ಪ್ರಧಾನಮಂತ್ರಿಯೇ ಆದರೂ ಮೊಮ್ಮಕ್ಕಳಿಗೆ ಅಜ್ಜ

– ಆಕರ : ಉಪನ್ಯಾಸ ಸಂಗ್ರಹ, ಮೇ 1976, ಲಾಸ್‌ಏಂಜಲೀಸ್

ಕೃಷ್ಣನನ್ನು ಅರ್ಥೈಸಿಕೊಳ್ಳಲು ಸರಳಮಾರ್ಗಗಳಿವೆ. ಅವನನ್ನು ಅರಿತುಕೊಂಡರೆ, ಮುಕ್ತಿ ಖಚಿತ. “ಜನ್ಮ ಕರ್ಮ ಚ ಮೇ ದಿವ್ಯಮ್,” ಕೆಲವರು ಕೇಳುತ್ತಾರೆ, ”ಕೃಷ್ಣನೇನೋ ದೇವರು, ಆದರೆ, ಯಶೋದೆಯ ಕೈಯಲ್ಲಿ ಹಗ್ಗವೇಕೆ ಕಟ್ಟಿಸಿಕೊಂಡ?” ಎಂದು.

ಅವರಿಗೆ ತಿಳಿಯದು ಇಂತಹ ಲೀಲೆಯಲ್ಲಿ ಅಡಗಿರುವ ಆನಂದ ಎಂಥದ್ದೆಂದು.

ಹೀಗೆ, ಸಹಜವಾಗಿರುವುದರ ಆನಂದವನ್ನು ವಿವರಿಸುತ್ತ ಶ್ರೀಲ ಪ್ರಭುಪಾದರು ಹೇಳಿದ ಘಟನೆ ಇದು:

ಹಿಂದೆ, ವಿಕ್ಟೋರಿಯ ಮಹಾರಾಣಿಯ ಪ್ರಧಾನ ಮಂತ್ರಿಯೊಬ್ಬ್ಬನಿದ್ದ ಅವನ ಹೆಸರು ಗ್ಲಾಡ್ ಸ್ಟೋನ್‌, ಬಹಳ ಪ್ರಭಾವಶಾಲಿ ವ್ಯಕ್ತಿ.

ಒಮ್ಮೆ ಒಬ್ಬ ವ್ಯಕ್ತಿ ಗ್ಲಾಡ್‌ಸ್ಟೋನ್‌ನನ್ನು ಕಾಣಲು ಬಂದ. ಆದರೆ, ಬಾಗಿಲ ಬಳಿ ನಿಂತಿದ್ದ ಅವನನ್ನು ತಡೆದ ಸೇವಕ, “ಸಾಹೇಬರು ಮಹತ್ವದ ಕೆಲಸದಲ್ಲಿ ತಲ್ಲೀನರಾಗಿದ್ದಾರೆ. ಕೊಂಚ ಹೊತ್ತು ಕಾಯಿರಿ’ ಎಂದ.

ಗಂಟೆ ಕಾಲ ಕಳೆದರೂ, ಒಳಗಿಂದ ಯಾವ ಸೂಚನೆಯೂ ಬರಲಿಲ್ಲ. ಮತ್ತೂ ಸ್ವಲ್ಪ ಕಾದ ಆ ವ್ಯಕ್ತಿ ಕೊನೆಗೆ ತಾನೇ ನೋಡಿಬಿಡುತ್ತೇನೆ ಎಂದುಕೊಂಡು ಬಾಗಿಲನ್ನು ತಳ್ಳಿದ.

ಬಾಗಿಲು ತೆರೆದರೆ ಆ ವ್ಯಕ್ತಿಗೆ ಕಂಡ ಸಂಗತಿ ಅತ್ಯಂತ ಉಲ್ಲಾಸಕರವಾಗಿತ್ತು. ನಿಜಕ್ಕೂ ಗ್ಲಾಡ್ ಸ್ಟೋನ್ ಮಹತ್ವದ ಕೆಲಸದಲ್ಲಿ ನಿರತನಾಗಿದ್ದ. ತನ್ನ ಮೊಮ್ಮಕ್ಕಳನ್ನು ಬೆನ್ನಮೇಲೆ ಹೊತ್ತುಕೊಂಡು, ತಾನು ಕುದುರೆಯಾಗಿದ್ದ!

ಕೃಷ್ಣನ ಸ್ಥಿತಿ ಕೂಡ ಇಂಥದ್ದೇ ಆಗಿತ್ತು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi