Month: October 2025

  • ವನಿತಾ: ಕೃಷ್ಣ ಪಾಕಶಾಲೆ: ವಿಧ ವಿಧದ ದೋಸೆ

    ವನಿತಾ: ಕೃಷ್ಣ ಪಾಕಶಾಲೆ:            ವಿಧ ವಿಧದ ದೋಸೆ

    ಭಾರತದಲ್ಲಿ, ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ದೋಸೆ, ಇಡ್ಲಿ, ಉಪ್ಪಿಟ್ಟಿನಂತಹ ತಿಂಡಿಗಳು ಬೆಳಗ್ಗಿನ ಉಪಹಾರದ ಅವಿಭಾಜ್ಯ ತಿನಿಸುಗಳಾಗಿವೆ. ಅತ್ಯಂತ ಜನಪ್ರಿಯವಾದ ಮಸಾಲೆ ದೋಸೆ ಸೇರಿದಂತೆ ವೈವಿದ್ಯಮಯವಾದ ದೋಸೆಗಳನ್ನು ತಯಾರಿಸಬಹುದು. ಇಲ್ಲಿ ನಾಲ್ಕು ಬಗೆಯ ದೋಸೆಗಳನ್ನು ಮಾಡುವ ವಿಧಾನ ತಿಳಿಸಲಾಗಿದೆ. ಅವಲಕ್ಕಿ (ಪೋಹ) ದೋಸೆ ಬೇಕಾಗುವ ಸಾಮಗ್ರಿಗಳು: ಅಕ್ಕಿ – 2 ಕಪ್‌ ಅವಲಕ್ಕಿ – 1 ಕಪ್‌ ಉದ್ದಿನಬೇಳೆ – 1 ಟೇಬಲ್‌ ಸ್ಪೂನ್‌ ಮೊಸರು – 1 ಕಪ್‌ (ಇದಕ್ಕೆ 2 ಕಪ್‌ ನೀರು ಬೆರಸಬೇಕು) ಅಡುಗೆ

    ಮತ್ತಷ್ಟು ಓದಿ…


  • ಎಲ್ಲ ಸಂಕಷ್ಟಕ್ಕೆ ಪರಿಹಾರ

    ಎಲ್ಲ ಸಂಕಷ್ಟಕ್ಕೆ ಪರಿಹಾರ

    -ಶ್ರೀ ಚಂಚಲಾಪತಿ ದಾಸ ಮುಖವು ಮನಸ್ಸಿನ ಕನ್ನಡಿ ಎಂದು ಶ್ರೀಲ ಪ್ರಭುಪಾದರು ಹೇಳುತ್ತಿದ್ದರು. ಕಲಿಯುಗದಲ್ಲಿ ಜನರು ಅನೇಕ ರೀತಿಯ ಸಂಕಷ್ಟದಲ್ಲಿ ಇರುವುದನ್ನು ನಾವು ನೋಡುತ್ತಿದ್ದೇವೆ. ಜನರನ್ನು ಸಂತೋಷಪಡಿಸಲು ಜಗತ್ತಿನಲ್ಲಿ ಈಗ ನಡೆಯುತ್ತಿರುವ ಪ್ರಯತ್ನಗಳು ಚರಿತ್ರೆಯಲ್ಲಿ ಹಿಂದೆಂದೂ ಕಾಣದಂತಹುದು. ಆದರೂ ಜನರು ಸಂತೋಷದಿಂದ ಇಲ್ಲದಿರುವುದನ್ನು ನಾವು ಕಾಣುತ್ತಿದ್ದೇವೆ. ಅದೇ ಅನೇಕ ರೀತಿಯ ಕಷ್ಟ ಕಾರ್ಪಣ್ಯಗಳು. ಈ ವಿಶ್ವದ ಎಲ್ಲ ಸಂಕಷ್ಟಗಳಿಗೆ ಮೂಲ ಕಾರಣ ಕೃಷ್ಣನನ್ನು ಮರೆತಿರುವುದೇ ಆಗಿದೆ. ಇದು ಭಾಗವತ ಮತ್ತು ಆಚಾರ್ಯರ ವಿಶ್ಲೇಷಣೆ. ನಾವು ಕೃಷ್ಣನೊಂದಿಗಿನ ನಮ್ಮ

    ಮತ್ತಷ್ಟು ಓದಿ…


  • ಮುಲ್ಕಿ ಉಗ್ರ ನರಸಿಂಹ ಮಂದಿರ

    ಮುಲ್ಕಿ ಉಗ್ರ ನರಸಿಂಹ ಮಂದಿರ

    ಮಂಗಳೂರಿನಿಂದ 30 ಕಿ.ಮೀ ದೂರದಲ್ಲಿರುವ ಮುಲ್ಕಿ ಪ್ರಸಿದ್ಧ ಯಾತ್ರಾ ಸ್ಥಳ. ಶ್ರೀ ವಿಠಲನಿಗೆ ಅರ್ಪಿಸಿದ ಪೂಜಾ ಸ್ಥಳವಾದರೂ ಇಲ್ಲಿ ಶ್ರೀ ವಿಠಲನೊಂದಿಗೆ ಶ್ರೀ ವೆಂಕಟರಮಣ, ಶ್ರೀ ಉಗ್ರ ನರಸಿಂಹ ಮತ್ತು ಶ್ರೀ ಬಿಂದುಮಾಧವ ವಿಗ್ರಹಗಳೂ ಪ್ರಧಾನ ದೇವರಾಗಿ ವಿಜೃಂಭಿಸಿವೆ. ಶ್ರೀ ಕಾಶಿ ಮಠ ಸಂಸ್ಥಾನದ ಸಂಸ್ಥಾಪನಾಚಾರ್ಯ ಶ್ರೀ ವಿಜಯೀಂದ್ರ ತೀರ್ಥ ಸ್ವಾಮೀಜಿಯವರು ಪ್ರತಿಷ್ಠಾಪಿಸಿದ ಶ್ರೀ ಉಗ್ರ ನರಸಿಂಹ ಮೂರ್ತಿಯು ಅತ್ಯಂತ ಪ್ರಸಿದ್ಧವಾಗಿ ಅಸಂಖ್ಯ ಜನರನ್ನು ಆಕರ್ಷಿಸುತ್ತಿದೆ. ಇತಿಹಾಸ ಮೊದಲು ಇಲ್ಲಿ ಶ್ರೀ ವಿಠಲನ ಸಣ್ಣ ದೇವಸ್ಥಾನವಿತ್ತು. ಖ್ಯಾತ

    ಮತ್ತಷ್ಟು ಓದಿ…


  • ಮಹಾಪುರುಷ ಅಂಬರೀಷ! – ಭಾಗ 2

    ಮಹಾಪುರುಷ ಅಂಬರೀಷ! – ಭಾಗ 2

    ವೇದವ್ಯಾಸ ವಿರಚಿತ ಭಾಗವತವು 12 ಸ್ಕಂಧಗಳ, 18,000 ಶ್ಲೋಕಗಳಿಂದ ಕೂಡಿದ್ದು – ನಿಗಮ ಕಲ್ಪತರೋ‌ರ್‌ ಗಲಿತಂ ಫಲಂ – ವೇದವೆಂಬ ಕಲ್ಪವೃಕ್ಷದಿಂದ ಹುಟ್ಟಿದ ಮಾಗಿದ ಫಲ ಎಂದೇ ಬಣ್ಣಿಸಲಾಗಿದೆ. ಈ ಲೇಖನ ಮಾಲಿಕೆಯಲ್ಲಿ ಶುಕ ಮುಖದಿಂದ ಹರಿದ ಭಾಗವತವನ್ನು ಆಧರಿಸಿದ ಕಥೆಗಳನ್ನು ಓದುತ್ತೀರಿ. ಪ್ರಸ್ತುತ ಕಥೆಯನ್ನು ಭಾಗವತದ ಒಂಭತ್ತನೇ ಸ್ಕಂಧದ 2 ರಿಂದ 4ನೇ ಅಧ್ಯಾಯವನ್ನು ಆಧರಿಸಿ ಖ್ಯಾತ ಸಾಹಿತಿ ‘ಚಿರಂಜೀವಿ’ ಅವರು ಭಕ್ತಿವೇದಾಂತ ದರ್ಶನದ ಓದುಗರಿಗೆ ಬರೆದುಕೊಟ್ಟಿದ್ದಾರೆ. ಹಿಂದಿನ ಸಂಚಿಕೆಯಲ್ಲಿ ಅಂಬರೀಷ ಮಹಾರಾಜನ ರಾಜ್ಯಭಾರದ ವರ್ಣನೆ

    ಮತ್ತಷ್ಟು ಓದಿ…


  • ಶ್ರೀ ರಘುನಾಥ ದಾಸ ಗೋಸ್ವಾಮಿ

    ಶ್ರೀ ರಘುನಾಥ ದಾಸ ಗೋಸ್ವಾಮಿ

    ವೃಂದಾವನದ ಆರು ಗೋಸ್ವಾಮಿಗಳಲ್ಲಿ ಶ್ರೀಲ ರಘುನಾಥದಾಸ ಗೋಸ್ವಾಮಿಯವರು ಕೂಡ ಒಬ್ಬರು. ಶ್ರೀ ರಘುನಾಥದಾಸ ಗೋಸ್ವಾಮಿಯವರು ಶ್ರೀ ಕೃಷ್ಣನ ನಿತ್ಯ ಮುಕ್ತ ಸಂಗಡಿಗರಾಗಿದ್ದರು. ಐದುನೂರು ವರ್ಷಗಳ ಹಿಂದೆ ಶ್ರೀ ಚೈತನ್ಯ ಮಹಾಪ್ರಭುಗಳು ಅವತರಿಸಿದಾಗ ಇವರು ಕೂಡ ಅವತರಿಸಿ ಅವರ ಜೊತೆಗಾರರಾಗಿದ್ದರು. ಶ್ರೀ ರಘುನಾಥದಾಸ ಗೋಸ್ವಾಮಿಯವರು ಒಬ್ಬ ಶ್ರೀಮಂತ ಜಮೀನ್ದಾರರ ಮಗನಾಗಿದ್ದರು. ಬಾಲ್ಯದಿಂದಲೂ ರಘುನಾಥದಾಸ ಈ ಐಹಿಕ ಜಗತ್ತಿನ ವಸ್ತುಗಳಲ್ಲಿ ಅಷ್ಟೊಂದು ಆಸಕ್ತಿಯನ್ನು ಪಡೆದಿರಲಿಲ್ಲ. ಅವನ ಆತ್ಮವು ಯಾವಾಗಲೂ ತಾನು ಶ್ರೀ ಚೈತನ್ಯ ಮಹಾಪ್ರಭುಗಳ ಒಡನಾಡಿಯಾಗಿರಬೇಕೆಂದು ಬಯಸುತ್ತಿತ್ತು ಮತ್ತು ಪ್ರಭುಗಳ

    ಮತ್ತಷ್ಟು ಓದಿ…


  • ನಳಕೂವರ ಮತ್ತು ಮಣಿಗ್ರೀವರ ಶಾಪ ವಿಮೋಚನೆ

    ನಳಕೂವರ ಮತ್ತು ಮಣಿಗ್ರೀವರ ಶಾಪ ವಿಮೋಚನೆ

    ಶ್ರೀ ಕೃಷ್ಣನನ್ನು, ಅವನಮ್ಮ ಯಶೋದಾ, ತುಂಬಾ ತುಂಟತನ ಮಾಡುತ್ತಾನೆಂದು ಮರದ ಒರಳಿಗೆ ಕಟ್ಟಿಹಾಕಿದ್ದಳು. ಆ ಸಮಯದಲ್ಲಿ ಅವನಿಗೆ, ಅರ್ಜುನ ಎಂದು ಕರೆಸಿಕೊಳ್ಳುವ ಎರಡು ದೊಡ್ಡ ಮರಗಳು ಎದುರಿನಲ್ಲಿ ಕಾಣಿಸಿದವು. ತಮ್ಮ ಹಿಂದಿನ ಜನ್ಮದಲ್ಲಿ ಈ ಎರಡು ಮರಗಳೂ ಮನುಷ್ಯರಾಗಿ, ಕುಬೇರನ ಮಕ್ಕಳಾಗಿ ಹುಟ್ಟಿದ್ದವು. ಅವುಗಳಿಗೆ ನಳಕೂವರ ಮತ್ತು ಮಣಿಗ್ರೀವ ಎಂದು ಹೆಸರಿತ್ತು. ಮುಂದೆ ಶ್ರೀಕೃಷ್ಣನ ದರ್ಶನಭಾಗ್ಯ ಪಡೆಯುವಂತಹ ಅತಿದೊಡ್ಡ ಅನುಗ್ರಹವನ್ನು ಪಡೆಯುವುದಕ್ಕಾಗಿ, ಆ ಜನ್ಮದಲ್ಲಿ ಇವರಿಬ್ಬರಿಗೆ ನಾರದ ಮುನಿ ಒಂದು ಶಾಪವನ್ನು ಕೊಟ್ಟಿದ್ದರು. ಇವರಿಬ್ಬರೂ ತಮ್ಮ ತಂದೆ

    ಮತ್ತಷ್ಟು ಓದಿ…


  • ಕೃಷ್ಣ ಪಾಕಶಾಲೆ

    ಕೃಷ್ಣ ಪಾಕಶಾಲೆ

    ಅಂಟಿನ ಉಂಡೆ ಬೇಕಾಗುವ ಸಾಮಗ್ರಿಗಳು: ಕಾಲು ಕೆ.ಜಿ.ಅಂಟು 1 ಕೆ.ಜಿ ಕೊಬ್ಬರಿ ಏಲಕ್ಕಿ ಲವಂಗ ದ್ರಾಕ್ಷಿ ಗೋಡಂಬಿ ಮಾಡುವ ವಿಧಾನ: ಬೆಲ್ಲವನ್ನು ಸಣ್ಣಗೆ ಹೆರೆದುಕೊಂಡು ಬೆಲ್ಲ ತೋಯುವಷ್ಟು ತುಪ್ಪ ಹಾಕಿ ಕುದಿಯಲು ಇಡಬೇಕು. ಅಲ್ಲಿ ಇಲ್ಲಿ ಗುಳ್ಳೆ ಬಂದ ತಕ್ಷಣ ಇಳಿಸಬೇಕು. ತುಪ್ಪದಲ್ಲಿ ಕರಿದ ಅಂಟು ಮತ್ತು ಎಲ್ಲ ಸಾಮಾನುಗಳನ್ನು ಹಾಕಿ ಉಂಡೆ ಕಟ್ಟಬೇಕು. ಆದರೆ ಉಂಡೆಗಳು ಗಟ್ಟಿಯಾಗುವುದಿಲ್ಲ. ತುಪ್ಪ ಇಲ್ಲದಿದ್ದರೆ ನೀರು ಹಾಕಿ ಉಂಡೆ ಆಣ ತೆಗೆದುಕೊಂಡು ಉಂಡೆ ಕಟ್ಟಬೇಕು. ಇವು ಗಟ್ಟಿ ಆಗುತ್ತವೆ. ಕೃಷ್ಣನಿಗೆ

    ಮತ್ತಷ್ಟು ಓದಿ…


  • ಶರಣಾಗತ ರಕ್ಷಕ

    ಶರಣಾಗತ ರಕ್ಷಕ

    ಬಂಗಾಳ ಕೊಲ್ಲಿ ಪ್ರಶಾಂತವಾಗಿತ್ತು. ಸಮುದ್ರಕ್ಕೇ ಸವಾಲೆಸೆಯುವಂತೆ ನೀಲಾಕಾಶ ಹರಡಿಕೊಂಡಿತ್ತು. ಅಲ್ಲೊಂದು ಇಲ್ಲೊಂದು ಬೀಡಾಡಿ ಮೊಡಗಳು ಕಾಣಿಸುತ್ತಿದ್ದವಾದರೂ ಮಳೆ ಬರುವ ಯಾವುದೇ ಮುನ್ಸೂಚನೆ ಇರಲಿಲ್ಲ. ಆ ಬೃಹತ್ ನಾವೆ ಆಗ ತಾನೇ ಚಂದನಪುರದಿಂದ ಹೊರಟಿತ್ತು. ನೂರಾರು ಪ್ರಯಾಣಿಕರು, ಆ ಕಾಲದಲ್ಲೇ ಲಕ್ಷಾಂತರ ರೂ ಬೆಲೆಬಾಳುವ ಸರಕು ಸರಂಜಾಮುಗಳನ್ನು ಹೇರಿಕೊಂಡ ಹಡಗು ಫ್ರಾನ್ಸ್‌ನಿಂದ ಭಾರತದತ್ತ ಹೊರಟಿತ್ತು. ಕ್ಯಾಪ್ಟನ್ ಬೀಟ್ಸ್ ಆ ಹಡಗಿನ ಮುಖ್ಯ ನಾವಿಕ. ಆಗೆಲ್ಲಾ ಈಗಿನಂತೆ ಹಡಗು ಪ್ರಯಾಣ ಪ್ರತಿಶತ ನೂರರಷ್ಟು ಸುರಕ್ಷಿತವೇನಲ್ಲ. ಆದರೂ ದೂರ ಪ್ರಯಾಣಕ್ಕೆ, ಅದರಲ್ಲೂ

    ಮತ್ತಷ್ಟು ಓದಿ…


  • ಭೂ ಮಾತೆಗೆ ನಮೋ ನಮೋ!

    ಭೂ ಮಾತೆಗೆ ನಮೋ ನಮೋ!

    ಭೂ ತಾಯಿಯೊಂದಿಗೆ ಪುನರ್‌ ಮಿಲನ ಮತ್ತು ಅವಳ ಉತ್ಪನ್ನಗಳನ್ನು ಶ್ರೀ ಕೃಷ್ಣನಿಗೆ ಅರ್ಪಿಸುವುದು ನಮ್ಮ ಬದುಕಿನ ಕರ್ತವ್ಯವಾಗಬೇಕು. ಭೂಮಿಯಿಂದ (ಮಣ್ಣಿನಿಂದ) ಉತ್ಪನ್ನವಾಗುವ ನಮ್ಮ ದೇಹ ಈ ಲೋಕದಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿದ ಮೇಲೆ ಬೂದಿಯಾಗಿ ಮಣ್ಣನ್ನೇ ಸೇರುತ್ತದೆ.  ಹೀಗಾಗಿ “ಮಣ್ಣಿನಿಂದ ಬಂದೆವು, ಮಣ್ಣನ್ನೇ ಸೇರುತ್ತೇವೆ” ಎಂದು ಹೇಳುತ್ತಾರೆ. ಆದುದರಿಂದ ಭೂಮಿಯೊಂದಿಗೆ ನಮ್ಮದು ಅವಿನಾಭಾವ ಸಂಬಂಧ. ಭೂಮಿಯು ಒದಗಿಸುವ ಹಣ್ಣು, ತರಕಾರಿ, ಧಾನ್ಯಗಳು ನಮಗೆ ಪೌಷ್ಟಿಕಾಂಶ ನೀಡುತ್ತವೆ. ಆದುದರಿಂದ ಭೂಮಿಯ ಯೋಗಕ್ಷೇಮ ನಮ್ಮ ಕರ್ತವ್ಯ. ನಮ್ಮ ಮನೋಭಾವವು ಅನಾರೋಗ್ಯಕರವಾಗಿದ್ದರೆ

    ಮತ್ತಷ್ಟು ಓದಿ…


  • ಹರಿನಾಮದ ಏಳು ಅದ್ಭುತಗಳು

    ಹರಿನಾಮದ ಏಳು ಅದ್ಭುತಗಳು

    ಹರೇ ಕೃಷ್ಣ ಮಂತ್ರವನ್ನು ಜಪಿಸುವುದರಿಂದ ಆಗುವ  ಪ್ರಯೋಜನವೇನು? ಮಹಾ ಮಂತ್ರದಲ್ಲಿನ ಹರೇ, ಕೃಷ್ಣ, ರಾಮ ನಾಮಗಳಲ್ಲಿ ಭಗವಂತನ ಪೂರ್ಣ‌ ಶಕ್ತಿಯನ್ನು ವಿನಿಯೋಗಿಸಲಾಗಿದೆ. ಆದುದರಿಂದ ಭಗವಂತನ ಪವಿತ್ರನಾಮವನ್ನು ಪಠಿಸುವುದು ಭಗವಂತನೊಂದಿಗೆ ನೇರವಾಗಿ ಸಂಪರ್ಕ‌ ಪಡೆದಷ್ಟೇ ಪರಿಣಾಮಕಾರಿ. ಶ್ರೀ ಚೈತನ್ಯ ಮಹಾಪ್ರಭು ಬರೆದಿರುವ ಈ ಸುಂದರ ಶ್ಲೋಕವು ಜಪಿಸುವವರ ಮೇಲೆ ಹರೇ ಕೃಷ್ಣ ಮಂತ್ರದ ಏಳು ಪ್ರಭಾವಗಳನ್ನು ವರ್ಣಿಸುತ್ತದೆ.‌ ಚೇತೋ ದರ್ಪಣ ಮಾರ್ಜನಂ ಭವ ಮಹಾ ದಾವಾಗ್ನಿ ನಿರ್ವಾಪಣಂ‌ ಶ್ರೇಯಃ ಕೈರವ ಚಂದ್ರಿಕಾ ವಿತರಣಂ ವಿದ್ಯಾ ವಧೂ ಜೀವನಂ ಆನಂದಾಂಬುಧಿ

    ಮತ್ತಷ್ಟು ಓದಿ…


  • ಮಹಾಪುರುಷ ಅಂಬರೀಷ!

    ಮಹಾಪುರುಷ ಅಂಬರೀಷ!

    ವೇದವ್ಯಾಸ ವಿರಚಿತ ಭಾಗವತವು 12 ಸ್ಕಂಧಗಳ, 18,000 ಶ್ಲೋಕಗಳಿಂದ ಕೂಡಿದ್ದು – ನಿಗಮ ಕಲ್ಪತರೋರ್ ಗಲಿತಂ ಫಲಂ – ವೇದವೆಂಬ ಕಲ್ಪವೃಕ್ಷದಿಂದ ಹುಟ್ಟಿದ ಮಾಗಿದ ಫಲ ಎಂದೇ ಬಣ್ಣಿಸಲಾಗಿದೆ. ಈ ಲೇಖನ ಮಾಲಿಕೆಯಲ್ಲಿ ಶುಕ ಮುಖದಿಂದ ಹರಿದ ಭಾಗವತವನ್ನು ಆಧರಿಸಿದ ಕಥೆಗಳನ್ನು ಓದುತ್ತೀರಿ. ಪ್ರಸ್ತುತ ಕಥೆಯನ್ನು ಭಾಗವತದ ಒಂಭತ್ತನೇ ಸ್ಕಂಧದ 2 ರಿಂದ 4ನೇ ಅಧ್ಯಾಯವನ್ನು ಆಧರಿಸಿ ಖ್ಯಾತ ಸಾಹಿತಿ ‘ಚಿರಂಜೀವಿ’ ಅವರು ಭಕ್ತಿವೇದಾಂತ ದರ್ಶನದ ಓದುಗರಿಗೆ ಬರೆದುಕೊಟ್ಟಿದ್ದಾರೆ. ವೈವಸ್ವತ ಮನುವಿನ ಎಂಟನೆಯ ಮಗ ನಭಗ, ಇವನ

    ಮತ್ತಷ್ಟು ಓದಿ…


  • ಗೋವರ್ಧನ‌ ಪೂಜೆ

    ಗೋವರ್ಧನ‌ ಪೂಜೆ

    ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪನಾಚಾರ್ಯರಾದ ಶ್ರೀ ಶ್ರೀಮದ್‌ ಎ. ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು  ನವೆಂಬರ್‌ 4, 1966 ರಂದು ನ್ಯೂಯಾರ್ಕ್‌ ‌ನಲ್ಲಿ ಮಾಡಿದ ಉಪನ್ಯಾಸ. ಇಂದ್ರದೇವನ ಕ್ರೋಧದಿಂದ ವ್ರಜವಾಸಿಗಳನ್ನು ರಕ್ಷಿಸಲು ಗೋವರ್ಧನ‌ ಗಿರಿಯನ್ನು ಎತ್ತಿದ   ಶ್ರೀ ಕೃಷ್ಣನ ಲೀಲೆಯನ್ನು ಕೊಂಡಾಡಲು ಗೋವರ್ಧನ‌ ಪೂಜೆಯನ್ನು ನೆರವೇರಿಸಲಾಗುತ್ತದೆ. ಗೋವರ್ನಧಾರಿ‌, ಗಿರಿಧಾರಿ ಶ್ರೀಕೃಷ್ಣನು  ಗೋವರ್ಧನ‌ ಗಿರಿಯನ್ನು ಎತ್ತಿದನು. ವೈದಿಕ ಸಾಹಿತ್ಯದ ಪ್ರಕಾರ, ಅನೇಕ ದೇವತೆಗಳಿದ್ದಾರೆ. ಗ್ರೀಕ್‌ ಪುರಾಣದಲ್ಲಿಯೂ ನೋಡಬಹುದು. ಜಲದೇವತೆ, ಸಿಡಿಲುಗುಡುಗಿನ ದೇವತೆಯ ಪ್ರಸ್ತಾಪವಿದೆ. ಇವು ಕಲ್ಪನೆಯಲ್ಲ. ಅವು ವಾಸ್ತವಾಂಶ.

    ಮತ್ತಷ್ಟು ಓದಿ…


  • ಪುರಿ ರಥಯಾತ್ರೆ

    ಪುರಿ ರಥಯಾತ್ರೆ

    ಜಗನ್ನಾಥ ಸ್ವಾಮಿಯ ಮಹಾಉತ್ಸವ ಸುಮಾರು 5000 ವರ್ಷಗಳ ಹಿಂದೆ ಅವತರಿಸಿದ ಶ್ರೀಕೃಷ್ಣನು ಒಮ್ಮೆ ಸೂರ್ಯಗ್ರಹಣದ ಸಂದರ್ಭದಲ್ಲಿ ಯಾಗಗಳನ್ನು ಆಚರಿಸಲು ದ್ವಾರಕೆಯನ್ನು ತೊರೆದು ಕುರುಕ್ಷೇತ್ರಕ್ಕೆ ಬರುತ್ತಾನೆ. ವೃಂದಾವನ ನಿವಾಸಿಗಳು ಆಗ ಅಲ್ಲಿಗೆ ಬರುತ್ತಾರೆ. ಮಾತ್ರವಲ್ಲ, ತಮ್ಮ ಆರಾಧ್ಯೆ ದೈವವನ್ನು ರಥದಲ್ಲಿ ಕುಳ್ಳಿರಿಸಿ ವೃಂದಾವನಕ್ಕೆ ಕರೆದೊಯ್ಯುತ್ತಾರೆ. ಇದರ ದ್ಯೋತಕವಾಗಿ ಪ್ರತಿ ವರ್ಷ ಪುರಿಯಲ್ಲಿ ರಥಯಾತ್ರೆ ನಡೆಯುತ್ತದೆ. ಈ ರಥಯಾತ್ರೆಯ ಕೆಲವು ರೋಚಕ, ಕುತೂಹಲಕಾರಿ ವಿವರಗಳನ್ನು ಓದುಗರಿಗಾಗಿ ನೀಡಿದ್ದಾರೆ ಎಂ.ಎ.ದಯಾಶಂಕರ. ರಥೋತ್ಸವ, ರಥಯಾತ್ರೆಗಳು ಭಾರತದ ಎಲ್ಲಾ ದೇವಾಲಯಗಳಲ್ಲೂ ಅನೂಚನವಾಗಿ ನಡೆದು ಬಂದಿದೆ.

    ಮತ್ತಷ್ಟು ಓದಿ…


  • ಜಗನ್ನಾಥ ಮಹಾತ್ಮೆ: ಧನಂಜಯನ ಗರ್ವಭಂಗ

    ಜಗನ್ನಾಥ ಮಹಾತ್ಮೆ: ಧನಂಜಯನ ಗರ್ವಭಂಗ

    1727ರ ಮಾತು. ಆಗ ಧನಂಜಯ ಮೆಹ್ತಾ ಎಂಬ ಹೆಸರು ಇಡೀ ಹೈದರಾಬಾದಿನಲ್ಲೇ ಜನಜನಿತ. ಮೆಹ್ತಾ ಆಗರ್ಭ ಶ್ರೀಮಂತ. ಮೂರು ತಲೆಮಾರು ಕುಳಿತು ತಿಂದರೂ ಕರಗದಷ್ಟು ಆಸ್ತಿ ಪಾಸ್ತಿ; ನಗ ನಾಣ್ಯ. ಆತ ಹೆಸರಿಗೆ ತಕ್ಕಂತೆ ಧನಂಜಯನೇ ಆಗಿದ್ದ! ತನ್ನ ಸಿರಿತನದ ಬಗ್ಗೆ ಸಹಜವಾಗಿಯೇ ಆತನಿಗೆ ಗರ್ವ ಮಿಶ್ರಿತ ಹೆಮ್ಮೆ ಇತ್ತು. ಇಂಥ ಧನಂಜಯ್ ಒಮ್ಮೆ ಕುಟುಂಬ ಸಮೇತನಾಗಿ ಜಗನ್ನಾಥ ಪುರಿ ಕ್ಷೇತ್ರಕ್ಕೆ ಬಂದ. ವೈಯಕ್ತಿಕವಾಗಿ ಹೇಳುವುದಾದರೆ ಧನಂಜಯನಿಗೆ ಜಗನ್ನಾಥನ ಮೇಲೆ ಹೇಳಿಕೊಳ್ಳುವಂಥ ನಂಬಿಕೆ ಏನೂ ಇರಲಿಲ್ಲ. ಅವನ

    ಮತ್ತಷ್ಟು ಓದಿ…


  • ಮಹಿಳೆಯರಿಗೊಂದು ಕಿವಿಮಾತು

    ಮಹಿಳೆಯರಿಗೊಂದು ಕಿವಿಮಾತು

    ಪದ್ಮಿನಿ ಬಾಲು ಅವರು ಮಹಿಳೆಯರು ತಮ್ಮ ದೈನಂದಿನ ಕ್ರಿಯೆಯಲ್ಲಿ ಆಧ್ಯಾತ್ಮಿಕ ಜೀವನವನ್ನು ಅಳವಡಿಸಿಕೊಳ್ಳುವ ಬಗ್ಗೆ ತಮ್ಮ ಅನುಭವವನ್ನು ಭಕ್ತಿವೇದಾಂತ ದರ್ಶನ ಓದುಗರಿಗೆ ನೀಡಿದ್ದಾರೆ. ಬೆಂಗಳೂರಿನ ಎಲ್ಲ ಬಡಾವಣೆಗಳಲ್ಲಿ ವಾಸಿಸುವ ಜನರೂ ಬಹಳ ಪುಣ್ಯವಂತರೆಂದು ನನ್ನ ಭಾವನೆ. ದೇವ ದೇವನು ಈ ಊರಿನ ಜನರ ಬಗ್ಗೆ ಬಹಳ ಕರುಣಾಮಯನು. ಇವರು ವಾಯು ಸೇವನೆಗೇ ಹೊರಡಲಿ, ಮನೆಗೆ ಸಾಮಾನುಗಳನ್ನು ತರುವ ಕೆಲಸದಲ್ಲಿರಲಿ, ಕಚೇರಿಗೆ ಸಮಯಕ್ಕೆ ತಲುಪಲು ಬಸ್ಸಿನ ಹಿಂದೆ ಓಡುತ್ತಿರಲಿ ಅಥವಾ ಮಕ್ಕಳ ಮನರಂಜಿಸಲು ಪಾರ್ಕಿಗೆ ತೆರಳಲಿ, ನೂರಾರು ದೇವಾಲಯಗಳಲ್ಲಿ

    ಮತ್ತಷ್ಟು ಓದಿ…


  • ಮೂರ್ಖ‌ ಸಂಸ್ಕೃತಿಯಲ್ಲಿ ಉನ್ನತ ಆನಂದ

    ಮೂರ್ಖ‌ ಸಂಸ್ಕೃತಿಯಲ್ಲಿ ಉನ್ನತ ಆನಂದ

    ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಮತ್ತು ಅವರ  ಕೆಲವು ಶಿಷ್ಯರ ನಡುವೆ  ದಕ್ಷಿಣ ಆಫ್ರಿಕಾದ ಜೊಹಾನಸ್‌ಬರ್ಗ್‌ ನಲ್ಲಿ, ಅಕ್ಟೋಬರ್‌ 18,  1975ರಲ್ಲಿ ನಡೆದ ಸಂವಾದ. ಶಿಷ್ಯ : ಶ್ರೀಲ ಪ್ರಭುಪಾದ, ಜನರು ಕೆಲವು ಬಾರಿ ಟೀಕಿಸುತ್ತಾ ಹೇಳುತ್ತಾರೆ, “ನಿಮ್ಮ ವೈದಿಕ ಸಂಸ್ಕೃತಿಯು ಭಾರತದಲ್ಲಿ ಅತ್ಯಂತ ದೃಢವಾಗಿ ಸ್ಥಾಪಿತವಾಗಿತ್ತು. ಆದರೆ ಭಾರತವನ್ನು ಈಗ ಬಡ ಮತ್ತು ದುರದೃಷ್ಟವೆಂದು ಪರಿಗಣಿಸುತ್ತಾರೆ. ಆದುದರಿಂದ ನಾವು ಏಕೆ ವೈದಿಕ ಸಂಸ್ಕೃತಿಯನ್ನು ಗೌರವಿಸಬೇಕು? “ ಶ್ರೀಲ ಪ್ರಭುಪಾದ : ವಿಷಯ ಏನೆಂದರೆ,

    ಮತ್ತಷ್ಟು ಓದಿ…


  • ಅಜಾಮಿಳನ ಜೀವನ ವೃತ್ತಾಂತ

    ಅಜಾಮಿಳನ ಜೀವನ ವೃತ್ತಾಂತ

    ಕಾನ್ಯಕುಬ್ಜ ಎನ್ನುವ ಹೆಸರಿನ ನಗರದಲ್ಲಿ ಅಜಾಮಿಳ ಎಂಬೊಬ್ಬ ಬ್ರಾಹ್ಮಣನಿದ್ದನು. ಒಂದು ಸಲ ಈ ಬ್ರಾಹ್ಮಣ ಅಜಾಮಿಳನು ಹೂವು ಹಣ್ಣುಗಳನ್ನು ಕುಯ್ದು ತರಲು ಅರಣ್ಯಕ್ಕೆ ಹೋದನು. ಅವನು ಮನೆಗೆ ಹಿಂತಿರುಗುತ್ತಿದ್ದಾಗಿನ ಹಾದಿಯಲ್ಲಿ ಒಂದೆಡೆ ಒಬ್ಬ ನಾಚಿಕೆಗೆಟ್ಟ ಕಾಮುಕನು ವೇಶ್ಯೆಯೊಬ್ಬಳನ್ನು ಬಲವಾಗಿ ಆಲಂಗಿಸಿಕೊಂಡು ಚುಂಬಿಸುತ್ತಿದ್ದುದನ್ನು ಕಂಡನು. ಅ ವೇಶ್ಯೆಯು ಪಾನಮತ್ತಳಾಗಿದ್ದಳು. ಹಾಗಾಗಿ ಕಣ್ಣುಗಳು ತಿರುಗುತ್ತಿದ್ದವು. ಆಕೆಯ ವಸ್ತ್ರಗಳು ಸರಿದಿದ್ದವು. ಅಜಾಮಿಳನು ಅವಳನ್ನು ನೋಡಿದಾಗ, ಅವನ ಎದೆಯಾಳದಲ್ಲಿ ಸುಪ್ತವಾಗಿದ್ದ ಲೈಂಗಿಕ ಬಯಕೆಗಳು ಎಚ್ಚೆತ್ತವು. ಒಬ್ಬ ಸ್ತ್ರೀಯನ್ನು ಕಣ್ಣೆತ್ತಿ ಕೂಡ ನೋಡಬಾರದೆಂಬ ಶಾಸ್ತ್ರವಚನಗಳೇನೋ

    ಮತ್ತಷ್ಟು ಓದಿ…


  • ಶ್ರೀಲ ಮಾಧವೇಂದ್ರ ಪುರಿ

    ಶ್ರೀಲ ಮಾಧವೇಂದ್ರ ಪುರಿ

    ಶ್ರೀಲ ಮಾಧವೇಂದ್ರ ಪುರಿ ಅವರು ಶ್ರೀ ಚೈತನ್ಯರ ಆಧ್ಯಾತ್ಮಿಕ ಗುರುಗಳಾದ ಅದ್ವೈತ ಆಚಾರ್ಯ ಮತ್ತು ಈಶ್ವರ ಪುರಿ ಅವರ ಗುರುಗಳು. ಮಾಧವೇಂದ್ರರಿಗೆ ಮಾಧ್ವ ಸಂಪ್ರದಾಯದಲ್ಲಿ ದೀಕ್ಷೆ ನೀಡಿದವರು ಶ್ರೀ ಲಕ್ಷ್ಮೀಪತಿ ತೀರ್ಥರು. ಇತರೆ ಆಚಾರ್ಯರಂತೆ ಮಾಧವೇಂದ್ರರೂ ಹಲವಾರು ವರ್ಷಗಳ ಕಾಲ ದೇಶ ಪರ್ಯಟನೆ ಮಾಡಿದರು. ಕೊನೆಗೆ ಬಹುಕಾಲ ಅವರು ವೃಂದಾವನದಲ್ಲಿ ನೆಲೆಸಿದರು. ಅಲ್ಲಿ ಅವರಿಗೆ ಗೋಪಾಲ ಎಂಬ ಕೃಷ್ಣ ವಿಗ್ರಹ ದೊರೆಯಿತು. ಈ ವಿಗ್ರಹವನ್ನು ಇಂದಿಗೂ ರಾಜಸ್ಥಾನದ ನಾಥದ್ವಾರದಲ್ಲಿ “ಶ್ರೀನಾಥಜಿ” ಎಂಬ ಹೆಸರಿನಲ್ಲಿ ಪೂಜಿಸಲಾಗುತ್ತಿದೆ. ಒಮ್ಮೆ ಮಾಧವೇಂದ್ರರು

    ಮತ್ತಷ್ಟು ಓದಿ…


  • ಬಗೆ ಬಗೆಯ ಮಾವಿನ ತಿನಿಸು

    ಬಗೆ ಬಗೆಯ ಮಾವಿನ ತಿನಿಸು

    ಮೇ, ಜೂನ್‌ ತಿಂಗಳೆಂದರೆ ಮಾವಿನ ಕಾಯಿ, ಹಣ್ಣುಗಳ ಕಾಲ. ಮಾವು ನಮ್ಮ ಗೃಹಿಣಿಯ ಅಚ್ಚುಮೆಚ್ಚಿನ ಮಿತ್ರ. ಚಟ್ನಿ, ತೊಕ್ಕು, ಬರ್ಫಿ, ಗೊಜ್ಜು, ಚಿತ್ರಾನ್ನ ಸೇರಿದಂತೆ ಮಾವಿನ ಕಾಯಿ-ಹಣ್ಣಿನಿಂದ ರುಚಿರುಚಿಯಾದ ಪದಾರ್ಥಗಳನ್ನು ತಯಾರಿಸುವ ವಿಧಾನವನ್ನು ನಮ್ಮ ಗೃಹಲಕ್ಷ್ಮಿಯರಿಗಾಗಿ ಇಲ್ಲಿ ನೀಡಿದ್ದೇವೆ. ಮಾವಿನ ಹಣ್ಣಿನ ಬರ್ಫಿ ಬೇಕಾಗುವ ಪದಾರ್ಥಗಳು: ತಯಾರಿಸುವ ವಿಧಾನ: ಸಿಪ್ಪೆ ತೆಗೆದ ಮಾವಿನ ಹಣ್ಣನ್ನು ಚೆನ್ನಾಗಿ ಕಿವುಚಿ ರಸ ಹಿಂಡಿ. ಗೊರಟು ಬಿಸಾಡಿ. ತೆಂಗಿನ ಕಾಯಿ ತುರಿದು ಮಿಕ್ಸಿಯಲ್ಲಿ ರುಬ್ಬಿ. ಕಾಯಿ ತುರಿಯನ್ನು ಹಿಂಡಿ ಹಾಲು ತೆಗೆದಿಟ್ಟುಕೊಳ್ಳಿ.

    ಮತ್ತಷ್ಟು ಓದಿ…


  • ಜೀವನದ ಉದ್ದೇಶ

    ಜೀವನದ ಉದ್ದೇಶ

    ಬಸ್‌ನಲ್ಲೇ ನಡೆಯಿತು ಕೃಷ್ಣಪ್ರಜ್ಞೆಯ ಪ್ರಚಾರ! ಸುವ್ಯಕ್ತ ನರಸಿಂಹದಾಸ ಬಸ್ಸನ್ನು ಹತ್ತಿ ಕುಳಿತುಕೊಂಡಾಗ ಮೈಸೂರಿನಿಂದ ಬೆಂಗಳೂರಿಗೆ ಮೂರು ಘಂಟೆಯ ಪ್ರಯಾಣ ಹೇಗೆ ಕಳೆಯುವುದು ಎಂಬ ಆಲೋಚನೆ ನನಗೆ ಬಂದಿತು. ಸ್ವಲ್ಪವೇ ವಸ್ತುಗಳಿರುವಂತಹ ಚೀಲವನ್ನು ನನ್ನ ಎಡಗೈಯಲ್ಲಿ ಹಿಡಿದುಕೊಂಡು ಬಲಗೈಯಲ್ಲಿ ಬಸ್ಸಿನ ಟಿಕೇಟನ್ನು ಹಿಡಿದುಕೊಂಡು ಕೊರಳಲ್ಲಿ ಜಪಮಾಲೆಯ ಚೀಲವನ್ನು ಹಾಕಿಕೊಂಡಿದ್ದೆ. ಬಸ್ಸನ್ನು ಏರಿ ಸುತ್ತಲೂ ನೋಡಿದೆ. ಹಿಂದಿನ ಸೀಟುಗಳಲ್ಲಿ ಜನ ಹೆಚ್ಚಿಗೆಯಿಲ್ಲದ್ದರಿಂದ ಅಲ್ಲಿಯೇ ಕುಳಿತುಕೊಳ್ಳಲು ನಿರ್ಧರಿಸಿದೆ. ನನ್ನ ಸಾಮಾನುಗಳ ಕೈಚೀಲವನ್ನು ಪಕ್ಕದಲ್ಲಿರಿಸಿಕೊಂಡೆ. ಆಗ ಸಮಯ 11 ಘಂಟೆಯಾಗಿತ್ತು. ಇನ್ನು ಮೂರು

    ಮತ್ತಷ್ಟು ಓದಿ…


  • ಆಂತರಿಕ ಬೆಳವಣಿಗೆ ಅಗತ್ಯ

    ಆಂತರಿಕ ಬೆಳವಣಿಗೆ ಅಗತ್ಯ

    ಸಂಸ್ಕೃತ ಮೂಲ – ಕಥಾಶತವಲ್ಲರೀ ಭಾಷಾನುವಾದ – ಪತಿತಪಾವನ ದಾಸ ಒಬ್ಬ ರಾಜನಿದ್ದ. ಅವನು ತನ್ನ ದೇಶವನ್ನು ಸುಖ ಸಮೃದ್ಧವನ್ನಾಗಿಸಲು ಬಯಸಿದ. ಅದಕ್ಕಾಗಿ ಅಹೋರಾತ್ರಿ ಶ್ರಮಿಸಿದ. ಪ್ರಜೆಗಳ ಸುಖ ಶಾಂತಿಗಾಗಿ ಅನೇಕ ವಿಧದ ವ್ಯವಸ್ಥೆಗಳನ್ನು ಅವನು ಮಾಡಿದನು. ಆದರೂ ಕೂಡ ಆ ದೇಶದಲ್ಲಿ ಅಪೇಕ್ಷಿತ ಪ್ರಮಾಣದಲ್ಲಿ ಸುಖ ಶಾಂತಿಗಳು ಕಾಣಿಸಲಿಲ್ಲ. ಆದ್ದರಿಂದ ರಾಜನು ತನ್ನ ಗುರುಗಳಾದ ಸನ್ಯಾಸಿಯೊಬ್ಬರ ಬಳಿ ಹೋದನು. “ಗುರುಗಳೇ, ಜನಗಳ ಸುಖಕ್ಕಾಗಿ ನಾನು ಅನೇಕ ವಿಧದ ವ್ಯವಸ್ಥೆ ಮಾಡಿದೆ. ಅನೇಕ ವಿಧದ ಅನುಕೂಲಗಳನ್ನು ಕಲ್ಪಿಸಿದೆ.

    ಮತ್ತಷ್ಟು ಓದಿ…


  • ಶ್ರೀಲ ಬಲದೇವ ವಿದ್ಯಾಭೂಷಣ

    ಶ್ರೀಲ ಬಲದೇವ ವಿದ್ಯಾಭೂಷಣ

    ಶ್ರೀಲ ಬಲದೇವ ವಿದ್ಯಾಭೂಷಣರು ಏಳನೇ ಶತಮಾನದ ಅಂತ್ಯ ಅಥವಾ ಎಂಟನೇ ಶತಮಾನದ ಆರಂಭದಲ್ಲಿ (ಹುಟ್ಟಿದ ದಿನ ಜೂನ್‌ 8) ಒರಿಸ್ಸಾದಲ್ಲಿ ಜನಿಸಿದರು. ಚಿಕ್ಕ ವಯಸ್ಸಿಗೇ ಸಂಸ್ಕೃತ, ವ್ಯಾಕರಣ, ಕಾವ್ಯ, ತರ್ಕಶಾಸ್ತ್ರಗಳನ್ನು ಅಭ್ಯಾಸ ಮಾಡಿದರು. ನಂತರ ಅವರು ಅಲ್ಪಕಾಲದಲ್ಲೇ ಭಾರತದ ಉದ್ದಗಲಕ್ಕೂ ಸಂಚರಿಸಿದರು. ಹೀಗೆ ದೇಶ ಪರ್ಯಟನೆ ಮಾಡುವಾಗ ಅವರಿಗೆ ಶ್ರೀ ಮಧ್ವಾಚಾರ್ಯರ ಅನುಯಾಯಿಗಳ ಪರಿಚಯವಾಯಿತು. ಆ ಮೂಲಕ ಅವರಿಗೆ ಮಾಧ್ವ ಸಿದ್ಧಾಂತದಲ್ಲಿ ಆಸಕ್ತಿ ಮೂಡಿತು. ಬಳಿಕ ಅವರು ಮಾಧ್ವರ ಬೋಧನೆಗಳ ಅಧ್ಯಯನದಲ್ಲಿ ತೊಡಗಿದರು. ಮಾಧ್ವ ಸಿದ್ಧಾಂತದ ಸಮಗ್ರ

    ಮತ್ತಷ್ಟು ಓದಿ…


  • ಶ್ರೀ ಅಕ್ಷೋಭ್ಯ ತೀರ್ಥರು

    ಶ್ರೀ ಅಕ್ಷೋಭ್ಯ ತೀರ್ಥರು

    –ಮಾಧವಾನಂದ ದಾಸ ಮಧ್ವಾಚಾರ್ಯರ ನೇರ ಅನುಯಾಯಿಯಾಗಿ ಮಾಧ್ವ ಮಠದ ಪೀಠಾಲಂಕಾರ ಮಾಡಿದ ಕೊನೆಯ ಆಚಾರ್ಯರು ಅಕ್ಷೋಭ್ಯ ತೀರ್ಥರು. ವ್ಯಾಸತೀರ್ಥರು ರಚಿಸಿರುವ ‘ಜಯತೀರ್ಥ ವಿಜಯ’ ಕೃತಿಯಲ್ಲಿ ಅಕ್ಷೋಭ್ಯ ತೀರ್ಥರ ಲೀಲೆಗಳ ಕುರಿತು ವರ್ಣಿಸಲಾಗಿದೆ. ಆ ಕಾಲದಲ್ಲಿ ಮಾಯಾವಾದವನ್ನು ಬಲವಾಗಿ ಪ್ರತಿಪಾದಿಸುತ್ತಿದ್ದ ಹೆಸರಾಂತ ಆಚಾರ್ಯರಾದ ವಿದ್ಯಾರಣ್ಯರಿಗೂ ಅಕ್ಷೋಭ್ಯ ತೀರ್ಥರಿಗೂ ಮುಖಾಮುಖಿ ಚರ್ಚೆ ನಡೆಯಿತು. ಆ ಸುದೀರ್ಘ, ಐತಿಹಾಸಿಕ ಚರ್ಚೆಯಲ್ಲಿ ವಿದ್ಯಾರಣ್ಯರನ್ನು ಅಕ್ಷೋಭ್ಯರು ಸೋಲಿಸಿದರು. ದೇವೋತ್ತಮ ಪರಮ ಪುರುಷ ಶ್ರೀಕೃಷ್ಣನೇ ಈ ಜಗದ ಪರಮ, ನಿತ್ಯ ಸತ್ಯ. ಉಳಿದೆಲ್ಲಾ ಜೀವಿಗಳು ಆತನ

    ಮತ್ತಷ್ಟು ಓದಿ…


  • ಏಕಾದಶಿ ಅಡುಗೆಗಳು

    ಏಕಾದಶಿ ಅಡುಗೆಗಳು

    ಬೇಯಿಸಿದ ಬಾಳೆ ಹಣ್ಣು ಬೇಕಾಗುವ ಪದಾರ್ಥಗಳು: ತಯಾರಿಸುವ ವಿಧಾನ: ಬಾಳೆ ಹಣ್ಣನ್ನು ಮೂರು ಇಂಚು ಉದ್ದದ ಚೂರುಗಳನ್ನಾಗಿ ಕತ್ತರಿಸಿ. ಸಕ್ಕರೆ, ಕಾಯಿ ತುರಿ, ಏಲಕ್ಕಿಯನ್ನು ಸಣ್ಣ ಉರಿಯಲ್ಲಿ ಬೇಯಿಸಿ. ಸಕ್ಕರೆ ಪಾಕವಾಗಿ ಕಾಯಿ ತುರಿಯೊಂದಿಗೆ ಚೆನ್ನಾಗಿ ಬೆರೆತು ಹದವಾದ ಮಿಶ್ರಣವಾಗುವ ತನಕ ಬೇಯಿಸಿ. ನಂತರ ಒಲೆಯಿಂದ ಕೆಳಗಿಳಿಸಿ. ಈಗ ಬಾಳೆ ಹಣ್ಣಿನ ಒಂದೊಂದೇ ಹೋಳನ್ನು ಪ್ರತ್ಯೇಕವಾಗಿ ತೆಗೆದುಕೊಂಡು, ನಾಜೂಕಾಗಿ ಸಕ್ಕರೆ-ಕಾಯಿ ತುರಿ ಪಾಕದೊಳಕ್ಕೆ ಮುಳುಗಿಸಿ. ಹಾಗೆಯೇ ತೆಳುವಾದ ಕಡ್ಡಿಯ ಸಹಾಯದಿಂದ ಬಾಳೆ ಹಣ್ಣುನ್ನು ಹೊರ ತೆಗೆದು, ಇನ್ನೊಂದು

    ಮತ್ತಷ್ಟು ಓದಿ…


  • ಪಶ್ಚಾತ್ತಾಪದ ಪ್ರಾಯಶ್ಚಿತ್ತ

    ಪಶ್ಚಾತ್ತಾಪದ ಪ್ರಾಯಶ್ಚಿತ್ತ

    ದಕ್ಷಯಜ್ಞ : ಭಾಗ-2 ವೇದವ್ಯಾಸ ವಿರಚಿತ ಭಾಗವತವು 12 ಸ್ಕಂಧಗಳ, 18000 ಶ್ಲೋಕಗಳಿಂದ ಕೂಡಿದ್ದು ನಿಗಮ ಕಲ್ಪತರೋರ್‌ ಗಲಿತಂ ಫಲಂ ವೇದವೆಂಬ ಕಲ್ಪವೃಕ್ಷದಿಂದ ಹುಟ್ಟಿದ ಮಾಗಿದ ಫಲ ಎಂದೇ ಬಣ್ಣಿಸಲಾಗಿದೆ. ಈ ಲೇಖನ ಮಾಲಿಕೆಯಲ್ಲಿ ಶುಕ ಮುಖದಿಂದ ಹರಿದ ಭಾಗವತವನ್ನು ಆಧರಿಸಿದ ಕಥೆಗಳನ್ನು ಓದುತ್ತೀರಿ. ಪ್ರಸ್ತುತ ಕಥೆಯನ್ನು ಭಾಗವತದ ನಾಲ್ಕನೇ ಸ್ಕಂಧದ ಒಂದರಿಂದ ಏಳನೆಯ ಅಧ್ಯಾಯಗಳನ್ನು ಆಧರಿಸಿ ಯುವ ಸಾಹಿತಿ ಡಾ.ಬಿ.ಆರ್‌.ಸುಹಾಸ್‌ರರವರು ಭಕ್ತಿವೇದಾಂತ ದರ್ಶನದ ಓದುಗರಿಗೆ ಬರೆದುಕೊಟ್ಟಿದ್ದಾರೆ. ಮೈತ್ರೇಯರು ಹೇಳುತ್ತಿದ್ದ ಕಥೆಯನ್ನು ಕೇಳಿ ವಿದುರನಿಗೆ ಆಶ್ವರ್ಯವಾಯಿತು. “ಗುಣವಂತರಲ್ಲಿ

    ಮತ್ತಷ್ಟು ಓದಿ…