ನಮ್ಮ ಆಧ್ಯಾತ್ಮವನ್ನು ಪ್ರಪಂಚಕ್ಕೇ ಪರಿಚಯಿಸಿ ಬದುಕಿನ ದಿನಚರಿಯಲ್ಲಿ ಅದನ್ನು ಅಳವಡಿಸಿಕೊಳ್ಳುವ ಮಾರ್ಗೋಪಾಯ ಮಾಡಿಕೊಟ್ಟ ಮಹಾನುಭವ ಶ್ರೀ ಸ್ವಾಮಿ ಪ್ರಭುಪಾದ.

ಜ್ಞಾನ-ವಿಜ್ಞಾನದ ಆಮೂಲಾಗ್ರ ಚರ್ಚೆಯೆ ಈ ಪುಸ್ತಕದ ಜೀವಾಳ. ಪ್ರಕೃತಿ-ಜೀವಿಯ ಹುಟ್ಟು ಸಾವು, ಗ್ರಹಗಳ ವಿಶ್ವದ ಸ್ವರೂಪ, ಅಣುವಿನ ಜಗತ್ತು, ಡಾರ್ವಿನ್ನನ ವಿಚಾರ ಇವೆಲ್ಲವನ್ನು ತೀಕ್ಷ್ಣ ತರ್ಕಕ್ಕೆ ಒಳಪಡಿಸಿ ಆಧುನಿಕ ವಿಜ್ಞಾನದ ಹುಂಬತನ ಮತ್ತು ಆವೈಚಾರಿಕತೆಯನ್ನು ಎತ್ತಿ ತೋರಿಸಿದ್ದಾರೆ.
ಶ್ರೀಲ ಪ್ರಭುಪಾದರ ಎಲ್ಲ ಗ್ರಂಥದಲ್ಲೂ ಇರುವಂತೆ ಇಲ್ಲಿಯೂ ಅಧಿಕಾರಯುತವಾಣಿ, ಅತ್ಯಂತ ಸ್ಪಷ್ಟ ವಿಚಾರ-ನಿಲುವು, ವಿಪುಲವಾದ ಶಾಸ್ತ್ರಾಧಾರ ಮತ್ತು ಯಥಾರ್ಥ ವಿಶ್ಲೇಷಣೆಯನ್ನು ಕಾಣಬಹುದು. ಒಟ್ಟಾರೆ ಆಧುನಿಕ ಪಾಶ್ಚಾತ್ಯ ವಿಜ್ಞಾನವನ್ನು ಕಟುವಾಗಿ ಟೀಕಿಸುತ್ತಾ, ಆಧ್ಯಾತ್ಮದ ಶ್ರೇಷ್ಠ ವೈಚಾರಿಕತೆಯನ್ನು ಎತ್ತಿ ತೋರಿಸುತ್ತಾ ಸ್ವಾರಸ್ಯವಾದ ವಿಷಯ ಮಂಡಣೆಯೊಂದಿಗೆ ನಮ್ಮನ್ನ ರಂಜಿಸುತ್ತಾರೆ.
ಮೇಲಾಗಿ ಈ ಎಲ್ಲ ಚರ್ಚೆ ವಿಜ್ಞಾನಿಗಳು ಮತ್ತು ಸಹಚರರೊಡನೆ ವಾಯುವಿಹಾರದ ಸಂಭಾಷಣೆಯ ರೂಪವಾಗಿರುವುದರಿಂದ ಸರಳವಾದ ಭಾಷೆಯಲ್ಲಿ ಬೃಹತ್ ಸತ್ಯದ ಗೋಚರವಾಗುವುದನ್ನು ಕಾಣುತ್ತೇವೆ. ಪ್ರತಿಯೊಬ್ಬನೂ ಅದರಲ್ಲೂ ಆಧುನಿಕ ವಿಚಾರಧಾರೆಯಲ್ಲಿ ಸಿಲುಕಿದವರೆಲ್ಲರೂ ಈ ಗ್ರಂಥವನ್ನು ಓದಿ ಬದುಕನ್ನು ಇನ್ನಷ್ಟು ಹೆಚ್ಚು ಉಪಯುಕ್ತ ಮಾಡಿಕೊಳ್ಳಬಹುದು.






Leave a Reply