ಕಲಿಗೆ ನೀಡಿದ ಶಿಕ್ಷೆ ಹಾಗೂ ಬಹುಮಾನ

ಮಹಾರಾಜ ಪರೀಕ್ಷಿತನು ರಾಜ್ಯವನ್ನಾಳುತ್ತಿದ್ದ ಕಾಲದಲ್ಲಿ ಕಲಿಯುಗದ ಚಿಹ್ನೆಗಳು ಅವನ ರಾಜ್ಯದ ಗಡಿಯೊಳಕ್ಕೆ ನುಸುಳಿದವು. ಈ ಸಂಗತಿಯು ಪರೀಕ್ಷಿತನಿಗೆ ತಿಳಿದಾಗ ವಿಷಯ ಸಂತೋಷ ತರುವಂತಹದೆಂದು ಅವನಿಗನ್ನಿಸಲಿಲ್ಲ. ಇತ್ತ ಈ ಸಂಗತಿಯು ಅವನು ಯುದ್ಧಮಾಡಲಿಕ್ಕೆ ಒಂದು ಅವಕಾಶವನ್ನು ನೀಡಿತು.

ಅವನು ತನ್ನ ಬಿಲ್ಲುಬಾಣಗಳನ್ನು ಕೈಗೆತ್ತಿಕೊಂಡು ಯುದ್ಧಕ್ಕೆ ಸಜ್ಜಾಗತೊಡಗಿದನು. ಜಗತ್ತನ್ನು ಗೆಲ್ಲಹೊರಟ ಪರೀಕ್ಷಿತನಿಗೆ ಹಾದಿಯಲ್ಲಿ ಕಲಿಪುರುಷನು ಕಂಡನು. ಇವನು ಶೂದ್ರರಿಗಿಂತ ಕೀಳಾದವನು. ಆದರೆ ರಾಜನಂತೆ ವೇಷಹಾಕಿಕೊಂಡಿದ್ದ. ಈ ಕಲಿಪುರುಷ ಒಂದು ಎತ್ತು ಹಾಗೂ ಒಂದು ಹಸುವಿನ ಕಾಲುಗಳಿಗೆ ಭಾರಿ ಪೆಟ್ಟು ಮಾಡಿದ್ದ.

ಪರೀಕ್ಷಿತ ರಾಜನು ಕಲಿಪುರುಷನಿಗೆ ತಕ್ಕ ಶಿಕ್ಷೆ ನೀಡಲು ಒಮ್ಮೆಗೇ ಅವನನ್ನು ಹಿಡಿದ. ಆ ಎತ್ತು ಧರ್ಮಪುರುಷನಾಗಿದ್ದ ಹಾಗೂ ಆ ಹಸು ಭೂದೇವಿಯಾಗಿದ್ದಳು. ಭೂದೇವಿಯು ತನ್ನ ಕಂದನನ್ನು ಕಳೆದುಕೊಂಡಿರುವಳೇನೋ ಎಂಬಂತೆ ಅಳುತ್ತಿದ್ದಳು. ಆಕೆಯ ಕಣ್ಣುಗಳಿ೦ದ ಕ೦ಬನಿ ಹರಿಯುತ್ತಿತ್ತು. ಅವಳ ದೇಹ ಸೌ೦ದರ್ಯವು ಕುಂದಿತ್ತು.

ಗುಡುಗಿನ ಹಾಗೆ ಮೊಳಗುವ ಧ್ವನಿಯಲ್ಲಿ ರಾಜನು ಶೂದ್ರನನ್ನು ವಿಚಾರಿಸಿದ. “ಎಲಾ ನೀನು ಯಾರು. ನೀನೇನೋ ಬಲಶಾಲಿಯಂತೆ ಕಾಣುತ್ತೀಯೆ. ಆದರೂ ನನ್ನ ರಾಜ್ಯದ ಅಸಹಾಯಕರನ್ನು ಕೊಲ್ಲುವಷ್ಟು ಧೈರ್ಯ ಮಾಡಿದ್ದೀಯಲ್ಲ ನೀನು ಧರಿಸಿರುವ ಉಡುಪಿನ ಸಹಾಯದಿಂದ ರಾಜನ ಹಾಗೆ ನಟಿಸುತ್ತಿದ್ದೇನೆ. ಆದರೆ ನಿನ್ನ ಕೃತ್ಯಗಳಿಂದ ಕ್ಷತ್ರಿಯ ಧರ್ಮಕ್ಕೆ ವಿರುದ್ಧವಾಗಿ ನಡೆದಿರುವೆ. ಯಾರೂ ಇಲ್ಲದ ಸ್ಥಳದಲ್ಲಿ ನೀನು ಮುಗ್ಧರನ್ನು ಹಿಂಸಿಸಿರುವೆ. ನೀನು ಪಾತಕಿಯೇ ಸರಿ. ಆದ್ದರಿಂದ ನಿನಗೆ ಶಿಕ್ಷೆಯಾಗಬೇಕಾದ್ದು ನ್ಯಾಯ.”

ತರುವಾಯ ಪರೀಕ್ಷಿತ್ ಮಹಾರಾಜನು ಎತ್ತನ್ನು ಉದ್ದೇಶಿ ಪದೇ ಪದೇ ಮಾತನಾಡಿದನು : “ಹೇ ಸುರಭಿಪುತ್ರನೆ, ನಿನ್ನ ಮೂರು ಕಾಲುಗಳನ್ನು ಕತ್ತರಿಸಿ ಹಾಕಿದವರು ಯಾರು?’ ಯಾವ ದುಷ್ಟನು ತನ್ನನ್ನು ಹಿಂಸಿಸಿದನೆಂದು ನಿರ್ದಿಷ್ಟವಾಗಿ ಹೇಳುವುದು ಬಹಳ ಕಷ್ಟವೆಂದು ಧರ್ಮಪುರುಷನು ಹೇಳಿದ.

ಆಗ ತಪ್ಪದೆ ಹಾಗೂ ವಿಷಾದಿಸದೆ ಪರೀಕ್ಷಿತನು ಹೀಗೆಂದು ಉತ್ತರಕೊಟ್ಟನು: “ಓ ಎತ್ತಿನ ರೂಪದಲ್ಲಿರುವವನೆ, ನೀನು ಧರ್ಮತತ್ವ ತಿಳಿದವನು. ಅಪರಾಧದಲ್ಲಿ ಪಾಲ್ಗೊಂಡವನಿಗೆ ನಿಗದಿಯಾದ ಸ್ಥಳವೇ ಅಪರಾಧವನ್ನು ಪತ್ತೆ ಹಚ್ಚಿದವನಿಗೂ ನಿಗದಿಯಾಗಿರುತ್ತದೆ ಎಂಬ ತತ್ವವನ್ನು ಹಿಡಿದು ನೀನು ಮಾತನಾಡುತ್ತಿದ್ದೀಯೆ. ನೀನು ಧರ್ಮಪುರುಷನಲ್ಲದೆ ಬೇರೆ ಯಾರೂ ಅಲ್ಲ.”

ಒಂದು ಸಹಸ್ರ ಮಂದಿ ಶತ್ರುಗಳ ಜೊತೆ ಏಕಾಂಗಿಯಾಗಿ ಹೋರಾಡಬಲ್ಲ ಶಕ್ತಿಯಿದ್ದ ಪರೀಕ್ಷಿತ ಮಹಾರಾಜನು ಹೀಗೆ ಧರ್ಮಪುರುಷನನ್ನೂ ಭೂದೇವಿಯನ್ನೂ ಸಮಾಧಾನ ಪಡಿಸಿದನು. ತರುವಾಯ ಮಹಾರಾಜನು ಎಲ್ಲ ಅಧರ್ಮಕ್ಕೂ ಕಾರಣನಾದ ಕಲಿಯನ್ನು ಸಂಹರಿಸಲು ತನ್ನ ಹರಿತವಾದ ಖಡ್ಗವನ್ನು ಕೈಗೆತ್ತಿಕೊಂಡ.

ತನ್ನನ್ನು ಕೊಂದುಬಿಡುವ ಇಚ್ಛೆ ಪರೀಕ್ಷಿತ್ ಮಹಾರಾಜನಿಗೆ ಇದೆಯೆಂಬುದು ಕಲಿಪುರುಷನಿಗೆ ಅರ್ಥವಾಯಿತು. ಅಗ ಅವನು ತಾನು ಧರಿಸಿದ್ದ ರಾಜನ ಉಡುಪನ್ನು ಕಳಚಿಹಾಕಿದ. ಭಯದ ಒತ್ತಡಕ್ಕೆ ಸಿಕ್ಕಿದ ಕಲಿಯು ತರುವಾಯ ಶಿರಬಾಗಿ ನಮಿಸುತ್ತಾ ಸಂಪೂರ್ಣವಾಗಿ ಪರೀಕ್ಷಿತಿಗೆ ಶರಣಾಗತನಾದನು.

ಶರಣಾದವರನ್ನು ಮನ್ನಿಸುವ ಅರ್ಹತೆಯಿದ್ದವನೂ, ಜಯಘೋಷ ಹೇಳಿಸಿಕೊಳ್ಳುವ ಚಾರಿತ್ರ್ಯವಿದ್ದವನೂ ಆದ ಪರೀಕ್ಷಿತ್‌ ಮಹಾರಾಜನು ಪತಿತ ಹಾಗೂ ಅಲ್ಪನೂ ಆದ ಕಲಿಯನ್ನು ಕೊಲ್ಲಲಿಲ್ಲ. ಆರ್ತರಲ್ಲಿ ದಯೆಯುಳ್ಳವನಾಗಿದ್ದ ಪರೀಕ್ಷಿತನು ಅನುಕಂಪದಿಂದ ನಸುನಕ್ಕನು.

ಪರೀಕ್ಷಿತ ರಾಜನು ಹೇಳಿದ : ”ನಾವು ಅರ್ಜುನನ ಖ್ಯಾತಿಯನ್ನು ಹೊತ್ತು ಬಂದಿರುವವರು. ಆದ್ದರಿಂದ ಶರಣಾಗತನಾಗಿರುವ ನೀನು ನಿನ್ನ ಜೀವಕ್ಕಾಗಿ ಭಯಪಡಬೇಕಿಲ್ಲ ಆದರೆ ನೀನು ಅಧರ್ಮದ ಮಿತ್ರನಾದ್ದರಿಂದ ಇನ್ನು ಮುಂದೆ ನನ್ನ ರಾಜ್ಯದಲ್ಲಿರುವ ಹಾಗಿಲ್ಲ. ಆದ್ದರಿಂದ ದೇವೋತ್ತಮ ಪರಮ ಪುರುಷನ ತೃಪ್ತಿಗಾಗಿ ಹಾಗೂ ಸತ್ಯ ಮತ್ತು ಧರ್ಮತತ್ವಗಳ ಆಧಾರದ ಮೇಲೆ ವೇದವಿದರು ಎಲ್ಲಿ ಯಜ್ಞಗಳನ್ನು ಮಾಡುವರೋ ಅಂತಹ ಸ್ಥಳದಲ್ಲಿ ಇರಲು ನೀನು ಯೋಗ್ಯನಲ್ಲ.”

ಮಹಾರಾಜ ಪರೀಕ್ಷಿತನಿಂದ ಹೀಗೆ ಆಜ್ಞಾಪಿಸಲ್ಪಟ್ಟ ಕಲಿಪುರುಷನು ಭಯದಿಂದ ಕಂಪಿಸಲಾರಂಭಿಸಿದ.

ತನ್ನನ್ನು ಕೊಲ್ಲಲು ಸಿದ್ಧನಾಗಿ ನಿಂತಿದ್ದ ಪರೀಕ್ಷಿತ ರಾಜನು, ಕಲಿಪುರುಷನಿಗೆ ಸಾಕ್ಷಾತ್ ಯಮರಾಜನಂತೆಯೇ ಕಂಡ. ಆಗ ಅವನು ರಾಜನನ್ನುದ್ದೇಶಿಸಿ : “ಹೇ ರಾಜಾಧಿರಾಜ, ನಿನ್ನ ಆಜ್ಞೆಯಂತೆ ನಾನು ಎಲ್ಲಿಯೆ ಜೀವಿಸಿರಲಿ, ನಾನು ಕಣ್ಣಾಡಿಸಿದ ಕಡೆಯಲ್ಲೆಲ್ಲಾ ನೀನು ಬಿಲ್ಲು ಬಾಣಗಳನ್ನು ಹಿಡಿದು ನಿಂತಿರುವಂತೆಯೇ ಕಾಣುವುದು. ಆದ್ದರಿಂದ ಓ ಧರ್ಮಪಾಲಕರ ಪ್ರಮುಖನೆ, ನಿನ್ನ ಪ್ರಭುತ್ವದ ರಕ್ಷಣೆಗೊಳಪಟ್ಟು ನಾನು ಶಾಶ್ವತವಾಗಿ ನಲೆಸಿರುವಂತಹ ಒಂದು ಸ್ಥಳವನ್ನು ದಯೆಯಿಟ್ಟು ನನಗೆ ಗೊತ್ತುಪಡಿಸು” ಎಂದನು.

ಕಲಿಪುರುಷನಿಂದ ಹೀಗೆ ಅವಹಾಲನ್ನು ಸ್ವೀಕರಿಸಿದ ಪರೀಕ್ಷಿತ ಮಹಾರಾಜನು, ಜೂಜಾಟ ನಡೆಯುವ ಕೇಂದ್ರಗಳು, ಪಾನಗೃಹಗಳು, ವೇಶ್ಯಾವಾಟಿಕೆಗಳು ಹಾಗೂ ಗೋವಧೆ ನಡೆಯುವ ಸ್ಥಳಗಳಲ್ಲಿ ಅವನಿರಲು ಒಪ್ಪಿಗೆ ಕೊಟ್ಟನು. ತನಗೆ ಇನ್ನಷ್ಟು ಸ್ಥಳಗಳನ್ನು ಸೂಚಿಸಬೇಕೆಂದು ಕಲಿಯು ಕೇಳಲು ಅವನ ಭಿಕ್ಷಾಟನೆಗೆ ಸೋತ ಪರೀಕ್ಷಿತ ಎಲ್ಲೆಲ್ಲಿ ಬಂಗಾರವಿರುತ್ತದೋ ಕಲಿಯು ಅಲ್ಲೆಲ್ಲಾ ಇರಬಹುದೆಂದು ಒಪ್ಪಿದನು.

ಏಕೆಂದರೆ ಬಂಗಾರವಿದ್ದ ಕಡೆಯಲ್ಲೆಲ್ಲಾ ಸುಳ್ಳು, ಮದ್ಯ, ಕಾಮುಕತೆ, ಹೊಟ್ಟೆಕಿಚ್ಚು ಹಾಗೂ ದ್ವೇಷ ಇರುತ್ತದೆಂದು ಪರೀಕ್ಷಿತನಿಗೆ ತಿಳಿದಿತ್ತು.

ಹೀಗೆ ಕಲಿಪುರುಷನು ಮೇಲಿನ ಐದು ಸ್ಥಳಗಳಲ್ಲಿರಲು ಪರೀಕ್ಷಿತ ರಾಜನು ಒಪ್ಪಿದನು. ಆದ್ದರಿಂದ ಮುಂದೆ ಚೆನ್ನಾಗಿರಬೇಕೆಂದು ಪರೀಕ್ಷಿತ್ ರಾಜನು ಬಿಟ್ಟನು. ಆದ್ದರಿಂದ ಮುಂದೆ ಚೆನ್ನಾಗಿರಬೇಕೆಂದು ಬಯಸುವವರು, ವಿಶೇಷವಾಗಿ ದೊರೆಗಳು, ಧರ್ಮಾಕಾಂಕ್ಷಿಗಳು, ಧುರೀಣರು, ಬ್ರಾಹ್ಮಣರು, ಹಾಗೂ ಸಂನ್ಯಾಸಿಗಳು ಎಂದಿಗೂ ನಾಲ್ಕು ಅಧರ್ಮತತ್ವಗಳ ಸ೦ಪರ್ಕ ಮಾಡಬಾರದು.

ತರುವಾಯ ರಾಜನು ಧರ್ಮಪುರುಷನ ಮುರಿದ ಕಾಲುಗಳನ್ನು ಪುನರ್‌ ಸ್ಥಾಪಿಸಿದನು ಹಾಗೂ ಧಾರ್ಮಿಕ ಕಾರ್ಯಗಳಿಗೆ ಪ್ರೋತ್ಸಾಹ ನೀಡಿ ಭೂಮಿಯ ಸ್ಥಿತಿಯನ್ನು ಸಾಕಷ್ಟು ಉತ್ತಮಪಡಿಸಿದನು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi