ಜಗನ್ನಾಥ ದಾಸ ಬಾಬಾಜಿ

ಶ್ರೀಲ ಜಗನ್ನಾಥ ದಾಸ ಬಾಬಾಜಿ ಮಹಾರಾಜರು ಪ್ರಭು ಚೈತನ್ಯರ ಆಂದೋಳನದ ಅಧಿಕೃತತೆಯನ್ನು ಶಾಸ್ತ್ರದ ಆಧಾರದ ಮೇಲೆ ಸ್ಥಾಪಿಸಿದ ಶ್ರೀಲ ಬಲದೇವ ವಿದ್ಯಾಭೂಷಣರ ಶಿಷ್ಯ ಸಂಪ್ರದಾಯದಲ್ಲಿ ಓರ್ವ ಪ್ರಮುಖ ಗುರುಗಳಾಗಿದ್ದಾರೆ.

ಅವರು ಭಾರತದ ಹೊರಗೆ ಕೃಷ್ಣಪ್ರಜ್ಞೆಯನ್ನು ಹರಡುವಲ್ಲಿ ಹರಿಕಾರರಾದ ಶ್ರೀಲ ಭಕ್ತಿವಿನೋದ ಠಾಕುರರ ಶಿಕ್ಷಾಗುರು ಅಥವಾ ಬೋಧನಾ ಗುರುಗಳಾಗಿದ್ದರು.

ಬಾಬಾಜಿ ಮಹಾರಾಜರೆಂದು ಕರೆಯಲ್ಪಟ್ಟ ಶ್ರೀಲ ಜಗನ್ನಾಥ ದಾಸ ಬಾಬಾಜಿ ಮಹಾರಾಜರು ಪಶ್ಚಿಮ ಬಂಗಾಳದಲ್ಲಿ ಜನಿಸಿದರು. ಆದರೆ ತದನಂತರ ವೃಂದಾವನದಲ್ಲಿ ನೆಲೆಸಿದರು. ಅಲ್ಲಿ ಅವರನ್ನು 1880 ರಲ್ಲಿ ಶ್ರೀಲ ಭಕ್ತಿವಿನೋದ ಠಾಕುರರು ಭೇಟಿ ಮಾಡಿದರು. ಬಾಬಾಜಿ ಮಹಾರಾಜರು ಪ್ರಭು ಕೃಷ್ಣನ ಭಕ್ತಿಸೇವೆಯಲ್ಲಿ ಪರಿಪೂರ್ಣರೆಂದು ಶ್ರೀಲ ಭಕ್ತಿವಿನೋದ ಠಾಕುರರು ಅರಿತರು.

ವೃಂದಾವನದಿಂದ ಬಾಬಾಜಿ ಮಹಾರಾಜರು ಪ್ರಭು ಚೈತನ್ಯರ ಪವಿತ್ರ ಭೂಮಿಯಾದ ಪಶ್ಚಿಮ ಬಂಗಾಳದ ನವದ್ವೀಪಕ್ಕೆ ಹೋದರು. ಅಲ್ಲಿ ಕೋಲದ್ವೀಪವೆಂಬೆಡೆ ಕೆಲವು ಕಾಲ ವಾಸಿಸಿ 1893ರಲ್ಲಿ ಅವರು ಗೋದ್ರುಮ ದ್ವೀಪದ ಸುರಭಿ-ಕುಂಜಕ್ಕೆ ಹೋದರು.

ತಮ್ಮ ಪರಿಶುದ್ಧ ಆಧ್ಯಾತ್ಮಿಕ ದೃಷ್ಟಿಯಿಂದ ಬಾಬಾಜಿ ಮಹಾರಾಜರು ಪ್ರಭು ಚೈತನ್ಯರ ಜನ್ಮಸ್ಥಳವನ್ನೊಳಗೊಂಡಂತೆ ಹಲವಾರು ಕ್ಷೇತ್ರಗಳನ್ನು ತೋರಿಸಿದರು. ಬಾಬಾಜಿ ಮಹಾರಾಜರು ದುರ್ಬಲರೂ ಮತ್ತು ವೃದ್ಧರೂ ಆದರೂ ಪ್ರಭು ಚೈತನ್ಯರ ಜನ್ಮಸ್ಥಳವನ್ನು ನೋಡಿ ಆನಂದ ಪುಳಕಿತರಾಗಿ ನರ್ತಿಸಿದರು.

ಶ್ರೀಲ ಭಕ್ತಿವಿನೋದ ಠಾಕುರರ ಮಗನಾದ ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿಯವರು ಹನ್ನೆರಡು ವರ್ಷದ ಹುಡುಗನಾಗಿದ್ದಾಗ ಅವನ ಜೋತಿಷ್ಯ ವಿಜ್ಞಾನದ ಪರಿಣತಿಯನ್ನು ಅರಿತು ಬಾಬಾಜಿ ಮಹಾರಾಜರು ವೈಷ್ಣವರ ಪಂಚಾಂಗವನ್ನು ತಯಾರಿಸೆಂದು ಹುಡುಗನನ್ನು ಕೇಳಿದರು.

ಹಬ್ಬಗಳು ಮತ್ತು ಭಕ್ತರ ಆವಿರ್ಭಾವ ಮತ್ತು ತಿರೋಭಾವ ದಿನಗಳ ಒಂದು ಪಂಚಾಂಗವಾದ “ನವದ್ವೀಪ ಪಂಜಿಕಾ”ವನ್ನು ಸಿದ್ಧಪಡಿಸಿ ಬಾಬಾಜಿ ಮಹಾರಾಜರನ್ನು ಹುಡುಗ ಪ್ರಸನ್ನಗೊಳಿಸಿದನು. ಈ ಪಂಚಾಂಗವು ಇಂದಿಗೂ ಬಳಕೆಯಲ್ಲಿದೆ.

ಶ್ರೀಲ ಜಗನ್ನಾಥ ದಾಸ ಬಾಬಾಜಿ ಮಹಾರಾಜರು 140 ವರ್ಷಗಳ ಕಾಲ ಜೀವಿಸಿದ್ದರು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi