ಬಿಸಿ ಬಿಸಿ ಖಾರ ಪೊಂಗಲ್‌

ಇಸ್ಕಾನ್‌ ಅತಿಥಿ ಸತ್ಕಾರ, ಕೃಷ್ಣಪ್ರಸಾದದ ಬಗೆಯನ್ನು ಬಲ್ಲವರೇ ಬಲ್ಲರು. ಒಮ್ಮೆ ತಿಂದವರು ಮತ್ತೊಮ್ಮೆ ಮಗದೊಮ್ಮೆ ಬಯಸಿ ಬಯಸಿ, ನಾಲಗೆಯ ತಣಿಸಿಕೊಳ್ಳುವ ದಿವ್ಯ ಮಧುರ ರುಚಿ ಅದರಲ್ಲಿದೆ. ಗೌಡೀಯ ವೈಷ್ಣವ ಪರಂಪರೆಯ ಅಡುಗೆಗಳಲ್ಲದೆ, ಆಧುನಿಕ ಭಕ್ಷ ಭೋಜ್ಯಗಳೂ ಇಲ್ಲಿ ಕೃಷ್ಣನಿಗೆ ಅರ್ಪಿಸಲಾಗುತ್ತದೆ.

ಇಂತಹ ತಿಂಡಿ ತಿನಿಸುಗಳಲ್ಲಿ ಈರುಳ್ಳಿ- ಬೆಳ್ಳುಳ್ಳಿಗಳನ್ನು ಉಪಯೋಗಿಸುವುದಿಲ್ಲ. ಇಸ್ಕಾನ್‌ನ ಪಾಕತಜ್ಞರು, ವಿವಿಧ ರೀತಿಯ ಭೋಜ್ಯಗಳ – ವ್ಯಂಜನಗಳ – ತಿಂಡಿ-ತೀರ್ಥಗಳ ತಯಾರಿ ವಿಧಾನವನ್ನು ಭಕ್ತಿವೇದಾಂತ ದರ್ಶನದ ಓದುಗರಿಗೆ ಇಲ್ಲಿ ಬಡಿಸುತ್ತಾರೆ. ಈ ತಿಂಡಿಗಳ ರುಚಿ ಬರುವುದು ಭಗವಂತನಿಗೆ ಅರ್ಪಿಸಿದಾಗ. ಏಕೆಂದರೆ ಎಲ್ಲದರ ಭೋಕ್ತೃ ಪರಮ ಪುರುಷ ಶ್ರೀಕೃಷ್ಣ.

  • ಅಕ್ಕಿ – 250 ಗ್ರಾಂ
  • ಹೆಸರು ಬೇಳೆ – 125 ಗ್ರಾಂ
  • ಮೆಣಸು – 5 ಗ್ರಾಂ
  • ಜೀರಿಗೆ – 5 ಗ್ರಾಂ
  • ಇಂಗು – 2 ಗ್ರಾಂ
  • ತುರಿದ ಕೊಬ್ಬರಿ – 50 ಗ್ರಾಂ
  • ಗೋಡಂಬಿ – 30 ಗ್ರಾಂ
  • ತುಪ್ಪ – 100 ಗ್ರಾಂ
  • ಕರಿಬೇವಿನ ಎಲೆಗಳು
  • ಉಪ್ಪು
  • ಹೆಸರು ಬೇಳೆ ಮತ್ತು ಅಕ್ಕಿಯನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ.
  • ಹೆಸರು ಬೇಳೆಯನ್ನು ಅರೆಬೇಯಿಸಿ.
  • ಅಕ್ಕಿ, 1 ಚಮಚ ತುಪ್ಪ, ಕರಿಬೇವಿನ ಎಲೆಗಳನ್ನು ಅರೆಬೆಂದ ಹೆಸರು ಬೇಳೆಯೊಡನೆ ಬೆರೆಸಿ.
  • ಮಿಶ್ರಣವನ್ನು ಸಂಪೂರ್ಣವಾಗಿ ಬೇಯಿಸಿ.
  • ಮೆಣಸ, ಇಂಗು, ಗೋಡಂಬಿ, ಜೀರಿಗೆ ಮತ್ತು ತುರಿದ ಕೊಬ್ಬರಿಯಿಂದ ಒಗ್ಗರಣೆಯನ್ನು ತಯಾರಿಸಿ.
  • ಒಗ್ಗರಣೆ, ಉಪ್ಪು, ಅನ್ನ, ಬೇಳೆಗಳನ್ನು ಮಿಶ್ರಣ ಮಾಡಿ.
  • ಬಿಸಿ ಬಿಸಿ ಭಗವಂತನಿಗೆ ನೈವೇಧ್ಯ ಮಾಡಿ ಭಕ್ತರಿಗೆ ಪ್ರಸಾದವನ್ನು ಹಂಚಿ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi