ಅಯೋಧ್ಯೆ: ಕರ್ನಾಟಕದ ಅಜ್ಞಾತ ಭಕ್ತರೊಬ್ಬರು ಶ್ರೀರಾಮ ಪ್ರತಿಮೆಯನ್ನೇ ಹೋಲುವ ಚಿನ್ನದ ಕಲಾಕೃತಿಯನ್ನು ಅಯೋಧ್ಯೆಯ ರಾಮಮಂದಿರಕ್ಕೆ ದಾನ ನೀಡಿದ್ದಾರೆ. ಈ ಚಿನ್ನದ ಕಲಾಕೃತಿಯ ಮೌಲ್ಯವು ಸುಮಾರು 30 ಕೋಟಿ ರೂಗಳಷ್ಟು ಎಂದು ಅಂದಾಜಿಸಲಾಗಿದೆ.

ಪ್ರತಿಮೆಯ ದಾನಿಯು ಯಾರೆಂಬುದು ತಿಳಿದು ಬಂದಿಲ್ಲ. ಈ ಕಲಾಕೃತಿಯು ವಜ್ರಗಳು, ಪಚ್ಚೆಗಳು ಹಾಗೂ ಇತರ ಅಮೂಲ್ಯ ರತ್ನಗಳಿಂದ ಕೂಡಿದ್ದು 10 ಅಡಿ ಎತ್ತರ, 8 ಅಡಿ ಅಗಲವಿದೆ. ತಂಜಾವೂರಿನ ನುರಿತ ಕುಶಲಕರ್ಮಿಗಳು ಈ ಮೂರ್ತಿಯನ್ನು ತಯಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಮೂರ್ತಿಯು ಸುಮಾರು 5 ಕ್ವಿಂಟಾಲ್‌ಗಳಿಷ್ಟಿರಬಹುದು ಹಾಗೂ ದಾನಿಯ ವಿವರವನ್ನು ಸದ್ಯದಲ್ಲಿಯೇ ತಿಳಿಸಲಾಗುವುದು ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯ ಡಾ. ಅನಿಲ್ ಮಿಶ್ರಾ ತಿಳಿಸಿದ್ದಾರೆ.
ಚಿನ್ನದ ಕಲಾಕೃತಿಯನ್ನು ಇದೇ ಡಿಸೆಂಬರ್ 29 ರಿಂದ ಜನವರಿ 2ರ ವರೆಗೆ ನಡೆಯುವ ರಾಮ ಲಲ್ಲಾ ಪ್ರಾಣ ಪ್ರತಿಷ್ಠೆಯ ಎರಡನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಸಂತ ತುಳಸಿದಾಸ ದೇವಾಲಯದ ಬಳಿಯ ಅಂಗದ್ ಟೀಲಾದಲ್ಲಿ ಸ್ಥಾಪಿಸುವ ಸಾಧ್ಯತೆಯಿದೆ. ವಾರ್ಷಿಕೋತ್ಸವ ಪ್ರಾರಂಭ ಪೂರ್ವ ಮೂರ್ತಿಯ ಅನಾವರಣ ಕಾರ್ಯಕ್ರಮ ನಡೆಯಲಿದೆ. ದೇಶದೆಲ್ಲೆಡೆಯ ಸಂತರು, ಮಹಾಂತರು ಭಾಗವಹಿಸಲಿದ್ದಾರೆ.






Leave a Reply