ಭಾರದ್ವಾಜರ ಮಗ ಮನ್ಯು ಮತ್ತು ಮನ್ಯುವಿನ ಮಕ್ಕಳು ಬೃಹತ್ ಕ್ಷತ್ರ, ಜಯ, ಮಹಾವೀರ್ಯ, ನರ ಮತ್ತು ಗಾರ್ಗ, ಈ ಐವರಲ್ಲಿ ನರನಿಗೆ ಸಂಕೃತಿ ಎಂಬ ಮಗನಿದ್ದನು. ಸಂಕೃತಿಗೆ ಗುರು ಮತ್ತು ರಂತಿದೇವರೆಂಬ ಇಬ್ಬರು ಮಕ್ಕಳಿದ್ದರು. ಶ್ರೇಷ್ಠಭಕ್ತನಾದ ರಂತಿದೇವ ಪ್ರತಿಯೊಂದು ಜೀವಿಯು ದೇವೋತ್ತಮ ಪರಮ ಪುರುಷನೊಂದಿಗೆ ಹೊಂದಿರುವ ಸಂಬಂಧವನ್ನು ನೋಡಿದರು.

ಹೀಗಾಗಿ ಅವರು ತಮ್ಮ ಮನಸ್ಸು, ಮಾತುಗಳು ಮತ್ತು ಸ್ವತಃ ತಮ್ಮನ್ನೇ ದೇವೋತ್ತಮ ಪರಮ ಪುರುಷನ ಮತ್ತು ಅವನ ಭಕ್ತರ ಸೇವೆಯಲ್ಲಿ ತೊಡಗಿಸಿಕೊಂಡರು. ರಂತಿದೇವರು ಎಷ್ಟು ಶ್ರೇಷ್ಠರಾಗಿದ್ದರೆಂದರೆ ಕೆಲವೊಮ್ಮೆ ಅವರು ದಾನದಲ್ಲಿ ತಮ್ಮ ಅಹಾರವನ್ನು ನೀಡಿ, ತಮ್ಮ ಕುಟುಂಬದೊಂದಿಗೆ ಉಪವಾಸ ಮಾಡುತ್ತಿದ್ದರು.
ಒಮ್ಮೆ ನಲವತ್ತೆಂಟು ದಿನಗಳ ಉಪವಾಸದನಂತರ ನೀರನ್ನೂ ಕುಡಿಯದೆ ಇದ್ದಾಗ ತುಪ್ಪದಿಂದ ಮಾಡಿದ ಅತ್ಯುತ್ತಮ ಆಹಾರವನ್ನು ಅವರಿಗೆ ತರಲಾಯಿತು. ಆದರೆ ಅವರು ತಿನ್ನಲು ಆರಂಭಿಸುವ ಮುಂಚೆ ಒಬ್ಬ ಬ್ರಾಹ್ಮಣ ಅತಿಥಿ ಕಾಣಿಸಿಕೊಂಡರು.
ರಂತಿದೇವ ಆಹಾರವನ್ನು ತಿನ್ನದೇ ಆಹಾರದ ಒಂದು ಭಾಗವನ್ನು ತತ್‌ಕ್ಷಣವೇ ಆ ಬ್ರಾಹ್ಮಣನಿಗೆ ನೀಡಿದರು. ಬ್ರಾಹ್ಮಣ ಹೊರಟು ಹೋದಮೇಲೆ ಮಿಕ್ಕ ಆಹಾರವನ್ನು ತಿನ್ನಲು ಆರಂಭಿಸಲು ಹೊರಟಾಗ ಒಬ್ಬ ಶೂದ್ರನು ಬಂದನು. ರಂತಿದೇವ ಉಳಿದ ಆಹಾರವನ್ನು ಸಮನಾಗಿ ಶೂದ್ರನೊಂದಿಗೆ ಹಂಚಿದರು.
ಶೂದ್ರನು ಹೊರಟು ಹೋದಾಗ ನಾಯಿಗಳಿಂದ ಸುತ್ತುವರಿದ ಒಬ್ಬ ಅತಿಥಿ ಕಾಣಿಸಿಕೊಂಡು, “ಓ ರಾಜನೆ, ನಾನು ಮತ್ತು ನನ್ನ ನಾಯಿಗಳು ತುಂಬ ಹಸಿದಿದ್ದೇವೆ. ದಯಮಾಡಿ ತಿನ್ನಲು ಕೊಡಿ’ ಎಂದು ಕೇಳಿದನು.
ಅತೀವ ಗೌರವದಿಂದ ಮಿಕ್ಕ ಆಹಾರವನ್ನು ನಾಯಿಗಳು ಮತ್ತು ಅವುಗಳ ಒಡೆಯನಿಗೆ ರಾಜ ರಂತಿದೇವ ನೀಡಿದರು. ಅನಂತರ ರಾಜರು ಎಲ್ಲರಿಗೂ ಗೌರವದಿಂದ ನಮಸ್ಕರಿಸಿದರು.
ಕೊನೆಗೆ ಕುಡಿಯುವ ನೀರು ಮಾತ್ರ ಉಳಿದಿತ್ತು. ಅದು ಒಬ್ಬ ವ್ಯಕ್ತಿಗೆ ಸಾಕಾಗುವಷ್ಟು ಮಾತ್ರ ಇತ್ತು. ಆದರೆ ರಾಜ ನೀರನ್ನು ಕುಡಿಯಲು ಹೊರಟಾಗ ಒಬ್ಬ ಚಂಡಾಲ ಕಾಣಿಸಿಕೊಂಡು, ಓ ರಾಜನೇ, ನಾನು ಕೀಳು ಜಾತಿಯವನಾದರೂ ನನಗೆ ಸ್ವಲ್ಪ ನೀರನ್ನು ಕುಡಿಯಲು ಕೊಡಿ ಎಂದನು.

ತುಂಬ ದಣಿದ ಆ ಬಡ ಚಂಡಾಲನ ದಯಾಪೂರ್ಣ ಮಾತುಗಳಿಂದ ದುಃಖಿತನಾದ ಮಹಾರಾಜ ರಂತಿದೇವ ಈ ಮಾತುಗಳನ್ನು ಹೇಳಿದನು. ಅನಂತರ, ದಾಹದಿಂದ ಸಾವಿನಂಚಿನಲ್ಲಿದ್ದರೂ ರಾಜ ರಂತಿದೇವ ತನ್ನ ಪಾಲಿನ ನೀರನ್ನು ಯಾವುದೇ ಚಿಂತೆಯಿಲ್ಲದೆ ಕೂಡಲೇ ಚಂಡಾಲನಿಗೆ ನೀಡಿದನು. ರಾಜನ ಸಹಜವಾಗಿಯೇ ತು೦ಬ ಕರುಣಾಮಿಯಾಗಿದ್ದನು ಮತ್ತು ಸೌಮ್ಯ ಸ್ವಭಾವದವರಾಗಿದ್ದರು.
ಎಲ್ಲ ಐಹಿಕ ಆಕಾಂಕ್ಷೆಯುಳ್ಳ ಪುರುಷರಿಗೆ ಬೇಕಾದುದನ್ನು ನೀಡಿ ಸಂತೃಪ್ತಗೊಳಿಸುವ ದೇವತೆಗಳಂತಹ ಪ್ರಭು ಬ್ರಹ್ಮ ದೇವನು ಮತ್ತು ಪ್ರಭು ಶಿವನು ಬ್ರಾಹ್ಮಣ, ಶೂದ್ರ, ಚಂಡಾಲ ಮುಂತಾದವರ ವೇಷದಲ್ಲಿ ಬಂದಿದ್ದು ರಾಜನ ಈ ಅದ್ಭುತ ಗುಣದಿಂದ ಪ್ರಸನ್ನರಾಗಿ ರಾಜನ ಮುಂದೆ ತಮ್ಮ ನಿಜ ಸ್ವರೂಪದಲ್ಲಿ ಪ್ರತ್ಯಕ್ಷರಾದರು.
ದೇವತೆಗಿಂತ ಐಹಿಕ ಭೋಗವಸ್ತುಗಳನ್ನು ಅನುಭೋಗಿಸಲು ರಂತಿದೇವನಿಗೆ ಆಸಕ್ತಿಯಿರಲಿಲ್ಲ. ಅವನು ಅವರಿಗೆ ನಮಸ್ಕರಿಸಿದನು. ಆದರೆ ಅವನು ದೇವೋತ್ತಮ ಪರಮ ಪುರುಷ, ವಸುದೇವನಾದ ಪ್ರಭು ವಿಷ್ಣುವಿನಲ್ಲಿ ನಿಜಕ್ಕೂ ನಿರತನಾಗಿದ್ದು, ಪ್ರಭು ವಿಷ್ಣುವಿನ ಪದ್ಮ ಪಾದಗಳಲ್ಲಿ ತನ್ನ ಮನಸ್ಸನ್ನು ಕೇಂದ್ರೀಕರಿಸಿದ್ದನು.
ಓ ಮಹಾರಾಜ ಪರೀಕ್ಷಿತನೇ, ರಾಜ ರಂತಿದೇವನು ಸದಾ ಕೃಷ್ಣ ಪ್ರಜ್ಞೆಯಲ್ಲಿರುವವನಾಗಿ, ಎಲ್ಲ ಐಹಿಕ ಆಕಾಂಕ್ಷೆಗಳಿಂದ ಮುಕ್ತನಾಗಿ ಪರಿಶುದ್ಧ ಭಕ್ತನಾಗಿದ್ದರಿಂದ ಪ್ರಭುವಿನ ಭ್ರಾಮಕ ಶಕ್ತಿಯಾದ ಮಾಯೆ ಅವನ ಮುಂದೆ ಪ್ರತ್ಯಕ್ಷವಾಗಲಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಮಾಯೆ ಒಂದು ಸ್ವಪ್ನದಂತೆ ಸಂಪೂರ್ಣವಾಗಿ ಅವನಿಂದ ಮಾಯವಾಯಿತು.
ರಾಜ ರಂತಿದೇವನ ತತ್ತ್ವಗಳನ್ನು ಪಾಲಿಸಿದವರೆಲ್ಲರೂ ಅವರ ಕೃಪೆಗೆ ಸಂಪೂರ್ಣವಾಗಿ ಪಾತ್ರರಾದರು ಮತ್ತು ದೇವೋತ್ತಮ ಪರಮ ಪುರುಷನಾದ ನಾರಾಯಣನಿಗೆ ಹೊಂದಿಕೊಂಡ ಪರಿಶುದ್ಧ ಭಕ್ತರಾದರು. ಹೀಗಾಗಿ ಅವರೆಲ್ಲ ಅತ್ಯುತ್ತಮ ಯೋಗಿಗಳಾದರು.






Leave a Reply