-
ಪರಮ ಸತ್ಯ, ಪರಮಾನಂದ ಎಲ್ಲವೂ ಅವನೇ

ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಅವರ ಉಪನ್ಯಾಸ, ಸ್ಥಳ: ವೃಂದಾವನ, ದಿನಾಂಕ: ನವೆಂಬರ್ 22, 1928 ಈ ಪರಮ ಪವಿತ್ರ ಸ್ಥಳದಲ್ಲಿ ನಿಂತುಕೊಳ್ಳುವ ಅರ್ಹತೆ ಖಂಡಿತಾ ನನಗಿಲ್ಲ. ಆದರೂ ಶ್ರೀ ಗೌರಸುಂದರರ ಆಶಿರ್ವಾದ, ನಿಮ್ಮೆಲ್ಲರ ಶುಭ ಹಾರೈಕೆಗಳ ಫಲವಾಗಿ ನಾನಿಲ್ಲಿ ನಿಂತು ಮಾತನಾಡುತ್ತಿದ್ದೇನೆ. ತನ್ಮೂಲಕ ಶ್ರೀ ಗೌರಾಂಗರಿಗೆ, ಅವರ ಶುದ್ಧ ಭಕ್ತಿರಿಗೆ ಸೇವೆ ಸಲ್ಲಿಸುತ್ತಿದ್ದೇನೆ. ಶ್ರೀ ಗೌರಾಂಗರ ಶುದ್ಧಭಕ್ತರ ದೃಷ್ಟಿ ಮಾತ್ರದಿಂದ ನಮ್ಮ ಬದುಕಿನ ಎಲ್ಲಾ ಆಸೆ, ಆಕಾಂಕ್ಷೆ, ಗುರಿ, ಭರವಸೆ, ಧ್ಯೇಯೋದ್ದೇಶಗಳು ಈಡೇರುತ್ತವೆ. ಅಂಥ ಶುದ್ಧ ಭಕ್ತರಿಗೆ
-
ಭಗವಂತನ ರೂಪ: ವಾಸ್ತವ ಅಥವಾ ಭ್ರಮೆ?

ಭಗವಂತನು ಆಕಾರನೋ ನಿರಾಕಾರನೋ ಎನ್ನುವುದರ ಬಗ್ಗೆ ಜನಸಾಮಾನ್ಯರಲ್ಲಿ ಕುತೂಹಲ ಮೂಡುವುದು ಸಹಜ. ಕೃಷ್ಣನ ಚಿತ್ರವನ್ನು ನೋಡಿದಾಗ ಇಂತಹ ಪ್ರಶ್ನೆ ಸಹಜವಾಗಿ ಏಳುತ್ತದೆ. ಭೂಮಿಯ ಮೇಲಿರುವ ಸಕಲ ಜೀವಿಗಳಿಗೂ ತಂದೆ ಎನಿಸಿರುವ ಭಗವಂತನ ಆಕಾರದ ಬಗ್ಗೆ ನಮಗೆ ಪಾಶ್ಚಾತ್ಯ ತತ್ವಶಾಸ್ತ್ರದಿಂದ ಸಿಗುವ ಮಾಹಿತಿ ಅತ್ಯಲ್ಪವಾದದ್ದು. ದೇವರು ಆಕಾರ ಸ್ವರೂಪ ಉಳ್ಳವನು ಎಂದು ಪಾಶ್ಚಾತ್ಯ ತತ್ವಶಾಸ್ತ್ರ ಹೇಳುತ್ತದೆಯಾದರೂ ಅದರಿಂದ ನಮಗೆ ಸ್ಪಷ್ಟ ಮಾಹಿತಿ ಲಭ್ಯವಾಗುವುದಿಲ್ಲ. ಪರಮ ಪದದ ಬಗ್ಗೆ ಚಿಂತಿಸಿದಷ್ಟೂ, ಈ ಕಾರಣಕ್ಕಾಗಿಯೇ ಭಗವಂತ ನಿರಾಕಾರ ಸ್ವರೂಪನೂ, ಶೂನ್ಯನೂ ಎಂಬ
-
ನಿಮಿ– ವಸಿಷ್ಟರ ಶಾಪ– ಪ್ರತಿಶಾಪ!

ವೇದವ್ಯಾಸ ವಿರಚಿತ ಭಾಗವತವು 12 ಸ್ಕಂಧಗಳ, 18,000 ಶ್ಲೋಕಗಳಿಂದ ಕೂಡಿದ್ದು – ನಿಗಮ ಕಲ್ಪ ತರೋರ್ ಗಲಿತಂ ಫಲಂ – ವೇದವೆಂಬ ಕಲ್ಪವೃಕ್ಷದಿಂದ ಹುಟ್ಟಿದ ಮಾಗಿದ ಫಲ ಎಂದೇ ಬಣ್ಣಿಸಲಾಗಿದೆ. ಈ ಲೇಖನ ಮಾಲಿಕೆಯಲ್ಲಿ ಶುಕ ಮುಖದಿಂದ ಹರಿದ ಭಾಗವತವನ್ನು ಆಧರಿಸಿದ ಕಥೆಗಳನ್ನು ಓದುತ್ತೀರಿ. ಪ್ರಸ್ತುತ ಕಥೆಯನ್ನು ಭಾಗವತದ ಒಂಭತ್ತನೇ ಸ್ಕಂಧದ 13ನೇ ಅಧ್ಯಾಯವನ್ನು ಆಧರಿಸಿ ಖ್ಯಾತ ಸಾಹಿತಿ “ಚಿರಂಜೀವಿ’ ಅವರು ನಿಮಿ-ವಸಿಷ್ಟರ ಶಾಪ- ಪ್ರತಿಶಾಪ ಕುರಿತ ಕುತೂಹಲಕಾರಿ ಕಥಾನಕವನ್ನು ಭಕ್ತಿವೇದಾಂತ ದರ್ಶನ’ದ ಓದುಗರಿಗೆ ಬರೆದುಕೊಟ್ಟಿದ್ದಾರೆ. ‘ವೈವಸ್ಪತ
-
ಶ್ಯಮಂತಕ ಮಣಿಯ ಕಥೆ

ರಾಜಾ ಸತ್ರಾಜಿತ ಸೂರ್ಯದೇವನ ಪರಮ ಭಕ್ತ. ಅತ್ಯಂತ ಅಪರೂಪವಾದ ಶ್ಯಮಂತಕ ಮಣಿಯನ್ನು ಆತ ಸೂರ್ಯದೇವನಿಂದ ಪಡೆದುಕೊಂಡ. ಆ ಮಣಿಯನ್ನು ಒಂದು ಸರಕ್ಕೆ ಕಟ್ಟಿಕೊಂಡು…
-
ಕೃಷ್ಣ ಪಾಕಶಾಲೆ

ಸೂಪ್ ತರಕಾರಿ ಸೂಪ್ ಬೇಕಾಗುವ ಸಾಮಗ್ರಿಗಳು: ಆಲೂಗಡ್ಡೆ – 2 ಕ್ಯಾರೆಟ್ – 2 ಟೊಮೊಟೊ – 3 ಹಸಿಬಟಾಣಿ ಕಾಳು – ½ ಬಟ್ಟಲು ಕೊತ್ತಂಬರಿ ಸೊಪ್ಪು – ½ ಬಟ್ಟಲು ಚಕ್ಕೆ – ಚಿಕ್ಕ ಚೂರು ಲವಂಗ – 2 ಬೆಣ್ಣೆ – 2 ಟೇಬಲ್ ಚಮಚ ತುಪ್ಪ – 2 ಟೇಬಲ್ ಚಮಚ ಕಾಳು ಮೆಣಸಿನ ಪುಡಿ – 4 ಚಿಟಿಕೆ ಉಪ್ಪು – ರುಚಿಗೆ ತಕ್ಕಷ್ಟು ಸಕ್ಕರೆ – ½ ಚಮಚ
-
ಭೌಮಾಸುರ ವಧೆ ಮತ್ತು ಪಾರಿಜಾತ ಪ್ರಕರಣ

ಭೂದೇವಿಯ ಮಗ ನರಕಾಸುರ. ಅವನಿಗೆ ಭೌಮಾಸುರ ಎಂಬ ಹೆಸರೂ ಇತ್ತು. ವರುಣದೇವನ ಛತ್ರಿಯನ್ನು ಅದಿತಿದೇವಿಯ ಬೆಂಡೋಲೆಗಳನ್ನು ಮತ್ತು ಉಪದೇವತೆಗಳೆಲ್ಲರ ಕ್ರೀಡಾ ಪ್ರದೇಶವಾಗಿದ್ದ ಮಣಿ ಪರ್ವತವನ್ನೂ ಕದ್ದೊಯ್ದಿದ್ದ. ಇಂದ್ರದೇವ ದ್ವಾರಕೆಗೆ ಬಂದು ಈ ರಾಕ್ಷಸನ ದುರ್ನಡವಳಿಕೆಗಳನ್ನು ಶ್ರೀಕೃಷ್ಣನಿಗೆ ವಿವರಿಸಿದ. ರಾಣಿ ಸತ್ಯಭಾಮೆಯೊಂದಿಗೆ ಗರುಡನ ಮೇಲೆ ಕುಳಿತುಕೊಂಡು, ಶ್ರೀ ಕೃಷ್ಣ ನರಕಾಸುರನ ರಾಜಧಾನಿಗೆ ಪ್ರಯಾಣ ಬೆಳೆಸಿದ. ನಗರದ ಹೊರಗೆ ಮೈದಾನದಲ್ಲಿ ತನ್ನನ್ನು ತಡೆದ ಮುರ ಎನ್ನುವ ರಾಕ್ಷಸನನ್ನು ಕೃಷ್ಣ ತನ್ನ ಸುದರ್ಶನ ಚಕ್ರದಿಂದ ಕೊಂದುಹಾಕಿದ. ಆಮೇಲೆ ಆ ಮುರನ ಏಳು
-
ಶ್ರೀ ರಾಮಚಂದ್ರನ ಲೀಲೆಗಳು!

ವೇದವ್ಯಾಸ ವಿರಚಿತ ಭಾಗವತವು 12 ಸ್ಕಂದಗಳ, 18,000 ಶ್ಲೋಕಗಳಿಂದ ಕೂಡಿದ್ದು ನಿಗಮ ಕಲ್ಪ ತರೋರ್ ಗಲಿತಂ ಫಲಂ – ವೇದವೆಂಬ ಕಲ್ಪವೃಕ್ಷದಿಂದ ಹುಟ್ಟಿದ ಮಾಗಿದ ಫಲ ಎಂದೇ ಬಣ್ಣಿಸಲಾಗಿದೆ. ಈ ಲೇಖನ ಮಾಳಿಕೆಯಲ್ಲಿ ಶುಕ ಮುಖದಿಂದ ಹರಿದ ಭಾಗವತವನ್ನು ಆಧರಿಸಿದ ಕಥೆಗಳನ್ನು ಓದುತ್ತೀರಿ. ಪ್ರಸ್ತುತ ‘ಶ್ರೀ ರಾಮಚಂದ್ರನ ಲೀಲೆಗಳು’ ಎಂಬ ಕಥೆಯನ್ನು ಭಾಗವತದ ಒಂಭತ್ತನೇ ಸ್ಕಂದದ 10ನೇ ಅಧ್ಯಾಯವನ್ನು ಆಧರಿಸಿ ಖ್ಯಾತ ಸಾಹಿತಿ ‘ಚಿರಂಜೀವಿ’ ಅವರು ಭಕ್ತಿವೇದಾಂತ ದರ್ಶನದ ಓದುಗನಿಗೆ ಬರೆದುಕೊಟ್ಟಿದ್ದಾರೆ. ನೈಮಿಷಾರಣ್ಯದಲ್ಲಿ ಇನ್ನೊಂದು ಮುಂಜಾವು ಪ್ರಾರಂಭವಾಗಿತ್ತು.
-
ಕೃಷ್ಣ ಪಾಕಶಾಲೆ

ಅವರೆಕಾಳು ಪಲಾವ್ ಬೇಕಾಗುವ ಸಾಮಗ್ರಿಗಳು: ಹಿದುಕಿದ ಅವರೆಕಾಳು – 250 ಗ್ರಾಂ ಬಾಸುಮತಿ ಅಕ್ಕಿ – 500 ಗ್ರಾಂ ತುಪ್ಪ – 5-6 ದೊಡ್ಡ ಚಮಚ ಮೊಸರು – 8-10 ದೊಡ್ಡ ಚಮಚ ಒಣದ್ರಾಕ್ಷಿ – 25 ಗ್ರಾಂ ಗೋಡಂಬಿ – 25 ಗ್ರಾಂ ನೆನೆಸಿ ಸಿಪ್ಪೆ ತೆಗೆದ ಬಾದಾಮಿ – 25 ಗ್ರಾಂ ಹಾಲು – 100 ಮಿಲಿ ಲೀಟರ್ ಕೇಸರಿ ಎಸಳು – ¼ ಚಮಚ ಮಸಾಲೆಗೆ ಬೇಕಾಗುವ ಸಾಮಗ್ರಿಗಳು: ಲವಂಗ – 5
-
ಭಗವದ್ಗೀತಾ ಯಥಾರೂಪ

ಗಣ್ಯರು ಕಂಡಂತೆ… ಎಲ್ಲರಿಗೂ ಮಾರ್ಗದರ್ಶಿ -ನ್ಯಾ.ಮೂ.(ನಿವೃತ್ತ) ಎಂ.ರಾಮಾ ಜೋಯಿಸ್ ಆಧ್ಯಾತ್ಮಿಕತೆಯ ಆಧಾರದ ಮೇಲೆ ರಚಿತವಾದ “ಧರ್ಮ”ವನ್ನು ಅನುಸರಿಸುವುದೇ ಎಲ್ಲಾ ಮಾನವರಿಗೆ ಸುಖ ಮತ್ತು ಶಾಂತಿಯನ್ನು ಪಡೆಯಲು ಇರುವ ಏಕೈಕ ಮಾರ್ಗ. ಇದು ಮಾನವ ಕೋಟಿಗೆ ಭಾರತದ ಅತ್ಯಮೂಲ್ಯ ಕೊಡುಗೆ. ವಿಶಾಲವಾದ “ಧರ್ಮ”ದ ಸಾರವನ್ನು ಒಂದೇ ಕಡೆ ಸುಲಭವಾಗಿ ಎಲ್ಲ ಮಾನವರಿಗೂ ಸಿಗುವಂತೆ ಮಾಡಿರುವ ಗ್ರಂಥ ಭಗವದ್ಗೀತೆ. ಅದು ಮಾನವನಿಗೆ ದಾರಿ ದೀಪ. ಇದನ್ನು ಪ್ರತಿಯೊಬ್ಬರಿಗೂ ಮನದಟ್ಟಾಗುವ ರೀತಿಯಲ್ಲಿ ವಿವರಿಸುವ ಮಹತ್ಕಾರ್ಯವನ್ನು ಶ್ರೀಲ ಪ್ರಭುಪಾದರು ಮಾಡಿದ್ದಾರೆ. ಅದನ್ನು ವಿವಿಧ
-
ಮುಚುಕುಂದ ಮುಕ್ತಿ

ತನ್ನ ಕುಟುಂಬದವರೆಲ್ಲರನ್ನೂ ದ್ವಾರಕೆಯಲ್ಲಿ ಕ್ಷೇಮವಾಗಿ ಇರಿಸಿ, ಶ್ರೀಕೃಷ್ಣ ಮಥುರಾ ಪಟ್ಟಣಕ್ಕೆ ಹೊರಟ. ಅವನು ಒಬ್ಬ ಉದಿಸುವ ಚಂದ್ರನ ಹಾಗೆ ಕಾಣಿಸುತ್ತಿದ್ದ. ಆಗ ಕಾಲಯವನ ಎನ್ನುವ ರಾಕ್ಷಸ, ಶ್ರೀಕೃಷ್ಣನನ್ನು ನೋಡಿದ. ನಾರದಮುನಿಗಳು ವರ್ಣಿಸಿರುವ ದೇವೋತ್ತಮ ಪರಮ ಪುರುಷನ ಎಲ್ಲ ಲಕ್ಷಣಗಳನ್ನೂ ಪ್ರಜ್ವಲಿಸುವ ಶರೀರವ ಈ ಕೃಷ್ಣನಲ್ಲಿ ಕಂಡ. ಆ ರಾಕ್ಷಸನಿಗೆ ಇವನೇ ದೇವೋತ್ತಮ ಪರಮ ಪುರುಷ ಎನ್ನುವುದು ಅರ್ಥವಾಯಿತು. ಕೃಷ್ಣನ ಹತ್ತಿರ ಈಗ ಯಾವ ಆಯುಧಗಳೂ ಇಲ್ಲದಿರುವುದನ್ನು ನೋಡಿ, ಕಾಲಯವನ ತನ್ನ ಆಯುಧಗಳನ್ನೆಲ್ಲ ಪಕ್ಕಕ್ಕೆ ಎಸೆದ. ಅವನೊಂದಿಗೆ ಯುದ್ಧ
-
ಶ್ರೀಪಾದ ನಿಂಬಾರ್ಕಾಚಾರ್ಯ

