ಪ್ರಭುಪಾದ  ಉವಾಚ

(ಶ್ರೀಲ ಪ್ರಭುಪಾದರ ಬೋಧನೆಗಳಿಂದ ಆಯ್ದ ನುಡಿಮುತ್ತುಗಳು)

ಕೃಷ್ಣಪ್ರಜ್ಞೆಯಲ್ಲಿ ತೊಡಗಿರುವ ವ್ಯಕ್ತಿಗಳು ಹರೇ ಕೃಷ್ಣ ಮಂತ್ರವನ್ನು ಪಠಿಸುತ್ತ ಕಾಲಹರಣ ಮಾಡುವ ಹುಚ್ಚರು ಎಂದು ಲೌಕಿಕವಾದಿಗಳು ಭಾವಿಸುತ್ತಾರೆ. ಆದರೆ ವಾಸ್ತವವಾಗಿ ತಮ್ಮ ದೇಹವನ್ನು ಶಾಶ್ವತ ಎಂದು ಒಪ್ಪಿಕೊಳ್ಳುತ್ತ ತಾವೇ ಹುಚ್ಚುತನದ ಕರಾಳ ಪ್ರದೇಶದಲ್ಲಿರುವುದು ಅವರಿಗೇ ಗೊತ್ತಿಲ್ಲ. ಮತ್ತು ತಮ್ಮ ದೇಹಕ್ಕೆ ಸಂಬಂಧಿಸಿದಂತೆ ಅವರು ತಮ್ಮ ಮನೆ, ತಮ್ಮ ದೇಶ, ತಮ್ಮ ಸಮಾಜ ಮತ್ತು ಇತರ ಎಲ್ಲ ಪರಿಕರಗಳನ್ನೂ ಶಾಶ್ವತ ಎಂದು ಸ್ವೀಕರಿಸುತ್ತಾರೆ. ಲೌಕಿಕನು ಭ್ರಮೆಯಿಂದ ತನ್ನ ಮನೆ, ತನ್ನ ಭೂಮಿ ಮತ್ತು ತನ್ನ ಹಣ ಶಾಶ್ವತ ಎಂದು ಭಾವಿಸುತ್ತಾನೆ.


ಅತ್ಯಂತ ಅಸಹ್ಯಕರವಾದರೂ ಒಂದು ನಿರ್ದಿಷ್ಟ ದೇಹದಲ್ಲಿ ಇರುವ ಜೀವಿಯ ತೃಪ್ತಿಯನ್ನು ಭ್ರಮೆ ಎಂದು ಕರೆಯುತ್ತಾರೆ. ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗೆ ಕೆಳಮಟ್ಟದ ವ್ಯಕ್ತಿಯ ಜೀವನಮಟ್ಟವು ಅತೃಪ್ತ ಭಾವನೆ ಉಂಟುಮಾಡಿದರೂ ಮಾಯೆ ಅಥವಾ ಬಾಹ್ಯ ಶಕ್ತಿಯಿಂದಾಗಿ ಕೆಳ ಮಟ್ಟದಲ್ಲಿರುವ ವ್ಯಕ್ತಿಯು ಅದರಲ್ಲಿ ತೃಪ್ತಿಹೊಂದುತ್ತಾನೆ. ಉನ್ನತ ಜೀವನ ಮಟ್ಟದಲ್ಲಿರುವ ವ್ಯಕ್ತಿಯು ಅಸಹ್ಯಕರ ಬದುಕು ಎಂದುಕೊಂಡರೂ ಮಲವನ್ನು ತಿನ್ನುವ ಹಂದಿಯೂ ತಾನು ಸುಖಿ ಎಂದು ಭಾವಿಸುತ್ತದೆ.


ಶ್ರೀ ವಿಷ್ಣುವು ಒಂದು ಬೃಹತ್‌ ವೃಕ್ಷದಂತೆ. ದೇವತೆಯರು, ಮನುಷ್ಯರು, ಸಿದ್ಧರು, ಚಾರಣರು, ವಿದ್ಯಾಧರರು ಮತ್ತು ಇತರ ಜೀವಿಗಳು ಕೊಂಬೆ, ಸಣ್ಣ ರೆಂಬೆ ಮತ್ತು ಎಲೆಗಳಂತೆ. ಮರದ ಬೇರಿಗೆ ನೀರು ಹಾಕಿದರೆ ಮರದ ಎಲ್ಲ ಭಾಗಗಳಿಗೂ ಸ್ವಯಂ ಪೋಷಣೆ ಲಭಿಸುತ್ತದೆ. ಕತ್ತರಿಸಿ, ಮರದಿಂದ ಬೇರ್ಪಟ್ಟ ಕೊಂಬೆಗಳು ಮತ್ತು ಎಲೆಗಳನ್ನು ತೃಪ್ತಿಪಡಿಸುವುದು ಸಾಧ್ಯವಿಲ್ಲ. ಅಂತಹ ಕೊಂಬೆ ಮತ್ತು ಎಲೆಗಳಿಗೆ ನೀರು ಹಾಕುವ ಪ್ರಯತ್ನ ಮಾಡಿದರೂ ಅವು ಕ್ರಮೇಣ ಒಣಗಿ ಹೋಗುತ್ತವೆ. ಅದೇ ರೀತಿ, ಮರದ ಕೊಂಬೆ ಮತ್ತು ಎಲೆಗಳನ್ನು ಬೇರ್ಪಡಿಸಿದಂತೆ ಮಾನವ ಸಮಾಜವನ್ನು ದೇವೋತ್ತಮ ಪರಮ ಪುರುಷನಿಂದ ಬೇರ್ಪಡಿಸಿದರೆ ಅದು ನೀರು ಪಡೆಯಲು ಯೋಗ್ಯವಾಗಿರುವುದಿಲ್ಲ. ಹಾಗೆ ಪ್ರಯತ್ನಿಸಿದರೆ ಅದು ಸುಮ್ಮನೆ ಒಬ್ಬರ ಶಕ್ತಿ ಮತ್ತು ಸಂಪನ್ಮೂಲದ ವ್ಯರ್ಥವಷ್ಟೆ.


ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi