ಅವರೆಕಾಳಿನ ತಿನಿಸುಗಳು

ಶ್ರೀ ಕೃಷ್ಣ ಪಾಕಶಾಲೆ

– ಶ್ರೀಮತಿ ಎಂ.ಅಹಲ್ಯ

ಎಳ್ಳವರೆ

ಬೇಕಾಗುವ ಪದಾರ್ಥಗಳು:

ಹಿತಕಿದ ಅವರೆಕಾಳು – 1/4 ಕೆ.ಜಿ.

ಬೆಲ್ಲ – 1/4 ಕೆ.ಜಿ.

ಏಲಕ್ಕಿ – 1

ಒಣಗಿದ ಕೊಬ್ಬರಿ – 1/2 ಗಿಟುಕು

ಹುರಿದ ಎಳ್ಳಿನ ಪುಡಿ – 1 1/2 ಚಮಚ

ತುಪ – 4 ಚಮಚ

ಮಾಡುವ ವಿಧಾನ: ಕಾಳನ್ನು ಮೆತ್ತಗೆ ಬೇಯಿಸಬೇಕು. ಇದರ ನೀರನ್ನೇ ಬೆಲ್ಲಕ್ಕೆ ಸ್ವಲ್ಪ ಸೇರಿಸಿ ಎಳೆ ಪಾಕ ಮಾಡಿಕೊಂಡು, ಅದರಲ್ಲಿ ಬೆಂದ ಕಾಳನ್ನು ಹಾಕಿ ಸ್ವಲ್ಪ ಹೊತ್ತು ಬೇಯಿಸಿ, ಕೊಬ್ಬರಿ ಮತ್ತು ಏಲಕ್ಕಿ ಪುಡಿ ಮಾಡಿ. ಎಳ್ಳಿನ ಪುಡಿಯನ್ನು ಸೇರಿಸಿ ಕೈಯಾಡಿಸಿ ಕೊನೆಗೆ ತುಪ್ಪವನ್ನು ಸೇರಿಸಬೇಕು.

ಬೇಳೆ ಅಥವಾ ಕಾಳನ್ನು ಬೇಯಿಸಿದ ನೀರಿನ ಸಾರು

ಬೇಕಾಗುವ ಪದಾರ್ಥಗಳು :

ನೀರು – 1 ಲೋಟ

ಕಾಯಿತುರಿ – 1 1/2 ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಬೆಲ್ಲ – ಸ್ವಲ್ಪ

ಕರಿಬೇವು – 1 ಎಸಳು

ಸಾಸಿವೆ – 1/4 ಚಮಚ

ತುಪ್ಪ – 1/2 ಚಮಚ

ನಿಂಬೆರಸ – 1/4 ಚಮಚ

ಕೆಂಪು ಹಸಿಮೆಣಸಿನಕಾಯಿ -1

ಮಾಡುವ ವಿಧಾನ: ಕಾಯಿತುರಿ, ಉಪ್ಪು, ಮೆಣಸಿನಕಾಯಿಯನ್ನು ಪುಡಿಮಾಡಿ, ಸಾಸಿವೆ ಕರಿಬೇವು ಮತ್ತು ಖಾರವನ್ನು ತುಪ್ಪದಲ್ಲಿ ಹುರಿಯಬೇಕು. ಅನಂತರ ಸಾಸಿವೆ ಮತ್ತು ಕರಿಬೇವನ್ನು ಒಗ್ಗರಣೆ ಮಾಡಿ ಎಲ್ಲವನ್ನೂ ನೀರಿಗೆ ಹಾಕಿ ಅನಂತರ ಬೆಲ್ಲ ಮತ್ತು ನಿಂಬೆರಸ ಸೇರಿಸಿ ಸ್ವಲ್ಪಬಿಸಿ ಮಾಡಬೇಕು.

ಎಳೆಯ ಅವರೆಕಾಳಿನ ಗುಗ್ಗರಿ ಅಥವಾ ಉಸಲಿ

ಬೇಕಾಗುವ ಪದಾರ್ಥಗಳು:

ಅವರೆಕಾಳು – 1/4 ಕೆ.ಜಿ.

ಉಪ್ಪು – ರುಚಿಗೆ ತಕ್ಕಷ್ಟು

ಕರಿಬೇವು – 1 ಎಸಳು

ಸಾಸಿವೆ – 1/4 ಚಮಚ

ಹಸಿಶುಂಠಿಯ ಚೂರುಗಳು – ಸ್ವಲ್ಪ

ಎಣ್ಣೆ – 4 ಚಮಚ

ನಿಂಬೆರಸ – 1/2 ಚಮಚ

ಕೊತ್ತಂಬರಿ ಸೊಪ್ಪು – ಸ್ವಲ್ಪ

ಕಾಯಿತುರಿ – 2 ಚಮಚ

ಮಾಡುವ ವಿಧಾನ:  ಸಾಸಿವೆ, ಕರಿಬೇವು ಮತ್ತು ಶುಂಠಿಯನ್ನು ಎಣ್ಣೆಯಲ್ಲಿ ಒಗ್ಗರಣೆ ಮಾಡಿ. ಕಾಳನ್ನೂ ಸೇರಿಸಿ ಹುರಿದ ಅನಂತರ ಕಾಳು ಮುಳುಗುವಷ್ಟು ನೀರನ್ನು ಹಾಕಿ ಸಣ್ಣ ಉರಿಯಲ್ಲೇ ಬೇಯಿಸಿ. ಬೆಂದ ಅನಂತರ ಮಿಕ್ಕ ಪದಾರ್ಥಗಳನ್ನು ಸೇರಿಸಿ.

ಎಳೆಯ ಅವರೆಕಾಳಿನ ಪಚ್ಚಡಿ

ಬೇಕಾಗುವ ಪದಾರ್ಥಗಳು :

ಕಾಳು – 1/4 ಕೆ.ಜಿ.

ಹಸಿರುಮೆಣಸಿನಕಾಯಿ – 5

ಕರಿಬೇವು – 6 ಎಲೆ

ಬೆಲ್ಲ – ಸ್ವಲ್ಪ

ಸಾಸಿವೆ – 1/4 ಚಮಚ

ಹುರಿಗಡಲೆಹಿಟ್ಟು – 3 ಚಮಚ

ತುಪ – 2 ಚಮಚ

ಹುಣಸೆರಸ – 1/2 ಚಮಚ

ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ: ಕಾಳನ್ನು ಬೇಯಿಸಬೇಕು. ತುಪ್ಪದಲ್ಲಿ ಸಾಸಿವೆ ಕರಿಬೇವನ್ನು ಒಗ್ಗರಣೆ ಮಾಡಿ ಕಾಳನ್ನು ಹಾಕಿ ಹುರಿದು ಅದೇ ನೀರನ್ನೇ ಹಾಕಿ ಕುದಿ ಬಂದ ಮೇಲೆ ಉಪ್ಪು, ಬೆಲ್ಲ ಮತ್ತು ಹುಣಸೆರಸ ಸೇರಿಸಿ. ಹುರಿಗಡಲೆ ಹಿಟ್ಟನ್ನು ಕಟ್ಟಿನ ನೀರಿನಲ್ಲೇ ಬೇರೆ ಕದಡಿ ಕುದಿ ಬಂದರೆ ಸಾಕು. ಹಿಟ್ಟನ್ನು ಹಾಕಿದಾಗ ಕೈಯಾಡಿಸುತ್ತಲೇಇರಬೇಕು.

ಎಲ್ಲ ತರಹದ ತಿನಿಸುಗಳನ್ನು ಶ್ರೀರಾಧಾಕೃಷ್ಣನಿಗೆ ಅರ್ಪಿಸಿ ಮನೆಯಲ್ಲಿ ಎಲ್ಲರೂ ಸೇವಿಸಿರಿ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi