ಶ್ರೀ ಕೃಷ್ಣನ ಅವತಾರ

ಒಂದಾನೊಂದು ಕಾಲದಲ್ಲಿ ಈ ಪ್ರಪಂಚ, ಬೇರೆ ಬೇರೆ ರಾಜರ ಅತಿಯಾದ ಸೈನ್ಯದ ಸಂಖ್ಯೆಯಿಂದ ತುಂಬಿ ತುಳುಕುತ್ತಿತ್ತು. ಆಗ ಭೂಮಿ ಒಂದು ಹಸುವಿನ ರೂಪತಾಳಿ, ಕಣ್ಣೀರು ಸುರಿಸುತ್ತ ಬ್ರಹ್ಮದೇವನ ಮುಂದೆ ಬಂದು ನಿಂತಿತು.

ಬ್ರಹ್ಮ, ಆಗಲೇ ಮಹಾವಿಷ್ಣು ವಾಸವಾಗಿರುವ ಕ್ಷೀರಸಮುದ್ರದ ಕಡೆಗೆ ಪರಶಿವ ಮತ್ತು ಅನೇಕ ಉಪದೇವತೆಗಳೊಂದಿಗೆ ಹೊರಟ್ಟಿದ್ದ. ಮಹಾವಿಷ್ಣುವಿನ  ಮೂಲಕ ಬ್ರಹ್ಮದೇವನಿಗೆ ಒಂದು ಸಂದೇಶ ಬಂದಿತು. ದೇವೋತ್ತಮ ಪರಮ ಪುರಷ ಸದ್ಯದಲ್ಲೇ ಭೂಮಿಯಲ್ಲಿ ಅವತಾರ ತಾಳುತ್ತಾನೆ. ಆದ್ದರಿಂದ ಉಪದೇವತೆಗಳೆಲ್ಲ ಅಲ್ಲಿ ಯದುವಂಶದಲ್ಲಿ ಅವತರಿಸಬೇಕು ಎಂದು ಆಜ್ಞೆಯಾಗಿತ್ತು.

ಒಂದು ದಿವ ಯದುವಂಶದ ದೊರೆ ಶೂರಸೇನನ ಮಗ ವಸುದೇವ, ಆದಾಗಲೇ ದೇವಕಿಯನ್ನು ಮದುವೆಯಾಗಿ ತನ್ನ ರಥದಲ್ಲಿ ಕೂರಿಸಿಕೊಂಡು ಹೋಗುತ್ತಿದ್ದ. ರಥವನ್ನು ಉಗ್ರಸೇನ ಮಹಾರಾಜನ ಮಗ, ದೇವಕಿಯ ಅಣ್ಣ ಕಂಸ ನಡೆಸುತ್ತಿದ್ದ. ಇದ್ದಕ್ಕಿದ್ದ ಹಾಗೆಯೇ ಆಕಾಶದಿಂದ ಒಂದು ಅಶರೀರವಾಣಿ ಧ್ವನಿ ಕೇಳಿಸಿತು. “ಈ ದೇವಕಿಯ ಎಂಟನೆಯ ಮಗು ಕಂಸನನ್ನು ಕೊಲ್ಲುತ್ತದೆ” ಎಂದು ಅದು ನುಡಿಯಿತು.

ಕೋಪಗೊಂಡ ಕಂಸ ಕೂಡಲೇ ದೇವಕಿಯ ತಲೆಗೂದಲನ್ನು ಹಿಡಿದು ಜಗ್ಗಿ ಅವಳನ್ನು ತನ್ನ ಕತ್ತಿಯಿಂದ ಕೊಲ್ಲಲ್ಲು ಹೊರಟ. ಆಗ ವಸುದೇವ, ಅವನನ್ನು ತಡೆದ: “ಇವಳಿಗೆ ಗಂಡು ಮಕ್ಕಳು ಏನಾದರೂ ಹುಟ್ಟಿದರೆ, ಅವರೆಲ್ಲರನ್ನೂ ನಾನು ನಿನಗೆ ತಂದೊಪ್ಪಿಸುತ್ತೇನೆ.

ಮುಂದೊಂದು ದಿನ, ನಾರದ ಮಹರ್ಷಿಗಳು ಬಂದು, ಉಪದೇವತೆಗಳು ಬೇರೆಬೇರೆ ಕುಟುಂಬಗಳಲ್ಲಿ ಹುಟ್ಟುತ್ತಿರುವುದರಿಂದ ನೀನು ಹುಷಾರಾಗಿರಬೇಕು ಎಂದು ಕಂಸನನ್ನು ಎಚ್ಚರಿಸಿದರು. ಉಪದೇವತೆಗಳು ಆಗಲೇ ಹುಟ್ಟಿಬಿಟ್ಟಿದ್ದಾರೆ ಎಂದು ಕಂಸನಿಗೆ ಗೊತ್ತಾದಾಗ, ಮಹಾವಿಷ್ಣುವೂ ಇಷ್ಟರಲ್ಲೇ ಅವತರಿಸಲಿದ್ದಾನೆ ಎಂದು ಅವನಿಗನ್ನಿಸಿತು. ಕೂಡಲೇ ಅವನು ವಸುದೇವ ಮತ್ತು ದೇವಕಿಯರಿಬ್ಬರನ್ನೂ ಹಿಡಿದು ಸೆರೆಯಲ್ಲಿಟ್ಟ.

ಪ್ರತಿ ವರ್ಷ, ದೇವಕಿ ಒಂದು ಮಗುವಿಗೆ ಜನ್ಮಕೊಡುತ್ತಿದ್ದಳು. ಕಂಸು ಆ ಮಕ್ಕಳನ್ನು ಒಂದಾದಮೇಲೊಂದಾಗಿ ಕೊಂದು ಮುಗಿಸಿದ. ದೇವಕಿ ಏಳನೆಯ ಸಲ ಗರ್ಭಿಣಿ ಆದಾಗ, ಅನಂತಶೇಷ ಎನ್ನುವ ಕೃಷ್ಣನದೇ ಒಂದು ಪರಿಪೂರ್ಣ ಅಂಶ, ದೇವಕಿಯ ಗರ್ಭವನ್ನು ಸೇರಿಕೊಂಡಿತು. ಅತ್ಯಂತ ಶಕ್ತಿಯುತ ದೇವೋತ್ತಮ ಪರಮ ಪುರುಷನ ಶಕ್ತಿಯೇ ಆಗಿರುವ, ಯೋಗಮಾಯಾ, ಈ ಶ್ರೀ ಅನಂತಶೇಷನನ್ನು ದೇವಕಿಯ ಗರ್ಭದಿಂದ ರೋಹಿಣಿಯ ಗರ್ಭಕ್ಕೆ ವರ್ಗಾಯಿಸಿದಳು.

ಈ ವ್ಯವಸ್ಥೆ ಆದಮೇಲೆ, ದೇವೋತ್ತಮ ಪರಮ ಪುರುಷ ಕೃಷ್ಣ, ವಸುದೇವನ ಮನಸ್ಸಿನೊಳಗೆ ಪ್ರವೇಶಿಸಿದ. ಆಮೇಲೆ ಅವನನ್ನು ದೇವಕಿಯ ಮನಸ್ಸಿನೊಳಗೆ ವರ್ಗಾಯಿಸಲಾಯಿತು. ಕೃಷ್ಣ ಹುಟ್ಟವ ಸಮಯದಲ್ಲಿ ಎಲ್ಲವೂ ಶುಭಸೂಚಕವಾಗಿರುವುದಕ್ಕಾಗಿ, ಗ್ರಹಗಳ ವ್ಯವಸ್ಥೆಯನ್ನು ತಾನಾಗಿಯೇ ಸರಿಯಾಗಿರುವಂತೆ ಮಾಡಲಾಯಿತು. ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಎಂದು ಎಲ್ಲ ದಿಕ್ಕುಗಳಲ್ಲೂ ನೆಮ್ಮದಿಯ ಮತ್ತು ಏಳಿಗೆಯ ಆವರಣವನ್ನು ಸೃಷ್ಟಿಸಲಾಯಿತು.

ಖಚಿತವಾಗಿ ಅದೇ ಸಮಯದಲ್ಲಿ, ನಂದ ಮತ್ತು ಯಶೋದಾ ಅವರಿಗೊಂದು ಮಗಳು ಹುಟ್ಟಿದಳು. ಅವಳೇ ಯೋಗಮಾಯಾ. ಭಗವಂತನ ಅಂತರಂಗ ಶಕ್ತಿ. ಇವಳ ಪ್ರಭಾವದಿಂದ ಮತ್ತು ಕೃಷ್ಣನ ಜನನವಾಗುತ್ತಿದ್ದಂತೆ ಕಂಸನ ಅರಮನೆಯ ಎಲ್ಲ ನಿವಾಸಿಗಳೂ ಆಳವಾದ ನಿದ್ರೆಯ ಮೋಡಿಗೊಳಗಾದರು. ಅರಮನೆಯ ಎಲ್ಲ ಬಾಗಿಲುಗಳೂ ತೆರೆದುಕೊಂಡವು.

ಆ ಕಗ್ಗತ್ತಲಿನಲ್ಲೇ ವಸುದೇವ ಕೃಷ್ಣನನ್ನು ಎತ್ತಿಕೊಂಡು ಹೊರಗೆ ಬಂದ. ಆದರೆ, ಅವನಿಗೆ ಎಲ್ಲವೂ ಹಗಲಿನಂತೆ ಕಂಡಿತು! ವಸುದೇವ ಯಮುನಾ ನದಿಯನ್ನು ದಾಟಿ, ಗೋಕುಲದಲ್ಲಿರುವ ನಂದಮಹಾರಾಜನ ಜಾಗಕ್ಕೆ ಬಂದು, ಸ್ವಲ್ಪವೂ ಸದ್ದುಮಾಡದೆ ಯಶೋದಳ ಮನೆಯೊಳಗೆ ಪ್ರವೇಶಿಸಿದ ಮತ್ತು ಅವಳ ಮನೆಯಲ್ಲಿ ಹುಟ್ಟಿದ ಹೆಣ್ಣು ಮಗುವನ್ನು ತೆಗೆದುಕೊಂಡು ಈ ಜಾಗದಲ್ಲಿ ಕೃಷ್ಣನನ್ನು ಮಲಗಿಸಿದ.

ಆಮೇಲೆ ಅವನು ಕಂಸನ ಸೆರೆಮನೆಗೆ ವಾಪಸ್ಸಾದ. ಯಾವ ಶಬ್ದವೂ ಆಗದಂತೆ ಸರಪಳಿಗಳನ್ನು ತನ್ನ ಮೇಲೆ ಹಾಕಿಕೊಂಡು, ಕಂಸನಿಗೆ ಏನೇನಾಯಿತು ಎನ್ನುವ ಸುಳಿವೂ ಸಿಗದಂತೆ ಮಾಡಿದ. ಹೀಗೆ, ಕಂಸನ ಸೆರೆಮನೆಯಿಂದ ದೇವೋತ್ತಮ ಪರಮ ಪುರಷನನ್ನು, ನಂದಮಹಾರಾಜನ ಮನೆಯ ಸುರಕ್ಷಿತ ಜಾಗಕ್ಕೆ ಬದಲಾಯಿಸಲಾಯಿತು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi