-
ಗದುಗಿನ ವೀರನಾರಾಯಣ

-ಪತಿತಪಾವನ ದಾಸ ಪ್ರಸಿದ್ಧ ಪುಣ್ಯ ಕ್ಷೇತ್ರವಾದ ಗದಗವು ಕರ್ನಾಟಕದ ಮುಖ್ಯ ಪ್ರವಾಸಿ ತಾಣವೂ ಹೌದು. ಇಲ್ಲಿನ ಪ್ರಮುಖ ದೇವಸ್ಥಾನವನ್ನು ಶ್ರೀ ವಿಷ್ಣುವಿಗೆ ಅರ್ಪಿಸಲಾಗಿದ್ದು, ಭಗವಂತನು ವೀರ ನಾರಾಯಣನ ರೂಪದಲ್ಲಿ ಕಾಣಿಸಿಕೊಂಡಿದ್ದಾನೆ. ಸ್ಥಳ ಪುರಾಣದ ಪ್ರಕಾರ, ಬ್ರಹ್ಮನ ಮಾನಸ ಪುತ್ರರಾದ ಕೃತಮುನಿಗಳು ಇಲ್ಲಿ ಧ್ಯಾನ, ಯಜ್ಞ ಮಾಡಿಕೊಂಡಿದ್ದರು. ಆದರೆ ದುಷ್ಟರು ಅದಕ್ಕೆ ಅಡ್ಡಿ ಉಂಟುಮಾಡುತ್ತಿದ್ದರು. ಇದನ್ನು ತಾಳಲಾರದೆ ಮುನಿಗಳು ಹಿಮಾಲಯ ಪರ್ವತಕ್ಕೆ ಹೋಗಿ ಉಗ್ರ ತಪಸ್ಸು ಕೈಗೊಂಡರು. ಗದುಗಿನ ನಾರಾಯಣನನ್ನು ಧ್ಯಾನಿಸಿದರು. ಆಗ ಗದುಗಿನ ನಾರಾಯಣ ಪ್ರತ್ಯಕ್ಷನಾಗಿ “ನಿನಗೇನು…