ಶ್ರೀ ನಿಂಬಾರ್ಕ ಆಚಾರ್ಯರು ಕುಮಾರ ಸಂಪ್ರದಾಯದ ಸಾಲಿನಲ್ಲಿ ಬಂದವರು. ಇವರು ಸುಮಾರು 11 ಮತ್ತು 12ನೇ ಶತಮಾನದ ಮಧ್ಯೆ ಬಾಳಿ ಬದುಕಿದವರು. ದಕ್ಷಿಣ ಭಾರತದ ಇಂದಿನ ಮುರುಗರ ಪಟ್ಟಂ ಎಂಬ ಊರಿನಲ್ಲಿ ಅರುಣಿ ಮತ್ತು ಜಯಂತಿ ಎಂಬ ದ್ರಾವಿಡ ಶ್ರದ್ಧಾಭಕ್ತಿಗಳುಳ್ಳ ಬ್ರಾಹ್ಮಣ ದಂಪತಿಗೆ ಇವರು ಜನಿಸಿದರು. ಅವರು ತೈಲಾಂಗ ಜನಾಂಗದ ಕ್ರಮದಲ್ಲಿ ಬಂದವರಾಗಿದ್ದರು. ನಿಂಬಾರ್ಕರು ತ್ರಿದಂಡಿ ಸಂಪ್ರದಾಯದ ಮಹಾ ತಪಸ್ವಿಯಾಗಿದ್ದರು. ಇವರು ದ್ವೈತಾದ್ವೈತವಾದಕ್ಕೆ ಅನುಗುಣವಾಗಿ ಬಹಳಷ್ಟು ಗ್ರಂಥಗಳನ್ನು ರಚಿಸಿದ್ದಾರೆ. ಇವರು ತಮ್ಮ ಭಕ್ತಿಯುತವಾದ ಜೀವನವನ್ನು ವೃಂದಾವನದ ಗೋವರ್ಧನ
-
ಕಾರ್ತಿಕ ಮಾಸದ ಮಹಾತ್ಮೆ

ಭುವಿಗೆ ಬೆಳಕು ನೀಡಿದ ಕೃಷ್ಣನ ಎರಡು ಲೀಲೆಗಳು -ಡಾ|| ಕೆ.ವೈ.ಬಾಲರಾಜ್ ಕಾರ್ತಿಕ ಮಾಸ ವೆಂದರೆ ಶ್ರೀಕೃಷ್ಣನು ಬಾಲ ಲೀಲೆಗಳಿಗೆ ಸಾಕ್ಷಿಯಾದ, ವೃಂದಾವನದ ಪವಿತ್ರ ಭೂಮಿಯ ಮೇಲೆ ಬಹು ಸಂಭ್ರಮದ ಕಾಲ. 64 ಚದರ ಮೈಲಿ ವಿಸ್ತೀರ್ಣ ಹೊಂದಿರುವ ವೃಂದಾವನದ ಈ ಪವಿತ್ರ ಭೂಮಿಯ ಮೇಲೆ ಸುಮಾರು 5,000 ದೇವಾಲಯಗಳಿವೆ. ಈ ದೇವಾಲಯಗಳಲ್ಲಿ ಕಾರ್ತಿಕ ಮಾಸದಲ್ಲಿ ಹಬ್ಬದ ಸಡಗರ. ಆಗ ಸಾವಿರಾರು ವೈವಿಧ್ಯಮಯ ಭಕ್ತರು ಇಲ್ಲಿ ಸೇರುತ್ತಾರೆ. ಕಾರ್ತಿಕ ಮಾಸದ ಪ್ರತಿ ದಿನ ಸಾಯಂಕಾಲದಲ್ಲಿ ಎಲ್ಲ ದೇವಾಲಯಗಳಲ್ಲೂ ನೂರಾರು
-
ಧೃತರಾಷ್ಟ್ರನ ಗೃಹತ್ಯಾಗ

ಪಾಂಡವರ ಸೋದರ ಮಾವನಾದ ಮಹಾತ್ಮ ವಿದುರನು ಕುರುಕ್ಷೇತ್ರದಲ್ಲಿ ನಡೆದ ಘೋರ ಯುದ್ಧದಲ್ಲಿ ಪಾಲುಗೊಂಡಿರಲಿಲ್ಲ. ಯುದ್ಧ ನಡೆಯುತ್ತಿದ್ದ ಕಾಲದಲ್ಲಿ ವಿದುರನು ತೀರ್ಥಯಾತ್ರೆ ಕೈಗೊಂಡಿದ್ದ. ಆತ್ಮದ ಗಮ್ಯಸ್ಥಾನ ಯಾವುದೆಂಬುದನ್ನು ಮೈತ್ರೇಯ ಋಷಿಗಳಿಂದ ವಿದುರನು ಜ್ಞಾನ ಸಂಪಾದಿಸಿದ್ದು ಈ ಯಾತ್ರೆಯ ಕಾಲದಲ್ಲೇ. ಯಾತ್ರೆ ಮುಗಿಸಿಕೊಂಡು ವಿದುರನು ಹಸ್ತಿನಾಪುರಕ್ಕೆ ಹಿಂತಿರುಗಿದ. ವಿದುರನು ಅರಮನೆಗೆ ಹಿಂತಿರುಗಿದ್ದನ್ನು ಕಂಡ ಅಲ್ಲಿನ ನಿವಾಸಿಗಳು ಹರ್ಷದಿಂದ ಅವನನ್ನು ಸುತ್ತುವರಿದರು. ವಿದುರನು ತಮ್ಮೊಡನೆ ಇರಲಿಲ್ಲವಾದ್ದರಿಂದಲೂ, ಬಹುಕಾಲ ಅವನನ್ನು ಬಿಟ್ಟಿದ್ದುದರಿಂದಲೂ ಅರಮನೆಯ ನಿವಾಸಿಗಳು ಪ್ರೀತಿ ಉಕ್ಕಿ ಬಂದು ರೋದಿಸಿದರು. ತರುವಾಯ ರಾಜಾ
-
ಕೃಷ್ಣ ಪಾಕಶಾಲೆ

ಗುಜರಾತಿ ವಿಶೇಷ ಗುಜರಾತ್ ಕೃಷ್ಣನ ದ್ವಾರಕೆಯನ್ನು ಹೊಂದಿರುವ ರಾಜ್ಯ. ಕೃಷ್ಣಭಕ್ತಿಗೆ ಇಲ್ಲಿ ಭಾರಿ ಪ್ರಾಶಸ್ತ್ಯ. ಅನೇಕ ಮಹಾನ್ ಕೃಷ್ಣಭಕ್ತರು ಗುಜರಾತಿನಲ್ಲಿ ಅವತರಿಸಿದರು. ಅವರು ತಮ್ಮ ವಿಶಿಷ್ಟ ಪಾಕ ಶೈಲಿಗೆ ಪ್ರಸಿದ್ಧರು. ಇಲ್ಲಿ ಕೆಲವು ವಿಶೇಷ ಗುಜರಾತಿ ಖಾದ್ಯಗಳನ್ನು ತಯಾರಿಸುವ ವಿಧಾನವನ್ನು ನೀಡಿದ್ದೇವೆ. ಗುಜರಾತಿ ಕಡಿ ಬೇಕಾಗುವ ಸಾಮಗ್ರಿಗಳು: ಕಡಲೆ ಹಿಟ್ಟು – ಎರಡು ಚಮಚ ಮೊಸರು – ಎರಡು ಕಪ್ ಮೆಣಸು–ಶುಂಠಿ ಮಿಶ್ರಣ – ಒಂದು ಚಮಚ ಕರಿಬೇವಿನ ಸೊಪ್ಪು ಸಕ್ಕರೆ – ಎರಡು ಚಮಚ (ಅಥವಾ
-
ಪರೀಕ್ಷಿತ ರಾಜನ ಜನನ

ಕೋಟಿಗಟ್ಟಲೆ ಯೋಧರು ಹತರಾದ ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರು ಹದಿನೆಂಟು ದಿನಗಳಲ್ಲಿ ವಿಜಯ ಸಾಧಿಸಿದರು. ಪ್ರಭುಗಳ ಪ್ರಭುವಾದ ಶ್ರೀಕೃಷ್ಣನು ಪಾಂಡವರ ಕಡೆ ಇದ್ದುದರಿಂದ ಇದು ಸಾಧ್ಯವಾಯಿತು. ಧರ್ಮ ಪ್ರಭುತ್ವವನ್ನು ಪುನರ್ ಸ್ಥಾಪಿಸುವ ಪ್ರಭುವಿನ ಧ್ಯೇಯವು ಕಾರ್ಯಗತವಾಯಿತು. ಹಾಗಾಗಿ ಪ್ರಭುವು ತನ್ನ ಮುಂದಿನ ಪ್ರಯಾಣಕ್ಕೆ ಸಿದ್ಧನಾಗತೊಡಗಿದ. ಪ್ರಭುವು ದ್ವಾರಕೆಗೆ ಹೊರಡಲು ರಥದಲ್ಲಿ ಕುಳಿತೊಡನೆಯೇ ಉತ್ತರೆಯು ಭಯದಿಂದ ತನ್ನೆಡೆಗೆ ಧಾವಿಸಿ ಬರುತ್ತಿದ್ದುದನ್ನು ಕಂಡನು. ಉತ್ತರೆಯು ನುಡಿದಳು: “ಹೇ ಪ್ರಭುಗಳ ಪ್ರಭುವೆ, ನನ್ನನ್ನು ಕಾಪಾಡು, ಬೆಂಕಿಯನ್ನು ಉಗುಳುತ್ತಿರುವ ಬಾಣವೊಂದು ನನ್ನೆಡೆಗೆ ವೇಗದಿಂದ ಧಾವಿಸಿ
-
ಬಲರಾಮ ಲೀಲೆಗಳು

ದ್ವಿವಿದ ವಾನರನ ಸಂಹಾರ -ಡಾ| ಬಿ.ಆರ್. ಸುಹಾಸ್ ಅದೊಂದು ಸುಂದರ ದಿನ. ದಿನಕರನು ತನ್ನ ಹಿತಕರವಾದ ಎಳೆಯ ಕಿರಣಗಳನ್ನು ಬೀರಿ ಕಮಲ ಪುಷ್ಪಗಳನ್ನು ಮೆಲ್ಲನೆ ಅರಳಿಸಿದ್ದ. ಇನಿದನಿಯ ಪಕ್ಷಿಗಳು ಚಿಲಿಪಿಲಿಗುಟ್ಟುತ್ತಾ ಸಂತಸದ ಹಾಡನ್ನು ಹಾಡುತ್ತಿದ್ದವು. ಸಿಹಿಯಾದ ಮಕರಂದವನ್ನು ಹೂಗಳ ಮಧ್ಯದಿಂದ ಹೀರುತ್ತಾ ಭ್ರಮರಗಳು ಝೇಂಕರಿಸುತ್ತಿದ್ದವು. ಝುಳು ಝುಳು ಹರಿಯುತ್ತಿದ್ದ ನದಿ ಸರೋವರಗಳು, ವಿಕಸಿತ ಪುಷ್ಪಗಳೆಂಬ ಆಭರಣಗಳಿಂದ ಮೆರೆಯುತ್ತಿದ ಮರಗಿಡಗಳು, ಹಸಿರು ಐಸಿರಿಯಿಂದ ಕೂಡಿದ್ದ ಗಿರಿಶಿಖರಗಳು, ರಮ್ಯ ಮನೋಹರವಾಗಿದ್ದವು. ಪ್ರಕೃತಿಯು ತನ್ನನ್ನು ನವವಧುವಿನಂತೆ ಸಿಂಗರಿಸಿಕೊಂಡು, ತನ್ನ ಪ್ರಭುವಾದ ಭಗವಂತನನ್ನು
-
ಸೌಭರಿ ಋಷಿಯ ಅಧಃಪತನ

ವೇದವ್ಯಾಸ ವಿರಚಿತ ಭಾಗವತವು 12 ಸ್ಕಂದಗಳ, 18,000 ಶ್ಲೋಕಗಳಿಂದ ಕೂಡಿದ್ದು – ನಿಗಮ ಕಲ್ಪತರೋರ್ ಗಲಿತಂ ಫಲಂ – ವೇದವೆಂಬ ಕಲ್ಪವೃಕ್ಷದಿಂದ ಹುಟ್ಟಿದ ಮಾಗಿದ ಫಲ ಎಂದೇ ಬಣ್ಣಿಸಲಾಗಿದೆ. ಈ ಲೇಖನ ಮಾಲಿಕೆಯಲ್ಲಿ ಶುಕ ಮುಖದಿಂದ ಹರಿದ ಭಾಗವತವನ್ನು ಆಧರಿಸಿದ ಕಥೆಗಳನ್ನು ಓದುತ್ತೀರಿ. ಪ್ರಸ್ತುತ ಕಥೆಯನ್ನು ಭಾಗವತದ ಒಂಭತ್ತನೇ ಸ್ಕಂದದ 6 ಮತ್ತು 7ನೇ ಅಧ್ಯಾಯವನ್ನು ಆಧರಿಸಿ ಖ್ಯಾತ ಸಾಹಿತಿ ‘ಚಿರಂಜೀವಿ’ ಅವರು ಭಕ್ತಿವೇದಾಂತ ದರ್ಶನದ ಓದುಗರಿಗೆ ಬರೆದುಕೊಟ್ಟಿದ್ದಾರೆ. ಸೌಭರಿ ಋಷಿಯ ಅಧಃಪತನ ಕುರಿತ ಕುತೂಹಲಕಾರಿ ಕಥಾನಕವನ್ನು
-
ಕೃಷ್ಣ ಪಾಕಶಾಲೆ

ಪುಟಾಣಿಗಳಿಗೆ ಪ್ರಿಯವಾದ ಕಟ್ಲೆಟ್ ಮಕ್ಕಳಿಗೆ ತಿಂಡಿಯೆಂದರೆ ಅಚ್ಚುಮೆಚ್ಚು. ಅದರಲ್ಲೂ ಕುರುಕಲು ತಿಂಡಿಯೆಂದರೆ ಇನ್ನೂ ಹೆಚ್ಚು ಖುಷಿ. ರುಚಿಯಾಗಿ ಮತ್ತು ಬಿಸಿಯಾಗಿ ಏನಾದರು ಮಾಡಿಕೊಟ್ಟರೆ ಇಷ್ಟಪಟ್ಟು ತಿನ್ನುತ್ತಾರೆ. ಹಾಗೆ ಮಾಡಬೇಕೆನಿಸಿದರೆ ಬ್ರೆಡ್ ಕಟ್ಲೆಟ್, ಆಲೂ-ಪಾಲಕ್ ಕಟ್ಲೆಟ್, ಅವಲಕ್ಕಿ ಕಟ್ಲೆಟ್ ಹೀಗೆ ವಿವಿಧ ಬಗೆ ಬಗೆಯ ಕಟ್ಲೆಟ್ ಮಾಡಬಹುದು. ಭಕ್ತಿವೇದಾಂತ ದರ್ಶನದ ಓದುಗರಿಗೆ ಕಟ್ಲೆಟ್ ಮಾಡುವ ವಿಧಾನವನ್ನು ತಿಳಿಸಿದ್ದೇವೆ. ಈ ಎಲ್ಲವನ್ನೂ ತಯಾರಿಸಿ ಮನೆಯವರೊಂದಿಗೆ ಸೇವಿಸಿ. ಆಲೂ ಪಾಲಕ್ ಕಟ್ಲೆಟ್ ಬೇಕಾಗುವ ಸಾಮಗ್ರಿಗಳು: ಬೇಯಿಸಿದ ಆಲೂಗಡ್ಡೆ – 3 ಪಾಲಕ್
-
ಸಾಷ್ಟಾಂಗ ಪ್ರಣಾಮ

ಪರಾತ್ಪರನ ಪ್ರೀತಿಯ ಅಪೇಕ್ಷೆಗೆ ನಾವೆಲ್ಲರೂ ಮಣಿಯುವ ಸರಳಿ ಆದರೆ ಭವ್ಯ ವಿಧಾನ. ಶರಣಾಗತಿ, ಅಧೀನವಾಗುವುದು, ಇಂತಹ ಪದಗಳು ಯುದ್ಧ ಮತ್ತು ಆಕ್ರಮಣದ ಚಿತ್ರಗಳ ಕಲ್ಪನೆಯನ್ನು ನೀಡಬಹುದು. ಅಲ್ಲಿ ದುರ್ಬಲರು ಬಹುಶಃ ಭವಿಷ್ಯದ ವಿಜಯ ಅಥವಾ ವಿದ್ವೇಷದ ಆಲೋಚನೆಗಳೊಂದಿಗೆ ಶಕ್ತಿವಂತರಿಗೆ ವಿಷಾದದಿಂದ ಮಣಿಯಬಹುದು. ಮನಸ್ಸಿನಲ್ಲಿ ಅಂತಹ ಚಿತ್ರಗಳನ್ನು ಕಲ್ಪಿಸಿಕೊಳ್ಳುತ್ತ ನಾವು ಕೃಷ್ಣನಿಗೆ ಶರಣಾಗಬೇಕೆಂದು ಭಗವದ್ಗೀತೆಯಲ್ಲಿ ಓದಿದಾಗ ನಮಗೆ ಅಸಹ್ಯ ಭಾವ ಮೂಡಬಹುದು. ನಮ್ರತೆಯಿಂದ ತಲೆಬಾಗಬಹುದು. ಭಕ್ತರು ಭಗವಂತನಿಗೆ ತಮ್ಮನ್ನು ಒಪ್ಪಿಸಿಕೊಳ್ಳಲು ಸಾಷ್ಟಾಂಗ ಮಾಡುತ್ತ ಶರಣಾಗುವುದನ್ನು ನೋಡಿದಾಗ ನಮಗೆ ಶರಣಾಗತಿ
-
ಕಳ್ಳರಲ್ಲಿ ನೈತಿಕತೆ!

ಇಲ್ಲಿ ಕಳ್ಳರ ತಂಡದ ಕತೆ ಇದೆ. ಈ ಕಳ್ಳರು ಅನೇಕ ಮನೆಗಳಲ್ಲಿ ವಸ್ತುಗಳನ್ನು ಕಳವು ಮಾಡಿದರು. ಅದನ್ನು ಹಂಚಿಕೊಳ್ಳಲು ಊರಿನ ಆಚೆಗೆ ಹೋದರು. ಆಗ ಒಬ್ಬ ಕಳ್ಳ, “ಯಾರಿಗೂ ಮೋಸವಾಗದಂತೆ ನೈತಿಕವಾಗಿ ಇದನ್ನು ಹಂಚಬೇಕು” ಎಂದ. ಅದು ಕದ್ದ ಆಸ್ತಿ. ಇದರಲ್ಲಿ ನೈತಿಕತೆ ಎಲ್ಲಿ ಬಂತು? ಆದರೆ ಹಂಚಿಕೊಳ್ಳುವಾಗ ಮಾತ್ರ ಅವರು ನೈತಿಕತೆ ಕುರಿತು ಯೋಚಿಸುತ್ತಿದ್ದಾರೆ. ಮೂಲ ತತ್ತ್ವವೇ ಅನೈತಿಕತೆ. ನೈತಿಕತೆಯನ್ನು ಕಾಣುವುದೆಲ್ಲಿ? ಅದೇ ರೀತಿ, ವೈದಿಕ ಆದೇಶದ ಈಶಾವಾಸ್ಯಂ ಇದಂ ಸರ್ವಂ-ಎಲ್ಲವೂ ದೇವೋತ್ತಮ ಪರಮ ಪುರುಷನಿಗೆ
-
ವನಿತಾ: ಕೃಷ್ಣ ಪಾಕಶಾಲೆ

ಕೋಸು ವಿಶೇಷ ವರ್ಷವಿಡೀ ಬೆಳೆಯುವ ಕೋಸು ಪೌಷ್ಟಿಕಾಂಶಗಳಿಂದ ತುಂಬಿದ್ದು ಆರೋಗ್ಯಕ್ಕೆ ಅಷ್ಟೇ ಅಲ್ಲ, ಸೌಂದರ್ಯವರ್ಧನೆಗೂ ಸಾಧಕ. ಕೋಸಿನಲ್ಲಿ ಅತಿ ಕಡಿಮೆ ಕ್ಯಾಲೊರಿ ಇದೆ. ಕೊಬ್ಬಿನಾಂಶವಂತೂ ಇಲ್ಲ. ಹೀಗಾಗಿ ತೂಕ ನಿರ್ವಹಣೆಗೆ ಇನ್ನೇನು ಬೇಕು? ಅಲ್ಲದೆ ಇದರಲ್ಲಿ ಆಂಟಿ ಆಕ್ಸಿಡೆಂಟ್ಸ್ ಮತ್ತು ವಿಟಮಿನ್ “ಸಿ” ಸಮೃದ್ಧವಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಮತ್ತು ರೋಗಗಳ ವಿರುದ್ಧ ಹೋರಾಡಲು ಅಗತ್ಯವಾಗಿದೆ. ಕೋಸಿನ ಜ್ಯೂಸ್ ಚರ್ಮಕ್ಕೆ ಅಧಿಕ ಲಾಭದಾಯಕ. ಇದರಲ್ಲಿ ಮುಪ್ಪನ್ನು ದೂರವಾಗಿಸುವ ಗುಣಗಳು ಹೇರಳವಾಗಿದೆ. ಕೋಸಿನ ಜ್ಯೂಸ್ ಕುಡಿಯುವುದರಿಂದ
-
ಮಾಂತ್ರಿಕ ಸ್ಪರ್ಶಮಣಿ

