Month: October 2025

  • ಧ್ರುವ ಮಹಾರಾಜ

    ಧ್ರುವ ಮಹಾರಾಜ

    ಸ್ವಾಯಂಭುವ ಮನುವಿನ ಮಗ ರಾಜಾ ಉತ್ತಾನಪಾದನಿಗೆ ಸುನೀತಿ ಹಾಗೂ ಸುರುಚಿ ಎನ್ನುವ ಹೆಸರಿನ ಇಬ್ಬರು ರಾಣಿಯರಿದ್ದರು. ಸುರುಚಿಯು ರಾಜನಿಗೆ ಹೆಚ್ಚು ಪ್ರಿಯವಾಗಿದ್ದಳು. ಧ್ರುವ ಎನ್ನುವ ಹೆಸರಿನ ಪುತ್ರನನ್ನು ಪಡೆದಿದ್ದ ಸುನೀತಿ ಎಂದರೆ ರಾಜನಿಗೆ ಅಷ್ಟಕಷ್ಟೆ. ಒಂದು ದಿನ ಉತ್ತಾನಪಾದ ರಾಜನು ಸುರುಚಿಯ ಮಗನಾದ ಉತ್ತಮನನ್ನು ತೊಡೆಯಮೇಲೆ ಕುಳ್ಳಿರಿಸಿಕೊ೦ಡು ಮುದ್ದಾಡುತ್ತಿದ್ದನು. ಧ್ರುವನು ತಾನೂ ತಂದೆಯ ತೊಡೆಯನ್ನೇರಲು ಹೋದನು. ಇದನ್ನು ನೋಡಿದ ಅವನ ಮಲತಾಯಿ ಸುರುಚಿಗೆ ವಿಪರೀತ ಹೊಟ್ಟೆಕಿಚ್ಚು ಹುಟ್ಟಿತು. ಆಗ ಆಕೆ ಸಿಟ್ಟಿನಿಂದ ಧ್ರುವನನ್ನು ಬೈದಳು. ತನ್ನ ಮಲತಾಯಿಯು

    ಮತ್ತಷ್ಟು ಓದಿ…


  • ಸಾಕ್ಷಿ ಗೋಪಾಲ

    ಸಾಕ್ಷಿ ಗೋಪಾಲ

    -ಡಾ.ಎನ್‌.ಕೆ.ರಾಮಶೇಷನ್‌ ಇಡೀ ಜಗತ್ತಿಗೆ ಭಾರತದ ಅದ್ವಿತೀಯ ಕೊಡುಗೆ – ವೇದೋಪನಿಷತ್ತುಗಳು, ರಾಮಾಯಣ, ಮಹಾಭಾರತ, ಭಗವದ್ಗೀತೆ, ವಿಷ್ಣು ಸಹಸ್ರ ನಾಮಾದಿ ಅನೇಕ ಸ್ತೋತ್ರಗಳು, ಭಾಗವತ, ಇತ್ಯಾದಿ ಇತ್ಯಾದಿ. ಭಕ್ತಿ ರಸಸ್ವರದಿ ಭಾಗವತ ಗ್ರಂಥ ಉನ್ನತಿಯನ್ನು ಮೆರೆಸುವ ಭಕ್ತಿ ಕಾವ್ಯ ಕೂಡ ಆಗಬಲ್ಲುದು. ಶ್ರೀ ಮನ್ಮಹಾವಿಷ್ಣುವಿನ, ಶ್ರೀ ಕೃಷ್ಣನ, ದಿವ್ಯವಾದ ಕಥೆ-ಸ್ತುತಿ, ಕುರಿತಂತೆ ಶ್ರವಣ (ಆಲಿಸುವುದು) ಸ್ಮರಣಂ (ನೆನಪು ಮಾಡಿಕೊಳ್ಳುವುದು), ಕೀರ್ತನಂ (ಭಗವಂತನ ಗುಣಗಾನ), ದೇವ ದೇವೋತ್ತಮನನ್ನು ಅಚಲವಾಗಿ ಸೇವಿಸುವುದು, (ಪಾದ ಸೇವನ), ಆತನನ್ನು ಅರ್ಚಿಸುವುದು, ಪೂಜಿಸುವುದು (ಅರ್ಚನ), ಆತನಿಗೆ

    ಮತ್ತಷ್ಟು ಓದಿ…


  • ಅರಿಷ್ಟಾಸುರ ವಧೆ

    ಅರಿಷ್ಟಾಸುರ ವಧೆ

    ಬಾಲಕೃಷ್ಣ ದಿನಕ್ಕೊಂದು ದಿವ್ಯ ಲೀಲೆ ಪ್ರದರ್ಶಿಸುತ್ತಾ ಇಡೀ ವೃಂದಾವನವನ್ನು ತನ್ನ ಜಾಲದಲ್ಲಿ ಬಂಧಿಸಿದ್ದ. ಇಡೀ ವೃಂದಾವನ ಕೃಷ್ಣಮಯ. ಎಲ್ಲಿ ನೋಡಿದರೂ ತುಂಟ ಕೃಷ್ಣ ಮತ್ತು ಅವನ ಹಿಂಬಾಲಕ ಗೋಪಾಲಕರ ಕೇಕೆ. ಗೋಪಿಕೆಯರ ಕಿಲಕಿಲ. ಹಸುಕರುಗಳ ಕೊರಳ ಗಂಟೆ ನಾದ. ಮೋಹನಮುರಳಿಯ ಮಂಜುಳ ನಿನಾದ. ಹೀಗೆ ವೃಂದಾವನ ಶ್ರೀ ಕೃಷ್ಣನ ಬಾಲ ಲೀಲೆಗಳನ್ನು ನೋಡಿ ನಲಿಯುತ್ತಾ ಸಂತಸದಲ್ಲಿ ಮುಳುಗೇಳುತ್ತಿದ್ದರೆ, ಅತ್ತ ಬಾಲಕೃಷ್ಣನನ್ನು ಹೇಗಾದರೂ ಮಾಡಿ ಮುಗಿಸಬೇಕೆಂದು ರಾಕ್ಷಸ ಗಣ ದಿನಕ್ಕೊಂದು ತಂತ್ರ ಹಣೆಯುತ್ತಲೇ ಇತ್ತು. ಇಂಥ ಒಂದು ಷಡ್ಯಂತ್ರದ

    ಮತ್ತಷ್ಟು ಓದಿ…


  • ಶ್ರೀ ಮಾಧವ ತೀರ್ಥ

    ಶ್ರೀ ಮಾಧವ ತೀರ್ಥ

    ಮಧ್ವಾಚಾರ್ಯರ ನಾಲ್ವರು ಪ್ರಮುಖ ಅನುಯಾಯಿಗಳ ಪೈಕಿ ಶ್ರೀ ಮಾಧವ ತೀರ್ಥರೂ ಒಬ್ಬರು. ಶ್ರೀ ಮಧ್ವಾಚಾರ್ಯರ ನಂತರ ಕ್ರಮವಾಗಿ ಪದ್ಮನಾಭ ತೀರ್ಥ,  ನರಹರಿ ತೀರ್ಥ, ಮಾಧವ ತೀರ್ಥ ಮತ್ತು ಅಕ್ಷೋಭ್ಯ ತೀರ್ಥರು ಪೀಠವನ್ನು ಅಲಂಕರಿಸಿದರು. ಚತುವೇರ್ದಗಳ ಮೇಲೆ ವಿದ್ವತ್‌ಪೂರ್ಣ ವ್ಯಾಖ್ಯಾನವನ್ನು ರಚಿಸಿದ್ದು ಮಾಧವ ತೀರ್ಥರ ಅತಿ ಮುಖ್ಯ ಸಾಧನೆ. ಆಂಧ್ರಪ್ರದೇಶದಲ್ಲಿ ಪವಿತ್ರ ಗೋದಾವರಿ ನದಿ ತೀರದ ಹಳ್ಳಿಯೊಂದರಲ್ಲಿ, ಆ ಕಾಲದ ಮಹಾನ್‌ ವಿದ್ವಾಂಸ ಕೃಷ್ಣಶಾಸ್ತ್ರಿ ಎಂಬ ಬ್ರಾಹ್ಮಣರ ಪುತ್ರನಾಗಿ ಮಾಧವ ತೀರ್ಥರ ಜನನವಾಯಿತು. ಇದಕ್ಕೂ ಮೊದಲು ಪದ್ಮನಾಭ ತೀರ್ಥರೂ

    ಮತ್ತಷ್ಟು ಓದಿ…


  • ವಿವಿಧ ತಿನಿಸು

    ವಿವಿಧ ತಿನಿಸು

    ಪಾನಕ ಬೇಕಾಗುವ ಪದಾರ್ಥಗಳು: ತಯಾರಿಸುವ ವಿಧಾನ: ಬೆಲ್ಲದ ಹುಡಿಯನ್ನು ನೀರಿನಲ್ಲಿ ಬೆರೆಸಿ, ಸಂಪೂರ್ಣವಾಗಿ ಕರಗಿಸಿ. ಮಿಶ್ರಣವನ್ನು ಶುಭ್ರವಾದ ಬಟ್ಟೆಯಲ್ಲಿ ಸೋಸಿ. ಅದಕ್ಕೆ ಲಿಂಬೆ ರಸ, ಒಣ ಶುಂಠಿ ಹುಡಿ, ಏಲಕ್ಕಿ, ಕಾಳು ಮೆಣಸಿನ ಹುಡಿ ಮತ್ತು ಉಪ್ಪು ಬೆರೆಸಿ. ತಣ್ಣಗಿನ ರುಚಿ ರುಚಿ ಪಾನಕವನ್ನು ಎಲ್ಲರಿಗೂ ಹಂಚಿ. ಪಾಲನಕದ ವಿಶೇಷವೆಂದರೆ ಇದನ್ನು ಬೇಸಿಗೆಯಲ್ಲಿ ಬಾಯಾರಿಕೆ ತಣಿಸುವ ಹಾಗೂ ಅತಿಥಿಗಳನ್ನು ಸ್ವಾಗತಿಸುವ ಪೇಯವಾಗಿ ನೀಡಬಹುದು. ದಾಹ ತಣಿಸಿ, ದಣಿವು ನಿವಾರಿಸಿ ದೈಹಿಕ ಶಕ್ತಿಯನ್ನೂ ಹೆಚ್ಚಿಸುವ ಶಕ್ತಿ ಈ ಪಾನಕಕ್ಕಿದೆ.

    ಮತ್ತಷ್ಟು ಓದಿ…


  • ಶ್ರೀರಾಮ ಕ್ಷೇತ್ರಗಳು

    ಶ್ರೀರಾಮ ಕ್ಷೇತ್ರಗಳು

    ಭಾರತದ ಯಾವ ಭಾಗಕ್ಕೇ ಹೋದರು, ಅಲ್ಲಿ ಒಂದಲ್ಲಾ ಒಂದು ರಾಮನ ಸಂಬಂಧ ಕ್ಷೇತ್ರವೆಂದು ಜನ ಹೇಳುತ್ತಾರೆ. ಸೀತೆಯ ಸೆರಗು ತಾಕಿದ ಜಾಗವೆಂದೂ, ಹನುಮಂತನು ಬಂದಿದ್ದನೆಂದೋ, ರಾಮ ಬಾಣ ಬಿಟ್ಟ ಸ್ಥಳವೆಂದೋ, ಏನೋ ಸಂಬಂಧ ಹೇಳಿಕೊಳ್ಳುತ್ತಾರೆ. ಶತಮಾನಗಳಿಂದ ಪ್ರಸಿದ್ಧವಾಗಿರುವ ಹಲವು ಕ್ಷೇತ್ರಗಳನ್ನು ಮಾತ್ರ ಇಲ್ಲಿ ಪರಿಚಯಿಸಲಾಗಿದೆ. ಅಯೋಧ್ಯೆ: ಈಗಿನ ಉತ್ತರ ಪ್ರದೇಶದ ಫೈಜಿಯಾಬಾದ್‌ ಜಿಲ್ಲೆಯಲ್ಲಿದೆ. ಪವಿತ್ರ ಸರಯೂ ನದಿ ಇಲ್ಲಿ ಹರಿಯುತ್ತದೆ. ರಘುವಂಶದರಸರ ರಾಜಧಾನಿ. ರಾಮನ ಜನ್ಮಸ್ಥಳ. ನೂರಾರು ದೇವಾಲಯಗಳಿವೆ. ಭಾರತದ ಪುರಾತನವಾದ 7 ಮೋಕ್ಷ ನಗರಿಗಳಲ್ಲಿ ಅಯೋಧ್ಯೆ

    ಮತ್ತಷ್ಟು ಓದಿ…


  • ರಾಧಾಕುಂಡ ಮತ್ತು ಗೋವರ್ಧನ

    ರಾಧಾಕುಂಡ ಮತ್ತು ಗೋವರ್ಧನ

    ವ್ರಜಮಂಡಲ ಪರಿಕ್ರಮ- ಭಾಗ:6 -ಕೃಷ್ಣದಾಸ ರಾಧಾ ಕುಂಡ: ಮಥುರಾದಿಂದ 26 ಕಿ.ಮೀ ದೂರದಲ್ಲಿ ರಾಧಾ ಕುಂಡವಿದೆ. ಅತ್ಯಂತ ಪ್ರಶಾಂತ ಮತ್ತು ಮನೋಹರ ತಾಣವಿದು. ಗೌಡೀಯ ವೈಷ್ಣವರ ಪಾಲಿಗೆ ವ್ರಜ ಪ್ರದೇಶದಲ್ಲೇ ಅತ್ಯಂತ ಪವಿತ್ರ ತಾಣ ಇದಾಗಿತ್ತು. ಇಲ್ಲಿ ಎರಡು ಪವಿತ್ರ ಕೊಳಗಳಿವೆ. ಈ ಸ್ಥಳವಿರುವ ಪಟ್ಟಣವನ್ನು ಅರಿಷ್ಟವನ ಎಂದು ಕರೆಯಲಾಗುತ್ತದೆ. ಅರಿಷ್ಟಾಸುರ ರಾಕ್ಷಸನನ್ನು ಕೃಷ್ಣ ಸಂಹರಿಸಿದ್ದು ಇಲ್ಲೇ. ರಾಧಾಕೃಷ್ಣರು ದಿನದ ವೇಳೆ ತಮ್ಮ ಲೀಲೆಗಳನ್ನು ಪ್ರದರ್ಶಿಸುತ್ತಿದ್ದುದು ಇಲ್ಲೇ. ಬಹಳ ವರ್ಷಗಳ ತನಕ ಈ ಪ್ರದೇಶಗಳ ಬಗ್ಗೆ ಯಾರಿಗೂ

    ಮತ್ತಷ್ಟು ಓದಿ…


  • ಭಗವದ್ಗೀತೆಯ ಇತಿಹಾಸ

    ಭಗವದ್ಗೀತೆಯ ಇತಿಹಾಸ

    ಶ್ರೀಮತಿ ಪದ್ಮಿನಿ ಬಾಲು ಮಾನವನು ಭೌದ್ಧಿಕವಾಗಿ ಮುಂದುವರೆಯುತ್ತಿರುವೆನೆಂದು ಭಾವಿಸುತ್ತಿರುವ ಪ್ರಸ್ತುತ ಪ್ರಪಂಚದಲ್ಲಿ ಯಾವುದನ್ನೇ ಆಗಲಿ, “ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣೀಕರಿಸಿ ನೋಡು” ಎನ್ನುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗೆ ವೈಜ್ಞಾನಿಕವಾಗಿ ಮತ್ತು ವೈಚಾರಿಕವಾಗಿ ವಿಶ್ಲೇಷಣೆ ಮಾಡಿದ ನಂತರವೇ ಯಾವ ಸತ್ಯವನ್ನಾದರೂ ಒಪ್ಪಿಕೊಳ್ಳಬೇಕೆಂದು ವಾದ ಮಾಡುವ ಜನರಿಗೆ ಶ್ರೀಲ ಪ್ರಭುಪಾದರು “ಶ್ರೀ ಮದ್ಭಗವದ್ಗೀತಾ ಯಥಾರೂಪ” ಮುಂತಾದ ಅಸಂಖ್ಯಾತ ಗ್ರಂಥಗಳಲ್ಲಿ ತಮ್ಮ ವ್ಯಾಖ್ಯಾನಗಳ ಮೂಲಕ ಸದುತ್ತರವನ್ನಿದ್ದಾರೆ. ಕುರುಕ್ಷೇತ್ರ ಯುದ್ಧವು ನಿಜವಾಗಿ ನಡೆದಿರಬಹುದೇ, ಭಗವಾನ್‌ ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸಿದ ಭಗವದ್ಗೀತೆಯು ಮಾನವ ಕುಲಕ್ಕೆ

    ಮತ್ತಷ್ಟು ಓದಿ…