ಒಮ್ಮೆ ತಿರುಮಾಮಗಳ್ ಎಂಬ ಅಪ್ಸರೆಯು ತನ್ನ ಸಖಿಯರೊಡನೆ ಹಿಮಾಲಯದ ಬಳಿಯಿದ್ದ ಒಂದು ಯಜ್ಞಾಶ್ರಮಕ್ಕೆ ಬಂದಳು. ಅಲ್ಲಿ ಮಹರ್ಷಿಯು ತನ್ನ ಶಿಷ್ಯರಿಗೆ ಪ್ರವಚನ ಮಾಡುವುದರಲ್ಲಿ ನಿರತರಾಗಿದ್ದರು.

ತಿರುಮಾಮಗಳ್ ಒಬ್ಬ ಕುರೂಪಿಯಾದ ಶಿಷ್ಯನನ್ನು ಕಂಡು ಹಾಸ್ಯ ಮಾಡಿದಳು. ಇದರಿಂದ ಕುಪಿತರಾದ ಋಷಿಗಳು ಅವಳನ್ನು ಮಾನವಸ್ತ್ರೀಯಾಗಿ ಹುಟ್ಟಿ ನೀಚನೊಬ್ಬನನ್ನು ವಿವಾಹವಾಗುವಂತೆ ಶಪಿಸಿದರು. ಇದರಿಂದ ದುಃಖಿತಳಾದ ತಿರುಮಾಮಗಳ ಮುನಿಯಲ್ಲಿ ಕ್ಷಮಾಯಾಚನೆ ಮಾಡಿ ತನ್ನ ಶಾಪ ವಿಮೋಚನೆಗಾಗಿ ಪ್ರಾರ್ಥಿಸಿದಳು.
ದಯಾಳುವಾದ ಮುನಿಯು, ಆಕೆಯು ಮದುವೆಯಾಗುವ ನೀಚನನ್ನು ಭಗವದ್ಭಕ್ತನನ್ನಾಗಿ ಪರಿವರ್ತಿಸಿದಲ್ಲಿ ಅವಳು ಶಾಪದಿಂದ ಮುಕ್ತಳಾಗುವಳೆಂದು ತಿಳಿಸಿದರು. ತಿರುಮಾಮಗಳ್ ಮುಂದೆ ಕುಮುದವಲ್ಲಿಯಾಗಿ ತಿರುಮಂಗೈ ಆಳ್ವಾರರ ಮಡದಿಯಾಗಿ ಅವರನ್ನು ಪರಮ ವೈಷ್ಣವರನ್ನಾಗಿ ಪರಿವರ್ತಿಸಿದಳು.
ತಿರುಮಂಗೈ ಆಳ್ವಾರರು ರಚಿಸಿದ ಕೃತಿಗಳು
ಆಳ್ವಾರರು ಹಾಡಿರುವ ಪ್ರಬಂಧಗಳು ಆರು:
- ಪರಿಯ ತಿರುಮೊಳಿ- 1084 ಹಾಡುಗಳು
- ತಿರುಕ್ಕುರುಂದಾಂಡಗರ – 20 ಹಾಡುಗಳು
- ತಿರುನೆಡ೦ದಾ೦ಡಗಂ – 30 ಹಾಡುಗಳು
- ತಿರುವೆಳುಕ್ಕೂತ್ತಿರುಕ್ಕೈ – 1 ಹಾಡು
- ಪೆರಿಯ ತಿರುಮಡಲ್ – 174 ಹಾಡುಗಳು
- ಶಿರಿಯ ತಿರುಮಡಲ್ – 40 ಹಾಡುಗಳು
ಸಂಸ್ಕೃತ ವೇದಕ್ಕೆ ಅರ್ಥೈಸಬೇಕಾದರೆ ಶಿಕ್ಷೆ, ವ್ಯಾಕರಣ, ಛಂದಸ್ಸು, ನಿರುಕ್ತ, ಔತಿಷ, ಕಲ್ಪ ಎಂಬ ಆರು ಅಂಗಗಳ ಸಹಾಯಬೇಕು. ಹಾಗೆಯೇ ನಮ್ಮಾಳ್ವಾರರ ನಾಲ್ಕು ವೇದಗಳ ಸಾರವಾದ ನಾಲ್ಕು ಪ್ರಬಂಧಗಳಿಗೂ ಸಹ ಮೇಲಿನ ಆರು ಅಂಗಗಳ ಆವಶ್ಯಕತೆ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ಆರು ಅಂಗರೂಪ ಪ್ರಬಂಧಗಳನ್ನು ರಚಿಸಿರುವಂತೆ ಕಂಡುಬರುತ್ತದೆ.
ಇವರು ಆಶು, ಮಧುರ, ಚಿತ್ರ ಹಾಗೂ ವಿಸ್ತಾರ ಎಂಬ ನಾಲ್ಕು ವೃತ್ತಗಳಲ್ಲಿ ಪ್ರಬಂಧಗಳನ್ನು ರಚಿಸಿರುವುದರಿಂದ ಇವರಿಗೆನಾಲುಕವಿಪೆರುಮಾಳ್ ಎಂಬ ಹೆಸರು ಬಂದಿದೆ.
ಪೆರಿಯ ತಿರುಮೊಳಿ ಆಳ್ವಾರರ ಮೊದಲ ಗ್ರಂಥ. ಇದರಲ್ಲಿ ಭಾರತದ ಉತ್ತರ ತುದಿಯಲ್ಲಿರುವ ಬದರಿ ಕ್ಷೇತ್ರದಿಂದ ಹಿಡಿದು ದಕ್ಷಿಣದವರೆಗೂ 86 ದಿವ್ಯಕ್ಷೇತ್ರಗಳಲ್ಲಿ ನೆಲೆಸಿರುವ ಅರ್ಚಾಮೂರ್ತಿಗಳನ್ನು ಅಳ್ವಾರರು ಸ್ತೋತ್ರ ಮಾಡಿದ್ದಾರೆ. ಪರದಲ್ಲಿ (ವೈಕುಂಠದಲ್ಲಿ) ನೆಲೆಸಿರುವ ಭಗವಂತನ ದರ್ಶನದಿಂದ ಎಂತಹ ಆನಂದ, ಅನುಭವ ದೊರೆಯುವುದೋ ಅದೇ ಆನಂದ, ಅನುಭವಗಳು ಅರ್ಚಾಮೂರ್ತಿಯ ದರ್ಶನದಿಂದಲೂ ದೊರೆಯುತ್ತವೆ ಎಂದು ಅವರು ತಿಳಿಸಿದ್ದಾರೆ.
ಪ್ರತಿ ಅರ್ಚಾಮೂರ್ತಿಯನ್ನು ಕಂಡಾಗಲೂ ಆ ಸೌಂದರ್ಯವನ್ನು ತಮ್ಮ ಕಣ್ಮನಗಳಲ್ಲಿ ತುಂಬಿಕೊಂಡು ಭಾವೋದ್ರೇಕದಿಂದ ಸ್ಫೂರ್ತಿಯ ಸೆಲೆಯೊಡೆದು ಸ್ತುತಿಸಿರುವ ಪದ್ಯಗಳು ಒಂದಕ್ಕಿಂತಲೂ ಮತ್ತೊಂದು ಅದ್ಭುತವಾಗಿವೆ. ತಿರುಮಂಗೈ ಆಳ್ವಾರರಿಗೆ ಲಕ್ಷ್ಮೀಸಮೇತನಾದ ನಾರಾಯಣನೇ ಆಚಾರ್ಯ. ಅವನಿಂದಲೇ ಅಷ್ಟಾಕ್ಷರೀ ಮಂತ್ರದ ಉಪದೇಶವನ್ನು ಪಡೆದ ಮಹಾತ್ಮರವರು.
ಇಂತಹ ಅಷ್ಟಾಕ್ಷರಿ ಮಂತ್ರದ ಪ್ರಧಾನ ದೇವತೆಯಾದ ಶ್ರೀಮನ್ನಾರಾಯಣನ ನಾಮದ ವೈಭವವನ್ನು “ನಾನ್ ಕಂಡುಕೊಂಡೇನ್ ನಾರಾಯಣಾವೆನ್ನುಂ ನಾಮಮ್” ಎಂದು ಹಾಡಿದ್ದಾರೆ.
ಕಳ್ಳನೂ ದುರಾಚಾರಿಯೂ ಆಗಿದ್ದನಾನು ನಾರಾಯಣನೆಂಬ ನಾಮವನ್ನು ಹೇಗೆ ಉಚ್ಚರಿಸಿದೆನೋ ತಿಳಿಯದು, ಅವನ ಕೃಪೆಯನ್ನು ಪಡೆದೆ. ಕಾರುಣ್ಯ ಸಿಂಧುವಾದ ಅವನಿಂದ ಜ್ಞಾನದ ತಿರುಳನ್ನು ಪಡೆದು ಭುಜಿಸಿ ಅವನ ಸೇವೆಯನ್ನು ಮಾಡಲು ಅರ್ಹತೆಯನ್ನು ಪಡೆದೆ, ಎಂದು ಆನಂದ ತುಂದಿಲರಾಗಿದ್ದಾರೆ. ಆಳ್ವಾರರು ಭೇಟಿ ನೀಡಿ ದರ್ಶಿಸಿದ ಮತ್ತು ಹಾಡಿರುವ ಅರ್ಚಾಮೂರ್ತಿಗಳು ನೆಲೆಸಿರುವ 108 ದಿವ್ಯಕ್ಷೇತ್ರಗಳ ಹೆಸರನ್ನು ಹೇಳಿದರೇನೆ ಮುಕ್ತಿಯು ಪ್ರಾಪ್ತವಾಗುತ್ತದೆ.
ತಿರುಕ್ಕುರುಂದಾಂಡಗಂ ಇವರ ಎರಡನೆಯ ಕೃತಿ. ಇದರಲ್ಲಿ ಆಳ್ವಾರರು ಪುರುಷೋತ್ತಮನ ಕಲ್ಯಾಣ ಗುಣಗಳನ್ನು ನೆನೆಯುವಂತೆ ಮನಸ್ಸನ್ನು ನಿಯಮಕ್ಕೊಳಪಡಿಸಿದ್ದಾರೆ ಮತ್ತು ಮನಸ್ಸು ಅದನ್ನು ವಿಧೇಯವಾಗಿ ಒಪ್ಪಿಕೊಂಡಿದ್ದನ್ನು ಕಂಡು ಆಶ್ಚರ್ಯಪಟ್ಟಿದ್ದಾರೆ. ತಮ್ಮ ದೇಹಗಳನ್ನು ಬೆಳೆಸುವುದರಲ್ಲೇ ಸದಾ ಆಸಕ್ತನಾದ ಮನುಷ್ಯನು ಅರ್ಚಾಮೂರ್ತಿಗಳು ಕಣ್ಣೆದುರಿಗೇ ಗೋಚರಿಸಿದರೂ ಅವನ ನಾಮದ ಸಂಕೀರ್ತನೆ, ಶ್ರವಣ ಮನನಗಳನ್ನು ಮಾಡುವುದಿಲ್ಲವಲ್ಲ ಎಂದು ದುಃಖಿಸುತ್ತಾರೆ.
“ನನ್ನ ಮೇಲಿನ ಪ್ರೇಮದಿಂದ ಪರಮ ಪ್ರಭುವು ಬಂದು ನನ್ನ ಮನದೊಳಗೆ ಪ್ರವೇಶಿಸಿ ಅವನನ್ನೇ ಸ್ತುತಿಸುವಂತೆ ಅದನ್ನು ಪಳಗಿಸಿದ. ವರಾಹಾವತಾರದಲ್ಲಿ ಭೂಮಿಯನ್ನು ತನ್ನ ಕೋರೆದಾಡೆಗಳನ್ನು ಹೊತ್ತು ರಕ್ಷಿಸಿದಾತನು ನನ್ನ ಸ್ವಪ್ನದಲ್ಲಿ ಕಾಣಿಸಿಕೊಂಡು, ನನ್ನ ಹೃದಯ, ವಾಕ್ಕು, ನಂಬಿಕೆಗಳನ್ನು ಆವರಿಸಿಕೊಂಡಾಗ ನಾನು ಮತ್ತೆಲ್ಲ ವಿಷಯಗಳಲ್ಲಿಯೂ ಆಕರ್ಷಣೆಯನ್ನು ತೊರೆದು ಅವನಲ್ಲಿಯೇ ಶರಣಾದೆ.”
ತಿರುನೆಡುಂದಾಂಡಗಂ ಆಳ್ವಾರರ ಮೂರನೆಯ ಕೃತಿ. ಇದರಲ್ಲಿ ಆಂಡಾಳ್ ಭಗವಂತನ ಶ್ರೀಪಾದವನ್ನು ಹೊಂದಿದಂತೆ ತಮಗೂ ಸಹ ಅವನ ಶ್ರೀಪಾದ ಸಂಬಂಧವಾದುದರಿಂದ ತೃಪ್ತಿ ಪಟ್ಟಿದ್ದಾರೆ. ನಮ್ಮ ಶರೀರವಾದರೋ ಪಂಚಭೌತಿಕ, ಪರಮಾತ್ಮನು ಪಂಚಭೂತಗಳಲ್ಲಿಯೂ ಅಂತರ್ಯಾಮಿ. ಅವನ ಶ್ರೀಪಾದವು ನಮ್ಮ ಶಿರಸ್ಸಿಗೆ ಅಲಂಕಾರ. ಈ ಪ್ರಬಂಧದಲ್ಲಿ ಆಳ್ವಾರರು ನಾರಾಯಣನ ಪರದೈವತ್ವವನ್ನು ಸ್ಪಷ್ಟಪಡಿಸಿದ್ದಾರೆ.

“ಮಕರಂದವನ್ನು ಚೆಲ್ಲುತ್ತಿರುವ ಪುಷ್ಪಗಳಿಂದ ಸಮೃದ್ಧವಾದ, ಸುಂದರ ಉದ್ಯಾನಗಳಿಂದ ತುಂಬಿರುವ, ಅಮೂಲ್ಯವಾದ ರತ್ನಗಳಿಂದ ಶೋಭಿಸುವ, ಚಿನ್ನದ ಮನೆಗಳ ಶಿಖರಧ್ವಜಗಳು, ಆಗಸದಲ್ಲಿ ಚಂದ್ರನ ಓಟಕ್ಕೆ ಅಡ್ಡಿಯಾಗಿವೆಯೇನೋ ಎಂಬಂತೆ ಕಾಣುವ, ಪೊನ್ನಿ (ಕಾವೇರಿ) ನದಿಯ ದಡದಲ್ಲಿರುವ, ತಿರುಕ್ಕುಡಂದೆಯಲ್ಲಿ ಬ್ರಾಹ್ಮಣರ ವೇದಘೋಷಕ್ಕೆ ತನ್ನ ಹೆಡೆಗಳನ್ನು ತೂಗುತ್ತಿರುವ ಅನಂತನ ಮೇಲೆ ಯೋಗನಿದ್ರೆಯಲ್ಲಿರುವ, ದಿವ್ಯ ಪುರುಷನೇ, ನನ್ನ ತಾಪತ್ರಯಗಳನ್ನು ನಿವಾರಿಸು.”
ಪೆರಿಯ ಮತ್ತು ಶಿರಿಯ ತಿರುಮಡಲ್‌ಗಳು :
ಎಲ್ಲ ಆಳ್ವಾರರ ಕೃತಿಗಳೂ ಸಹ ಭಾವ ಮತ್ತು ರಸಗಳಿಂದ ತುಂಬಿವೆ.ಮಡಲ್ ಗಳಲ್ಲಿರುವ ಭಾವ ಪ್ರೇಮ, ತನ್ನ ಕರೆಗೆ ಓಗೊಡದ ಪ್ರಿಯತಮನ (ಅಥವಾ ಪ್ರಿಯೆಯ) ವಿರಹದಿಂದ ನೊಂದು, ಬೆಂದು, ಪ್ರಾಣತ್ಯಾಗ ಮಾಡಲೂ ಸಹ ಸಿದ್ಧಳಾಗುವ ಪ್ರಿಯೆಯ (ಅಥವಾ ಪ್ರಿಯನ) ನಿಷ್ಠಾವಂತ ಪ್ರೇಮ. ಪ್ರೇಮಿಗಳ ಪರಸ್ಪರ ಮಿಲನ ಸಾಧ್ಯವಾಗದಿದ್ದಾಗ ವಿರಹವೇದನೆಯಿಂದ ಸ್ವಪ್ರಾಣ ತ್ಯಾಗಕ್ಕೆ ಸಿದ್ಧವಾಗುವುದಕ್ಕೆ ಮಡಲ್ ಎನ್ನುತ್ತಾರೆ.
ಆಳ್ವಾರರ ಮಡಲ್‌ಗಳಲ್ಲಿ ಜೀವನು ಪರತಂತ್ರನಾಗಿ ನಾಯಕಿಯ ಸ್ಥಾನದಲ್ಲಿದ್ದಾನೆ. ಪರಮಾತ್ಮನಾದ ನಾರಾಯಣನು ಸ್ವತಂತ್ರನು ಮತ್ತು ನಾಯಕನು. ಈ ನಾಯಕ, ನಾಯಕೀ ಭಾವವೇ ಆಳ್ವಾರರ ಮಡಲ್ ಗಳ ತಿರುಳು. ನಾಯಕನಾದ ನಾರಾಯಣನನ್ನು ನಾಯಕಿಯಾದ ಜೀವಾತ್ಮನು ಪ್ರೇಮಿಸಿ ಅವನು ಸಮಯಕ್ಕೆ ಸರಿಯಾಗಿ ಬರದಿರಲು ಅವನ ವಿರಹವನ್ನು ಸಹಿಸದೆ ನಾಯಕಿಯಾದ ಜೀವಾತ್ಮ ಪ್ರಾಣ ತೊರೆಯಲು ಸಿದ್ಧನಾಗುತ್ತಾನೆ.
ಆಗ ಆಚಾರ್ಯರು ಮಧ್ಯಸ್ಥಿಕೆ ವಹಿಸಿ ಜೀವಾತ್ಮ-ಪರಮಾತ್ಮರನ್ನು ಒಂದಾಗಿ ಸೇರಿಸುತ್ತಾರೆ. ತಿರುಮಂಗೈ ಆಳ್ವಾರರು ಪೆರಿಯ ತಿರುಮಡಲಿನಲ್ಲಿ ವಾಸವದತ್ತೆ, ಸೀತೆ, ವೇಗವತಿ, ಉಲೂಪಿ, ಉಷೆ, ಉಮೆ, ಇವರುಗಳನ್ನು ಉದಾಹರಿಸಿದ್ದಾರೆ. (46-48)
ಆಳ್ವಾರರ ಕೃತಿಗಳ ಸಂದೇಶ : ಭಗವಂತನು ಪ್ರೇಮದ ಸಾಕಾರ. ಅವನನ್ನು ಪ್ರೀತಿಸುವುದೇ ಮಾನವನ ಅಂತಿಮ ಗುರಿ ತನ್ನ ಎಲ್ಲ ಕ್ರಿಯೆಗಳನ್ನೂ ಮತ್ತು ಸರ್ವಸ್ವವನ್ನೂ ಶರಣಾಗತಿಯ ಭಾವದಿಂದ ಅವನಿಗೆ ಸಮರ್ಪಣೆ ಮಾಡಿದಾಗ ಅಂತರಾಳದಿಂದ ಉಕ್ಕಿ ಬರುವ ಮಾತುಗಳೇ ಪ್ರೇಮದ ಭಾಷೆ.
ಈ ದಿವ್ಯ ಪ್ರೇಮದ ಭಾಷೆಯನ್ನು ಕಲಿಸಲು ಸಾಧ್ಯವಿಲ್ಲ. ಪರಮ ಪುರುಷನ ಪಾದಾರವಿಂದಗಳಲ್ಲಿ ಮತ್ತೆ ಮತ್ತೆ ಶರಣಾಗುವುದರಿಂದ ಇದರ ಅರಿವಾಗುತ್ತದೆ. ಜ್ಞಾನ, ಕರ್ಮ, ಭಕ್ತಿಗಳೆಂಬ ಫಲ ಪುಷ್ಪಗಳು ಈ ಪ್ರೇಮ ವೃಕ್ಷದಲ್ಲಿ ಅರಳುತ್ತವೆ.
ದೂರ್ವಾಸ ಮುನಿ ಕೂಡಲೇ ಅಂಬರೀಷ ಮಹಾರಾಜನ ಬಳಿ ಹೋಗಿ ಅವನ ಪಾದಕಮಲಗಳ ಮೇಲೆ ಎರಗಿದರು. ಸಹಜವಾಗಿಯೇ ಬಹಳ ವಿಧೇಯ ಹಾಗೂ ಸೌಮ್ಯನಾದ ಮಹಾರಾಜ ಅಂಬರೀಷರು ದೂರ್ವಾಸ ಮುನಿಗಳು ತನ್ನ ಪಾದಗಳ ಮೇಲೆ ಎರಗಿದ್ದನ್ನು ಕಂಡು ನಾಚಿದರು. ಕೂಡಲೇ ದೂರ್ವಾಸರನ್ನು ರಕ್ಷಿಸಲು ಸುದರ್ಶನ ಚಕ್ರಕ್ಕೆ ಪ್ರಾರ್ಥಿಸಿಕೊಂಡರು.
ಈ ಪ್ರಾರ್ಥನೆಯ ಸಾರಾಂಶ ಹೀಗಿದೆ. ಸುದರ್ಶನ ಚಕ್ರವು ದೇವೋತ್ತಮ ಪರಮ ಪುರುಷನ ಸ್ಫುರಣವಾಗಿದೆ. ಇದರಿಂದಲೇ ಇಡಿ ಇಹಲೋಕವನ್ನು ಸೃಷ್ಟಿಸಲಾಗಿದೆ. ಈ ಸುದರ್ಶನ ಚಕ್ರವು ಇತರ ಎಲ್ಲ ಅಸ್ತ್ರಗಳ ನಾಶಕವಾಗಿದೆ. ಅಂಧಕಾರದ ನಾಶಕ ಮತ್ತು ಭಕ್ತಿಸೇವೆಯ ಸಂಶಕ್ತಿಯ ಉದ್ಭವ ಮೂರ್ತಿಯಾಗಿದೆ; ಹೀಗಾಗಿ ಇದು ಧರ್ಮವನ್ನು ಸ್ಥಾಪಿಸುವ ಸಾಧನವಾಗಿದೆ, ಮತ್ತು ಎಲ್ಲ ಅಧರ್ಮ ಕೃತ್ಯಗಳ ನಾಶಕವಾಗಿದೆ ಎಂದರ್ಥ.
ಅವನ ದಯೆಯಿಲ್ಲದೆ ವಿಶ್ವವನ್ನು ನಿರ್ವಹಿಸಲಾಗದು. ಆದ್ದರಿಂದಲೇ ಸುದರ್ಶನ ಚಕ್ರವನ್ನು ದೇವೋತ್ತಮ ಪರಮ ಪುರುಷ ಉಪಯೋಗಿಸುವುದು. ಮಹಾರಾಜ ಅಂಬರೀಷ ಸುದರ್ಶನ ಚಕ್ರವನ್ನು ದಯೆಯನ್ನು ತೋರುವುದಾಗಿ ಪ್ರಾರ್ಥಿಸಿದಾಗ ಸಂತುಷ್ಟಗೊಂಡು ಸುದರ್ಶನ ಚಕ್ರವು ದೂರ್ವಾಸ ಮುನಿಯನ್ನು ಕೊಲ್ಲದೆ ಹಿಂದಿರುಗಿತು.
ಹೀಗಾಗಿ ದೂರ್ವಾಸರು ಸುದರ್ಶನ ಚಕ್ರದ ದಯೆಗೆ ಪಾತ್ರರಾದರು. ದೂರ್ವಾಸ ಮುನಿ ಓರ್ವ ವೈಷ್ಣವ ಭಕ್ತನನ್ನು ಸಾಧಾರಣ ವ್ಯಕ್ತಿಯೆಂದು ಭಾವಿಸುವ ಕ್ಷುಲ್ಲಕ ವಿಚಾರವನ್ನು ತ್ಯಜಿಸಿದರು. ಮಹಾರಾಜ ಅಂಬರೀಷ ಕ್ಷತ್ರಿಯ ಕುಲದವನಾಗಿದ್ದರಿಂದ ದೂರ್ವಾಸರು ಆತನನ್ನು ಬ್ರಾಹ್ಮಣರಿಗಿಂತ ಕೆಳಗಿನವನೆಂದೂ ತನ್ನ ವೈದಿಕ ಶಕ್ತಿಯನ್ನು ಅವನ ಮೇಲೆ ಪ್ರಯೋಗಿಸಲು ಪ್ರಯತ್ನಿಸಿದರು. ಈ ಘಟನೆಯಿಂದ, ವೈಷ್ಣವರನ್ನು ನಿರ್ಲಕ್ಷಿಸುವ ಕ್ಷುಲ್ಲಕ ವಿಚಾರವನ್ನು ಹೇಗೆ ತಡೆಯುವುದೆಂಬುದನ್ನು ಪ್ರತಿಯೊಬ್ಬರೂ ಕಲಿಯಬೇಕಾಗಿದೆ.
ದೂರ್ವಾಸರು ಅಂಬರೀಷ ಮಹಾರಾಜರ ಸ್ಥಳವನ್ನು ಬಿಟ್ಟು ವಾಪಸ್ಸು ಬರುವವರೆಗೆ ಅಂದರೆ ಒಂದು ವರ್ಷದವರೆಗೆ ರಾಜನು ಕೇವಲ ನೀರು ಕುಡಿಯುತ್ತಾ ಉಪವಾಸ ವ್ರತವನ್ನು ಆಚರಿಸಿದನು.
ಈ ಘಟನೆಯ ಅನಂತರ, ಮಹಾರಾಜ ಅಂಬರೀಷ ದೂರ್ವಾಸ ಮುನಿಗಳಿಗೆ ಸೇವಿಸಲು ಭಕ್ಷ್ಯ ಭೋಜನವನ್ನು ನೀಡಿದನು. ಅನಂತರ, ಇಡಿ ವರ್ಷ ಏನನ್ನೂ ತಿನ್ನದೆ ಅದೇ ಸ್ಥಳದಲ್ಲಿ ನಿಂತಿದ್ದ ರಾಜನೂ ಪ್ರಸಾದವನ್ನು ಸ್ವೀಕರಿಸಿದನು. ತದನಂತರ ಅಂಬರೀಷ ಮಹಾರಾಜ ತನ್ನ ಮಕ್ಕಳಲ್ಲಿ ತನ್ನ ಆಸ್ತಿಯನ್ನು ಹಂಚಿ ಭಗವಂತನ ಮೇಲೆ ಧ್ಯಾನ ಮಾಡುವುದಕ್ಕಾಗಿ ಮಾನಸ ಸರೋವರದ ದಡದ ಬಳಿ ಹೊರಟು ಹೋದನು.






Leave a Reply