ಓಂ ನಮೋ ಭಗವತೇ ವಾಸುದೇವಾಯ

ಶ್ರೀ ಶ್ರೀ ಎ.ಸಿ.ಭಕ್ತಿವೇದಾಂತ ಪ್ರಭುಪಾದ ಸ್ವಾಮಿಯವರು ಬರೆದಿರುವ “ದೇವಹೂತಿ ಪುತ್ರ ಶ್ರೀ ಕಪಿಲನ ಬೋಧನೆ” ಎಂಬ ಗ್ರಂಥದ ಕನ್ನಡ ಅನುವಾದವನ್ನು ಶ್ರೀದೇಶ ಕುಲಕರ್ಣಿಯವರು ಬರೆದು ಭಕ್ತಿವೇದಾಂತ ಬುಕ್ ಟ್ರಸ್ಟ್, ಬೆಂಗಳೂರು ಇವರ ಮೂಲಕ ಪ್ರಕಾಶನಗೊಳಿಸಿರುತ್ತಾರೆ. 262+10 ಪುಟಗಳುಳ್ಳ ಈ ಗ್ರಂಥವು ಕೈತೊಳೆದುಕೊಂಡು ಮುಟ್ಟುವ ಪೂಜ್ಯ ಗ್ರಂಥವಾಗಿದೆ.
ಈ ಗ್ರಂಥದ ಮೂಲವು ಹದಿನೆಂಟು ಮಹಾಪುರಾಣಗಳಲ್ಲಿ ಒಂದಾದ ಶ್ರೀಮದ್ಭಾಗವತದ ಒಂದು ಭಾಗವಾಗಿದೆ. “ವಿದ್ಯಾವತಾಂ ಭಾಗವತೇ ಪರೀಕ್ಷಾ” ಎಂಬ ನಾಣ್ನುಡಿಯೊಂದಿದೆ. ಅದರಂತೆ ಮೂಲ ಭಾಗವತ ಪುರಾಣ ಗ್ರಂಥವು “ನಾರಿಕೇಳಪಾಕ” ಎಂದು ಪ್ರಸಿದ್ಧವಾಗಿದೆ.
ಈ ಮಹಾಪುರಾಣದ ರಚನೆ, ಸಾಹಿತ್ಯ, ಶಬ್ದಯೋಗ, ಭಾವಾರ್ಥ-ಇತ್ಯಾದಿಗಳು ಅತ್ಯುನ್ನತ ಮಟ್ಟದ ಸಾಹಿತ್ಯ ಶೈಲಿಯಲ್ಲಿದೆ. ಇದರ ಒಂದು ಭಾಗವಾದ ಶ್ರೀಕಪಿಲನ ಬೋಧನೆ ಎಂಬುದು ಈ ಗ್ರಂಥದ ಸಾರಸರ್ವಸ್ವವಾಗಿದೆ.
ದೇವಹೂತಿ ಎಂಬುವಳು ತನ್ನ ಪುತ್ರನಾದ ಭಗವಾನ್ ಕಪಿಲ ಮಹರ್ಷಿಯಿಂದ ಅಸಾಧಾರಣವಾದ ವಾಸುದೇವತತ್ತ್ವವನ್ನು ಶ್ರವಣಮಾಡಿ ಕೃತಾರ್ಥಳಾಗಿ ಮುಕ್ತಿಯನ್ನು ಪಡೆದು ಜನ್ಮಸಾರ್ಥಕ್ಯವನ್ನು ಹೊಂದುತ್ತಾಳೆ. ಈ ಉಪದೇಶಗಳನ್ನು ತನ್ನ ಪುತ್ರನಿಂದಲೇ ಪಡೆಯುತ್ತಾಳೆ. ಬ್ರಹ್ಮಜ್ಞಾನಿಗಳಲ್ಲಿ ಯಾವ ಪ್ರಾಪಂಚಿಕ ವ್ಯವಹಾರ ತಾರತಮ್ಯಗಳಿರುವುದಿಲ್ಲ.
ಈ ಸತ್ಕಾರ್ಯವು ಭಗವಾನ್ ಶ್ರೀಕೃಷ್ಣ ಭಗವಂತನ ಅನುಗ್ರಹದಿಂದ ಯಶಸ್ವಿಯಾಗಿ ನೆರವೇರಿ ಇಸ್ಕಾನ್ ಸಂಸ್ಥೆಯ ಸತ್ಕಾರ್ಯಗಳು ಹೆಚ್ಚಿನ ಪುರೋಭಿವೃದ್ಧಿಯನ್ನು ಹೊಂದಿ ಲೋಕ ಕಲ್ಯಾಣವಾಗಲಿ.






Leave a Reply