ಒಂದಾನೊಂದು ಕಾಲದಲ್ಲಿ ಗೋಪಿ ಎಂಬ ಭಕ್ತ ಹಳ್ಳಿಯಲ್ಲಿ ವಾಸಿಸುತ್ತಿದ್ದ. ಅವನು ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಆದುದರಿಂದ ಅವರ ಮನೆಯಲ್ಲಿ ಉಣ್ಣಲು ಸಾಕಷ್ಟು ತಿನಿಸು ಇರುತ್ತಿರಲಿಲ್ಲ. ಇದರಿಂದ ಅವನ ಹೆಂಡತಿಗೆ ಕೋಪ ಬರುತ್ತಿತ್ತು. ಅದು ಸಹಜವಲ್ಲವೇ? ಅವಳ ಅಕ್ಕಪಕ್ಕದ ಮನೆಯವರು ಚೆನ್ನಾಗಿ ತಿಂದುಂಡು ಖುಷಿಯಾಗಿರುತ್ತಿದ್ದರು. ಆದುದರಿಂದ ಅವಳಿಗೆ ಗೋಪಿಯ ಮೇಲೆ ಸಿಟ್ಟಾಗುತ್ತಿತ್ತು. ಒಂದು ದಿನ ಅವಳ ಸಿಟ್ಟು ನತ್ತಿಗೆ ಏರಿತ್ತು. ಅವಳು ತನ್ನ ಗಂಡನಿಗೆ ಮನೆ ಬಿಟ್ಟು ಹೋಗಲು ತಿಳಿಸಿದಳು. ಹಣ ಸಿಕ್ಕರೆ ಮಾತ್ರ ಮನಗೆ ಬಾ ಎಂದು
-
ಕೈಬೀಸಿ ಕರೆವ ಕಾಕೋಳು ಕೃಷ್ಣಾಲಯ

ಇದುವೇ ಜೀವನದ ಧನ್ಯತೆಗೊಂದು ಅಪೂರ್ವ ಆಹ್ವಾನ, ಇನ್ನೇಕೆ ಆಗಮನಕ್ಕೆ ನಿಧಾನ?
-
ಪರೀಕ್ಷಿತನಿಗೆ ಕಲಿ ಶರಣು

-ಶ್ರೀ ಚಂಚಲಾಪತಿ ದಾಸ “ಮರೆಹೊಕ್ಕವರಿಗೆ ಆಸರೆಕೊಡುವ ಸ್ವಭಾವದ ಮತ್ತು ಚರಿತ್ರೆಯಲ್ಲಿ ಶ್ಲಾಘನೆಗೆ ಪಾತ್ರನಾದ ಪರೀಕ್ಷಿತ ಮಹಾರಾಜನು ಶರಣಾಗತನಾದ ಮತ್ತು ಕಾಲಿಗೆ ಬಿದ್ದ ಬಡ ಕಲಿಯನ್ನು ಕೊಲ್ಲಲಿಲ್ಲ. ಆದರೆ, ಸಹಾನುಭೂತಿಯಿಂದ ನಸುನಕ್ಕನು. ಏಕೆಂದರೆ, ಅವನು ಬಡವರಲ್ಲಿ ಕರುಣೆ ಉಳ್ಳವನಾಗಿದ್ದನು.” (ಭಾಗವತ, 1.17.30) ಸಾಮಾನ್ಯ ಕ್ಷತ್ರಿಯನೂ ಕೂಡ ಶರಣಾಗತನನ್ನು ಕೊಲ್ಲುವುದಿಲ್ಲ. ಹೀಗಿರುವಾಗ ಸ್ವಾಭಾವಿಕವಾಗಿ ದೀನರಲ್ಲಿ ದಯೆ ಮತ್ತು ಸಹಾನುಭೂತಿ ಉಳ್ಳ ಮಹಾರಾಜ ಪರೀಕ್ಷಿತನ ಬಗ್ಗೆ ಹೇಳುವುದೇನು! ಅವನು ನಗುತ್ತಿದ್ದುದು ಏಕೆಂದರೆ ಕೃತಕ ವೇಷಧಾರಿಯಾದ ಕಲಿಯು ತಾನು ತಳ ವರ್ಗದವ ಎಂದು
-
ಗದುಗಿನ ವೀರನಾರಾಯಣ

-ಪತಿತಪಾವನ ದಾಸ ಪ್ರಸಿದ್ಧ ಪುಣ್ಯ ಕ್ಷೇತ್ರವಾದ ಗದಗವು ಕರ್ನಾಟಕದ ಮುಖ್ಯ ಪ್ರವಾಸಿ ತಾಣವೂ ಹೌದು. ಇಲ್ಲಿನ ಪ್ರಮುಖ ದೇವಸ್ಥಾನವನ್ನು ಶ್ರೀ ವಿಷ್ಣುವಿಗೆ ಅರ್ಪಿಸಲಾಗಿದ್ದು, ಭಗವಂತನು ವೀರ ನಾರಾಯಣನ ರೂಪದಲ್ಲಿ ಕಾಣಿಸಿಕೊಂಡಿದ್ದಾನೆ. ಸ್ಥಳ ಪುರಾಣದ ಪ್ರಕಾರ, ಬ್ರಹ್ಮನ ಮಾನಸ ಪುತ್ರರಾದ ಕೃತಮುನಿಗಳು ಇಲ್ಲಿ ಧ್ಯಾನ, ಯಜ್ಞ ಮಾಡಿಕೊಂಡಿದ್ದರು. ಆದರೆ ದುಷ್ಟರು ಅದಕ್ಕೆ ಅಡ್ಡಿ ಉಂಟುಮಾಡುತ್ತಿದ್ದರು. ಇದನ್ನು ತಾಳಲಾರದೆ ಮುನಿಗಳು ಹಿಮಾಲಯ ಪರ್ವತಕ್ಕೆ ಹೋಗಿ ಉಗ್ರ ತಪಸ್ಸು ಕೈಗೊಂಡರು. ಗದುಗಿನ ನಾರಾಯಣನನ್ನು ಧ್ಯಾನಿಸಿದರು. ಆಗ ಗದುಗಿನ ನಾರಾಯಣ ಪ್ರತ್ಯಕ್ಷನಾಗಿ “ನಿನಗೇನು
