ಕೃಷ್ಣ ಪಾಕಶಾಲೆ

ಬೇಕಾಗುವ ಸಾಮಗ್ರಿಗಳು:

ಕಾಲು ಕೆ.ಜಿ.ಅಂಟು

1 ಕೆ.ಜಿ ಕೊಬ್ಬರಿ

ಏಲಕ್ಕಿ

ಲವಂಗ

ದ್ರಾಕ್ಷಿ

ಗೋಡಂಬಿ

ಮಾಡುವ ವಿಧಾನ:

ಬೆಲ್ಲವನ್ನು ಸಣ್ಣಗೆ ಹೆರೆದುಕೊಂಡು ಬೆಲ್ಲ ತೋಯುವಷ್ಟು ತುಪ್ಪ ಹಾಕಿ ಕುದಿಯಲು ಇಡಬೇಕು. ಅಲ್ಲಿ ಇಲ್ಲಿ ಗುಳ್ಳೆ ಬಂದ ತಕ್ಷಣ ಇಳಿಸಬೇಕು. ತುಪ್ಪದಲ್ಲಿ ಕರಿದ ಅಂಟು ಮತ್ತು ಎಲ್ಲ ಸಾಮಾನುಗಳನ್ನು ಹಾಕಿ ಉಂಡೆ ಕಟ್ಟಬೇಕು. ಆದರೆ ಉಂಡೆಗಳು ಗಟ್ಟಿಯಾಗುವುದಿಲ್ಲ. ತುಪ್ಪ ಇಲ್ಲದಿದ್ದರೆ ನೀರು ಹಾಕಿ ಉಂಡೆ ಆಣ ತೆಗೆದುಕೊಂಡು ಉಂಡೆ ಕಟ್ಟಬೇಕು. ಇವು ಗಟ್ಟಿ ಆಗುತ್ತವೆ. ಕೃಷ್ಣನಿಗೆ ಅರ್ಪಿಸಿ ಪ್ರಸಾದ ಸ್ವೀಕರಿಸಿ.

ಬೇಕಾಗುವ ಪದಾರ್ಥಗಳು:

1 ಕೆ.ಜಿ.ಅಕ್ಕಿ

ಕಾಲು ಕೆ.ಜಿ. ಬೆಣ್ಣೆ ಅಥವಾ ತುಪ್ಪ

ಒಂದು ತೆಂಗಿನ ಕಾಯಿ

20 ಮೆಣಸು, ಲವಂಗ, ಏಲಕ್ಕಿ,

ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ:

ಮೊದಲು ಅಕ್ಕಿ ತೊಳೆಯಬೇಕು. ತೆಂಗಿನ ಕಾಯಿ ತುರಿದು ರುಬ್ಬಬೇಕು. ನಂತರ ಕಾಯಿ ಹಾಲಲ್ಲಿ ಅಕ್ಕಿ ಬೇಯಿಸಿ ಅನ್ನ ಮಾಡಿಕೊಳ್ಳಬೇಕು. ಅನ್ನ ಉದುರಾಗಿ ಇರಬೇಕು. ಅನ್ನ ಬೇಯುತ್ತ ಬಂದ ಹಾಗೆ ಏಲಕ್ಕಿ, ಲವಂಗ, ಮೆಣಸು, ಬೆಣ್ಣೆ, ಉಪ್ಪು ಹಾಕಿ ಚೆನ್ನಾಗಿ ಕೈಯಾಡಿಸಿ ಪೂರ್ತಿ ಬೆಂದ ಮೇಲೆ ಇಳಿಸಬೇಕು. ಲವಂಗ, ಮೆಣಸು, ಏಲಕ್ಕಿ ಪುಡಿ ಹಾಕಬಹುದು.

ಬೇಕಾಗುವ ಸಾಮಗ್ರಿಗಳು:

ಕಲ್ಲಂಗಡಿ ಹಣ್ಣಿನ ಬಿಳಿ ಭಾಗ

ಅಕ್ಕಿ ಕಾಲು ಕೆ.ಜಿ

ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ:

ಒಂದು ಮಧ್ಯಮ ಗಾತ್ರದ ಕಲ್ಲಂಗಡಿ ಹಣ್ಣಿನ ಬಿಳಿ ಭಾಗವನ್ನು (ಕೆಂಪು ತಿರುಳು ಹಾಗೂ ಸಿಪ್ಪೆಯ ಮಧ್ಯ ಭಾಗ) ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಬೇಕು.

ನಾಲ್ಕು-ಐದು ಗಂಟೆ ಕಾಲ ನೆನೆಸಿದ ಅಕ್ಕಿಯ ಜತೆ ಉಪ್ಪು ಹಾಗೂ ಹೆಚ್ಚಿಟ್ಟ ಕಲ್ಲಂಗಡಿ ಚೂರನ್ನು ಸೇರಿಸಿ ನುಣ್ಣಗೆ ರುಬ್ಬಬೇಕು.

ರುಬ್ಬಿದ ಹಿಟ್ಟು ದೋಸೆ ಹಿಟ್ಟಿಗಿಂತ ಸ್ವಲ್ಪ ತೆಳ್ಳಗಿರಬೇಕು. ಹಿಟ್ಟನ್ನು ದೋಸೆ ಕಾವಲಿಯಲ್ಲಿ ತೆಳ್ಳಗೆ ಹುಯ್ದು ಚಟ್ನಿ ಜತೆ ತಿನ್ನಬಹುದು.

ಈ ದೋಸೆ ಸಿಹಿಯಾಗಿ ಇಷ್ಟಪಡುವವರು ರುಬ್ಬುವಾಲೇ ಬೆಲ್ಲ ಸೇರಿಸಿಕೊಳ್ಳಬಹುದು.

ಬೇಕಾಗುವ ಸಾಮಗ್ರಿಗಳು:

ಸೌತೆಕಾಯಿ-1

ರಾಗಿ ಹಿಟ್ಟು 1 ಲೋಟ (200 ಗ್ರಾಂ ಅಳತೆ)

ಅಕ್ಕಿ ಹಿಟ್ಟು-1 ಹಿಡಿ

ಮೈದಾ ಹಿಟ್ಟು -1 ಹಿಡಿ

ಬೆಲ್ಲ ಸಿಹಿಗೆ ಬೇಕಾದಷ್ಟು

ಸ್ವಲ್ಪ ಕಾಯಿ ತುರಿ

ಉಪ್ಪು

ಮಾಡುವ ವಿಧಾನ:

ಸೌತೆ ಕಾಯಿಯನ್ನು ಚಿಕ್ಕದಾಗಿ ಹೆಚ್ಚಿ ರುಬ್ಬಿಟ್ಟುಕೊಳ್ಳಬೇಕು. ನಂತರ ಮೇಲೆ ಹೇಳಿದ ಎಲ್ಲಾ ಸಾಮಾನುಗಳನ್ನು ರುಬ್ಬಿಟ್ಟ ಸೌತೆಕಾಯಿಯ ಜತೆ ಸೇರಿಸಿ ಗಂಟಿಲ್ಲದಂತೆ ದೋಸೆ ಹಿಟ್ಟಿನ ಹದಕ್ಕೆ ನೀರು ಹಾಕಿ ಕಲಸಬೇಕು. ತೆಳ್ಳಗೆ ದೋಸೆ ಹುಯ್ದು ತುಪ್ಪ ಸವರಿ ಬಿಸಿ ಬಿಸಿಯಾದ ದೋಸೆ ತಿನ್ನಿ.

ಬೇಕಾಗುವ ಸಾಮಗ್ರಿಗಳು:

ಸಜ್ಜೆ ಹಿಟ್ಟು 100 ಗ್ರಾಂ

ಅಕ್ಕಿ ಹಿಟ್ಟು 10 ಗ್ರಾಂ

ಉದ್ದಿನ ಬೇಳೆ ಹಿಟ್ಟು 25 ಗ್ರಾಂ

ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ:

ಎಲ್ಲಾ ಹಿಟ್ಟುಗಳನ್ನು ಜರಡಿಗೆ ಹಿಡಿಯಿರಿ. ಎಲ್ಲಾ ಹಿಟ್ಟುಗಳನ್ನು ಸೇರಿಸಿ ಉಪ್ಪು ಹಾಕಿ, ನೀರು ಹನಿಸಿ ಚೆನ್ನಾಗಿ ಕಲಸಿ ಸ್ವಲ್ಪ ಸಮಯ ಬಿಟ್ಟು ರೊಟ್ಟಿಗೆ ಎಳ್ಳು ಸಿಂಪಡಿಸಿ ಲಟ್ಟಿಸಿ ಬೇಯಿಸಿ. ಈಗ ರೊಟ್ಟಿ ತಿನ್ನಲು ರೆಡಿ.

ಬೇಕಾಗುವ ಸಾಮಗ್ರಿಗಳು:

ನವಣೆ 100 ಗ್ರಾಂ

ತೊಗರಿ ಬೇಳೆ 50 ಗ್ರಾಂ

ಬೀನ್ಸ್‌ 100 ಗ್ರಾಂ

ಟೊಮ್ಯಾಟೋ 100 ಗ್ರಾಂ

ಗಜ್ಜರಿ 100 ಗ್ರಾಂ

ಕಡ್ಡಿ ಸೊಪ್ಪು 100 ಗ್ರಾಂ

ಹುಣಸೇ ಹಣ್ಣು 20 ಗ್ರಾಂ

ಕರಿಬೇವು ಸ್ವಲ್ಪ

ಎಣ್ಣೆ 40 ಗ್ರಾಂ

ಬಿಸಿಬೇಳೆ ಬಾತ್‌ ಮಸಾಲಾ

ಒಣ ಮೆಣಸಿನ ಕಾಯಿ

ಜೀರಿಗೆ

ಮಾಡುವ ವಿಧಾನ:

ಮೊದಲು ನವಣಕ್ಕಿಯನ್ನು ಸ್ವಚ್ಛಗೊಳಿಸಿ ನೆನೆಸಿಡಿ. ಆನಂತರ ಎಣ್ಣೆಯನ್ನು ಕಾಯಿಸಿ ಎಲ್ಲಾ ತರಕಾರಿಗಳನ್ನು, ಸೊಪ್ಪನ್ನು ಹಾಕಿ ಬೇಯಿಸಿ. ನೆನೆಸಿದ ನವಣಕ್ಕಿಯನ್ನು ಅದಕ್ಕೆ ಹಾಕಿ ಸ್ವಲ್ಪ ಹೊತ್ತು ಬಾಡಿಸಿ. ಆನಂತರ ನವಣಕ್ಕಿ ಒಂದು ಪ್ರಮಾಣಕ್ಕೆ ಮೂರು ಪ್ರಮಾಣದಲ್ಲಿ ನೀರು ಹಾಕಿ ಜತೆಗೆ ತರಕಾರಿ, ಬೇಯಿಸಿದ ಬೇಳೆಯನ್ನು ಸೇರಿಸಿ ಉಪ್ಪು, ಬಿಸಿಬೇಳೆ ಬಾತ್‌ ಮಸಾಲೆ, ಹುಣಸೇ ಹುಳಿ ಕಿವುಚಿ ರಸ ಹಾಕಿ. ಮೂರು “ಸೀಟಿ” ಬಂದ ನಂತರ ಕುಕ್ಕರ್‌ ಇಳಿಸಿ. ಅದಕ್ಕೆ ಒಣ ಮೆಣಸಿನ ಕಾಯಿ, ಜೀರಿಗೆ, ಕರಿಬೇವು ಒಗ್ಗರಣೆ ಕೊಡಿ. ನಂತರ ಸೇವಿಸಿ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi