-ಕೃಷ್ಣದಾಸ
‘ಪುನರ್ಜನ್ಮ’ ಎಂಬುದು ಬಹಳ ಚರ್ಚಿಸಲ್ಪಟ್ಟ ವಿಷಯ. ಇದರ ಪರಾಪರ ತತ್ತ್ವವೆತ್ತರು, ವಿಜ್ಞಾನಿಗಳು ವಾದ ಪ್ರತಿವಾದಗಳನ್ನು ಮಂಡಿಸಿದ್ದಾರೆ. ಜನಸಾಮಾನ್ಯರು ಪುನರ್ಜನ್ಮದ ಸತ್ಯವನ್ನು ಮರೆತು ಈ ದೇಹ ಮುಗಿದೊಡನೆ ಎಲ್ಲನಾಶವಾಗುತ್ತದೆ ಎಂಬ ತತ್ತ್ವವನ್ನೆ ನಂಬಿದ್ದಾರೆ. ನಾವು ರಾಸಾಯನಿಕ ಕ್ರಿಯೆಯಲ್ಲದೆ ಬೇರೇನಿಲ್ಲ ಮತ್ತು ಪ್ರಜ್ಞೆ ಎಂಬುದು ರಾಸಾಯನಿಕ ಕ್ರಿಯೆಯ ಉಪ ಉತ್ಪತ್ತಿಯಷ್ಟೆ ಎಂದು ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ. ಇವುಗಳಿಗೆ ಸೂಕ್ತ ಉತ್ತರಗಳನ್ನು ನೀಡಲು ಪ್ರಶ್ನೋತ್ತರದ ಮೂಲಕ ಪುನರ್ಜನ್ಮದ ಬಗ್ಗೆ ಒಂದು ತರ್ಕಬದ್ಧ ಚರ್ಚೆಯನ್ನು ಇಲ್ಲಿ ನೀಡಲಾಗಿದೆ.

ರವಿಶಂಕರ್ ಜನಿಸಿದ್ದು 1951 ರಲ್ಲಿ, ಊರು ಚಿಪ್ಪಾಟಿ. ಅವನು ಎರಡೂವರೆ ವರ್ಷ ವಯಸ್ಸಿನಲ್ಲಿ ನನ್ನ ಹೆಸರು ಮುನ್ನ ನಾನು ಪ್ರಸಾದ್ ಎನ್ನುವ ಕ್ಷೌರಿಕನ ಮಗ, ನನ್ನ ಆಟಿಕೆಗಳನ್ನು ನನಗೆ ನೀಡಿ” ಎಂದು ತನ್ನ ತಂದೆ ತಾಯಿಯರನ್ನು ಗೋಗರೆಯುತ್ತಿದ್ದ. ಇನ್ನು ಮು೦ದೆ ಹೇಳುತ್ತಾ “ ನನ್ನ ಆರನೆಯ ವಯಸ್ಸಿನಲ್ಲಿ ನನ್ನನ್ನು ಕೊಲೆ ಮಾಡಲಾಯಿತು. ಕೌಟುಂಬಿಕ ವ್ಯಾಪಾರದ ಏಕೈಕ ವಾರಸುದಾರನಾದ್ದರಿಂದ ಧೋಬಿ ಮತ್ತು ಇನ್ನೊಬ್ಬ ಕ್ಷೌರಿಕನು ನನ್ನನ್ನು ಕತ್ತಿಯಿ೦ದ ಕೊ೦ದರು. ತ೦ದೆ-ತಾಯಿಯರೊಡಗೂಡಿ ಇದನ್ನು ಯಾರೂ ನ೦ಬಲಿಲ್ಲ.
ವರ್ಜೀನಿಯಾ ವಿಶ್ವವಿದ್ಯಾಲಯದ ಮನಃಶ್ಯಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಇವನ್ ಸ್ಟೀವನ್ಸನ್ ಈ ಹೇಳಿಕೆಗಳ ಸತ್ಯಾಸತ್ಯಗಳನ್ನು ಪರಿಶೋಧಿಸಿದರು. ರವಿಶಂಕರ್ ಹೇಳಿದ ವಿಳಾಸದಲ್ಲಿ 6 ವರ್ಷದ ಹುಡುಗನೊಬ್ಬನು ಸಂಬಂಧಿಕರಿಂದ ಕೊಲೆಯಾಗಿದ್ದನ್ನು ಕ೦ಡುಹಿಡಿದರು. ಚಾತುರಿ ಎನ್ನುವ ಧೋಬಿ ಮತ್ತು ಕ್ಷೌರಿಕನು ತಮ್ಮ ತನ್ನೊಪ್ಪಿಗೆಯನ್ನು ನೀಡಿದರು. ಮುನ್ನಾನನ್ನು ಅವರು ಕೊಂದು ದೇವಸ್ಥಾನದ ಹಿಂಬದಿಯಲ್ಲಿ ಹೂತಿದ್ದರು. ಶವವೂ ಪತ್ತೆಯಾಯಿತು. ಮುನ್ನ ಹುಡುಗನ ತಂದೆ ಜೋಗೇಶ್ವರ್ ಪ್ರಸಾದ್ ಎಂಬ ಕ್ಷೌರಿಕ ತಮ್ಮ ಮಗನು 6ನೇ ವಯಸ್ಸಿನಲ್ಲಿ ಕಾಣೆಯಾಗಿದ್ದನ್ನು ಒಪ್ಪಿದರು. ಅವನ ತಾಯಿಗೆ ಹುಚ್ಚ ಹಿಡಿದಿತ್ತು.
ರವಿಶಂಕರ್ ಹೇಳಿದ ಆಟಿಕೆಗಳನ್ನೆಲ್ಲ ಪ್ರಸಾದ್ ಮುನ್ನಾಗೆ ಕೊಡಿಸಿದ್ದನು. ಕೊನೆಗೆ ಪ್ರಸಾದ್ ಗೆ ತನ್ನ ಮಗನು ಸಿಕ್ಕಿದ್ದಕ್ಕೆ ತೃಪ್ತಿಯಾಯಿತಾದರೂ ಅವನ ಮೃತ ದೇಹವನ್ನು ಕಂಡು ವ್ಯಾಕುಲನಾದನು. ಸಾಕ್ಷಿಗಳಿಲ್ಲವಾದ್ದರಿಂದ ಚಾತುರಿ ಮತ್ತು ಅವನ ಸ್ನೇಹಿತನಿಗೆ ಶಿಕ್ಷೆಯಾಗಲಿಲ್ಲ. ಇನ್ನೊಂದು ವಿಸ್ಮಯಕಾರಿ ವಿಷಯವೆ೦ದರೆ ರವಿಶಂಕರ್ ಗೆ ಜನನದಿಂದಲೇ ಕುತ್ತಿಗೆಯಲ್ಲಿ ಕತ್ತಿಯಿಂದ ಇರಿದಂತ ಗುರುತಿತ್ತು. ಈ ಗುರುತು ಅವನಿಗೆ ವಯಸ್ಸಾದಂತೆ ಕ್ರಮೇಣ ಮಾಯವಾಗಲಾರಂಭಿಸಿತು. 1969ರಲ್ಲಿ ಸ್ಟೀವನ್ಸನ್ 18 ವರ್ಷದ ವಯಸ್ಸಿನವನಾಗಿದ್ದ ರವಿಶಂಕರ್ ನನ್ನು ಭೇಟಿ ಮಾಡಿದರು. ಅವನಿಗೆ ಮುನ್ನಾನ ನೆನಪು ಬಹಳಷ್ಟು ಅಳಿಸಿ ಹೋಗಿತ್ತು.
ಆದರೂ ಚಿಂತಾಮಣಿ ದೇವಸ್ಥಾನದ ಹತ್ತಿರ ಹೋದರೆ ಅಥವಾ ಕ್ಷೌರಿಕನನ್ನು ಕ೦ಡರೆ ಅವನಿಗೆ ಈಗಲೂ ಭಯವಾಗುತ್ತಿತ್ತು.
ಈ ಸಂಗತಿಯನ್ನು “Children Past Lives” ಎನ್ನುವ ಗ್ರಂಥದಲ್ಲಿ ಕೆರೋಲ್ ಬೋಮನ್ ವಿಶಧೀಕರಿಸಿದ್ದಾರೆ ಮತ್ತು ಇಂತಹ ಅನೇಕ ವೃತ್ತಾಂತಗಳನ್ನು ಅದರಲ್ಲೂ ಪುನರ್ಜನ್ಮದ ಬಗ್ಗೆ ಮತ್ತೆ ಸ್ಮರಣೆ ಪಡೆದ ಹಾಗೂ ಅಂತಹ ವಿಷಯಗಳನ್ನು ಸ೦ಪೂರ್ಣವಾಗಿ ತನಿಖೆ ನಡೆಸಿ ದೃಢಪಡಿಸಿದ್ದನ್ನು ಅವರು ತಮ್ಮ ಪುಸ್ತಕದಲ್ಲಿ ಬರೆಯುತ್ತಾರೆ. ಇಂತಹ ವಿಸ್ಮಯಕಾರಕ ಘಟನೆಗಳ ಸಂಖ್ಯೆ ಆನೇಕ. ಅವುಗಳನ್ನು ಇಲ್ಲಿ ಪಟ್ಟಿಮಾಡುವುದು ಬಹುಕಷ್ಟ. ಆದರೆ ಇವುಗಳಿಂದ ಪುನರ್ಜನ್ಮವೆಂಬುದಿದೆಯೇ? ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಗೀತೆ ಮತ್ತು ಇತರ ವೇದ ಸಾಹಿತ್ಯಗಳಲ್ಲಿ ನಾವು ಇದಕ್ಕೆ ಉತ್ತರವನ್ನು ಕಾಣಬಹುದು.
ಪ್ರಶ್ನೆ : ಪುನರ್ಜನ್ಮವನ್ನು ನಂಬುವುದು ಹೇಗೆ ?
ಉತ್ತರ : ಪುನರ್ಜನ್ಮ ಅಥವಾ ದೇಹಾಂತರವನ್ನು ಗೀತೆಯಲ್ಲಿ ಸರಳವಾಗಿ ವಿವರಿಸಲಾಗಿದೆ. ಪ್ರತಿಯೊಂದು ಜೀವಿಯು ಪುಟ್ಟಶಿಶುವಾಗಿ ಜನಿಸುತ್ತಾನೆ. ಮಗುವಾಗಿ ಬೆಳೆದು, ಯುವಕನಾಗುತ್ತಾನೆ. ಯುವಕನಿಂದ ಮಧ್ಯ ವಯಸ್ಕನಾಗುತ್ತಾನೆ. ಆಮೇಲೆ ವೃದ್ಧಾಪ್ಯ, ನಂತರ ಸಾವು, ಹೀಗೆ ನಮ್ಮ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಇದಕ್ಕೆ ಯಾರೂ ಹೊರತಲ್ಲ. ಈ ಬದಲಾವಣೆ ಗಳಾಗುತ್ತಿದ್ದರೂ ಅದನ್ನು ಅನುಭವಿಸುವ ವ್ಯಕ್ತಿಯಲ್ಲಿ’ ಯಾವುದೇ ಬದಲಾವಣೆಯಿಲ್ಲ. ಬದಲಾವಣೆಗಳ ಮಧ್ಯೆ ಶಾಶ್ವತವಾಗಿ ಉಳಿಯುವ ಆ ವ್ಯಕ್ತಿಯೇ ನಾವು, ಆತ್ಮ.
ಆ ಆತ್ಮವು ಶಿಶುವಿನ ದೇಹದಿಂದ ಮಗುವಿನ ದೇಹಕ್ಕೆ ದೇಹಾಂತರವಾಗುತ್ತಿದೆ, ಒಂದು ರೀತಿಯಲ್ಲಿ ಅದನ್ನು ‘ಪುನರ್ಜನ್ಮ’ ಎಂದರೆ ತಪ್ಪಾಗಲಾರದು. ಆದರೆ ಈ ಬದಲಾವಣೆಗಳು ಬೆಳವಣಿಗೆ ಎನ್ನುವ ಪರದೆಯ ಹಿಂದೆ ನಡೆಯುವುದರಿಂದ ನಮಗೆ ಈ ‘ಜನ್ಮಾಂತರ ಅರಿವಾಗುವುದಿಲ್ಲ. ಈ ದೇಹ ಬದಲಾವಣೆ ಕ್ರಮೇಣವಾಗಿ ನಡೆಯುವುದರಿಂದ ನಾವು ಅದನ್ನು ಗಮನಿಸುವುದಿಲ್ಲ. ನಮ್ಮ ತಂದೆ-ತಾಯಿಯರು, ನಮ್ಮ ಮಗು ಆ ಪುಟ್ಟದೇಹವನ್ನು ಹೊಂದಿದ್ದ ವ್ಯಕ್ತಿ, ಈ ವ್ಯಕ್ತಿ ಬೇರೆಯವನು ಎಂದು ಬೆಳೆದ ಮಗನನ್ನು ಮನೆಯಿಂದ ದೂರ ತಳ್ಳುವುದಿಲ್ಲ. ಹೀಗೆ ಈ ಬದಲಾವಣೆಗಳ ನಡುವೆ ಶಾಶ್ವತವಾಗಿ ಆತ್ಮವು ಉಳಿಯುವುದು.
ಇದನ್ನೇ ‘ಪುನರ್ಜನ್ಮ’ ಎನ್ನುವುದು. ಆ ಪುನರ್ಜನ್ಮದಿಂದ ಯಾರೂ ಹೊರತಲ್ಲ. ಇದನ್ನು ಚಲನಚಿತ್ರದ ಉದಾಹರಣೆಯಿಂದ ಇನ್ನೂ ಹೆಚ್ಚು ವಿಷದವಾಗಿ ಅರಿಯಬಹುದು. ಚಲನಚಿತ್ರವನ್ನು ವೀಕ್ಷಿಸುವಾಗ ನಮಗೆ ಇಡೀ ಸನ್ನಿವೇಶವು ಅಖ೦ಡವಾಗಿ ಒ೦ದಾದ ಮೇಲೊಂದು ಬೆಳೆಯುತ್ತಾ ಹೋಗುತ್ತದೆ. ಆದರೆ ಚಲನಚಿತ್ರದಲ್ಲಿ ಬರುವ ಪ್ರತಿ ಸನ್ನಿವೇಶವು ವಾಸ್ತವವಾಗಿ ರೀಲಿನಲ್ಲಿ ಪ್ರತ್ಯೇಕ ಚಿತ್ರವಾಗಿರುತ್ತದೆ. ಪ್ರೊಜೆಕ್ಟರ್ ನಲ್ಲಿ ರೀಲನ್ನು ತಿರುಗಿಸುವುದರಿಂದ ಅವುಗಳ ಚಲನೆ ನಮ್ಮ ದೃಷ್ಟಿಗೆ ಗುರುತಿಸಲಾಗದಿರುವುದರಿಂದ ಚಲನಚಿತ್ರದ ಇಡೀ ಸನ್ನಿವೇಶವನ್ನು ಒಂದಾದ ಮೇಲೊಂದು ನಡೆದಿದೆ ಎಂದು ನಮಗೆ ಭಾಸವಾಗುತ್ತದೆ.
ಹಾಗೆಯೇ ನಮ್ಮ ಜೀವನದಲ್ಲಿ ನಮ್ಮ ದೇಹ ಪ್ರತಿಕ್ಷಣ ಬದಲಾಗುತ್ತಿರುತ್ತದೆ. ಅದನ್ನು ನಾವು ಗುರುತಿಸದೇ ‘ನಾನೇ ಈ ದೇಹ’ ಮತ್ತು “ದೇಹವು ನನ್ನಂತೆ’ ಶಾಶ್ವತ ಎಂದು ಭಾವಿಸುತ್ತೇವೆ. ಏಕೆಂದರೆ ಮೂಲದಲ್ಲಿ ಆತ್ಮ ಎ೦ದೂ ಬದಲಾಗದ್ದು ಮತ್ತು ಶಾಶ್ವತವಾದದ್ದು. ದೇಹದ ಬದಲಾವಣೆಗಳನ್ನು ಗುರುತಿಸದೆ ನಾವು ನಮ್ಮನ್ನು ಈ ದೇಹದೊಂದಿಗೆ ಸಮೀಕರಿಸಿಕೊಳ್ಳುತ್ತೇವೆ.
ಪ್ರಶ್ನೆ: ಪುನರ್ಜನ್ಮ ಎಂಬುದು ವೈಜ್ಞಾನಿಕ ಸತ್ಯವಲ್ಲ ಅದು ಧರ್ಮಶ್ರದ್ಧೆಯಷ್ಟೇ ಅಲ್ಲವೆ?
ಉತ್ತರ : ಇದು ಧಾರ್ಮಿಕ ನಂಬಿಕೆಯಲ್ಲಿ – ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮ ಗ್ರಂಥಗಳನ್ನು ಅವಲ೦ಬಿಸಿದ ಬೋಧನೆ ಅಥವಾ ಆಚರಣೆಯನ್ನು ನಾವು ಧರ್ಮಶ್ರದ್ಧೆಯೆನ್ನಬಹುದು. ಆದರೆ ವ್ಯಕ್ತಿಯು ಯಾವುದೇ ಧರ್ಮಕ್ಕೆ ಸೇರಿದ್ದರೂ ಅವನು ಮಗುವಾಗಿ ಹುಟ್ಟಿ ಯುವಕನಾಗಿ ಬೆಳೆದು, ವೃದ್ಧನಾಗಿ ಸಾಯುವುದು ಖಡಾಖಂಡಿತ. ಇದು ಧರ್ಮವನ್ನು ಅವಲಂಬಿಸಿಲ್ಲ. ಈ ಸತ್ಯವನ್ನು ಎಲ್ಲರೂ ಕಣ್ಣಿಂದಲೇ ಕಾಣಬಹುದು. ಆದ್ದರಿಂದ ಪುನರ್ಜನ್ಮ ಎಂಬುದು ಒಂದು ಧಾರ್ಮಿಕ ನಂಬಿಕೆಯಷ್ಟೇ ಎ೦ಬುದು ಸಮಂಜಸವಲ್ಲ. ವ್ಯಕ್ತಿಯು ಮಗುವಿನ ದೇಹದಿಂದ ಯುವಕನ ದೇಹಕ್ಕೆ, ಯುವಕನಿಂದ ವೃದ್ಧಾಪ್ಯಕ್ಕೆ ‘ದೇಹಾಂತರ’ ಹೊಂದುವ ಹಾಗೆ ಸಾವಿನ ನಂತರ ಮತ್ತೊಂದು ದೇಹವನ್ನು ಪ್ರವೇಶಿಸುತ್ತಾನೆ ಎಂಬ ಸತ್ಯವು ಪುನರ್ಜನ್ಮ ಸಿದ್ಧಾಂತದ ಮೂಲ ಆಧಾರ.
ಅಷ್ಟೇ ಅಲ್ಲದೆ ಅನೇಕ ಧರ್ಮಗ್ರಂಥಗಳು, ಗುರುಗಳು, ವಿದ್ವಾಂಸರು, ಖ್ಯಾತನಾಮರು ಇದನ್ನು ಒಪ್ಪಿದ್ದಾರೆ. ಸಂತ ಮ್ಯಾಥ್ಯುವಿನ ಧರ್ಮ ಬೋಧೆಯಲ್ಲಿ ಪುನರ್ಜನ್ಮದ ಉಲ್ಲೇಖವನ್ನು ನಾವು ಕಾಣಬಹುದು. ‘ಈಲಿಯಸ್ ಬರುವುದರಲ್ಲಿದ್ದಾನೆ. ಆದರೆ ಈಲಿಯಸ್ ಈಗಾಗಲೇ ಬ೦ದಿದ್ದಾನೆ. ಆದರೆ ನೀವು ಅವನನ್ನು ತಿಳಿದುಕೊಂಡಿಲ್ಲ ಎಂದು ನಾನು ಹೇಳಿದ್ದೇನೆ ಎಂದ ಏಸುಕ್ರಿಸ್ತ” (ಮ್ಯಾಥ್ಯು 17:9-13)
ಧರ್ಮಗುರು ಈಲಾಯಸ್ನು ಹೇರಾಡ್ ನಿ೦ದ ಹತನಾದ ಧರ್ಮ ಪ್ರಚಾರಕ ಜಾನ್ನಾಗಿ ಪುನರ್ ಜನಿಸಿದನು ಎಂದು ಇಲ್ಲಿ ಹೇಳಲಾಗಿದೆ. ಯಹೂದ್ಯ ಧರ್ಮದ ಜೋಹರ್ ಎನ್ನುವ ಪ್ರಮುಖ ಚಾಬಾಲದಲ್ಲಿ ಪುನರ್ಜನ್ಮದ ಬಗ್ಗೆ ಉಲ್ಲೇಖವನ್ನೂ ಕಾಣಬಹುದು : “ಆತ್ಮಗಳು ಪರಮ ಪರಾತ್ಪರನೊಳಗೆ ಪ್ರವೇಶಿಸಬೇಕು.
ಇದನ್ನು ಸಾಧಿಸಲು ಅದು ಪರಿಪೂರ್ಣತೆಯನ್ನು ಸಿದ್ಧಿಸಿಕೊಳ್ಳಬೇಕು. ಆ ಪರಿಪೂರ್ಣತೆಯ ಬೀಜಾಂಕುರ ಅವರಲ್ಲಿ ಈಗಾಗಲೇ ಆಗಿದೆ. ಅದು ಮರವಾಗಿ ಬೆಳೆಯಲು ಮೊದಲ ಜನ್ಮದಲ್ಲಿ, ಎರಡನೆಯ ಜನ್ಮದಲ್ಲಿ ಹೀಗೆ ಮುಂದುವರಿದು ಭಗವಂತನೊಂದಿಗೆ ಮತ್ತೆ ಪುನರ್ಜನ್ಮವನ್ನು ಅನುಭೋಗಿಸುವವರೆಗೂ ಸಾಗಬೇಕು.”

ಕುರಾನ್ನಲ್ಲಿಯೂ ಇದರ ಪ್ರಸ್ತಾಪವಿದೆ : “ನೀನು ದಿವಂಗತನಾಗಿದ್ದೆ, ಅವನು ನಿನ್ನಲ್ಲಿ ಮತ್ತೆ ಜೀವ ತು೦ಬಿದನು, ಅವನೇ ನಿನಗೆ ಮರಣ ತರುತ್ತಾನೆ ಮತ್ತು ಅವನೇ ನಿನಗೆ ಪುನರ್ಜನ್ಮ ನೀಡುತ್ತಾನೆ ಮತ್ತು ಅ೦ತಿಮವಾಗಿ ನಿನ್ನನ್ನು ಅವನು ತನ್ನಲ್ಲಿಗೆ ಸೆಳೆದುಕೊಳ್ಳುತ್ತಾನೆ.” (ಸುರಾ 2:28)
ಎಲ್ಲ ಪ್ರಮುಖ ಪಾಶ್ಚಾತ್ಯ ಧರ್ಮಗ್ರಂಥಗಳಲ್ಲಿ ಪುನರ್ಜನ್ಮದ ಬಗ್ಗೆ ಪ್ರಸ್ತಾಪಗಳನ್ನು ಕಾಣಬಹುದು. ಅಷ್ಟೇ ಅಲ್ಲದೆ ಭಾರತ ಮೂಲದ ವೇದ ಸಾಹಿತ್ಯದಲ್ಲು ಪ್ರತಿಯೊಂದು ಜೀವಿಯು ತನ್ನ ಕರ್ಮಗಳಿಗನುಸಾರವಾಗಿ 8,40,000 ಜೀವಿರಾಶಿಗಳಲ್ಲೊಂದರಲ್ಲಿ ಮತ್ತೆ ಜನಿಸಿ ಚಕ್ರದಲ್ಲಿಸಿಲುಕಿದ್ದಾನೆಂದು ಹೇಳಲಾಗಿದೆ. ಒಟ್ಟಿನಲ್ಲಿ ಎಲ್ಲ ಧರ್ಮಗ್ರಂಥಗಳಲ್ಲಿ ಪುನರ್ಜನ್ಮದ ಬಗ್ಗೆ ಸಹಮತವಿರುವುದರಲ್ಲಿ ಸಂಶಯವಿಲ್ಲ. ಇನ್ನು ಮಹಾನ್ ಚಿಂತಕರು, ವಿದ್ವಾಂಸರ ಹೇಳಿಕೆಗಳನ್ನು ಗಮನಿಸಿದರೆ ಅವರೂ ಕೂಡ ಪುನರ್ಜನ್ಮ ಒಪ್ಪಲೇಬೇಕಾದ ಸತ್ಯ ಎನ್ನುವುದನ್ನು ದೃಢಪಡಿಸಿದ್ದಾರೆ.
ಗ್ರೀಸ್ ದೇಶದ ಪ್ರಖ್ಯಾತ ವಿದ್ವಾಂಸ ಸಾಕ್ರೆಟಿಸ್ ಪುನರ್ಜನ್ಮದ ಪ್ರತಿಪಾದಕನಾಗಿದ್ದನು. ಅದು ಅವನ ಕೆಳಗಿನ ಹೇಳಿಕೆಯಲ್ಲಿ ಸ್ಪಷ್ಟವಾಗಿದೆ : “”ಪುನರ್ಜನ್ಮವಿದೆ ಎಂಬುದರ ಬಗ್ಗೆ ದೃಢ ವಿಶ್ವಾಸವಿದೆ ಮತ್ತು ಸತ್ತವನು ಹುಟ್ಟುತ್ತಾನೆ. ಅಷ್ಟೇ ಅಲ್ಲ ಸತ್ತವರು ಈಗ ಬೇರಿನ್ನೆಲ್ಲೋ ಜೀವಿಸುತ್ತಾರೆ.” (ಫವಡೇ ಕೃತಿಯಿಂದ). ಅಷ್ಟೇ ಅಲ್ಲದೆ ಗ್ರೀಕ್ನ ಪ್ಲೇಟೋ, ಪೈಥಾಗೊರಸ್ ಮತ್ತಿತರ ವಿದ್ವಾಂಸರು ಸಾಕ್ರೆಟಿಸ್ನ ಹೇಳಿಕೆಯನ್ನು ಸಮರ್ಥಿಸಿದ್ದರು. ರಾಲ್ಫ ಈಮರ್ ಸನ್ ಕೂಡ ಪುನರ್ಜನ್ಮವನ್ನು ಸಮರ್ಥಿಸುತ್ತ ಹೀಗೆ ವ್ಯಾಖ್ಯಾನಿಸಿದ್ದಾನೆ : “ಆತ್ಮ ಅಮರವಾದುದು, ಅದು ಮಾನವ ಜನ್ಮವನ್ನು ಪಡೆದು ತಾತ್ಕಾಲಿಕವಾಗಿ ಇಲ್ಲಿ ಇರುತ್ತದೆ.
ಆದು ಮರಣದ ನಂತರ ಬೇರೊ೦ದು ಹೊಸ ದೇಹವನ್ನು ಪ್ರವೇಶಿಸುತ್ತದೆ.” (ಜರ್ನಲ್ ಆಫ್ ಈಮರಾನಮ್) ರಷ್ಯಾದ ಲಿಯೋ ಟಾಲ್ ಸ್ಟಾಯ್ ಹೇಳಿಕೆಯನ್ನು ಗಮನಿಸಿದರೂ ಅದೇ ಸಂದೇಶ ನಮಗೆ ಅನುರಣಿಸುತ್ತದೆ : ‘ನಮ್ಮ ಪ್ರಸ್ತುತ ಜೀವನವು ಲಕ್ಷಾಂತರ ಜನ್ಮಗಳಲ್ಲಿ ಒಂದು, ಜನ್ಮಾಂತರವನ್ನು ಪಡೆಯುತ್ತಾ ನಾವು ಜನಿಸುತ್ತೇವೆ ಮತ್ತು ಸಾಯುತ್ತೇವೆ ಹೀಗೆ ಪುನರಾವರ್ತಿಸುತ್ತದೆ. ನಮ್ಮ ನಿಜ ಜೀವನ, ಭಗವಂತನೊಡನೆ. ಅದನ್ನು ಪಡೆಯುವವರೆಗೂ ಈ ಚಕ್ರ ನಮ್ಮ ನಿಜ ಜೀವನದಲ್ಲಿ ಪುನರಾವರ್ತಿಸುತ್ತವೆ.”
ಆಧುನಿಕ ಯುಗದ ಖ್ಯಾತನಾಮರಲ್ಲಿ ಕೆಲವರನ್ನು ಇಲ್ಲಿ ಹೆಸರಿಸಬಹುದು : ಮಹಾತ್ಮಗಾಂಧಿ, ನೊಬೆಲ್ ಪ್ರಶಸ್ತಿ ವಿಜೇತರಾದ ಐಸಾಕ್ ಭಾಷೇವಿಸ್ ಸಿಂಗರ್ ಮತ್ತು ಹರ್ ಮನ್ ಹೆಸ್ಸೆ, ಬೀಟಲ್ಸ್ನ ಜಾರ್ಜ್ ಹ್ಯಾರಿಸನ್, ಪ೦ಡಿತ್ ರವಿಶ೦ಕರ್, ಹಾಲಿವುಡ್ ತಾರೆ ಜಾನ್ ಬ್ರವೊಲ್ಟಾ- ಇನ್ನೂ ಅನೇಕರು ಪುನರ್ಜನ್ಮವನ್ನು ನ೦ಬಿದ್ದರು. ಒಟ್ಟಿನಲ್ಲಿ ‘ಪುನರ್ಜನ್ಮ’ ಸಿದ್ಧಾಂತವನ್ನು ಧರ್ಮ ಗ್ರಂಥಗಳು ಬೋಧಿಸಿದರೂ, ಅದು ಶ್ರದ್ಧೆಯಷ್ಟೇ ಅಲ್ಲ ಅದು ಖಡಾಖಂಡಿತ ಸತ್ಯ. ಇನ್ನೊಂದು ಆಶ್ಚರ್ಯಕರ ಸಂಗತಿಯೆಂದರೆ ಅಮೇರಿಕಾದ ಪ್ರಜೆಗಳಲ್ಲಿ ಶೇ. 50 ರಷ್ಟು ಜನ ಇದನ್ನು ಒಪ್ಪುತ್ತಾರೆ.
ಪ್ರಶ್ನೆ : ಆತ್ಮವೆಂಬುದು ದೇಹದಲ್ಲಿ ಇದೆ ಎನ್ನುವುದಕ್ಕೆ ಪುರಾವೆ ಏನು? ಆತ್ಮ ಒಂದು ದೇಹದಿಂದ ಮತ್ತೊಂದು ದೇಹಕ್ಕೆ ಹೇಗೆ ಪರಕಾಯ ಪ್ರವೇಶ ಮಾಡುತ್ತದೆ ?
ಉತ್ತರ : ಪಂಚಭೂತಗಳಾದ – ಪೃಥ್ವಿ, ಜಲ, ಅಗ್ನಿ, ವಾಯು ಮತ್ತು ಆಕಾಶಗಳಿ೦ದ ಕೂಡಿದ್ದು, ಸ್ಥೂಲ ದೇಹ ಹಾಗೂ ಮನಸ್ಸು ಬುದ್ಧಿ, ಅಹಂಕಾರದಿಂದ ಕೂಡಿದ ಸೂಕ್ಷ್ಮ ಶರೀರ ಇವೆರಡರಿಂದ ನೇರ ನಮ್ಮ ಲೌಕಿಕ ದೇಹ ರಚಿಸಲಾಗಿದೆ. ಈ ಯಂತ್ರದಲ್ಲಿ ಆತ್ಮವು ನೆಲೆಸಿ ದೇಹದ ಆಗುಹೋಗುಗಳನ್ನು ಅನುಭವಿಸುತ್ತಾನೆ. ಆತ್ಮವನ್ನು ಅವರ ಕ್ರಿಯೆಯಿ೦ದ ನಾವು ಕಾಣಬಹುದು. ಉದಾಹರಣೆಗೆ : ಒಂದು ಮೈಕ್ರೋಫೋನ್ಗೆ ಅನೇಕ ಭಾಗಗಳಿವೆ. ಅದರ ಬಾಹ್ಯ ಲೋಹಮಯ ದೇಹ, ವಿದ್ಯುತ್ ಚಲನೆ ಮಾಡುವ ತಂತಿ ಇತ್ಯಾದಿ. ಆದರೆ ಅಂತಿಮವಾಗಿ ಮೈಕ್ನ ಸ್ವಿಚ್ ಅನ್ನು ಆನ್ ಮಾಡುವ ವ್ಯಕ್ತಿಯೇ ಅದಕ್ಕೆ ಚಾಲನೆ ನೀಡುತ್ತಾನೆ.
ಆ ವ್ಯಕ್ತಿ ಇಲ್ಲಿದೆ ಮೈಕ್ ಕೆಲಸ ಮಾಡಲಾರದು. ಹಾಗೆಯೇ ಪಂಚಭೂತಗಳ ಸ್ಥೂಲ ಶರೀರ ಇವು ಅದರ ಒಡೆಯ ಆತ್ಮವಿಲ್ಲದೆ ಕಾರ್ಯ ಮಾಡಲಾರವು. ಆದರೂ ಆ ಆತ್ಮದ ಇರುವಿಕೆಯನ್ನು ಗ್ರಹಿಸುವುದು ಹೇಗೆ? ಎನ್ನುವ ಪ್ರಶ್ನೆ ಉಳಿಯುತ್ತದೆ. ಇದಕ್ಕೆ ಉತ್ತರವಾಗಿ ಗೀತೆಯಲ್ಲಿ ಪ್ರಜ್ಞೆಯೇ ಆ ಆತ್ಮದ ಇರುವಿಕೆಯ ಕುರುಹು ಎಂದು ಹೇಳಲಾಗಿದೆ. ವ್ಯಕ್ತಿಯು ಸತ್ತಾಗ ಎಲ್ಲ ರಾಸಾಯನಿಕ ವಸ್ತುಗಳು ಆ ದೇಹದಲ್ಲೇ ಇರುವುದು.
ಆದರೆ ಪ್ರಜ್ಞಾವಂತ ಆತ್ಮವು ಇಲ್ಲದ ಕಾರಣ ಆ ದೇಹ ಮೃತವಾಗಿದೆ. ಆ ಪ್ರಜ್ಞೆಯನ್ನು ಲೌಕಿಕ ಕ್ರಿಯೆಗಳಿಂದ ಸೃಷ್ಟಿಸಲಾಗದು. ಪ್ರಜ್ಞೆ ಬರುವುದು ಆತ್ಮನಿಂದಲೇ. ಏಕೆಂದರೆ ಆತ್ಮವು ಸ್ವತಃ ಚೇತನಮಯ ಪ್ರಜ್ಞೆಯಿಂದಲೇ ಕೂಡಿದ್ದು ಶಾಶ್ವತ ಹಾಗೂ ಆನಂದಮಯವೂ ಆಗಿದೆ.
ಒಂದು ದೇಹದಿಂದ ಮತ್ತೊಂದು ದೇಹಕ್ಕೆ ಚಲಿಸುವ ಆತ್ಮದ ಪಯಣವನ್ನು ಗೀತೆಯು ಹೀಗೆ ವಿವರಿಸಿದೆ :
ವಾಸಾಂಸಿ ಜೀರ್ಣಾನಿ ಯಥಾ ವಿಹಾಯ ನಾವನಿ ಗೃಹ್ಣಾತಿ ನರೋ-ಪರಾಣಿ |
ತಾಥ ವಿಹಾಯ ಶಾರೀರಾಣಿ ಜೀರ್ಣಾನಿ ಅನ್ಯಾನಿ
ಸಂಯಾತಿ ನವಾನಿ ದೇಹಿ ||
‘ವ್ಯಕ್ತಿಯ ಜೀರ್ಣವಾದ ಅ೦ಗಿಯನ್ನು ತ್ಯಜಿಸಿ ಹೊಸದನ್ನು ತೊಡುವ ಹಾಗೆ ಆತ್ಮವು ಜೀರ್ಣವಾದ ಶರೀರವನ್ನು ತ್ಯಜಿಸಿ ಹೊಸ ಶರೀರವನ್ನು ಪ್ರವೇಶಿಸುತ್ತದೆ”. (ಗೀತೆ 2.22)
ದೇಹವು ನಿಷ್ಪ್ರಯೋಜಕವಾದಾಗ ಆತ್ಮವು ಅದನ್ನು ತ್ಯಜಿಸಿ ಮತ್ತೊಂದು ದೇಹವನ್ನು ಪ್ರವೇಶಿಸುತ್ತದೆ. ಸಾಮಾನ್ಯವಾಗಿ ಈ ಬದಲಾವಣೆ ಸ್ಥೂಲ ಶರೀರ ಕಾಲಾನುಕ್ರಮದಲ್ಲಿ ನಾಶವಾದಾಗ ಸಂಭವಿಸುತ್ತದೆ. ಸ್ಥೂಲ ದೇಹವು ನಾಶವಾದಾಗ ಸೂಕ್ಷ್ಮ ದೇಹ ನಾಶವಾಗುವುದಿಲ್ಲ. ಅದು ಆತ್ಮವನ್ನು ಅದರ ಕರ್ಮಾನುಸಾರ ಬೇರೊ೦ದು ದೇಹಕ್ಕೆ ಕೊ೦ಡೊಯ್ಯುತ್ತದೆ. ಸುಗ೦ಧವನ್ನು ಗಾಳಿಯು ಹೊತ್ತೊಯ್ಯುವ ಹಾಗೆ ಆತ್ಮವನ್ನು ಸೂಕ್ಷ್ಮ ದೇಹವು ಬೇರೊಂದು ದೇಹಕ್ಕೆ ಕರೆದೊಯ್ಯುತ್ತದೆ. ಹೀಗೆ ಆತ್ಮದ ಪರಕಾಯ ಪ್ರವೇಶ ಸ೦ಭವಿಸುತ್ತದೆ.
ಪ್ರಶ್ನೆ : ದೇಹಾಂತರವೆಂದರೆ ನಾವು ಯಾವ ದೇಹವನ್ನಾದರೂ ಪಡೆಯಬಹುದೇ ?
ಉತ್ತರ : ಆತ್ಮದ ಈ ಪರಕಾಯ ಪ್ರವೇಶ ಅವನು ಎಸಗಿದ ಕರ್ಮವನ್ನವಲಂಬಿಸಿದೆ. ಆ ನವೀನ ದೇಹವನ್ನು ಭೌತಿಕ ಶಕ್ತಿ ದುರ್ಗೆಯು ನೀಡುತ್ತಾಳೆ. ಸತ್ತ್ವ ಕರ್ಮಗಳನ್ನೆಸಗಿದವನು ಊರ್ಧ್ವ ಲೋಕದ, ರಾಜಸಿಕ ಕ್ರಿಯೆಯಲ್ಲಿ ತೊಡಗಿದವನು ಮರ್ತ್ಯ ಲೋಕದ ಮತ್ತು ತಾಮಸಿಕ ಕ್ರಿಯೆಗಳನ್ನೆಸಗಿದವನು ಅಧೋಲೋಕದ ಜನ್ಮವನ್ನು ಪಡೆಯುತ್ತಾನೆ. ಈ ದೇಹವು ಪ್ರಧಾನವು “ಮಾಡಿದ್ದುಣ್ಣೋ ಮಹಾರಾಯ” ತತ್ವವನ್ನು ಆಧರಿಸಿದ್ದಾಗಿದೆ. 84,000,000 ಜೀವ ಯೋನಿಗಳೊಂದರಲ್ಲಿ ನಾವು ಜನಿಸಬಹುದು.
ಗೀತೆಯಲ್ಲಿ ಕಾರಣಂ ಗುಣ ಸಂಗೋಸ್ಯ ಸದ ಅಸದ್ ಯೋನಿ ಜನ್ಮಸು ”ನಾವು ಯಾವ ಗುಣದ ಸ೦ಗ ಮಾಡುತ್ತೇವೋ ಅದಕ್ಕೆ ಅನುಗುಣವಾದ ಒಳ್ಳೆಯ ಅಥವಾ ಕೆಟ್ಟ ಜನ್ಮವನ್ನು ಪಡೆಯುತ್ತೇವೆ” ಎ೦ದು ವಿಶದೀಕರಿಸಿದೆ. ಪರಮಾತ್ಮನು ಈ ಭೌತಿಕ ಜಗತ್ತಿನಲ್ಲಿ ಭೋಗಿಸಲು ಇಚ್ಛಿಸುವ ಜೀವಿಗಳಿಗೆ ಅವರವರ ಇಚ್ಛೆಗಳನ್ನು ಪೂರೈಸಲು ಮಾಡಿರುವ ಏರ್ಪಾಟು, ಉದಾಹರಣೆಗೆ : ಮಾಂಸವನ್ನು ತಿನ್ನಬೇಕು ಎಂದು ಅತಿಯಾಗಿ ಆಸೆಪಡುವ ಜೀವಿಗೆ ಪರಮಾತ್ಮನು ಹುಲಿ, ಸಿಂಹ, ಇತ್ಯಾದಿ ಮಾಂಸ ಭಕ್ಷಕ ಪ್ರಾಣಿಗಳ ದೇಹವನ್ನು ನೀಡುತ್ತಾನೆ.
ಜೀವನದಲ್ಲಿ ನಾವು ಬೆಳೆಸಿಕೊಳ್ಳುವ ಹವ್ಯಾಸ ಹಾಗೂ ಗುಣಗಳನ್ನಾಧರಿಸಿ ಸಾವಿನ ಕಾಲದಲ್ಲಿ ಏನನ್ನು ಸ್ಮರಿಸುತ್ತೇವೋ ಆ ಸ್ಮರಣೆಗಳಿಗನುಗುಣವಾಗಿ ನಮ್ಮ ಮುಂದಿನ ದೇಹವನ್ನು ಪಡೆಯುತ್ತೇವೆ. ಯಂ ಯಂ ವಾಪಿ ಸ್ಮರಣ ಭಾವಂ ತ್ಯಜತಿ ಅನ್ತ್ಯೇ. ಕಲೇವರಮ್ ತಂತಂ ಏವೈತಿ ಕೌಂತೇಯ ಸದಾ ತದ್ ಭಾವ ಭಾವಿತಃ – ಮರಣ ಕಾಲದಲ್ಲಿ ಸ್ಮರಣೆಗನುಗುಣವಾದ ಗಮ್ಯ ಸ್ಥಾನ ನಿರ್ಧರಿಸಲಾಗುತ್ತದೆ.
ಪ್ರಶ್ನೆ : ನಾವು ಅನೇಕ ಪುನರ್ಜನ್ಮಗಳನ್ನು ಅನುಭವಿಸಿದ್ದರೆ ಅವುಗಳ ಸ್ಮರಣೆ ಏಕಿಲ್ಲ? ಅದು ನಮ್ಮ ಸ್ಮರಣೆಯಲ್ಲಿ ಇಲ್ಲದಿರುವುದೇ ಪುನರ್ಜನ್ಮವಿಲ್ಲ ಎನ್ನುವುದಕ್ಕೆ ಪುರಾವೆಯಲ್ಲವೆ?
ಉತ್ತರ : ಎರಡು ಘಂಟೆ ಹಿಂದೆ ಮಾಡಿದ ಕಾರ್ಯವೇ ನಮಗೆ ನೆನಪಿನಲ್ಲಿರುವುದಿಲ್ಲ. ನಮ್ಮ ಸ್ಮರಣಶಕ್ತಿ ತುಂಬ ಪರಿಮಿತವಾದದ್ದು. ಅದನ್ನು ಆಧರಿಸಿ ಪುನರ್ಜನ್ಮ ನಮಗೆ ಇಲ್ಲ ಎನ್ನುವುದು ಸಮಂಜಸವಲ್ಲ. ಸಾವಿನ ಕಾಲದಲ್ಲಿ ಅದನ್ನು ಆಧರಿಸಿ ಪುನರ್ಜನ್ಮ ನಮಗೆ ಇಲ್ಲ ನಾವು ಅದೇ ಸೂಕ್ಷ್ಮ ಶರೀರವನ್ನು ಹೊತ್ತರೂ ನಮಗೆ ಈ ದೇಹದ ಸ್ಮರಣ ಸ೦ಪೂರ್ಣವಾಗಿ ನಾಶವಾಗುತ್ತದೆ.

ವಾಸ್ತವಿಕವಾಗಿ ಈ ದೇಹದ ಕ್ರಿಯೆಗಳ ಸಂಪೂರ್ಣ ನಾಶವನ್ನೇ ಸಾವು ಎನ್ನುವುದು. ಜೊತೆಗೆ ಆ ಸ್ಮರಣಾ ಶಕ್ತಿ ನಮಗೆ ಇದಿದ್ದರೆ ಪ್ರಸ್ತುತ ಜೀವನಕ್ಕೆ ಬಹಳ ಧಕ್ಕೆಯುಂಟಾಗುತ್ತದೆ. ಏಕೆಂದರೆ ದ್ವಿ ವ್ಯಕ್ತಿತ್ವ ಅಂತಹ ವ್ಯಕ್ತಿಯನ್ನು ಕಾಡಿ ಅವನಿಗೆ ಶಾಂತಿ ಇಲ್ಲದಂತಾಗಿ ಅವನಿಗೆ ದೈನ೦ದಿನ ಕ್ರಿಯೆಗಳನ್ನು ನೆರವೇರಿಸಲಾಗುವುದಿಲ್ಲ. ಆದ್ದರಿ೦ದಲೇ ಭೌತಿಕ ಶಕ್ತಿಯು ಆ ಸ್ಮರಣೆಗಳನ್ನು ನಾಶಮಾಡುತ್ತದೆ. ಆದರೂ ಪೂರ್ವಜನ್ಮದ ಸ್ಮರಣೆಯನ್ನು ಹೊ೦ದಿರುವ ಘಟನೆಗಳು ಆಗಾಗ್ಗೆ ಬೆಳಕಿಗೆ ಬರುತ್ತಿರುತ್ತವೆ.
ಪ್ರಶ್ನೆ: ಪೂರ್ವಜನ್ಮದ ಸ್ಮರಣೆಗಳು ಎಂದು ಹೇಳುವ ಘಟನೆಗಳು ಎಷ್ಟು ನಿಜ?
ಉತ್ತರ : ಪುನರ್ಜನ್ಮ ಸ್ಮರಿಸುವ ಅನೇಕ ಘಟನೆಗಳನ್ನು ವಾರ್ತಾಪತ್ರಿಕೆಗಳು ಆಗಾಗ್ಗೆ ಪ್ರಕಟಿಸುತ್ತಿರುತ್ತವೆ ಮತ್ತು ಇದರ ಬಗ್ಗೆ ಅನೇಕ ಪುಸ್ತಕಗಳನ್ನೂ ಬರೆಯಲಾಗಿದೆ. ಅಷ್ಟೇ ಅಲ್ಲದೆ ಮನೋಶಾಸ್ತ್ರಜ್ಞರು ಇದರ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿದ್ದಾರೆ. ಈ ಸ್ಮರಣೆಯನ್ನು ಜಾತ ಸ್ಮರಣ ಎಂದು ಕರೆಯುವುದುಂಟು. ಆದರೆ ಈ ಜಾತಸ್ಮರಣೆಯನ್ನು ಆಧರಿಸಿ ನಾವು ಪುನರ್ಜನ್ಮ ಎಂದು ಹೇಳುವುದರ ಬದಲಾಗಿ ವೇದವನ್ನಾಧರಿಸಿ ನಾವು ಅದನ್ನು ಒಪ್ಪಬೇಕು.
ಪ್ರಶ್ನೆ: ಪುನರ್ಜನ್ಮವನ್ನು ಏಕೆ ಎಲ್ಲರೂ ಒಪ್ಪುವುದಿಲ್ಲ?
ಉತ್ತರ: ಪುನರ್ಜನ್ಮವನ್ನು ಸಾಮಾನ್ಯ ಜನರು ಒಪ್ಪುವುದಿಲ್ಲ. ಏಕೆಂದರೆ ಎಲ್ಲರೂ “ನಾನು ಈ ದೇಹ” ಎನ್ನುವ ಮೃಗೀಯ ಪ್ರಜ್ಞೆಯಲ್ಲಿ ತತ್ತರಿಸಿ ಹೋಗಿದ್ದಾರೆ. ಮೃಗಗಳಿಗೆ ಮುಂದಿನ ಜನ್ಮವಿದೆ ಎಂದು ಅರಿಯಲಾಗದು. ಆತ್ಮವನ್ನು ಅರಿಯಬೇಕಾದರೆ ಜೀವನದ ದೈಹಿಕ ಕಲ್ಪನೆಯಿಂದ ಮುಕ್ತರಾಗಿ “ನಾನು ಪ್ರಜ್ಞಾವಂತ ಆತ್ಮ” ನಾನು ದೇಹದ ಅಂತ್ಯದೊಂದಿಗೆ ಕೊನೆಗೊಳ್ಳುವುದಿಲ್ಲ ಎನ್ನುವುದನ್ನು ಮನಗಾಣಬೇಕು. ಉದಾಹರಣೆಗೆ ಇರುವೆಗಳಿಗೆ ತಮ್ಮದೇ ಆದ ದೇಹ ಮತ್ತು ಅದಕ್ಕನುಗುಣವಾದ ಕಾಲದ ಪರಿಗಣನೆಯಿದೆ. ನಾನು 100 ವರ್ಷ ಜೀವಿಸುತ್ತಿದ್ದೇನೆ ಎಂದು ಅದು ಭಾವಿಸುತ್ತದೆ.
ಆದರೆ ನಮ್ಮ ಕಾಲಗಣನೆಯ ಪ್ರಕಾರ ಕೆಲವು ದಿನಗಳೂ ಮಾತ್ರ ಅದು ಜೀವಿಸುತ್ತದೆ. ಹಾಗೆಯೇ ನಮ್ಮ ನೂರು ವರ್ಷ ಬ್ರಹ್ಮನ ಕೆಲವು ಕ್ಷಣ ಮಾತ್ರ. ಶಾಶ್ವತ ಕಾಲದ ಎದುರಿಗೆ ಆ ಬ್ರಹ್ಮನು ಜೀವಿತವು ಕೂಡ ಕೆಲವು ಕ್ಷಣಗಳು ಮಾತ್ರ. ನಮ್ಮ ಕಾಲ ಪ್ರಜ್ಞೆಯನ್ನು ಶಾಶ್ವತ ಕಾಲದ ಪರಿಗಣನೆಗೆ ವಿಸ್ತರಿಸಿಕೊಳ್ಳಬೇಕು. ನಮ್ಮ ಈ ಪ್ರಸ್ತುತ ಜೀವನ ಶಾಶ್ವತ ಕಾಲದ ಎದುರಿಗೆ ಒಂದು ಕ್ಷಣ ಮಾತ್ರ ಎನ್ನುವುದನ್ನು ಸಾಕ್ಷಾತ್ಕರಿಸಿಕೊಳ್ಳಬೇಕು. ಆಗ ಪುನರ್ಜನ್ಮವನ್ನು ಸುಲಭವಾಗಿ ಒಪ್ಪಬಹುದು.
ಪ್ರಶ್ನೆ: ಪುನರ್ಜನ್ಮದ ಚಕ್ರದಿಂದ ಬಿಡುಗಡೆ ಹೊಂದುವುದು ಹೇಗೆ?
ಉತ್ತರ: ಹುಟ್ಟು, ಸಾವು ಮುಪ್ಪು ಮತ್ತು ವ್ಯಾಧಿ ಇವು ಲೌಕಿಕ ಜಗತ್ತಿಗೆ ಸೇರಿದವು. ಆಧ್ಯಾತ್ಮಿಕ ಲೋಕದಲ್ಲಿ ಇದಾವುದೂ ಇಲ್ಲ. ಅಲ್ಲಿ ಜೀವನ ಶೂನ್ಯವೆಂದಲ್ಲ ಅಲ್ಲಿ ಶಾಶ್ವತ ಜ್ಞಾನಾನಂದಮಯ ಜೀವನವನ್ನು ಎಲ್ಲರೂ ಭೋಗಿಸುತ್ತಾರೆ. ಆಧ್ಯಾತ್ಮಿಕ ಲೋಕವನ್ನು ಪಡೆದರೆ ನಮಗೆ ಪುನರ್ಜನ್ಮವೆಂಬುದಿಲ್ಲ. ಇದನ್ನು ಪಡೆಯುವುದು ಹೇಗೆ ಎಂಬುದನ್ನು ಗೀತೆಯಲ್ಲಿ ನೀಡಲಾಗಿದೆ – ತ್ಯಕ್ತ್ವಾ ದೇಹಂ ಪುನರ್ ಜನ್ಮ ನೈತಿ… ಜನ್ಮ ಕರ್ಮ ಚ ಮೇ ದಿವ್ಯಮ್ ಯೋ ಜಾನಾತಿ ತತ್ವತಃ – ಯಾರು ಆ ಲೋಕದ ಅಧಿಪತಿಯಾದ ಕೃಷ್ಣನ ಜನನ ಮತ್ತು ಕರ್ಮಗಳ ದಿವ್ಯ ಸ್ವರೂಪವನ್ನು ತತ್ತ್ವತಃ ಅರಿಯುತ್ತಾರೋ ಅವರಿಗೆ ಆಧ್ಯಾತ್ಮಿಕ ಲೋಕ ಪ್ರಾಪ್ತವಾಗುತ್ತದೆ ಮತ್ತು ಅವರಿಗೆ ಪುನರ್ಜನ್ಮವಿರುವುದಿಲ್ಲ.
ಈ ಅರಿವು ಸದಾ ಕೃಷ್ಣನ ಸ್ಮರಣೆಯಿಂದ ಸಾಧ್ಯ. ಮೊದಲೇ ಹೇಳಿದ ಹಾಗೆ ಸಾವಿನ ಸಮಯದಲ್ಲಿ ಸ್ಮರಿಸುವುದನ್ನೇ ಪಡೆಯುತ್ತೇವೆ ಆದ್ದರಿಂದಲೇ ಕೃಷ್ಣನ ಸ್ಮರಣೆಯನ್ನು ನಾಮಜಪದ ಮೂಲಕ ನಾವು ಜೀವನದ ಆರಂಭದಿಂದಲೇ ಸಿದ್ಧಿಸಿಕೊಳ್ಳಬೇಕು. ಈ ವಿಷಯದಲ್ಲಿ ತರಬೇತಿ ನೀಡಲೆಂದೇ ಕೃಷ್ಣ ಪ್ರಜ್ಞಾ ಆಂದೋಲನವನ್ನು ಸ್ಥಾಪಿಸಲಾಯಿತು ಮತ್ತು ಇದರ ಲಾಭವನ್ನು ಪಡೆದವರಿಗೆ ಪುನರ್ಜನ್ಮವಿಲ್ಲ.
ಪೂರ್ವಜನ್ಮದತ್ತ ಹಿಂಚಲನ
- ಇದೂ ಒಂದು ರೀತಿಯಲ್ಲಿ ಪೂರ್ವಜನ್ಮ ಸ್ಮರಣೆ ಮರುಕಳಿಸುವುದು. ಇದರರ್ಥ ಒಬ್ಬ ವ್ಯಕ್ತಿಯನ್ನು ವಶೀಕರಣಕ್ಕೊಳಪಡಿಸಿ, ಆತನನ್ನು ಬಾಲ್ಯದ ಮೂಲಕ ಜನನ ಪೂರ್ವ ಕಾಲಕ್ಕೆ ಕರೆದೊಯ್ಯುವುದು. ಅಂಥ ಸಂದರ್ಭದಲ್ಲಿ ಆ ವ್ಯಕ್ತಿಯು ತನ್ನ ಗತ ಜನ್ಮದ ಬಗ್ಗೆ ಮಾತನಾಡುತ್ತಾನೆ. ಹಿಂದಿನ ಜನ್ಮದ ಸಾವು, ಎರಡು ಜನ್ಮದ ನಡುವಿನ ಕಾಲಾವಧಿ ಬಗ್ಗೆ ಹೇಳುತ್ತಾನೆ.
- ಪುನರ್ಜನ್ಮ ಸ್ಮರಣೆಯಿಂದ ದೈಹಿಕವಾದ ಕೆಲವು ಕಾಯಿಲೆಗಳು ಗುಣವಾಗುತ್ತವೆ.
- ಕೆಲವು ಸಂದರ್ಭಗಳಲ್ಲಿ ಗತಜನ್ಮ ಸ್ಮರಣೆಗೊಳಗಾದ ವ್ಯಕ್ತಿ ತನಗೆ ಗೊತ್ತಿರದ ವಿದೇಶ ಭಾಷೆಯಲ್ಲಿ ಮಾತನಾಡುತ್ತಾನೆ.
- ಅಂಥವರು ಕೆಲವೊಮ್ಮೆ ಬಹಳ ನಿಖರ ಮಾಹಿತಿ, ಅಂಕಿ-ಅಂಶಗಳನ್ನು ನೀಡುತ್ತಾರೆ. ಅವರು ನೀಡಿದ ಮಾಹಿತಿ ನಿಜವಾದುದೆಂಬುದನ್ನು ಇತಿಹಾಸಕಾರರು ಸಾಬೀತು ಪಡಿಸಿದ ನಿದರ್ಶನಗಳೂ ಇವೆ.
- ಕೆಲವು ವೇಳೆ ಹಿಂದಿನ ಜನ್ಮದಲ್ಲಿ ಆ ವ್ಯಕ್ತಿಯ ಸಾವಿಗೆ ಕಾರಣವಾದ ಘಟನೆಯ ಕುರುಹು ಈ ಜನ್ಮದಲ್ಲಿ ಹುಟ್ಟಿನೊಂದಿಗೆ ಬಂದಿರುತ್ತದೆ. ಉದಾಹರಣೆಗೆ ಹಿಂದಿನ ಜನ್ಮದಲ್ಲಿ ತಲೆಗೆ ಏಟು ಬಿದ್ದು ಮೃತಪಟ್ಟವನಿಗೆ ಈ ಜನ್ಮದಲ್ಲಿ ಹುಟ್ಟುವಾಗಲೇ ತಲೆ ಮೇಲೆ ಗಾಯದ ಗುರುತು ಇರಬಹುದು.
- ಪುನರ್ಜನ್ಮದ ಸಿದ್ಧಾಂತವನ್ನು ಅಲ್ಲಗಳೆಯುತ್ತಿದ್ದ ಡಾ.ಹೆಲೆನ್ ವ್ಯಾಂಬ್ಯಾಟ್ ಎಂಬಾಕೆ 1975ರಲ್ಲಿ ಪುನರ್ಜನ್ಮ ಸ್ಮರಣೆ ಬಗ್ಗೆ ಒಂದು ಅಧ್ಯಯನ ಕೈಗೊಂಡರು. ಆಕೆಯ ಅನುಯಾಯಿಗಳು ವೈಜ್ಞಾನಿಕ ಸಮೀಕ್ಷೆ ನಡೆಸಿ ಪುನರ್ಜನ್ಮದ ಕೆಲವೊಂದು ಕುತೂಹಲಕಾರಿ ಸತ್ಯಗಳು ಸಮೀಕ್ಷೆಯಿಂದ ಹೊರಬಿದ್ದವು.
- ಸಮೀಕ್ಷೆಯಿಂದ ದೊರೆತ ಹಿಂದಿನ ಜನ್ಮದ ಮಾಹಿತಿಗಳೂ ಇತಿಹಾಸಕಾರರು ಸಂಶೋಧನೆಗಳಿಗೆ ಪೂರಕವಾಗಿದ್ದವು.
- ಗತಜನ್ಮ ಸ್ಮರಣೆಗೊಳಗಾದ ಕೆಲವು ವ್ಯಕ್ತಿಗಳು ಜ್ಞಾನ ಇತಿಹಾಸಕಾರರಿಗಿಂತ ಉತ್ತಮವಾಗಿತ್ತು.
- ಪೀಟರ್ ರ್ಯಮಸ್ಟರ್ಸ್ ಅವರ “ಇನ್ ಸರ್ಚ್ ಆಫ್ ಲೈವ್ಸ್ ಪಾಸ್ಟ್ (1990)” ಪುಸ್ತಕದಲ್ಲೂ ಪುನರ್ ಜನ್ಮಕ್ಕೆ ಸಂಬಂಧಿಸಿದ ಕೆಲವು ರೋಚಕ ಮಾಹಿತಿಗಳಿವೆ. 1983ರಲ್ಲಿ ಅವರು ನಾಲ್ವರು ಮಹಿಳೆಯರ ಗತಜನ್ಮ ಸ್ಮರಣೆ ಆಧರಿಸಿ ಒಂದು ಟಿವಿ ಕಾರ್ಯಕ್ರಮ ನಡೆಸಿಕೊಟ್ಟರು. ಅದರಲ್ಲಿ ಆ ನಾಲ್ವರು ಆಸ್ಟ್ರೇಲಿಯನ್ ಮಹಿಳೆಯರು ಗತಜನ್ಮದಲ್ಲಿ ತಾವು ನೆಲೆಸಿದ್ದ ವಿದೇಶಿ ಸ್ಥಳಗಳ ಬಗ್ಗೆ ನಿಖರ ಮಾಹಿತಿ ನೀಡಿದರು. ಸೋಜಿಗದ ಸಂಗತಿ ಎಂದರೆ ಈ ಜನ್ಮದಲ್ಲಿ ಅವರಾರೂ ಆಸ್ಟ್ರೇಲಿಯಾ ಬಿಟ್ಟು ಹೊರ ಹೋದವರಲ್ಲ. ಈ ಪೈಕಿ ಗ್ವೆನ್ ಮೆಕ್ಡೊನಾಲ್ಡ್ ಎಂಬಾಕೆ 1765-82ರ ಅವಧಿಯಲ್ಲಿ ಸಾಮರ್ಸೆಟ್ (ಬ್ರಿಟನ್) ನಲ್ಲಿ ಕಳೆದ ತನ್ನ ಬದುಕಿನ ಬಗ್ಗೆ ಸವಿವರ ಮಾಹಿತಿ ನೀಡಿದಳು. ಸಾಮರ್ಸೆಟ್ಗೆ ಹೋಗಿ ಪರಿಶೀಲಿಸಿದಾಗ ಆಕೆ ನೀಡಿದ ಮಾಹಿತಿ ನಿಜವೆಂಬುದು ಸಾಬೀತಾಯಿತು. ಸಾಮರ್ಸೆಟ್ನ ವಿವಿಧ ಪ್ರದೇಶಗಳ ಬಗ್ಗೆ ಆಕೆ ನೀಡಿದ ಮಾಹಿತಿ ಸರಿಯಾಗಿರುವುದನ್ನು ಸ್ಥಳೀಯರು ದೃಢಪಡಿಸಿದರು. ಹಾಗೆಯೇ ಸ್ಥಳೀಯರು ಕೇಳಿದ ಹಲವಾರು ಪ್ರಶ್ನೆಗಳಿಗೆ ಆಕೆ ಸ್ಪಷ್ಟ ಉತ್ತರ ನೀಡಿದಳು.
- ರ್ಯಮ್ಸ್ಟಾರ್ ಪರೀಕ್ಷೆಗೊಳಪಡಿಸಿದ ಇನ್ನೊಬ್ಬಾಕೆ ಸಿಂಧಿಯೊ ಹೆಂಡರ್ಸನ್ ಫ್ರೆಂಚ್ ಕ್ರಾಂತಿಯ ಬಗ್ಗೆ ಪಟಪಟನೆ ಮಾತನಾಡಿದಳು. ಆಕೆ ಫ್ರೆಂಚ್ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಿದಳು. ಆ ಕಾಲದ ಫ್ರಾನ್ಸ್ ಕುರಿತು ಆಕೆ ನೀಡಿದ ಮಾಹಿತಿಗಳೆಲ್ಲ ಸತ್ಯ ಎಂಬುದು ಸಾಬೀತಾಯಿತು.
ಆತ್ಮವಿದೆ ಎಂದು ನಂಬಿದ ವೈದ್ಯರಿಗೆ ಪ್ರಭುಪಾದರು ಬರೆದ ಒಂದು ಪತ್ರ
ಭೌತಿಕ ಶರೀರವು ಕಾರ್ಯನಿರ್ವಹಿಸುವ ಯಾಂತ್ರಿಕ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಆಧುನಿಕ ವಿಜ್ಞಾನವು ಬಹು ಮುಂದುವರಿದಿದೆ. ಆದರೆ ದೇಹವನ್ನು ಉದ್ದೀಪಿಸುವ ಆಧ್ಯಾತ್ಮಿಕ ಕಿಡಿಯ ಬಗೆಗೆ ಹೆಚ್ಚು ಗಮನ ಕೊಟ್ಟಿಲ್ಲ. ಈ ಕೆಳಗೆ ಪುನರ್ಮುದ್ರಿಸಲಾಗಿರುವ ಲೇಖನವು ಮಾಂಟ್ರಿಯಲ್ ಗೆಜೆಟ್ನಲ್ಲಿ ಪ್ರಕಟವಾಗಿತ್ತು.
ಪ್ರಖ್ಯಾತ ಹೃದಯ ತಜ್ಞರಾದ ಡಾ. ವಿಲ್ ಪ್ರೆಡ್. ಜಿ. ಬೈಗ್ಲೋ ಎನ್ನುವವರು ಆತ್ಮವೆಂದರೆ ಏನು ಹಾಗೂ ಅದು ಎಲ್ಲಿಂದ ಬರುತ್ತದೆ ಎಂಬ ವಿಷಯವಾಗಿ ವ್ಯವಸ್ಥಿತ ಸಂಶೋಧನೆ ಆಗಬೇಕೆಂದು ಆಗ್ರಹಪಡಿಸಿರುವುದನ್ನು ಈ ಲೇಖನದಲ್ಲಿ ನೋಡಬಹುದಾಗಿದೆ. ಡಾ. – ಬೈಗ್ಲೋ ಅವರ ಮನವಿಗೆ ಪ್ರತಿಕ್ರಿಯೆಯಾಗಿ ಶ್ರೀಲ ಪ್ರಭುಪಾದರು ಬೈಗ್ಲೋ ಅವರಿಗೆ ಬರೆದ ಪತ್ರದಲ್ಲಿ ಆತ್ಮವಿಜ್ಞಾನದ ಬಗೆಗೆ ವೇದ ಪ್ರಾಮಾಣ್ಯವನ್ನು ಒದಗಿಸುತ್ತಾರೆ.
ಮಾಂಟ್ರಿಯಲ್ ಗೆಜೆಟ್ನಲ್ಲಿನ ತಲೆಬರಹ
ಹೃದಯ ಶಸ್ತ್ರವೈದ್ಯರೊಬ್ಬರಿಗೆ ಆತ್ಮವೆಂದರೇನು ಎಂಬುದನ್ನು ತಿಳಿಯುವ ಅಪೇಕ್ಷೆ
ವಿಂಡ್ಸರ್ : ಕೆನಡಾ ದೇಶದ ಜಗದ್ವಿಖ್ಯಾತರಾದ ಹೃದಯ ಶಸ್ತ್ರವೈದ್ಯರೊಬ್ಬರು ದೇಹದಲ್ಲಿ ಆತ್ಮವಿದೆಯೆಂದನ್ನು ನಂಬುತ್ತಾರೆ. ಆತ್ಮವು ಮರಣ ಸಮಯದಲ್ಲಿ ಅದೃಶ್ಯವಾಗುತ್ತದೆ ಎನ್ನುವ ವಿಷಯದಲ್ಲೂ ಆ ವೈದ್ಯರಿಗೆ ನಂಬಿಕೆಯು೦ಟು. ಬ್ರಹ್ಮಜ್ಞಾನಿಗಳು ಈ ವಿಷಯದಲ್ಲಿ ಇನ್ನೂ ಹೆಚ್ಚು ತಿಳಿದಿರಬೇಕಾದ್ದು ಅಗತ್ಯವೆನ್ನುತ್ತಾರೆ ಈ ನಮ್ಮ ವೈದ್ಯರು.
ಟೊರಾ೦ಟೋದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ವಿಲ್ ಪ್ರೆಡ್ ಜಿ. ಬೈಗ್ಲೋ ಅವರು ಆತ್ಮವಿದೆ ಎನ್ನುವುದನ್ನು ನಂಬುವ ಒಬ್ಬ ವ್ಯಕ್ತಿಯಾಗಿ, ಈ ವಿಚಾರವನ್ನು ಕವಿದಿರುವ ನಿಗೂಢತೆಯನ್ನು ತೊಡೆದುಹಾಕಬೇಕಾದ ಕಾಲವೀಗ ಬ೦ದಿದೆ’ ಎನ್ನುತ್ತಾರೆ.

ವೈದ್ಯಕೀಯ ಹಾಗೂ ಕಾನೂನು ಸಂಘದ ಜೊತೆ ಚರ್ಚೆ ನಡೆದ ವೇಳೆಯಲ್ಲಿ ತಾವು ಪ್ರಸ್ತಾಪಿಸಿದ ಅಂಶಗಳನ್ನು ಮು೦ದೆ ಸ೦ದರ್ಶನವೊಂದರಲ್ಲಿ ಬೈಗ್ಲೋ ವಿಶದಪಡಿಸಿದರು. ಶಸ್ತ್ರಚಿಕಿತ್ಸಕರಾಗಿ ಪಡೆದ ಮೂವತ್ತೆರಡು ವರ್ಷಗಳ ತಮ್ಮ ಅನುಭವವು ಆತ್ಮವಿದೆ ಎಂಬ ವಿಚಾರವಾಗಿ ತಮ್ಮಲ್ಲಿ ಅನುಮಾನವನ್ನು ಉಳಿಸಿಲ್ಲ ಎ೦ದವರು ಹೇಳಿದರು.
ಎಲ್ಲವೂ ಸರಿಯೆ ಎಂದ ಬೈಗ್ಲೋ ಮುಂದುವರಿದು : ಆಧುನಿಕ ವೈದ್ಯವಿಜ್ಞಾನವು ತೊಡಕಿನದನ್ನೇನಾದರೂ ಎದುರಿಸಿದಾಗ, ‘ಸಮಸ್ಯೆಯನ್ನು ನೇರವಾಗಿ ಪ್ರಯೋಗಾಲಯಕ್ಕೆ ಕೊಂಡೊಯ್ಯಬೇಕು ಇಲ್ಲವೆ ಸತ್ಯವನ್ನು ಮನಗಾಣಿಸ ಬಲ್ಲ ಇನ್ನೆಲ್ಲಿಗಾದರೂ ಕೊ೦ಡೊಯ್ಯಬೇಕು ಎನ್ನುವುದು ವಿಜ್ಞಾನದ ಧೈಯ ಎಂದು ಹೇಳಿದರು.
ಪ್ರಶ್ನೆಯಿರುವುದು ಹೀಗೆ: ‘ಆತ್ಮ ಎಲ್ಲಿದೆ ಮತ್ತು ಅದೆಲ್ಲಿಂದ ಬ೦ತು?’ ಎನ್ನುವುದು ಬೈಗ್ಲೋ ಅವರು ತಿಳಿಯಬಯಸುವ ವಿಚಾರ.
ಮಾಂಟ್ರಿಯಲ್ ಗೆಜೆಟ್ ಲೇಖನವನ್ನು ನೋಡಿ ಪ್ರಭುಪಾದರು ಡಾ. ಬೀಗ್ಲೋಗೆ ಬರೆದ ಪತ್ರದ ಒಂದು ಭಾಗ
ನನ್ನ ಶುಭಾಶಯಗಳನ್ನು ಸ್ವೀಕರಿಸಿ, ರಾಯ್ ಕರೆಲ್ಲಿ ಅವರು ಗೆಜೆಟ್ಟಿನಲ್ಲಿ ಬರೆದ ‘ಹೃದಯ ಶಸ್ತ್ರಚಿಕಿತ್ಸಕರೊಬ್ಬರು ಆತ್ಮವೆಂದರೇನು ಎಂಬುದನ್ನು ತಿಳಿಯಬಯಸುತ್ತಾರೆ’ ಎಂಬ ಲೇಖನವನ್ನು ಇತ್ತೀಚೆಗೆ ಓದಿದೆ. ಲೇಖನವು ಸ್ವಾರಸ್ಯಪೂರ್ಣವಾಗಿತ್ತು. ನಿಮ್ಮ ಚಿಂತನಕ್ರಮವು ಒಳನೋಟಗಳನ್ನು ಹರಿಸುತ್ತದೆ. ಹಾಗಾಗಿ ಈ ವಿಚಾರದಲ್ಲಿ ನಿಮಗೆ ಬರೆಯಬೇಕೆಂದು ನನಗೆನಿಸಿತು.
ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸ್ಥಾಪಕ ಆಚಾರ್ಯ ನಾನೆಂಬುದು ಪ್ರಾಯಶಃ ನಿಮಗೆ ತಿಳಿದಿರಬಹುದು. ಕೆನಡಾದ ಮಾಂಟ್ರಿಯಲ್, ಟೊರಾ೦ಟೋ, ವ್ಯಾಂಕೋವರ್ ಮತ್ತು ಹ್ಯಾಮಿಲ್ಟನ್ಗಳಲ್ಲಿ ನಮ್ಮ ಸಂಸ್ಥೆಯ ಅನೇಕ ದೇವಾಲಯಗಳಿವೆ. ಪ್ರತಿಯೊಬ್ಬ ಜೀವಿಗೂ ತನ್ನ ಮೂಲ ಆಧ್ಯಾತ್ಮಿಕ ಅಸ್ತಿತ್ವದ ಬಗೆಗೆ ಜ್ಞಾನವನ್ನು ಬೋಧಿಸುವುದು ಕೃಷ್ಣಪ್ರಜ್ಞಾ ಆಂದೋಲನದ ಧ್ಯೇಯ.
ಆತ್ಮವು ಜೀವಿಯ ಹೃದಯದಲ್ಲಿ ಪೀಠಸ್ಥವಾಗಿದೆ ಎಂಬುದು ನಿಸ್ಸಂಶಯ ಅಷ್ಟೇ ಅಲ್ಲ ಅದು ದೇಹಪಾಲನೆಗೆ ಅಗತ್ಯವಾದ ಎಲ್ಲ ಶಕ್ತಿಗಳನ್ನೂ ಒದಗಿಸುತ್ತದೆ. ಆತ್ಮದ ಶಕ್ತಿಯು ಇಡೀ ದೇಹವನ್ನು ವ್ಯಾಪಿಸಿದೆ. ಇದನ್ನು ಪ್ರಜ್ಞೆ ಎನ್ನುತ್ತಾರೆ. ಈ ಪ್ರಜ್ಞೆಯು ಆತ್ಮದ ಶಕ್ತಿಯನ್ನು ಇಡೀ ದೇಹಕ್ಕೆ ಹರಡುವುದರಿಂದ ವ್ಯಕ್ತಿಯು ದೇಹದ ಎಲ್ಲ ಭಾಗಗಳಲ್ಲೂ ನೋವು ನಲಿವುಗಳನ್ನು ಅನುಭವಿಸುತ್ತಾನೆ.
ಆತ್ಮವು ಸ್ವತಂತ್ರವಾದುದು. ವ್ಯಕ್ತಿಯೊಬ್ಬನು ಬಾಲ್ಯದಿಂದ ಯೌವನಕ್ಕೂ, ತಾರುಣ್ಯದಿಂದ ವೃದ್ಧಾಪ್ಯಕ್ಕೂ ಸರಿಯುವ೦ತೆ ಆತ್ಮವು (ಒ೦ದು ದೇಹದಿಂದ ಇನ್ನೊಂದಕ್ಕೆ ಪ್ರವೇಶ ಮಾಡುತ್ತದೆ. ಆತ್ಮವು ಬೇರೊಂದು ದೇಹಕ್ಕೆ ಹೋಗುವ ಕ್ರಿಯೆಯೇ ಮರಣ. ನಾವು ಹಳೆಯ ವಸ್ತ್ರಗಳನ್ನು ವಿಸರ್ಜಿಸಿ ಹೊಸ ವಸ್ತ್ರಗಳನ್ನು ಧರಿಸುವ೦ತಿರುತ್ತದೆ ಈ ಪ್ರಕ್ರಿಯೆ. ಇದನ್ನು ಆತ್ಮದ ಪರಕಾಯ ಪ್ರವೇಶ ಎ೦ದು ಕರೆಯುತ್ತಾರೆ.
ಆತ್ಮವೊಂದು ಆಧ್ಯಾತ್ಮಿಕ ಜಗತ್ತಿನಲ್ಲಿನ ತನ್ನ ನಿಜವಾದ ಧಾಮವನ್ನು ಮರೆತು ಐಹಿಕ ಪ್ರಪ೦ಚದ ಸುಖವನ್ನು ಸವಿಯಬಯಸಿದಲ್ಲಿ ಅವನು ಅಸ್ತಿತ್ವಕ್ಕಾಗಿ ಹೋರಾಡುತ್ತಿರಬೇಕಾದಂತಹ ಇಹ ಜೀವನವನ್ನೇ ಪಡೆಯುತ್ತಾನೆ. ಆ ಆತ್ಮವು ತನ್ನ ಪ್ರಜ್ಞೆಯನ್ನು ದೈವ ಪ್ರಜ್ಞೆಯ ಜೊತೆ ಸೇರಿಸಿ ರೂಪಿಸಿಕೊ೦ಡರೆ ಮೇಲಿಂದ ಮೇಲೆ ಘಟಿಸುವ ಹುಟ್ಟು ಸಾವು, ರೋಗ ಹಾಗೂ ವೃದ್ಧಾಪ್ಯಗಳ ಅಸ್ವಾಭಾವಿಕ ಬದುಕನ್ನು ನಿಲುಗಡೆಗೆ ತಂದುಕೊಳ್ಳಬಹುದು. ಕೃಷ್ಣಪ್ರಜ್ಞಾ ಚಳವಳಿಯ ಮೂಲ ತತ್ತ್ವವು ಇದೇ ಆಗಿದೆ.
Leave a Reply