸಿ ಮುನ್ನುಗ್ಗುತ್ತಿದ್ದರು. ಕೆಲವು ನಿರ್ದಿಷ್ಟ ಜೀವ ಸತ್ತ್ವಗಳ ಕಾರಣದಿಂದ ಹಾಲಿನ ಬಣ್ಣ ಬಿಳಿಯಾಗಿರುವಂತೆ ನೀರಿನ ಕೆಲವು ನಿರ್ದಿಷ್ಟ ಅಂಶಗಳಿಂದ ಇಬ್ಬನಿಯು ಘನವಾಗಿಯೂ ಬಿಳಿಯಾಗಿಯೂ ತೋರುತ್ತದೆಯಷ್ಟೆ. ಆದ್ದರಿಂದ ಅಗ್ನ್ಯಸ್ತ್ರವು ಇದಕ್ಕೆ ಸೂಕ್ತ ಪ್ರತ್ಯಸ್ತ್ರವಾಗುತ್ತದೆ.

ಅಂದಿನ ಯೋಧರಿಗೆ, ತಾವು ಒಮ್ಮೆ ಹೂಡಿದ ಅಸ್ತ್ರವನ್ನು ಮರಳಿ ಹಿಂಪಡೆಯುವ ಸಾಮರ್ಥ್ಯವಿತ್ತು. ಅರ್ಜುನ ಮತ್ತು ಅಶ್ವತ್ಥಾಮರ ನಡುವೆ ದ್ವಂದ್ವ ಯುದ್ಧ ನಡೆದಾಗ, ಅಶ್ವತ್ಥಾಮನು ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದ್ದನು. ಬ್ರಹ್ಮಾಸ್ತ್ರವು ಇಂದಿನ ಅಣುಶಕ್ತಿಯಿಂದ ತಯಾರಿಸಲ್ಪಟ್ಟ ಪರಮಾಣು ಅಸ್ತ್ರಗಳಂತೆ ಇದ್ದಿತು.

ಅಣುಶಕ್ತಿಯು ಸಂಪೂರ್ಣವಾಗಿ ವರ್ತಿಸಿ, ಧ್ವಂಸ ಮಾಡುವಂತೆಯೇ ಬ್ರಹ್ಮಾಸ್ತ್ರವು ವರ್ತಿಸುತ್ತಿತ್ತು. ಅಣುವಿಕಿರಣ ಉಂಟುಮಾಡುವಂತಹ ಅಸಾಧ್ಯ ಕಾವನ್ನು ಬ್ರಹ್ಮಾಸ್ತ್ರವು ಉ೦ಟು ಮಾಡುತ್ತಿತ್ತು. ಒಂದು ವ್ಯತ್ಯಾಸವೆಂದರೆ, ಅಣುಬಾಂಬ್ ಅನ್ನು ರಾಸಾಯನಿಕ ಸಂಯೋಜನೆಗಳಿಂದ ತಯಾರಿಸಲಾಗುತ್ತದೆ, ಬ್ರಹ್ಮಾಸ್ತ್ರವನ್ನು ಮಂತ್ರೋಚ್ಚಾರಣೆಯಿಂದ ಆವಾಹಿಸಲಾಗುತ್ತದೆ.

ಇದನ್ನು ಸಮಾನ ಬಲದ ಅಥವಾ ಉನ್ನತ ಬಲದ ವ್ಯಕ್ತಿಯ ಮೇಲೆ ಮಾತ್ರ ಪ್ರಯೋಗಿಸಬಹುದಾಗಿದೆ. ಆದರೆ ಇಂದಿನ ಅಣ್ವಸ್ತ್ರಗಳನ್ನು ದುರ್ಬಲರ ಜೀವಹಾನಿಗೆ ಬಳಸಲಾಗುತ್ತಿದೆ.

ಯುದ್ಧ ವಿಜ್ಞಾನ ಒಂದು ಅತಿ ವಿಶಿಷ್ಟ ವಿಜ್ಞಾನ. ಇಂತಹ ಅದೆಷ್ಟೋ ಮಂತ್ರೋಚ್ಚಾರಣೆಯ ವಿಜ್ಞಾನ ಲೌಕಿಕವಾದುದಾದರೂ, ಅದು ಆಧುನಿಕ ಪ್ರಯೋಗಗಳು ಭರತವರ್ಷದ ಭೂಮಿಯಲ್ಲಿ ನಡೆದಿವೆ. ಲೌಕಿಕ ವಿಜ್ಞಾನಿಗಳ ತಿಳುವಳಿಕೆಗೆ ನಿಲುಕಿಲ್ಲ. ಸೂಕ್ಷ್ಮ ಲೌಕಿಕ ವಿಜ್ಞಾನವು ಆಧ್ಯಾತ್ಮಿಕವಾದುದಲ್ಲವಾದರೂ, ಅದು ಸೂಕ್ಷ್ಮವಾದ ಆಧ್ಯಾತ್ಮಿಕ ವಿಧಾನದೊಂದಿಗೆ ನೇರ ಸಂಬಂಧ ಹೊಂದಿದೆ.

ಮಂತ್ರಗಳ ಮೂಲಕ ಶಸ್ತ್ರ ಪ್ರಯೋಗಿಸುವುದು ಮತ್ತು ಹಿಂಪಡೆಯುವುದು – ಇವೆರಡನ್ನೂ ಸಾಧಿಸಲಾಗುತ್ತದೆ. ಅದು ಪರಿಪೂರ್ಣಜ್ಞಾನ. ಬ್ರಹ್ಮಾಸ್ತ್ರ ಪ್ರಯೋಗಿಸುವ ಮೂಲಕ ಈ ಸೂಕ್ಷ್ಮ ವಿಜ್ಞಾನವನ್ನು ಬಳಸಿದ ದ್ರೋಣ ಪುತ್ರ ಅಶ್ವತ್ಥಾಮನಿಗೆ ಅದನ್ನು ಹಿಂಪಡೆಯುವ ಬಗೆ ತಿಳಿದಿರಲಿಲ್ಲ.

ಇಂದಿನ ಅಣ್ವಸ್ತ್ರಗಳ ಉಪಶಮನಕ್ಕೆ ಪ್ರತ್ಯಸ್ತ್ರಗಳೇ ಇಲ್ಲ. ಆದರೆ ಸೂಕ್ಷ್ಮ ವಿಜ್ಞಾನದ ಮೂಲಕ ಬ್ರಹ್ಮಾಸ್ತ್ರದ ನಿವಾರಣೆ ಸಾಧ್ಯವಿತ್ತು. ಮತ್ತು ಅಂದಿನ ನಿಪುಣ ಯುದ್ಧ ತಜ್ಞರು ಅದನ್ನು ನಿವಾರಿಸುತ್ತಿದ್ದರು. ಅಶ್ವತ್ಥಾಮನಿಗೆ ತನ್ನದೇ ಅಸ್ತ್ರವನ್ನು ಹಿಂಪಡೆಯುವ ಜ್ಞಾನ ಕರಗತವಾಗಿರಲಿಲ್ಲ. ಅರ್ಜುನನು, ನೀರನ್ನು ಮುಟ್ಟಿ ಶುಚಿಗೊಂಡ ಬಳಿಕ ಕೃಷ್ಣನಿಗೆ ಪ್ರದಕ್ಷಿಣೆ ಬಂದು, ಅಶ್ವತ್ಥಾಮನ ಬ್ರಹ್ಮಾಸ್ತ್ರ ನಿವಾರಣೆಗೆ ತನ್ನ ಬ್ರಹ್ಮಾಸ್ತ್ರವನ್ನು ಹೂಡಿದನು ಮತ್ತು ತಕ್ಕಶಾಸ್ತಿ ಮಾಡಿದನು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi