ಆತ್ಮದ ಅಸ್ತಿತ್ವದ ಬಗ್ಗೆ ಭವಿಷ್ಯ, ಅಬುದ್ಧಿಪೂರ್ವಕವಾಗಿ, ವಿಜ್ಞಾನ ಏನನ್ನು ತೆರೆದು ತೋರಿಸಿದೆ?
ಐದು ಸಾವಿರ ವರ್ಷಗಳಿಗೂ ಹಿಂದೆ, ಕುರುಕ್ಷೇತ್ರದ ರಣರಂಗದಲ್ಲಿ, ತನ್ನ ಸನ್ಮಾನ್ಯ ಮಿತ್ರ ಅರ್ಜುನ, ಬದುಕಿನ ಮೂಲಭೂತ ಸತ್ಯವೆನಿಸಿರುವ, ಆತ್ಮದ ಶಾಶ್ವತತೆ ಬಗ್ಗೆ ತನ್ನ ಅಜ್ಞಾನವನ್ನು ಪ್ರದರ್ಶಿಸಿ ತನ್ನ ಬಂಧುಬಳಗದವರ ಅನಿವಾರ್ಯ ಸಾವಿನ ಬಗ್ಗೆ ಗೋಳಾಡಿದಾಗ, ದೇವೋತ್ತಮ ಪರಮಪುರುಷ ಶ್ರೀಕೃಷ್ಣ ಅಚ್ಚರಿಗೊಳ್ಳುತ್ತಾನೆ.

“ನನ್ನ ಪ್ರೀತಿಯ ಅರ್ಜುನ” ಪ್ರಭು ಎತ್ತರಿಸಿದ ದನಿಯಲ್ಲಿ ಹೇಳುತ್ತಾನೆ, “ಇಂತಹ ಮಲಿನಗಳು ನಿನ್ನಲ್ಲಿ ಸೇರಿಹೋಗಿದ್ದಾದರೂ ಹೇಗೆ? ಇವೆಲ್ಲ ಬದುಕಿನ ಮೌಲ್ಯಗಳನ್ನು ಅರಿತುಕೊಂಡಿರುವ ಒಬ್ಬ ಮನುಷ್ಯನಿಗೆ ಶೋಭೆ ತರುವಂತಹದಲ್ಲ.” ಅರ್ಜುನನಲ್ಲಿ ಅಧ್ಯಾತ್ಮ ಜ್ಞಾನವನ್ನು ಬಿತ್ತಲು, ಶ್ರೀಕೃಷ್ಣ ಪ್ರಭು ಒಬ್ಬಗುರುವಿನ ಸ್ಥಾನವನ್ನು ವಹಿಸುತ್ತಾನೆ.
ಆತ್ಮದ ಅಸ್ತಿತ್ವವನ್ನು ಸ್ಥಾಪಿಸಲು ಶಕ್ತಿಯುತವಾದ ಕಾರಣಗಳನ್ನು ಮತ್ತು ಸ್ಪಷ್ಟವಾದ ಸಾಕ್ಷಿಗಳನ್ನು ಮುಂದಿಡುತ್ತಾನೆ. ಶ್ರೀಕೃಷ್ಣ ಭಗವದ್ಗೀತೆಯನ್ನು ಬೋಧಿಸತೊಡಗುತ್ತಾನೆ.
ಬಹುಪಾಲು ಜನ ಈಗ ಶರೀರವೆ ಆತ್ಮ ಎಂದು ಅಂದುಕೊಂಡಿದ್ದಾರೆ. ಆತ್ಮದ ಅಸ್ತಿತ್ವ ಇದೆಯೆಂದು ರುಜುವಾತು ಮಾಡುವುದು ಎಂದರೆ, ಶರೀರಕ್ಕಿಂತಲೂ ನಾನು ಎನ್ನುವುದು ಭಿನ್ನ ಮತ್ತು ಪರಾ ಪ್ರಕೃತಿ ಎಂದು ರುಜವಾತು ಮಾಡಬೇಕಾಗುತ್ತದೆ. ಪ್ರಭು ಶ್ರೀಕೃಷ್ಣ ಹೀಗೆ ಕಾರಣಗಳನ್ನು ಕೊಡುತ್ತಾನೆ.
‘ಸಶರೀರವಾಗಿರುವ ಆತ್ಮ ನಿರಂತರವಾಗಿ ಈ ದೇಹದಲ್ಲಿ ಬಾಲ್ಯ, ಕೌಮಾರ್ಯ, ವೃದ್ಧಾಪ್ಯ ಎಂದು ಹೇಗೆ ಮುಂದುವರಿಯುತ್ತದೆಯೊ, ಹಾಗೆಯೇ ಕೊನೆಗದು ಸಾವಿನ ಅನಂತರ ಇನ್ನೊಂದು ದೇಹದೊಳಗೆ ಸೇರಿಕೊಳ್ಳುತ್ತದೆ. ಸ್ತಿಮಿತ ಬುದ್ಧಿಯ ಒಬ್ಬ ವ್ಯಕ್ತಿ ಇಂತಹ ಬದಲಾವಣೆಗಳಿಂದ ವಿಚಲಿತನಾಗುವುದಿಲ್ಲ.”
ಇದನ್ನು ನಾವು ಹೀಗೆ ಆಲೋಚಿಸಿಕೊಳ್ಳಬಹುದು: ಹಿಂದೆ ನಮಗೊಂದು ಮಗುವಿನ ಶರೀರವಿತ್ತು. ಆ ಶರೀರ ಯಾವಾಗ ಇಲ್ಲವಾಗುತ್ತದೆ ಆಗ ನಾವು ಇನ್ನೊಂದು ಶರೀರದಲ್ಲಿರಬೇಕಾಗುತ್ತದೆ. ಹಾಗೆಯೇ ಮುಂದೆ ನಮಗೆ ಸಾವಿನಂಚಿನಲ್ಲಿರುವ ಒಂದು ವೃದ್ಧ ದೇಹ ಇರುತ್ತದೆ.
ಮತ್ತು ನಾವು ಉಳಿದುಕೊಂಡಿದ್ದ ದೇಹ ಇಲ್ಲವಾಗುತ್ತದೆ. ಶ್ರೀಕೃಷ್ಣ ಪ್ರಭುವಿನ ಕಾರಣಗಳು ಬಹು ಸ್ಪಷ್ಟ: ಈ ಒಂದು ಜನ್ಮದೊಳಗೂ ನಮ್ಮ ಆತ್ಮ ಬೇರೆ ಬೇರೆ ದೇಹಗಳಲ್ಲಿ ದೇಹಾಂತರ ಹೊಂದುತ್ತಿರುತ್ತದೆ. ಹೀಗಾಗಿ ಸ್ವ ಪ್ರಜ್ಞೆಯಲ್ಲಿ ಒಂದು ಶಾಶ್ವತತೆಯ ಗುಣ ಇರುತ್ತದೆ: ಈ ಜನ್ಮದ ನಮ್ಮ ವಿವಿಧ ಹಂತದ ದೇಹಗಳು ನಾಶವಾದರೂ ಅದು ಉಳಿದುಕೊಂಡಿದೆ.
ನಾವು ಒಂದು ಜನ್ಮದಲ್ಲಿ ಬೇರೆ ಬೇರೆ ದೇಹಗಳನ್ನು ಹೊಂದುವುದಿಲ್ಲ ಎಂದು ಅನೇಕರು ವಾದಿಸಬಹುದು: ಬರೀ ನಮ್ಮ ದೇಹ ಬೆಳೆಯುತ್ತಿದೆ ಎನ್ನಬಹುದು. ನಮ್ಮ ದೇಹದ ಜೀವ ಕಣಗಳು ನಿಯತವಾಗಿ ಬದಲಾವಣೆಗೊಳ್ಳುತ್ತಿರುತ್ತದೆ ಎನ್ನುವ ಶ್ರೀಕೃಷ್ಣನ ಮಾತುಗಳನ್ನು ಆಧುನಿಕ ವಿಜ್ಞಾನವೂ ಪುಷ್ಟಿಕರಿಸುತ್ತದೆ;

ಹೀಗಾಗಿ ನಮ್ಮ ದೇಹ ಒಂದು ಕ್ಷಣದಿಂದ ಇನ್ನೊಂದು ಕ್ಷಣಕ್ಕೆ ಬೇರೆ ಬೇರೆಯದಾಗಿಯೇ ಇರುತ್ತದೆ ಮತ್ತು ಒಂದಿಷ್ಟು ಕಾಲವಾದ ಮೇಲೆ ಇಡೀ ದೇಹ ಬದಲಾಯಿಸಿ ಹೋಗುತ್ತದೆ ಎಂದು ಹೇಳಬಹುದು.
ಅಷ್ಟೇ ಅಲ್ಲ, ಭಗವದ್ಗೀತೆಯ ಪ್ರಕಾರ, ದೇಹವನ್ನು ಅಸ್ತಿತ್ವವಿಲ್ಲದ್ದು’ ಎಂದೂ ಭಾವಿಸಿಕೊಂಡು ಬಿಡಬಹುದು. ಕಡಲಿನ ಅಲೆಗಳ ಹಾಗೆ, ಅದಕ್ಕೊಂದು ಶಾಶ್ವತ ಅನನ್ಯತೆಯಿಲ್ಲ. ಮತ್ತೆ ಥಟ್ಟನೆ ಕಾಣದಾಗಿ ಹೋಗುತ್ತದೆ. ಈ ಅನಿಸಿಕೆಗಳನ್ನು ಮುಂದಿರಿಸಿ, ಆತ್ಮ ಮತ್ತು ದೇಹದ ನಡುವಿನ ನಿಸ್ಸಂಶಯವಾದ ವ್ಯತ್ಯಾಸಗಳನ್ನು ಪರಿಗಣಿಸಬೇಕು ಎಂದು ಶ್ರೀಕೃಷ್ಣನು ಅರ್ಜುನನಿಗೆ ಹೇಳುತ್ತಾನೆ: “ಅಸ್ತಿತ್ವವಿಲ್ಲದ್ದಕ್ಕೆ (ದೇಹ) ಶಾಶ್ವತತೆ ಇಲ್ಲ, ಮತ್ತು ಅಸ್ತಿತ್ವವಿರುವುದಕ್ಕೆ (ಆತ್ಮ) ಬದಲಾವಣೆಗಳಿಲ್ಲ.”
ಮಾರ್ಪಡುತ್ತಿರುವ ದೇಹಕ್ಕಿಂತಲೂ ಭಿನ್ನವಾದ, ಆತ್ಮದ ಶಾಶ್ವತತೆಯ ಸಂಪನ್ನತೆಯನ್ನು ಸ್ವಾನುಭವದ ಮೂಲಕ ತಾಳೆ ನೋಡಬಹುದು. ಶ್ರೀಲ ಪ್ರಭುಪಾದರು ಬರೆಯುತ್ತಾರೆ, ”ದೇಹದ ಹಾಗೆ ಆತ್ಮ ಎಂದಿಗೂ ಮುದಿಯಾಗುವುದಿಲ್ಲ. ಆದ್ದರಿಂದಲೇ ಮುದಿವಯಸ್ಸಿನವ ಎಂದು ಕರೆಸಿಕೊಳ್ಳುವ ಮನುಷ್ಯ, ತಾನು ಬಾಲ್ಯದಲ್ಲೊ ಯೌವನದಲ್ಲೂ ಇದ್ದ ಉತ್ಸಾಹದಲ್ಲೇ ಇಂದಿಗೂ ಇದ್ದೇನೆ ಎಂದುಕೊಳ್ಳುತ್ತಾನೆ.”
ಸಮರ್ಥನೆಗಳು ಮತ್ತು ಶರೀರ ವಿಜ್ಞಾನದ ಉದಾಹರಣೆಗಳೂ ಸಹ ಆತ್ಮವನ್ನು ಅರಿತುಕೊಳ್ಳಲು ನಮ್ಮ ಸಹಾಯಕ್ಕೆ ಬರುವುದಲ್ಲದೆ, ಅಗೋಚರ ಸತ್ಯದ ಅತಿ ಶಕ್ತಿಯುತ ಸಾಕ್ಷಿಯೆಂದರೆ ಅದರ ಪ್ರಭಾವ ಅಥವಾ ಕುರುಹುಗಳು. ಉದಾಹರಣೆಗೆ, ಒಂದು ಮೋಡ ಕವಿದ ದಿನದಂದು ನಾವು ಸೂರ್ಯನನ್ನು ನೋಡದಿರಬಹುದು, ಆದರೆ ಸೂರ್ಯ ರಶ್ಮಿಗಳ ಮೂಲಕ ಖಂಡಿತ ನಾವು ಸೂರ್ಯನ ಇರುವಿಕೆಯನ್ನು ತಿಳಿದುಕೊಳ್ಳಬಹುದು.
ತಿಳಿವಳಿಕೆಯಿಲ್ಲದೇ ಸೇವಿಸಿದ ಒಂದು ಔಷಧದ ಪರಿಣಾಮವನ್ನು ಅದು ಇಡೀ ದೇಹವನ್ನು ಹರಡಿಕೊಳ್ಳುವ ರೀತಿಯಿಂದಲೇ ತಿಳಿದುಕೊಳ್ಳಬಹುದು. ಹಾಗೆಯೇ, ಶ್ವೇತಾಶ್ವತರ ಉಪನಿಷತ್ತಿನ ಪ್ರಕಾರ, ಸೂಕ್ಷ್ಮಾತಿಸೂಕ್ಷ್ಮ ಆತ್ಮ ಒಂದು ಅಣುವಿಗಿಂತಲೂ ಚಿಕ್ಕದು, ಮತ್ತು ಇಡೀ ಶರೀರವನ್ನು ಜಾಗ್ರದವಸ್ಥೆ ಎಂದು ಆವರಿಸಿಕೊಂಡಿರುವುದರ ಮೂಲಕ ಇದರ ಪ್ರಭಾವವನ್ನು ಕಂಡುಕೊಳ್ಳಬಹುದು.
ಶ್ರೀಲ ಪ್ರಭುಪಾದ ಅವರು ಭಗವದ್ಗೀತೆಯ ಮೇಲಿನ ತಮ್ಮ ವ್ಯಾಖ್ಯಾನದಲ್ಲಿ ಹೀಗೆ ಹೇಳುತ್ತಾರೆ: “ದೇಹದಲ್ಲೆಲ್ಲ ಏನು ಹರಡಿಕೊಂಡಿದೆ ಎಂದು ಯಾರು ಬೇಕಾದರೂ ಅರ್ಥಮಾಡಿಕೊಳ್ಳಬಲ್ಲರು: ಅದು ತನ್ನರಿವು, ಜಾಗ್ರದವಸ್ಥೆ ಪ್ರತಿಯೊಬ್ಬರಿಗೂ ತಮ್ಮ ದೇಹದ ನೋವುಗಳು ಮತ್ತು ನಲಿವುಗಳ ಭಾಗಶಃ ಅಥವಾ ಸಂಪೂರ್ಣ ಅರಿವಿದೆ.
ಈ ತನ್ನರಿವಿನ ಹರಡುವಿಕೆ ಒಬ್ಬನ ದೇಹಕ್ಕೆ ಮಾತ್ರ ಸೀಮಿತವಾಗಿದೆ. ಒಂದು ದೇಹದ ನೋವು ಮತ್ತು ನಲಿವುಗಳು ಇನ್ನೊಂದಕ್ಕೆ ಪರಿಚಯವಿರುವುದಿಲ್ಲ. ಆದ್ದರಿಂದ ಪ್ರತಿಯೊಂದು ದೇಹವೂ ಒಂದು ಜೀವಾತ್ಮದ ಸಶರೀರತೆ ಮತ್ತು ಆತ್ಮದ ಇರುವಿಕೆಯ ಗುರುತುಗಳನ್ನು ಜೀವ ಪ್ರಜ್ಞೆಯ ಮೂಲಕ ಗ್ರಹಿಸಿಕೊಳ್ಳಬಹುದು.”

ಸಾವಿನ ಅಸಾಧಾರಣತೆ ದೇಹದಲ್ಲಿ ಆತ್ಮ ಕಾರ್ಯಶೀಲತೆಯ ಪ್ರಮುಖ ಅಂಶ ಎನ್ನುವುದನ್ನು ಕೂಡ ಪ್ರಕಟಪಡಿಸುತ್ತದೆ. ಪ್ರೀತಿಪಾತ್ರರೊಬ್ಬರನ್ನು ಕಳೆದುಕೊಂಡ ಮೇಲೆ ನಾಸ್ತಿಕ ಮಹಾಶಯರೊಬ್ಬರು ಕೂಡ, ಆ ದೇಹ ತನ್ನೆಲ್ಲ ಅಂಗಾಂಗಗಳು ಮತ್ತು ರಸಾಯನಗಳೊಂದಿಗೆ ಇನ್ನೂ ತಮ್ಮ ಮುಂದಿದ್ದರೂ ಸಹ “ನನ್ನ ತಾಯಿ ಹೋಗಿಬಿಟ್ಟರು’ ಎಂದೊ, ಅಥವಾ ‘ನನ್ನ ತಂದೆ ಹೋಗಿಬಿಟ್ಟರು’ ಎಂದೊ ಉದ್ಗರಿಸಿಬಿಡುತ್ತಾರೆ.
ಮತ್ತೆ, ಪ್ರಜ್ಞೆ ಎನ್ನುವುದನ್ನು ಯಾವ ತಾಂತ್ರಿಕ ಹೊಂದಾಣಿಕೆಗಳಿಂದಲೊ ಅಥವಾ ವೈಜ್ಞಾನಿಕ ಪರಿಣತಿಗಳಿಂದಲೊ, ಸಾವಿನಂಚಿನಲ್ಲಿ ಪುನರುಜ್ಜೀವನಗೊಳಿಸಲು ಸಾಧ್ಯವಿಲ್ಲದಿರುವುದರಿಂದ, ನಾವು ಪ್ರಜ್ಞೆ ಎನ್ನುವುದು ಒಂದು ಐಹಿಕವಲ್ಲದ ಅತಿಶಯದ ಪರಿಣಾಮವಾಗಿ ಉಂಟಾದದ್ದು ಎಂದು ಸಕಾರಣವಾಗಿ ಹೇಳಬಹುದು: ಆ ಐಹಿಕವಲ್ಲದ ಮೂಲ ಆಕರವೇ ಆತ್ಮ.
ಆಧುನಿಕ ವಿಜ್ಞಾನ, ಸ್ವ ಪ್ರಜ್ಞೆಯೆಂಬುದನ್ನು ಭೌತ ನಿಯಮಗಳ ಮೂಲಕ ವಿವರಿಸಲು ಸೋತು ಪರೋಕ್ಷವಾಗಿ ಶ್ರೀಕೃಷ್ಣ ಪ್ರಭುವಿಗೆ ಆತ್ಮ ವಿಶ್ಲೇಷಣೆಗಳನ್ನು ಬೆಂಬಲಿಸಿದೆ. ಐನ್‌ಸ್ಟೈನ್ ಮತ್ತು ನೈಲ್ಡ್‌ಬೋಹರ್ ಅವರಂತಹ ಮಹಾನ್ ವಿಜ್ಞಾನಿಗಳು ಪ್ರಜ್ಞೆ ಎನ್ನುವುದು ಭೌತ ಅತಿಶಯ ಸಾಮ್ರಾಜ್ಯದಾಚೆ ಇರುವಂತಹದು ಎಂದಿದ್ದಾರೆ.
ಇದೇ ಮನೋಭಾವದಲ್ಲಿ ಜೀವ ವಿಜ್ಞಾನ ವೈದ್ಯಕೀಯದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಅಲ್ಬಟ್೯ ಏಜೆಂಟ್ – ಗೈರ್ಲೆಗೈ ವಿಷಾದದ ಮಾತುಗಳನ್ನಾಡುತ್ತಾರೆ: “ನನ್ನ ಜೀವನದರ್ಶನದ ಹುಡುಕಾಟದಲ್ಲಿ ನಾನು, ಯಾವ ಜೀವವೂ ಇಲ್ಲದ, ಅಣುಗಳು ಮತ್ತು ಎಲೆಕ್ಟ್ರಾನ್ಸ್‌ಗಳನ್ನು ತಲಪುವುದರಲ್ಲಿಯೆ ಕೊನೆಕಾಣಬೇಕಾಯಿತು. ಈ ದಾರಿಯಲ್ಲಿಯೆ ಯಾವಾಗಲೊ, ಬದುಕೆನ್ನುವುದು ನನ್ನ ಬೆರಳ ಸಂದಿಗಳಲ್ಲಿ ನುಸುಳಿದೆ. ಹೀಗಾಗಿ ನನ್ನ ವೃದ್ಧಾಪ್ಯದಲ್ಲಿ ಹಿಂದೆ ನಾನಿಟ್ಟ ಹೆಜ್ಜೆಗಳಿಂದ ಹಿಂತೆಗೆಯುತ್ತಿದ್ದೇನೆ.”
ಮುಂಡಕ ಉಪನಿಷತ್‌ನ ಪ್ರಕಾರ, ಇಡೀ ಶರೀರದ ಚಟುವಟಿಕಾ ಕೇಂದ್ರವಾದ, ಹೃದಯ, ಆತ್ಮದ ಪ್ರಧಾನ ತಾಣ ಅಲ್ಲದೆ ಇಡೀ ಶರೀರದ ಚೈತನ್ಯಮೂಲ – ಈ ಶರೀರಶಾಸ್ತ್ರದ ಅಂಶವನ್ನು ಅರಿಯುವುದರ ಮೂಲಕ ಆತ್ಮದ ಅಸ್ತಿತ್ವವನ್ನು ತಿಳಿಯಬಹುದು. ಆತ್ಮದ ನಿಮಿತ್ತವಾಗಿಯೇ, ಶ್ವಾಸಕೋಶಗಳಿಂದ ಆಮ್ಲಜನಕವನ್ನು ಸರಬರಾಜು ಮಾಡುವ ಕೇಂದ್ರ ರಕ್ತನಾಳಗಳು ಹೃದಯದಲ್ಲಿ ಶಕ್ತಿಚೋದನೆಗೊಳ್ಳುತ್ತವೆ.
ಆದ್ದರಿಂದಲೇ, ಆತ್ಮ ಸಾವಿನಲ್ಲಿ ದೇಹವನ್ನು ತ್ಯಜಿಸಿದಾಗ, ರಕ್ತ ಉತ್ಪಾದನಾ ಪ್ರಕ್ರಿಯೆಯೂ ಕೊನೆಗೊಳ್ಳುತ್ತದೆ. ವೈದ್ಯ ವಿಜ್ಞಾನಿಗಳು ಶರೀರದ ಶಕ್ತಿ ಮೂಲವನ್ನು ಕಂಡು ಹಿಡಿಯದಿದ್ದರೂ, ಹೃದಯವೇ ಶರೀರ ಶಕ್ತಿಯ ಕೇಂದ್ರ ಎನ್ನುವುದನ್ನು ಖಚಿತಪಡಿಸುವುದರ ಮೂಲಕ, ಆತ್ಮವೇ ಶರೀರ ಚೈತನ್ಯದ ಮೂಲ ಎನ್ನುವ ವೈದಿಕ ಅನಿಸಿಕೆಗಳ ಅಂಶವನ್ನು ಬೆಂಬಲಿಸಿದ್ದಾರೆ.
ಕೊನೆಯದಾಗಿ, ಆತ್ಮದ ಅಸ್ತಿತ್ವದ ಬಗೆಗಿನ ನಮ್ಮ ಸಹಜ ತಿಳಿವಳಿಕೆ ನಮ್ಮ ದಿನನಿತ್ಯದ ಮಾತುಕಥೆಗಳಲ್ಲೂ ಪ್ರತಿಬಿಂಬಿತವಾಗಿದೆ. ನಾವು, “ಇದು ನನ್ನ ಬೆರಳು” ಎನ್ನುತ್ತೇವೆಯೇ ಹೊರತು “ನಾನು ಬೆರಳು” ಎನ್ನುವುದಿಲ್ಲ. ಏಕೆಂದರೆ ನಾವು ಸ್ವಾಭಾವಿಕವಾಗಿಯೇ ಶರೀರ ಮತ್ತು ಶರೀರದ ಪ್ರಜ್ಞೆ ಇರುವವನು ಅಥವಾ ಶರೀರ ಹೊಂದಿದವನ ನಡುವಿನ ಭಿನ್ನತೆಯನ್ನು ತಿಳಿದುಕೊಳ್ಳಬಲ್ಲೆವು.
ಅರ್ಜುನನಿಗೆ, ಪ್ರಭು ಶ್ರೀಕೃಷ್ಣನ ಮೊಟ್ಟ ಮೊದಲ ತಿಳಿವಳಿಕೆ ಎಂದರೆ, ಜೀವನದ ಅತಿ ಮುಖ್ಯ ಮತ್ತು ಮೂಲ ಸತ್ಯ ಸಂಗತಿಗಳು : “ಆತ್ಮಕ್ಕೆ ಎಂದಿಗೂ ಜನನವೆನ್ನುವುದೊ ಅಥವಾ ಮರಣವೆನ್ನುವುದೂ ಇರುವುದಿಲ್ಲ. ಅವನು ಅಸ್ತಿತ್ವದೊಳಗೆ ಬಂದಿಲ್ಲ.
ಅಸ್ತಿತ್ವದೊಳಗೆ ಬರುವುದಿಲ್ಲ. ಅಸ್ತಿತ್ವದೊಳಗೆ ಬರುವುದೂ ಇಲ್ಲ. ಅವನು ಹುಟ್ಟದವ, ಶಾಶ್ವತ, ಯಾವಾಗಲೂ ಇರುವವ, ಮತ್ತು ಪ್ರಾಚೀನ ದೇಹವನ್ನು ಸಾಯಿಸಿದಾಗ ಅವನು ಸಾಯುವುದಿಲ್ಲ.






Leave a Reply